ಹಣಕಾಸು ಸಚಿವಾಲಯ

2019-20ನೇ  ಸಾಲಿನ ಕೇಂದ್ರ ಬಜೆಟ್ ನ ಪ್ರಮುಖಾಂಶಗಳು

Posted On: 05 JUL 2019 1:59PM by PIB Bengaluru

2019-20ನೇ  ಸಾಲಿನ ಕೇಂದ್ರ ಬಜೆಟ್ ನ ಪ್ರಮುಖಾಂಶಗಳು

 

ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ತಮ್ಮ ಚೊಚ್ಚಲ ಬಜೆಟ್  ಭಾಷಣ ಮಾಡಿದರು ಮತ್ತು 2019-20ನೇ ಸಾಲಿನ ಆಯವ್ಯಯವನ್ನು ಸಂಸತ್ತಿನಲ್ಲಿ ಮಂಡಿಸಿದರು.

2019ನೇ ಸಾಲಿನ ಕೇಂದ್ರ ಬಜೆಟ್ ನ ಪ್ರಮುಖಾಂಶಗಳು ಈ ಕೆಳಗಿನಂತಿವೆ.

ದಶಕದ 10 ಅಂಶಗಳ ಕಾರ್ಯಸೂಚಿ

*ಜನರ ಭಾಗಿದಾರಿಕೆಯೊಂದಿಗೆ ಟೀಂ ಇಂಡಿಯಾ ನಿರ್ಮಾಣ: ಕನಿಷ್ಠ ಸರಕಾರ, ಗರಿಷ್ಠ  ಆಡಳಿತ.

*ಮಾಲಿನ್ಯ ಮುಕ್ತ ಭಾರತದೊಂದಿಗೆ ಹಸಿರು ಭೂ ತಾಯಿ ಮತ್ತು ನೀಲಾಕಾಶ ಸಾಧನೆ.

*ಡಿಜಿಟಲ್ ಇಂಡಿಯಾವನ್ನು ಆರ್ಥಿಕತೆಯ ಪ್ರತಿಯೊಂದು ವಲಯಕ್ಕೂ ತಲುಪಿಸುವುದು.

*ಗಗನಯಾನ, ಚಂದ್ರಯಾನ ಉಡಾವಣೆ, ಮತ್ತು ಇತರ ಬಾಹ್ಯಾಕಾಶ ಹಾಗೂ ಉಪಗ್ರಹ ಯೋಜನೆಗಳು.

*ಭೌತಿಕ ಹಾಗೂ ಸಾಮಾಜಿಕ ಮೂಲಸೌಕರ್ಯ ವೃದ್ಧಿ.

*ಜಲ, ಜಲ ನಿರ್ವಹಣೆ , ನದಿಗಳ ಶುದ್ಧೀಕರಣ.

*ನೀಲಿ ಆರ್ಥಿಕತೆ.

*ಆಹಾರ ಧಾನ್ಯಗಳು, ಬೇಳೆ-ಕಾಳು, ಎಣ್ಣೆ ಬೀಜಗಳು, ಹಣ್ಣು ಮತ್ತು ತರಕಾರಿ ಬೆಳೆಯುವಲ್ಲಿ ಸ್ವಾವಲಂಬನೆ ಮತ್ತು ರಫ್ತು ಮಾಡುವುದು.

*’ಆಯುಷ್ಮಾನ್ ಭಾರತ’ದ ಮೂಲಕ  ಆರೋಗ್ಯಕರ ಸಮಾಜ ನಿರ್ಮಾಣ, ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವುದು, ನಾಗರಿಕರನ್ನು ರಕ್ಷಿಸುವುದು.

*ಮೇಕ್ ಇನ್ ಇಂಡಿಯಾ ಮೂಲಕ ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳು,  ನವೋದ್ಯಮಗಳು, ರಕ್ಷಣಾ ಉತ್ಪಾದನೆ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಫ್ಯಾಬ್ ಮತ್ತು ಬ್ಯಾಟರಿಗಳು ಹಾಗೂ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಆದ್ಯತೆ.

5 ಟ್ರಿಲಿಯನ್ ಡಾಲರ್ ಆರ್ಥಿಕತೆ ನಿಟ್ಟಿನಲ್ಲಿ

  • ಜನರ ಹೃದಯಗಳು ಆಸೆ(ಭರವಸೆ), ವಿಶ್ವಾಸ(ನಂಬಿಕೆ) ಮತ್ತು ಆಕಾಂಕ್ಷೆ (ಅಶೋತ್ತರ)ಗಳಿಂದ ತುಂಬಿದೆ-ಹಣಕಾಸು ಸಚಿವರ ಹೇಳಿಕೆ
  • ಭಾರತದ ಆರ್ಥಿಕತೆ ಪ್ರಸಕ್ತ ವರ್ಷ ಮೂರು ಟ್ರಿಲಿಯನ್  ಡಾಲರ್ ಆರ್ಥಿಕತೆ ಆಗಲಿದೆ.
  • ಸರ್ಕಾರ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆ ರಾಷ್ಟ್ರವನ್ನಾಗಿ ಮಾಡಲು ಇಚ್ಛಿಸಿದೆ.
  • India Inc ( ಭಾರತದ ಸರ್ಕಾರಿ ಮತ್ತು ಕಾರ್ಪೋರೇಟ್ ವಲಯ) ಎಂದರೆ, ಭಾರತದ ಉದ್ಯೋಗ ಸೃಷ್ಟಿಕಾರರು ಮತ್ತು ರಾಷ್ಟ್ರದ ಸಂಪನ್ಮೂಲ ಸೃಷ್ಟಿಕರ್ತರು ಎನ್ನುತ್ತಾರೆ ಹಣಕಾಸು ಸಚಿವರು.
  • ನಾವು ಬಂಡವಾಳವನ್ನು ಈ ಕೆಳಗಿನ ವಲಯಗಳಲ್ಲಿ ತೊಡಗಿಸಬೇಕಿದೆ.

*ಮೂಲಸೌಕರ್ಯ

*ಡಿಜಿಟಲ್ ಆರ್ಥಿಕತೆ

*ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳಲ್ಲಿ ಉದ್ಯೋಗ ಸೃಷ್ಟಿ

  • ಬಂಡವಾಳ ಆಕರ್ಷಣೆಯನ್ನು ಹಲವು ರೂಪದಲ್ಲಿ ಪಡೆಯಲು ಉಪಕ್ರಮಗಳನ್ನು ಕೈಗೊಳ್ಳಲು ಉದ್ದೇಶಿಸಿದೆ.
  • “ಮುದ್ರಾ” ಸಾಲ ಯೋಜನೆಯ ಮೂಲಕ ಸಾಮಾನ್ಯ ಜನರ ಬದುಕು ಬದಲಾಗಿದ್ದು, ವ್ಯಾಪಾರ ವಹಿವಾಟು ಮಾಡುವುದು ಸುಲಭವಾಗಿದೆ.
  • ಎಂಎಸ್ಎಂಇಗಳ ಕುರಿತಂತೆ ಕೈಗೊಂಡಿರುವ ಕ್ರಮಗಳು:

*ಪ್ರಧಾನಮಂತ್ರಿ ಕರಮ್  ಯೋಗಿ ಮಾನ್ ಧನ್ ಯೋಜನೆ

*ವಾರ್ಷಿಕ 1.5 ಕೋಟಿಗೂ ಕಡಿಮೆ ವಹಿವಾಟು ಹೊಂದಿರುವ ಸುಮಾರು 3 ಕೋಟಿ  ಚಿಲ್ಲರೆ ಮಾರಾಟಗಾರರು ಮತ್ತು ಸಣ್ಣ ಅಂಗಡಿ ಮಾಲೀಕರಿಗೆ ಪಿಂಚಣಿ ಸೌಲಭ್ಯಗಳು.

*ಇದಕ್ಕೆ ನೋಂದಣಿ ಅತಿ ಸುಲಭ, ಆಧಾರ್,ಬ್ಯಾಂಕ್ ಖಾತೆ ಮತ್ತು ಸ್ವಯಂ ದೃಢೀಕರಣ ಪತ್ರ ಸಾಕು.

