ಪ್ರಧಾನ ಮಂತ್ರಿಯವರ ಕಛೇರಿ
ಇದು ಲಿಂಗ ನ್ಯಾಯದ ವಿಜಯ ಮತ್ತು ಸಮಾಜದಲ್ಲಿ ಹೆಚ್ಚಿನ ಸಮಾನತೆ ತರಲಿದೆ: ತ್ರಿವಳಿ ತಲಾಖ್ ಮಸೂದೆ ಅನುಮೋದನೆ ಬಗ್ಗೆ ಪ್ರಧಾನಮಂತ್ರಿ
ಪ್ರಕಟಣಾ ದಿನಾಂಕ:
30 JUL 2019 8:53PM by PIB Bengaluru
ಇದು ಲಿಂಗ ನ್ಯಾಯದ ವಿಜಯ ಮತ್ತು ಸಮಾಜದಲ್ಲಿ ಹೆಚ್ಚಿನ ಸಮಾನತೆ ತರಲಿದೆ: ತ್ರಿವಳಿ ತಲಾಖ್ ಮಸೂದೆ ಅನುಮೋದನೆ ಬಗ್ಗೆ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉಭಯ ಸದನಗಳಲ್ಲಿ ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ, 2019ರ ಅನುಮೋದನೆಗೆ ಬೆಂಬಲ ನೀಡಿದ ಎಲ್ಲ ಪಕ್ಷಗಳು ಮತ್ತು ಸಂಸತ್ ಸದಸ್ಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರೆಲ್ಲರ ಕ್ರಮ ಸಮಯೋಚಿತವಾಗಿದ್ದು, ಇದನ್ನು ಭಾರತದ ಇತಿಹಾಸದಲ್ಲಿ ಸದಾ ಸ್ಮರಿಸಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಸರಣಿ ಟ್ವೀಟ್ ನಲ್ಲಿ ಅವರು, “ಪುರಾತನ ಮತ್ತು ಮಧ್ಯಕಾಲೀನ ರೂಢಿ ಅಂತಿಮವಾಗಿ ಇತಿಹಾಸದ ಕಸದಬುಟ್ಟಿಗೆ ಸೇರಿದೆ! ಸಂಸತ್ತು ತ್ರಿವಳಿ ತಲಾಖ್ ಅನ್ನು ರದ್ದುಪಡಿಸಿದೆ ಮತ್ತು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಮಾಡಲಾಗಿದ್ದ ಐತಿಹಾಸಿಕ ತಪ್ಪನ್ನು ಸರಿಪಡಿಸುತ್ತದೆ. ಇದು ಲಿಂಗ ನ್ಯಾಯದ ವಿಜಯವಾಗಿದೆ ಮತ್ತು ಸಮಾಜದಲ್ಲಿ ಮತ್ತಷ್ಟು ಸಮಾನತೆ ತರುತ್ತದೆ. ಇದಕ್ಕಾಗಿ ಭಾರತ ಇಂದು ಹರ್ಷಿಸುತ್ತದೆ!” ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ಅವರು “ತ್ರಿವಳಿ ತಲಾಖ್ ಪದ್ಧತಿಯಿಂದ ದೊಡ್ಡ ಶಿಕ್ಷೆ ಅನುಭವಿಸಿದ ಮುಸ್ಲಿಂ ಮಹಿಳೆಯರ ಅಸಾಧಾರಣ ಧೈರ್ಯಕ್ಕೆ ನಮಿಸುವ ಸಂದರ್ಭ ಇದಾಗಿದೆ. ತ್ರಿವಳಿ ತಲಾಖ್ ಅನ್ನು ರದ್ದು ಮಾಡಿರುವುದು, ಮಹಿಳೆಯರ ಸಬಲೀಕರಣಕ್ಕೆ ಕೊಡುಗೆ ನೀಡಲಿದೆ ಮತ್ತು ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಅರ್ಹವಾದ ಗೌರವ ನೀಡುತ್ತದೆ.” ಎಂದು ತಿಳಿಸಿದ್ದಾರೆ.
ಸಂಸತ್ತಿನ ಉಭಯ ಸದನಗಳಲ್ಲಿ ಮುಸ್ಲಿಂ ಮಹಿಳೆಯರ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ 2019ರ ಅನುಮೋದನೆಗೆ ಬೆಂಬಲ ನೀಡಿದ ಎಲ್ಲ ಪಕ್ಷಗಳು ಮತ್ತು ಸಂಸದರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಅವರೆಲ್ಲರೂ ಸಮಯಕ್ಕೆ ಸೂಕ್ತವಾಗಿ ಸ್ಪಂದಿಸಿದ್ದಾರೆ ಮತ್ತು ಅವರ ಕ್ರಮ ಭಾರತದ ಇತಿಹಾಸದಲ್ಲಿ ಸದಾ ಸ್ಮರಣೆಯಲ್ಲಿರುತ್ತದೆ.
— ನರೇಂದ್ರ ಮೋದಿ (@narendramodi) ಜುಲೈ 30, 2019
ಪುರಾತನ ಮತ್ತು ಮಧ್ಯಂತರ ಪದ್ಧತಿ ಈಗ ಇತಿಹಾಸದ ಕಸದ ಬುಟ್ಟಿಗೆ ಮಾತ್ರವೇ ಸೀಮಿತವಾಗಿದೆ.!
ಸಂಸತ್ತು ತ್ರಿವಳಿ ತಲಾಖ್ ಅನ್ನು ರದ್ದು ಮಾಡಿದ್ದು, ಮುಸ್ಲಿಂ ಮಹಿಳೆಯರಿಗೆ ಆಗುತ್ತಿದ್ದ ಐತಿಹಾಸಿಕ ತಪ್ಪನ್ನು ಸರಿಪಡಿಸಿದೆ. ಇದು ಲಿಂಗ ನ್ಯಾಯದ ವಿಜಯ ಮತ್ತು ಸಮಾಜದಲ್ಲಿ ಹೆಚ್ಚಿನ ಸಮಾನತೆ ತರಲಿದೆ.
ಭಾರತ ಇಂದು ಸಂಭ್ರಮಿಸುತ್ತಿದೆ!
— ನರೇಂದ್ರ ಮೋದಿ (@narendramodi) ಜುಲೈ 30, 2019
ತ್ರಿವಳಿ ತಲಾಖ್ ನ ಪದ್ಧತಿಯಿಂದಾಗಿ ದೊಡ್ಡ ಶಿಕ್ಷೆ ಅನುಭವಿಸಿದ ಮುಸ್ಲಿಂ ಮಹಿಳೆಯರ ಅಸಾಧಾರಣ ಧೈರ್ಯಕ್ಕೆ ನಮಿಸುವ ಸಮಯ ಇದಾಗಿದೆ.
ತ್ರಿವಳಿ ತಲಾಖ್ ರದ್ದು ಮಹಿಳೆಯರ ಸಬಲೀಕರಣಕ್ಕೆ ಕೊಡುಗೆ ನೀಡುತ್ತದೆ ಮತ್ತು ಮಹಿಳೆಯರಿಗೆ ಸಮಾಜದಲ್ಲಿ ಅರ್ಹವಾದ ಗೌರವ ನೀಡುತ್ತದೆ.
— ನರೇಂದ್ರ ಮೋದಿ (@narendramodi) ಜುಲೈ 30, 2019
(ಪ್ರಕಟಣೆ ಐ.ಡಿ.: 1580845)
ವಿಸಿಟರ್ ಕೌಂಟರ್ : 216