*ಎಂಎಸ್ ಎಂಇಗಳಿಗೆ ಬಡ್ಡಿ ಸಹಾಯಧನ ಯೋಜನೆಯಡಿ ಎಲ್ಲ ಜಿಎಸ್ ಟಿ ನೋಂದಾಯಿತ  ಎಂಎಸ್ಎಂಇಗಳಿಗೆ (ಹೊಸ ಕಂತಿನ ಸಾಲಕ್ಕಾಗಿ) ಬಡ್ಡಿ ಸಹಾಯಧನ ನೀಡಲು 2019-20ನೇ ಹಣಕಾಸು ವರ್ಷಕ್ಕೆ 350 ಕೋಟಿ ರೂ. ಮೀಸಲಿಡಲಾಗಿದೆ.

*ಸರ್ಕಾರಿ ಪಾವತಿಗಳಲ್ಲಿನ ವಿಳಂಬವನ್ನು ತಪ್ಪಿಸಲು ಎಂಎಸ್ಎಂಇಗಳಿಗೆ ಪೇಮೆಂಟ್ ಫ್ಲಾಟ್ ಫಾರ್ಮ್ ಸೃಷ್ಟಿ,  ಅಲ್ಲಿ ಸ್ವೀಕೃತಿ ಮತ್ತು ಪಾವತಿಗಳನ್ನು ನೋಡಿಕೊಳ್ಳಲಾಗುವುದು.

  • ರಾಷ್ಟ್ರೀಯ ಸಾಮಾನ್ಯ ಸಂಚಾರಿ ಕಾರ್ಡ್ (ಎನ್ ಸಿಎಂಸಿ) ಮಾನದಂಡದ ಆಧಾರದಲ್ಲಿ ಭಾರತದ ಮೊದಲ ದೇಶಿಯವಾಗಿ ಅಭಿವೃದ್ಧಿಪಡಿಸಿದ ಸಾರಿಗೆ ಪಾವತಿ ವ್ಯವಸ್ಥೆ 2019ರ ಮಾರ್ಚ್ ನಿಂದ ಆರಂಭಿಸಲಾಗಿದೆ.
  • ರುಪೆ ಕಾರ್ಡ್ ನಿಂದ  ಅಂತರ ಸಾರಿಗೆ (ಇಂಟರ್ ಅಪರೇಬಲ್ )ಕಾರ್ಡ್ ನಡೆಸಬಹುದು ಮತ್ತು ಅದನ್ನು ಹೊಂದಿರುವವರು ಬಸ್ ಪ್ರಯಾಣ, ಟೋಲ್ ಪಾವತಿ, ಪಾರ್ಕಿಂಗ್ ಶುಲ್ಕ, ರಿಟೇಲ್ ಶಾಪಿಂಗ್ ಗಳಿಗೆ ಬಳಕೆ ಮಾಡಬಹುದು.
  • ಭೌತಿಕ ಸಂಪರ್ಕ ಹೆಚ್ಚಿಸುವ ಎಲ್ಲ ಯೋಜನೆಗಳಿಗೆ ಭಾರಿ ಒತ್ತು, ಅವುಗಳೆಂದರೆ

*ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ

*ಕೈಗಾರಿಕಾ ಕಾರಿಡಾರ್ ಗಳು, ನಿಗದಿತ ಸರಕು ಸಾಗಾಣೆ ಕಾರಿಡಾರ್ ಗಳು

*ಭಾರತ್ ಮಾಲಾ ಮತ್ತು ಸಾಗರ್ ಮಾಲಾ ಯೋಜನೆಗಳು, ಜಲ ಮಾರ್ಗ ವಿಕಾಸ ಮತ್ತು ಉಡಾನ್ ಯೋಜನೆಗಳು.

  • ಭಾರತ್ ಮಾಲಾ ಎರಡನೇ ಹಂತದ ಯೋಜನೆಯಡಿ ರಾಜ್ಯಗಳ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಗೊಳಿಸಲಾಗುವುದು.
  • ಜಲ ಮಾರ್ಗ ವಿಕಾಸ ಯೋಜನೆಯಡಿ 2019-20ನೇ ಸಾಲಿನಲ್ಲಿ ಗಂಗಾನದಿಯಲ್ಲಿನ ನೌಕಾ ಸಂಚಾರ ಸಾಮರ್ಥ್ಯವನ್ನು ವೃದ್ಧಿಸುವುದು, ಸಾಹಿಬ್ ಗಂಜ್ ಮತ್ತು ಹಲ್ದಿಯಾಗಳಲ್ಲಿ ಮಲ್ಟಿ ಮಾಡಲ್ ಟರ್ಮಿನಲ್ ಮತ್ತು ಫರಕ್ಕಾದಲ್ಲಿ ನಾವಿಗೇಷನಲ್ ಲಾಕ್ ಅಭಿವೃದ್ಧಿಪಡಿಸುವುದು.
  • ಗಂಗಾ ನದಿಯಲ್ಲಿ ಸರಕು ಸಾಗಾಣೆ ಗಾತ್ರ ಮುಂದಿನ ನಾಲ್ಕು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಿಸುವುದು, ಇದರಿಂದ ಕಡಿಮೆ ವೆಚ್ಚದಲ್ಲಿ ಸರಕು ಮತ್ತು ಜನರ ಸಾಗಾಣಿಕೆ ಆಗುವುದಲ್ಲದೆ, ಆಮದು ವೆಚ್ಚ ತಗ್ಗಲಿದೆ.
  • 2018-2030ರವರೆಗೆ ರೈಲ್ವೆ ಮೂಲಸೌಕರ್ಯ ವೃದ್ಧಿಗೆ 50 ಲಕ್ಷ ಕೋಟಿ ರೂ. ಅಗತ್ಯವಿದೆ.
  • ರೈಲ್ವೆ ಅಭಿವೃದ್ಧಿ, ಮಾರ್ಗಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು, ಗಾಲಿಗಳ ಉತ್ಪಾದನೆ ಮತ್ತು ಪ್ರಯಾಣಿಕರ ಸಾಗಾಣೆ ಸೇವೆಗಳನ್ನು ನೀಡಲು ಸಾರ್ವಜನಿಕ- ಖಾಸಗಿ ಸಹಭಾಗಿತ್ವ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
  • ದೇಶಾದ್ಯಂತ 657 ಕಿಲೋಮೀಟರ್ ಮೆಟ್ರೋ ರೈಲು ಸಂಪರ್ಕ ಕಾಲ ಕಾರ್ಯಾಚರಣೆಗೊಳ್ಳಲಿದೆ.
  • ನಾಗರಿಕ ವಿಮಾನಯಾನ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು, ನಿರ್ವಹಣೆ, ದುರಸ್ತಿ ಮತ್ತು ಒಟ್ಟಾರೆ ನಿರ್ವಹಣೆ(ಓವರ್ ಹಾಲ್) (ಎಂಆರ್ ಓ) ಅಭಿವೃದ್ಧಿಗೆ ಅಗತ್ಯ ನೀತಿಗಳನ್ನು ರೂಪಿಸಲಾಗುವುದು.
  •  ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆ ಮತ್ತು ಭಾರತೀಯ ಭೂಭಾಗದಿಂದ ಅವುಗಳನ್ನು ಗುತ್ತಿಗೆ ನೀಡುವ ಚಟುವಟಿಕೆಗೆ ಉತ್ತೇಜನ ನೀಡಿ,  ಭಾರತವನ್ನು   ವೈಮಾನಿಕ ತಾಣವಾಗಿ  ರೂಪಿಸುವುದಕ್ಕೆ   ಮಾರ್ಗಸೂಚಿಗಳನ್ನು  ಸರ್ಕಾರ ರೂಪಿಸಿದೆ.
  • ಫೇಮ್ ಯೋಜನೆಯ 2ನೇ ಹಂತಕ್ಕೆ ಮುಂದಿನ 3 ವರ್ಷಗಳಿಗೆ 10ಸಾವಿರ ಕೋಟಿ ರೂ. ನಿಗದಿಪಡಿಸಲಾಗಿದೆ.
  • ವಿದ್ಯುನ್ಮಾನ ವಾಹನಗಳ ಅಳವಡಿಕೆಯನ್ನು ಚುರುಕುಗೊಳಿಸಲು ಚಾರ್ಜಿಂಗ್ ಮತ್ತು ಖರೀದಿ ಮೂಲಸೌಕರ್ಯವನ್ನು ಹೆಚ್ಚಿಸಲು ವಿನಾಯ್ತಿಗಳನ್ನು ನೀಡಲು ಉದ್ದೇಶಿಸಲಾಗಿದೆ.
  • ಫೇಮ್ ಯೋಜನೆಯಡಿ ಕೇವಲ ಅತ್ಯಾಧುನಿಕ ಬ್ಯಾಟರಿ ಚಾಲಿತ  ಮತ್ತು ನೋಂದಾಯಿತ ಇ-ವಾಹನಗಳಿಗೆ ಮಾತ್ರ ಸಹಾಯಧನ ನೀಡುವುದು.
  • ಹಣಕಾಸು ನೆರವು ನೀಡುವ ಮಾದರಿ ಅನುಸರಿಸಿ ನ್ಯಾಷನಲ್ ಹೈವೇ ಗ್ರಿಡ್ ಖಾತ್ರಿಪಡಿಸಲು ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಪುನರ್ ವಿನ್ಯಾಸಗೊಳಿಸುವುದು. 
  • ಓನ್ ನೇಷನ್ –ಓನ್ ಗ್ರಿಡ್ “ ಅಡಿಯಲ್ಲಿ ರಾಜ್ಯಗಳಿಗೆ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುವ ಖಾತ್ರಿ ನೀಡುವುದು.
  • ಅನಿಲ ಗ್ರಿಡ್, ಜಲ ಗ್ರಿಡ್ , ಐ ವೇಸ್ ಮತ್ತು ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ನೀಲನಕ್ಷೆಗಳು ಲಭ್ಯವಾಗುವಂತೆ ಮಾಡುವುದು.
  • ಉನ್ನತ ಮಟ್ಟದ ಸಮಿತಿ(ಎಚ್ ಎಲ್ ಇಸಿ) ಶಿಫಾರಸುಗಳನ್ನು ಅನುಷ್ಠಾನಗೊಳಿಸುವುದು.

*ಅದಕ್ಷ  ಮತ್ತು ಹಳೆಯ ಘಟಕಗಳನ್ನು ಸ್ಥಗಿತಗೊಳಿಸುವುದು.

*ನೈಸರ್ಗಿಕ ಅನಿಲ ಕೊರತೆ ಹಿನ್ನೆಲೆಯಲ್ಲಿ ಅನಿಲ ಆಧಾರಿತ ಘಟಕಗಳ ಸಾಮರ್ಥ್ಯವನ್ನು ಕಡಿಮೆ ಪ್ರಮಾಣದಲ್ಲಿ ಬಳಸಿಕೊಳ್ಳುವುದು.

  •  ಭರವಸೆ ಯೋಜನೆ (ಯುಡಿಎವೈ ) ಉಜ್ವಲ್ ಡಿಸ್ಕಾಮ್ ಅಡಿಯಲ್ಲಿ ಕ್ರಾಸ್ ಸಬ್ಸಿಡಿ ಶುಲ್ಕಗಳನ್ನು, ಮುಕ್ತ ಮಾರುಕಟ್ಟೆಯಲ್ಲಿ ವಿದ್ಯುತ್ ಖರೀದಿ ಮೇಲೆ ವಿಧಿಸುತ್ತಿದ್ದ ಅನಗತ್ಯ ಸುಂಕಗಳನ್ನು ಮತ್ತು ಕೈಗಾರಿಕೆಗಾಗಿ ವಿದ್ಯುತ್ ಉತ್ಪಾದಿಸುವ ಮತ್ತು ದೊಡ್ಡ ಪ್ರಮಾಣದ ವಿದ್ಯುತ್ ಗ್ರಾಹಕರ ಮೇಲಿನ ಶುಲ್ಕಗಳನ್ನು ತೆಗೆದುಹಾಕಲಾಗುವುದು.
  • ವಿದ್ಯುತ್ ವಲಯದ ತೆರಿಗೆ ಮತ್ತು ಸಾಂಸ್ಥಿಕ ಸುಧಾರಣೆಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು.  
  • ಬಾಡಿಗೆ ವಸತಿಗಳನ್ನು ಉತ್ತೇಜಿಸಲು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.
  • ಮಾದರಿ ಬಾಡಿಗೆ ಕಾನೂನನ್ನು ಸದ್ಯದಲ್ಲೇ ಅಂತಿಮಗೊಳಿಸಿ ಅದನ್ನು ರಾಜ್ಯಗಳಿಗೆ ಕಳುಹಿಸಿಕೊಡಲಾಗುವುದು.
  • ಸಾರ್ವಜನಿಕ ಮೂಲಸೌಕರ್ಯದಲ್ಲಿ ಜಂಟಿ ಅಭಿವೃದ್ಧಿ ಮತ್ತು ರಿಯಾಯಿತಿ ಕಾರ್ಯತಂತ್ರಗಳನ್ನು ಬಳಕೆ ಮಾಡಲಾಗುವುದು ಮತ್ತು ಕೇಂದ್ರ ಸರ್ಕಾರದ ಮತ್ತು ಸಿಪಿಎಸ್ಇ ಗಳಲ್ಲಿ ಕೈಗೆಟುಕುವ ದರದಲ್ಲಿ ವಸತಿ ನೀಡಲು ಭೂ ಪರಭಾರೆ (ಲ್ಯಾಂಡ್ ಪಾರ್ಸೆಲ್) ಪಾಲಿಸಲಾಗುವುದು.

ಮೂಲಸೌಕರ್ಯಕ್ಕೆ ಹಣಕಾಸಿನ ನೆರವು ನೀಡಲು ಬಂಡವಾಳಗಳ ಮೂಲ ವೃದ್ಧಿಗೆ ಕ್ರಮಗಳು;

  • 2019-20ನೇ ಸಾಲಿನಲ್ಲಿ ಸಾಲ ಖಾತ್ರಿ ವೃದ್ಧಿ ನಿಗಮ ಸ್ಥಾಪನೆ ಮಾಡಲಾಗುವುದು.
  • ಮೂಲಸೌಕರ್ಯಕ್ಕೆ ಆದ್ಯತೆ ನೀಡಿ ಮಾರುಕಟ್ಟೆಯಲ್ಲಿ ದೀರ್ಘಾವಧಿ ಬಾಂಡ್ ಗಳನ್ನು ನೀಡಲು ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು.
  • ನಿಗದಿತ ಲಾಕ್ ಇನ್ ಅವಧಿಯಲ್ಲಿ ಯಾವುದೇ ದೇಶಿಯ ಹೂಡಿಕೆದಾರರಿಗೆ (ಐಡಿಎಫ್- ಎನ್ ಬಿಎಫ್ ಸಿಗಳಿಂದ ಸಾಲದ ಖಾತ್ರಿ) ಎಫ್ಐಐ/ಎಫ್ ಬಿಐ ಗಳಿಗೆ ವರ್ಗಾವಣೆ ಮತ್ತು ಹೂಡಿಕೆಗಳ ಮಾರಾಟಕ್ಕೆ ಅವಕಾಶ ನೀಡಲು ಉದ್ದೇಶಿಸಲಾಗಿದೆ.
  • ಮಾರುಕಟ್ಟೆ ಬಾಂಡ್ ಗಳನ್ನು ಹೆಚ್ಚಿಸಲು ಕ್ರಮ

*ಷೇರು ಮಾರುಕಟ್ಟೆಯಲ್ಲಿ ಖಾತ್ರಿಯಾಗಿ ಎಎ ಶ್ರೇಯಾಂಕದ ಖಾತ್ರಿ ಬಾಂಡ್ ಗಳನ್ನು ಪಡೆದುಕೊಳ್ಳಲಾಗುವುದು.

*ಕಾರ್ಪೋರೇಟ್ ಬಾಂಡ್ ಗಳನ್ನು ಬಳಕೆದಾರರ ಸ್ನೇಹಿ ಮಾಡಲು ವಹಿವಾಟು ವೇದಿಕೆಗಳನ್ನು ಪರಾಮರ್ಶಿಸಲಾಗುವುದು.

  • ಸಾಮಾಜಿಕ ಷೇರು ವಿನಿಮಯ

*ಸೆಬಿ ನಿಯಂತ್ರಣದಡಿ ವಿದ್ಯುನ್ಮಾನ ನಿಧಿ ಸಂಗ್ರಹ ವೇದಿಕೆ ನಿರ್ಮಿಸಲಾಗುವುದು.

*ಸಾಮಾಜಿಕ ಉದ್ದಿಮೆದಾರರು ಮತ್ತು ಸ್ವಯಂಪ್ರೇರಿತ ಸಂಘಟನೆಗಳನ್ನು ಪಟ್ಟಿಮಾಡುವುದು.

*ಬಂಡವಾಳವನ್ನು ಸಂಗ್ರಹಿಸಲು ಷೇರು ಅಥವಾ ಸಾಲ ಅಥವಾ ಮ್ಯೂಚುಯಲ್ ಫಂಡ್ ಗಳನ್ನು ಬಳಕೆ ಮಾಡಬಹುದು.

  • ಪಟ್ಟಿಯಲ್ಲಿರುವ ಕಂಪನಿಗಳಲ್ಲಿ ಕನಿಷ್ಠ ಸಾರ್ವಜನಿಕ ಷೇರು ಹೊಂದಿರುವವರ ಪ್ರಮಾಣವನ್ನು ಶೇ.25ರಿಂದ 35ಕ್ಕೆ ಹೆಚ್ಚಿಸುವ ಬಗ್ಗೆ ಸೆಬಿ ಪರಿಶೀಲಿಸುವುದು.
  • ವಿದೇಶಿ ಹೂಡಿಕೆದಾರರಿಗೆ ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಮಾದರಿಯನ್ನು ಹೂಡಿಕೆದಾರರ ಸ್ನೇಹಿಯನ್ನಾಗಿ ರೂಪಿಸುವುದು.
  • ಚಿಲ್ಲರೆ ಹೂಡಿಕೆದಾರರು ಸರ್ಕಾರಿ ಖಜಾನೆ ಬಿಲ್ ಗಳಲ್ಲಿ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುವಂತೆ ಆರ್ ಬಿಐ ಕೈಗೊಳ್ಳುತ್ತಿರುವ ಕ್ರಮಗಳಿಗೆ ಸರ್ಕಾರ ಪೂರಕ ಕ್ರಮ ರೂಪಿಸುವುದು ಮತ್ತು ಅದಕ್ಕೆ ಷೇರು ಮಾರುಕಟ್ಟೆಗಳನ್ನು ಬಳಸಿಕೊಂಡು ಸಾಂಸ್ಥಿಕ ಅಭಿವೃದ್ಧಿಗೊಳಿಸುವುದು.

ವಿದೇಶಿ ಬಂಡವಾಳ ಹೂಡಿಕೆ (ಎಫ್ ಡಿಐ)ಗೆ ಭಾರತವನ್ನು ಅತ್ಯಂತ ಆಕರ್ಷಣೀಯಗೊಳಿಸಲು ಕ್ರಮಗಳು

*ನಾಗರಿಕ ವಿಮಾನಯಾನ,ಮಾಧ್ಯಮ (ಅನಿಮೇಷನ್, ಎ ವಿಜಿಸಿ)ವಿಮಾ ವಲಯ ಗಳಲ್ಲಿನ ಎಫ್ ಡಿಐ ಅನ್ನು ಮತ್ತಷ್ಟು ಮುಕ್ತಗೊಳಿಸುವುದು.

*ವಿಮಾ ಕಂಪನಿಗಳಲ್ಲಿ ಶೇ.100ರಷ್ಟು ಎಫ್ ಡಿಐಗೆ ಅವಕಾಶ ಮಾಡಿಕೊಡಲಾಗುವುದು

*ಏಕೈಕ ಬ್ರಾಂಡೆಡ್ ರಿಟೇಲ್ ವಲಯದಲ್ಲಿ ಎಫ್ ಡಿಐ  ನಿಯಮಗಳನ್ನು ಸರಳೀಕರಣಗೊಳಿಸಲಾಗುವುದು.

  • ಸರ್ಕಾರ ಭಾರತದಲ್ಲಿ ವಾರ್ಷಿಕ ಜಾಗತಿಕ ಬಂಡವಾಳ ಹೂಡಿಕೆದಾರರ ಮೇಳ ಆಯೋಜಿಸುವುದು, ಇದನ್ನು ರಾಷ್ಟ್ರೀಯ ಮೂಲಸೌಕರ್ಯ ಬಂಡವಾಳ ನಿಧಿ( ಎನ್ ಐಐಎಫ್) ನಿರೂಪಿಸಲಿದ್ದು, ಅದರಲ್ಲಿ ಮೂರು ಬಗೆಯ ಜಾಗತಿಕ ಹೂಡಿಕೆದಾರರನ್ನು (ಪಿಂಚಣಿ, ವಿಮಾ ಮತ್ತು ಸಂಪತ್ತು ನಿಧಿ) ಆಕರ್ಷಿಸುವುದು.
  • ಕಂಪನಿಯಲ್ಲಿನ ಎಫ್ ಪಿಐ ಹೂಡಿಕೆ ಮಿತಿಯನ್ನು ಶೇ.24ರಿಂದ ವಲಯವಾರು ವಿದೇಶಿ ಬಂಡವಾಳ ಹೂಡಿಕೆ ಮಿತಿಗೆ ಹೆಚ್ಚಿಸಲು ಉದ್ದೇಶಿಲಾಗಿದೆ. ಮಿತಿಯನ್ನು ತಗ್ಗಿಸಲು ಕಂಪನಿಗೆ ಆಯ್ಕೆ ನೀಡಲಾಗುವುದು.
  • ಎಫ್ ಪಿಐ ಗಳಿಗೆ ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್  ಮತ್ತು ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್ ಗಳ ಮೂಲಕ ಸಾಲ ಭದ್ರತೆಗೆ   ಸೇರಿಸಿಕೊಳ್ಳುವುದು. 
  • ಎನ್ ಆರ್ ಐ ಫೋರ್ಟ್ ಫೋಲಿಯೋ  ಇನ್ವೆಸ್ಟ್ ಮೆಂಟ್ ಸ್ಕೀಂ ಮಾರ್ಗವನ್ನು ವಿದೇಶಿ ಫೋರ್ಟ್ ಫೋಲಿಯೋ  ಇನ್ವೆಸ್ಟ್ ಮೆಂಟ್ ಸ್ಕೀಂ ಮಾರ್ಗದಲ್ಲಿ ವಿಲೀನಗೊಳಿಸಲಾಗುವುದು.
  • ಮೂಲಸೌಕರ್ಯ ಬಂಡವಾಳ ಹೂಡಿಕೆ ಟ್ರಸ್ಟ್ (ಇನ್ ಐಟಿಎಸ್) , ರಿಯಲ್ ಎಸ್ಟೇಟ್ ಇನ್ವೆಸ್ಟ್ ಮೆಂಟ್ ಟ್ರಸ್ಟ್ (ಆರ್ ಇ ಐಟಿಎಸ್ ) ಸೇರಿ ಟೋಲ್ ನಿರ್ವಹಣೆ ವರ್ಗಾವಣೆ (ಟಿಓಟಿ) ಮತ್ತಿತರ ಹೊಸ ಹಣಕಾಸು ಮೂಲಗಳ ಮೂಲಕ  ರೂ. 24,000 ಕೋಟಿಗೂ ಅಧಿಕ  ಆರ್ಥಿಕ ಸಂಪನ್ಮೂಲ ಸಂಗ್ರಹ ಮಾಡಲಾಗಿದೆ.
  • ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ ಎಸ್ ಐ ಎಲ್ ) ಎಂಬ ಹೊಸ ಸಾರ್ವಜನಿಕ ವಲಯದ ಉದ್ದಿಮೆಯನ್ನು ಬಾಹ್ಯಾಕಾಶ ಇಲಾಖೆಯ ಹೊಸ ವಾಣಿಜ್ಯ ವಿಭಾಗವನ್ನಾಗಿ ಸೇರ್ಪಡೆ ಮಾಡಲಾಗುವುದು.
  • ಇಸ್ಟ್ರೋ ಸಂಸ್ಥೆ ಕೈಗೊಳ್ಳುವ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಗಳ ಪ್ರಯೋಜನಗಳನ್ನು ಪಡೆದು, ಉಪಗ್ರಹಗಳ ಉಡಾವಣೆ, ತಂತ್ರಜ್ಞಾನ ವರ್ಗಾವಣೆ ಮತ್ತು ಬಾಹ್ಯಾಕಾಶ ಉತ್ಪನ್ನಗಳನ್ನುವಾಣಿಜ್ಯೀಕರಣ ಮಾಡಿ ಮಾರುಕಟ್ಟೆ ಮಾಡುವುದು.

 

ನೇರ ತೆರಿಗೆಗಳು

  • ವಾರ್ಷಿಕ ರೂ .400 ಕೋಟಿ. ವಹಿವಾಟು ನಡೆಸುವ ಕಂಪನಿಗಳ ತೆರಿಗೆ ದರದವನ್ನು ಶೇ.25ಕ್ಕೆ ಇಳಿಸಲಾಗಿದೆ.
  • 2 ಕೋಟಿಯಿಂದ 5 ಕೋಟಿ ವರೆಗೆ  ಮತ್ತು 5 ಕೋಟಿ ಮತ್ತು ಅದಕ್ಕಿಂತ ಹೆಚ್ಚಿರುವ ತೆರಿಗೆ ಆದಾಯವಿರುವ ವ್ಯಕ್ತಿಗಳ ಮೇಲೆ ವಿಧಿಸುತ್ತಿದ್ದ ಸರ್ ಚಾರ್ಜ್ (ಶುಲ್ಕ)  ಹೆಚ್ಚಿಸಲಾಗಿದೆ.
  •  ತೆರಿಗೆ ಪಾವತಿ ವಿಭಾಗದಲ್ಲಿ  ಭಾರತದ ಈಸ್ ಆಫ್ ಡೂಯಿಂಗ್ ಬುಸಿನೆಸ್  ನ ಸ್ಥಾನ 2017ರಲ್ಲಿ 172 ಸ್ಥಾನದಲ್ಲಿದ್ದು, 2019ರಲ್ಲಿ 121 ನೇ ಸ್ಥಾನಕ್ಕೇರಿದ ಹೆಗ್ಗಳಿಕೆ .
  • ಕಳೆದ ಐದು ವರ್ಷಗಳಿಂದೀಚೆಗೆ ನೇರ ತೆರಿಗೆ ಸಂಗ್ರಹ ಪ್ರಮಾಣ ಶೇ.78ರಷ್ಟು ಹೆಚ್ಚಾಗಿ 11.37 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತೆರಿಗೆ ಸರಳೀಕರಣ ಮತ್ತು ಈಸ್ ಆಫ್ ಲಿವಿಂಗ್ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಪಾಲಿಸುವುದು.

  • ಪ್ಯಾನ್ ಮತ್ತು ಆಧಾರ್ ಅಂತರ ಬದಲಾವಣೆ

*ಪ್ಯಾನ್ ಇಲ್ಲದೆ ಇರುವವರೂ ಕೂಡ ಆಧಾರ್ ಬಳಸಿ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಬಹುದು.

*ಪ್ಯಾನ್ ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಆಧಾರ್ ಬಳಕೆ ಮಾಡುವುದು.

  • ಪ್ರೀ-ಫಿಲ್ಲಿಂಗ್ ಆಫ್ ಇನ್ ಕಂ ಟ್ಯಾಕ್ಸ್ ರಿಟರ್ನ್ ಅನ್ನು ಇನ್ನು ವೇಗವಾಗಿ ಮತ್ತು ನಿಖರವಾಗಿ ಮಾಡಬಹುದು.

*ಮೊದಲೇ ಭರ್ತಿ ಮಾಡಿದ ಹಲವು ಆದಾಯಗಳು ಮತ್ತು ಖರ್ಚುಗಳ ವಿವರಗಳನ್ನು ಒಳಗೊಂಡ ಫಾರಂಗಳು ಲಭ್ಯವಿವೆ.

*ಬ್ಯಾಂಕುಗಳು, ಷೇರು ಮಾರುಕಟ್ಟೆಗಳು, ಮ್ಯೂಚುಯಲ್ ಫಂಡ್ ಕಂಪನಿಗಳಿಂದ ಮಾಹಿತಿಯನ್ನು ಸಂಗ್ರಹ ಮಾಡಿಕೊಳ್ಳಬಹುದು.

ಫೇಸ್ ಲೆಸ್ ಇ-ಅಸೆಸ್ ಮೆಂಟ್

*ಮುಖರಹಿತ ಇ-ಮೌಲ್ಯಮಾಪನ ಆರಂಭಿಸಲಾಗುವುದು, ಇದರಲ್ಲಿ ಮಾನವರ ಹಸ್ತಕ್ಷೇಪ ಇರುವುದಿಲ್ಲ.

*ನಿಗದಿತ ವಹಿವಾಟುಗಳಲ್ಲಿ ಏನಾದರೂ ದೋಷಗಳಿದ್ದಲ್ಲಿ ಅವುಗಳನ್ನು ಪರಿಶೀಲಿಸುವ ಕೆಲಸವನ್ನು ಆರಂಭಿಕವಾಗಿ ಮಾನವರು ಮಾಡಲಿದ್ದಾರೆ.

ಕೈಗೆಟುಕುವ ದರದಲ್ಲಿ ವಸತಿ

  • 2020ರ ಮಾರ್ಚ್ 31ರೊಳಗೆ ಸುಮಾರು 45 ಲಕ್ಷ ರೂ.ಗಳವರೆಗಿನ ಮನೆಯನ್ನು ಖರೀದಿಸಲು ಸಾಲ ಪಡೆದರೆ ಬಡ್ಡಿ ಪಾವತಿಯಲ್ಲಿ  1.5 ಲಕ್ಷ ರೂ.ಗಳವರೆಗೆ ಹೆಚ್ಚುವರಿ ವಿನಾಯ್ತಿ ಸಿಗಲಿದೆ.
  • 15 ವರ್ಷಗಳ ಸಾಲದ ಅವಧಿಯಲ್ಲಿ ಒಟ್ಟು ಸುಮಾರು 7 ಲಕ್ಷ ರೂ.ಗಳ ವರೆಗೆ ಪ್ರಯೋಜನ ಸಿಗಲಿದೆ.

ವಿದ್ಯುನ್ಮಾನ ವಾಹನಗಳಿಗೆ ಉತ್ತೇಜನ

  • ವಿದ್ಯುನ್ಮಾನ ವಾಹನಗಳ ಸಾಲದ ಮೇಲಿನ ಬಡ್ಡಿ ಪಾವತಿಗೆ 1.5ಲಕ್ಷದವರೆಗೆ ಆದಾಯ ತೆರಿಗೆ ಪಾವತಿಯಿಂದ ಹೆಚ್ಚುವರಿ ವಿನಾಯ್ತಿ.
  • ವಿದ್ಯುನ್ಮಾನ ವಾಹನಗಳ ಕೆಲವು ಬಿಡಿಭಾಗಗಳಿಗೆ ಸೀಮಾ ಸುಂಕದಿಂದ ವಿನಾಯ್ತಿ.

ಇತರೆ ನೇರ ತೆರಿಗೆ ಕ್ರಮಗಳು

*ತೆರಿಗೆ ಪಾವತಿದಾರರಿಗೆ ಆಗುವ ಕಷ್ಟಗಳನ್ನು ತಪ್ಪಿಸಲು ತೆರಿಗೆ ಕಾನೂನುಗಳ ಸರಳೀಕರಣ.

*ಹೆಚ್ಚಿನ ಆದಾಯ ಹೊಂದಿರುವವರು ತೆರಿಗೆ ರಿಟನ್ಸ್  ಪಾವತಿಸದಿದ್ದರೆ ಅವರ ವಿರುದ್ಧ ಪ್ರಾಸಿಕ್ಯೂಷನ್ ಆರಂಭ.

*ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 56 ಮತ್ತು ಸೆಕ್ಷನ್ 50 ಸಿಎ ಅಡಿಯಲ್ಲಿ ದುರುಪಯೋಗ ಮಾಡಿದರೆ  ಸೂಕ್ತ ವರ್ಗದವರಿಗೆ ವಿನಾಯ್ತಿ ನೀಡಲಾಗುವುದು.

ನವೋದ್ಯಮಗಳಿಗೆ ಬಿಗ್ ರಿಲೀಫ್

  • ನವೋದ್ಯಮಗಳಲ್ಲಿ ಬಂಡವಾಳ ಹೂಡಲು ವಸತಿ ಗೃಹಗಳ ಮಾರಾಟಕ್ಕೆ ಆದಾಯದ ಮೇಲಿನ ತೆರಿಗೆಗೆ ನೀಡಲಾಗಿದ್ದ ವಿನಾಯ್ತಿಯನ್ನು 2021ನೇ ಹಣಕಾಸು ವರ್ಷದವರೆಗೆ ಮುಂದುವರಿಸಲಾಗುವುದು.
  • “ಏಜೆಂಲ್ ತೆರಿಗೆ’ ವಿಚಾರ ಇತ್ಯರ್ಥಪಡಿಸಲಾಗಿದೆ, ನವೋದ್ಯಮಿಗಳು ಮತ್ತು ಹೂಡಿಕೆದಾರರು ತಮ್ಮ ಅಗತ್ಯ ಘೋಷಣೆಗಳನ್ನು ಮತ್ತು ರಿಟನ್ಸ್ ಗಳನ್ನು ಸಲ್ಲಿಸಬೇಕು,  ಷೇರುಗಳ ಮೌಲ್ಯಮಾಪನಕ್ಕೆ ಪರಿಶೀಲನೆ ಅಗತ್ಯವಾದರೆ ಮಾಡಬೇಕಾಗುತ್ತದೆ.
  • ನವೋದ್ಯಮಗಳು ಸಂಗ್ರಹಿಸುವ ನಿಧಿ ಆದಾಯ ತೆರಿಗೆ ಇಲಾಖೆ ಪರಿಶೀಲನೆಗೆ ಒಳಪಡಬೇಕಾಗಿಲ್ಲ.
  • ಹೂಡಿಕೆದಾರರ ಗುರುತಿಸುವುದು ಮತ್ತು ಹೂಡಿಕೆಯ ಮೂಲ ನಿರೂಪಿಸಲು ಇ-ವೆರಿಫಿಕೇಷನ್ ಕಾರ್ಯತಂತ್ರ ರೂಪಿಸಲಾಗುವುದು.
  • ಬಾಕಿ ಮೌಲ್ಯಮಾಪನ ಮತ್ತು ವ್ಯಾಜ್ಯಗಳ ಇತ್ಯರ್ಥಕ್ಕೆ ವಿಶೇಷ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು.
  • ಮೌಲ್ಯಮಾಪನ ಅಧಿಕಾರಿ,ಮೇಲ್ವಿಚಾರಕ ಅಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಯಾವುದೇ ತನಿಖೆಯನ್ನು ನಡೆಸುವಂತಿಲ್ಲ.
  •  ಪರ್ಯಾಯ ಹೂಡಿಕೆ ನಿಧಿಗಳಲ್ಲಿ ವಿಭಾಗ-2ರಲ್ಲಿ ಬರುವ ಷೇರುಗಳ ಮೌಲ್ಯಮಾಪನ ಪರಿಶೀಲನೆ ನಡೆಸುವಂತಿಲ್ಲ. 
  • ನಷ್ಟ ಮತ್ತು ಮರು ಹೊಂದಾಣಿಕೆ ಸಂದರ್ಭದಲ್ಲಿ ಷರತ್ತುಗಳನ್ನು ಸಡಿಲಗೊಳಿಸಲಾಗುವುದು.

 

 

 

 

ಎನ್ ಬಿಎಫ್ ಸಿಗಳು  

ಎನ್ ಬಿಎಫ್ ಸಿಗಳು  ಕೆಟ್ಟ ಹಾಗೂ ಸಂದೇಹಾಸ್ಪದ ಸಾಲಗಳಿಗೆ ಪಡೆಯುವ ಬಡ್ಡಿ ಹಾಗೂ ಠೇವಣಿಯೇತರ ನಿಧಿ ಸಂಗ್ರಹ ಮಾಡಿದರೆ ಯಾವ ವರ್ಷದಲ್ಲಿ ಬಡ್ಡಿ ವಸೂಲಿ ಮಾಡಿದ್ದಾರೋ ಆ ವರ್ಷದ ತೆರಿಗೆ ವಸೂಲಿ ಮಾಡಲಾಗುವುದು.

ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (ಐಎಫ್ ಎಸ್ ಸಿ)

  • ಐಎಫ್ ಎಸ್ ಸಿಗಳಿಗೆ ನೇರ ತೆರಿಗೆ ವಿನಾಯ್ತಿಗಳನ್ನು ನೀಡಲು ಉದ್ದೇಶಿಸಲಾಗಿದೆ.

*15 ವರ್ಷಗಳ ಅವಧಿಯಲ್ಲಿ 10 ವರ್ಷಗಳಲ್ಲಿ ಶೇ.100ರಷ್ಟು ಲಾಭ ಸಂಯೋಜಿತ ವೆಚ್ಚಗಳನ್ನು ತೋರಿಸಿದ್ದರೆ.

*ಕಂಪನಿಗಳು ಮತ್ತುಮ್ಯೂಚುಯಲ್ ಫಂಡ್ ಗಳ ಸಂಗ್ರಹಿತ ಮತ್ತು ಪ್ರಸಕ್ತ  ಆದಾಯದಲ್ಲಿ ಲಾಭಾಂಶ ವಿತರಣೆ ತೆರಿಗೆಗೆ ವಿನಾಯ್ತಿ .

*ಪರ್ಯಾಯ ಹೂಡಿಕೆ ನಿಧಿ(ಎಐಎಫ್ ) ವಿಭಾಗ -2ರಲ್ಲಿ ಬರುವ ಬಂಡವಾಳ ಸಂಗ್ರಹಕ್ಕೆ ವಿನಾಯ್ತಿ.

*ನಿವಾಸಿಗಳಲ್ಲದವರಿಂದ ಸಾಲ ಪಡೆದಿದ್ದರೆ ಅವರಿಗೆ ಪಾವತಿಸುವ ಬಡ್ಡಿ ಮೇಲೆ ವಿನಾಯ್ತಿ.

ಭದ್ರತಾ ವಹಿವಾಟು ತೆರಿಗೆ(ಎಸ್ ಟಿಟಿ)

  • ಆಯ್ಕೆಯ ಸಂದರ್ಭಗಳಲ್ಲಿ ಮೂಲ ಬೆಲೆ ಮತ್ತು ಇತ್ಯರ್ಥ ನಡುವಿನ ವ್ಯತ್ಯಾಸದ ಮೇಲೆ ಎಸ್  ಟಿಟಿ ನಿರ್ಭಂಧಿಸಲಾಗುವುದು.

ಪರೋಕ್ಷ ತೆರಿಗೆಗಳು

ಮೇಕ್ ಇನ್ ಇಂಡಿಯಾ

  • ಗೋಡಂಬಿ, ಪಿವಿಸಿ, ಟೈಲ್ಸ್ , ಆಟೋ ಬಿಡಿಭಾಗಗಳು, ಮಾರ್ಬಲ್ ಸ್ಲಾಬ್, ಆಪ್ಟಿಕಲ್ ಫೈಬರ್ ಕೇಬಲ್, ಸಿಸಿಟಿವಿ ಗಳ ಮೇಲಿನ ಮೂಲ ಸೀಮಾ ಸುಂಕ ಹೆಚ್ಚಿಸಲಾಗಿದೆ.
  • ಭಾರತದಲ್ಲೇ ತಯಾರಾದ ಕೆಲವು ವಿದ್ಯುನ್ಮಾನ ವಸ್ತುಗಳ ಮೇಲಿನ ಸೀಮಾ ಸುಂಕವನ್ನು ವಾಪಸ್ ಪಡೆಯಲಾಗಿದೆ.
  • ಕೊಬ್ಬಿನ ಅಂಶವಿರುವ ಕೆಲವು ಎಣ್ಣೆಗಳು, ಪಾಮ್ ಸ್ಟ್ರೇನ್ಸ್ ಗಳ ಮೇಲಿನ ವಿನಾಯ್ತಿ ವಾಪಸ್ ಪಡೆಯಲಾಗಿದೆ. 
  • ಆಮದು ಮಾಡಿಕೊಂಡ ಪುಸ್ತಕಗಳ ಮೇಲೆ ಶೇ.5 ರಷ್ಟು ಸೀಮಾ ಸುಂಕ ವಿಧಿಸಲಾಗುವುದು.
  • ಕೆಲವು ಕಚ್ಚಾ ವಸ್ತುಗಳ ಮೇಲಿನ ಸೀಮಾ ಸುಂಕ ತಗ್ಗಿಸಲಾಗಿದೆ.
  • ಅವುಗಳೆಂದರೆ, ಕೃತಕ ಕಿಡ್ನಿಗಳಿಗೆ ಬಳಸುವ ವಸ್ತುಗಳು, ಅಣು ವಿದ್ಯುತ್ ಘಟಕಗಳಿಗೆ ಬಳಸುವ ಇಂಧನ ಮತ್ತು ಬಳಸಿ ಬಿಸಾಡಬಹುದಾದ ಡಯಾಲೈಸರ್
  • ನಿಗದಿತ ವಿದ್ಯುನ್ಮಾನ ವಸ್ತುಗಳಿಗೆ ಬಳಸುವ ಕ್ಯಾಪಿಟಲ್ ಸರಕುಗಳು.

ರಕ್ಷಣೆ:

  • ಭಾರತದಲ್ಲಿ ಉತ್ಪಾದನೆಯಾಗದ ರಕ್ಷಣಾ ಉಪಕರಣಗಳಿಗೆ ಮೂಲ ಕಸ್ಟಂಸ್ ಸುಂಕದಿಂದ ವಿನಾಯತಿ

ಇತರ ಪರೋಕ್ಷ ತೆರಿಗೆ ಪ್ರಸ್ತಾವನೆಗಳು

  • ಕಚ್ಚಾ ಮತ್ತು ಅಪೂರ್ಣ  ಚರ್ಮದ ಉತ್ಪನ್ನಗಳಿಗೆ ರಫ್ತು ಸುಂಕವನ್ನು ತರ್ಕಬದ್ದಗೊಳಿಸಿ ನ್ಯಾಯ ಸಮ್ಮತವಾಗಿಸಲಾಗಿದೆ. 
  • ಪೆಟ್ರೋಲ್ ಮತ್ತು ಡೀಸಿಲ್ ಮೇಲೆ ಲೀಟರೊಂದಕ್ಕೆ ತಲಾ 1 ರೂಪಾಯಿ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು ರಸ್ತೆ ಹಾಗು ಮೂಲಸೌಕರ್ಯ ತೆರಿಗೆ ಹೆಚ್ಚಿಸಲಾಗಿದೆ.
  • ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಕಸ್ಟಂಸ್ ಸುಂಕವನ್ನು ಹೆಚ್ಚಿಸಲಾಗಿದೆ.
  • ಜಿ.ಎಸ್.ಟಿ. ತೆರಿಗೆ ಪೂರ್ವದಲ್ಲಿ ಕೇಂದ್ರೀಯ ಅಬಕಾರಿ ಮತ್ತು ಸೇವಾ ತೆರಿಗೆಗೆ ಸಂಬಂಧಿಸಿ ಬಾಕಿ ಇರುವ ದೂರರ್ಜಿಗಳನ್ನು ತ್ವರಿತವಾಗಿ ಇತ್ಯರ್ಥ ಮಾಡುವುದಕ್ಕಾಗಿ  ಆಡಳಿತ ವಿವಾದ ಪರಿಹಾರ ಯೋಜನೆ. 

 

 

ಗ್ರಾಮೀಣ ಭಾರತ್ / ಗ್ರಾಮೀಣ ಭಾರತ

  • ಉಜ್ವಲಾ ಯೋಜನೆ ಮತ್ತು ಸೌಭಾಗ್ಯ ಯೋಜನೆಗಳು ಪ್ರತೀ ಗ್ರಾಮೀಣ ಕುಟುಂಬಗಳ ಬದುಕನ್ನು ಪರಿವರ್ತಿಸಿವೆ, ಮತ್ತು ಅವರು ಜೀವಿಸುವುದಕ್ಕೆ ಇರುವ ಅವಕಾಶಗಳನ್ನು ಸುಧಾರಿಸಿವೆ. 
  • ಇಚ್ಚಿಸುವ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ 2022 ರೊಳಗೆ ವಿದ್ಯುತ್ ಮತ್ತು ಸ್ವಚ್ಚ ಅಡುಗೆ ಸೌಲಭ್ಯ.
  • ಪ್ರಧಾನ ಮಂತ್ರಿ ಆವಾಸ್ ಯೋಜನಾ-ಗ್ರಾಮೀಣ (ಪಿ.ಎಂ.ಎ.ವೈ.-ಜಿ.) ಯು 2022 ರೊಳಗೆ ಎಲ್ಲರಿಗೂ ವಸತಿ ಎಂಬ ಗುರಿಯನ್ನು ಸಾಧಿಸುವ ಉದ್ದೇಶವನ್ನು ಹೊಂದಿದೆ.

+ ಅರ್ಹ ಫಲಾನುಭವಿಗಳಿಗೆ 1.95  ಕೋಟಿ ಮನೆಗಳನ್ನು ಶೌಚಾಲಯ, ವಿದ್ಯುತ್, ಮತ್ತು ಎಲ್.ಪಿ.ಜಿ. ಸಂಪರ್ಕ ಸಹಿತ ಎರಡನೇ ಹಂತದಲ್ಲಿ (2019-20 ರಿಂದ 2021-22) ಒದಗಿಸಲಾಗುವುದು.

  • ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನ (ಪಿ.ಎಂ.ಎಂ.ಎಸ್.ವೈ.)

+ ಪಿ.ಎಂ.ಎಂ. ಎಸ್.ವೈ. ಮೂಲಕ ಬಲಿಷ್ಟ ಮೀನುಗಾರಿಕಾ ಆಡಳಿತ ಜಾಲವನ್ನು  ಮೀನುಗಾರಿಕಾ ಇಲಾಖೆ ಮೂಲಕ ಸ್ಥಾಪಿಸಲಾಗುವುದು.

+ ಮೂಲಸೌಕರ್ಯ, ಆಧುನೀಕರಣ , ಪತ್ತೆ ಹಚ್ಚುವಿಕೆ, ಉತ್ಪಾದನೆ, ಉತ್ಪಾದಕತೆ , ಕೊಯಿಲೋತ್ತರ ನಿರ್ವಹಣೆ ಮತ್ತು ಗುಣಮಟ್ಟ ನಿಯಂತ್ರಣ ಸಹಿತ  ಮೌಲ್ಯ ಸರಪಳಿಯಲ್ಲಿರುವ ಸಂಕೀರ್ಣ ಅಂತರಗಳನ್ನು ನಿವಾರಿಸಲಾಗುವುದು.

  • ಪ್ರಧಾನ ಮಂತ್ರಿ  ಗ್ರಾಮ ಸಡಕ್ ಯೋಜನಾ (ಪಿ.ಎಂ.ಜಿ.ಎಸ್.ವೈ.)

+ ಅರ್ಹ ಮತ್ತು ಕಾರ್ಯಸಾಧುವಾದ  ಜನವಸತಿ ಪ್ರದೇಶಗಳನ್ನು ಸಂಪರ್ಕಿಸುವ ಗುರಿಯನ್ನು 2022 ರಿಂದ 2019 ಕ್ಕೆ ಅವಧಿ ಕಡಿತ ಮಾಡಿ ನಿಗದಿ ಮಾಡಲಾಗಿದೆ. 97 % ನಷ್ಟು ಇಂತಹ ಜನವಸತಿ ಪ್ರದೇಶಗಳಿಗೆ ಈಗಾಗಲೇ ಸರ್ವ ಋತು ಸಂಪರ್ಕವನ್ನು ಒದಗಿಸಲಾಗಿದೆ.

+ ಹಸಿರು ತಂತ್ರಜ್ಞಾನ ಬಳಸಿ 30,000 ಕಿಲೋ ಮೀಟರ್ ರಸ್ತೆಗಳನ್ನು ಪಿ.ಎಂ.ಜಿ.ಎಸ್.ವೈ. ಅಡಿಯಲ್ಲಿ ನಿರ್ಮಿಸಲಾಗಿದೆ. ತ್ಯಾಜ್ಯ ಪ್ಲಾಸ್ಟಿಕ್, ಶೀತಲ ಮಿಶ್ರಣ ತಂತ್ರಜ್ಞಾನ ಬಳಸಿ ಆ ಮೂಲಕ ಕಾರ್ಬನ್  ಹೊರಸೂಸುವಿಕೆಯನ್ನು ನಿರ್ಬಂಧಿಸಲಾಗಿದೆ.

+ ಪಿ.ಎಂ.ಜಿ.ಎಸ್.ವೈ. III ಅಡಿಯಲ್ಲಿ ಮುಂದಿನ ಐದು ವರ್ಷಗಳ ಅವಧಿಯಲ್ಲಿ 1,25,000 ಕಿಲೋ ಮೀಟರ್ ಉದ್ದದ ರಸ್ತೆಯನ್ನು 80,250  ಕೋ.ರೂ. ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು.

  • ಸಾಂಪ್ರದಾಯಿಕ ಕೈಗಾರಿಕೆಗಳ ಪುನಶ್ಚೇತನ ಮತ್ತು ಮೇಲ್ದರ್ಜೆಗೆ  ಏರಿಸಲು ಹಣಕಾಸು ಯೋಜನೆ. (ಎಸ್.ಎಫ್.ಯು.ಆರ್.ಟಿ.ಐ.)

+ ಸಾಂಪ್ರದಾಯಿಕ ಕೈಗಾರಿಕೆಗಳನ್ನು ಹೆಚ್ಚು ಉತ್ಪಾದನಾಶೀಲಗೊಳಿಸಲು, ಲಾಭದಾಯಕವಾಗಿಸಲು  ಮತ್ತು ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಂತಾಗಿಸಲು ಗುಚ್ಚ ಆಧಾರಿತ ಅಭಿವೃದ್ದಿಗಾಗಿ ಸಾಮಾನ್ಯ ಸೌಲಭ್ಯ ಕೇಂದ್ರಗಳನ್ನು (ಸಿ.ಎಫ್.ಸಿ.)  ಸ್ಥಾಪಿಸಲಾಗುತ್ತದೆ.

+ 2019-20 ರಲ್ಲಿ ಬಿದಿರು, ಜೇನು ಮತ್ತು ಖಾದಿಗೆ ವಿಶೇಷ ಗಮನ ನೀಡಿ 100 ಹೊಸ ಗುಚ್ಚಗಳನ್ನು ಸ್ಥಾಪಿಸಲಾಗುವುದು, ಇದರಿಂದ 50,000 ಕರಕುಶಲಕರ್ಮಿಗಳಿಗೆ ಆರ್ಥಿಕ ಮೌಲ್ಯ ಸರಪಳಿಯಲ್ಲಿ  ಸೇರ್ಪಡೆಗೊಳ್ಳಲು ಸಾಧ್ಯವಾಗುತ್ತದೆ.  

  • ಅನ್ವೇಷಣೆ, ಗ್ರಾಮೀಣ ಕೈಗಾರಿಕೆ ಮತ್ತು ಉದ್ಯಮಶೀಲತೆ ಉತ್ತೇಜನಕ್ಕೆ ಯೋಜನೆ (ಎ.ಎಸ್.ಪಿ.ಐ.ಆರ್.ಇ.)

+ 80  ಜೀವನೋಪಾಯ ವ್ಯಾಪಾರ ಇನ್ ಕ್ಯುಬೇಟರ್ ಗಳು (ಎಲ್.ಬಿ.ಐ.ಗಳು) ಮತ್ತು 20 ತಂತ್ರಜ್ಞಾನ ವ್ಯಾಪಾರ  ಇನ್ ಕ್ಯುಬೇಟರ್ ಗಳನ್ನು  (ಟಿ.ಬಿ.ಐ.ಗಳು ) 2019-20 ರ ಅವಧಿಯಲ್ಲಿ ಸ್ಥಾಪಿಸಲಾಗುವುದು.

+ ಕೃಷಿ-ಗ್ರಾಮೀಣ ಕೈಗಾರಿಕಾ ವಲಯದಲ್ಲಿ 75,000 ಉದ್ಯಮಿಗಳನ್ನು ಕೌಶಲ್ಯಯುಕ್ತರನ್ನಾಗಿಸಲಾಗುವುದು.

  • ಕೃಷಿ ಕ್ಷೇತ್ರ ಮತ್ತು ಸಂಬಂಧಿತ ಚಟುಚಟಿಕೆಗಳಲ್ಲಿ ಮೌಲ್ಯವರ್ಧನೆಗೆ ಚಾಲಕ ಶಕ್ತಿಯನ್ನು ನೀಡಲು ಖಾಸಗಿ ಉದ್ಯಮಶೀಲತ್ವವನ್ನು ಬೆಂಬಲಿಸಲಾಗುವುದು.
  • ಜಾನುವಾರು ಮೇವು, ಆಹಾರ ತಯಾರಿಕೆ, ಹಾಲು ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಒದಗಿಸುವಿಕೆಗೆ ಮೂಲಸೌಕರ್ಯಗಳನ್ನು ರೂಪಿಸಿ ಸಹಕಾರಿ ಕ್ಷೇತ್ರದ ಮೂಲಕ ಹೈನುಗಾರಿಕೆಯನ್ನು  ಪ್ರೋತ್ಸಾಹಿಸಲಾಗುವುದು.
  • ಹೊಸದಾಗಿ 10,000  ಕೃಷಿಕರ ಉತ್ಪನ್ನಗಳ ಸಂಘಟನೆಗಳನ್ನು ರೈತರ ಆರ್ಥಿಕ ಸ್ಥಿತಿ ಉತ್ತಮೀಕರಣಕ್ಕಾಗಿ ರಚಿಸಲಾಗುವುದು.
  • ಇ.ನಾಮ್  ಪ್ರಯೋಜನಗಳು ರೈತರಿಗೆ ದೊರೆಯುವಂತಾಗಲು ಸರಕಾರವು ರಾಜ್ಯ ಸರಕಾರಗಳ ಜೊತೆ ಕೈಜೋಡಿಸಲಿದೆ.
  • ಶೂನ್ಯ ಬಂಡವಾಳ ಕೃಷಿ, ಇದರಲ್ಲಿ ಕೆಲವು ರಾಜ್ಯಗಳ ಕೃಷಿಕರು ಈಗಾಗಲೇ ತರಬೇತಿ ಪಡೆದಿದ್ದು ಇದನ್ನು ಇತರ ರಾಜ್ಯಗಳಲ್ಲಿ ಅನುಸರಿಸಲಾಗುವುದು.
  • ಭಾರತದ ಜಲ ಸುರಕ್ಷತೆ

+ ಹೊಸ ಜಲ ಶಕ್ತಿ ಸಚಿವಾಲಯವನ್ನು ನಮ್ಮ  ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ನೀರು ಪೂರೈಕೆಯನ್ನು ಸಮಗ್ರ ರೀತಿಯಲ್ಲಿ ನೋಡಿಕೊಳ್ಳುವುದಕ್ಕಾಗಿ ರೂಪಿಸಲಾಗಿದೆ.

+ ಜಲ ಜೀವನ ಯೋಜನೆಯನ್ನು  2024 ರೊಳಗೆ ಎಲ್ಲಾ ಗ್ರಾಮೀಣ ಮನೆಗಳಿಗೆ  ಕೊಳವೆ ಮೂಲಕ ನೀರು ಪೂರೈಕೆ ಮಾಡುವುದಕ್ಕಾಗಿ ರೂಪಿಸಲಾಗಿದೆ.

+ಸ್ಥಳೀಯ ಮಟ್ಟದಲ್ಲಿ  ಸಮಗ್ರ ಬೇಡಿಕೆ ಮತ್ತು ಪೂರೈಕೆ ಯ ನಿರ್ವಹಣೆಗೆ ಆದ್ಯತೆ ನೀಡಲಾಗುತ್ತದೆ.

+ ಇತರ ಕೇಂದ್ರೀಯ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಈ ಉದ್ದೇಶ ಸಾಧನೆಗಾಗಿ ಸಮ್ಮಿಳಿತಗೊಳಿಸಲಾಗುವುದು.

+ 256  ಜಿಲ್ಲೆಗಳ ವ್ಯಾಪ್ತಿಯಲ್ಲಿರುವ 1592 ಗಂಭೀರ ಪರಿಸ್ಥಿತಿಯ  ಮತ್ತು ಈಗಾಗಲೇ ನೀರನ್ನು ವಿಪರೀತ ಪ್ರಮಾಣದಲ್ಲಿ ಹೊರತೆಗೆದಿರುವ ಬ್ಲಾಕ್ ಗಳನ್ನು ಜಲ ಶಕ್ತಿ ಅಭಿಯಾನಕ್ಕೆ ಗುರುತಿಸಲಾಗುವುದು.

+ ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣಾ ಮತ್ತು ಯೋಜನಾ ಪ್ರಾಧಿಕಾರವನ್ನು (ಸಿ.ಎ.ಎಂ.ಪಿ.ಎ.) ನಿಧಿಯನ್ನು ಈ ಉದ್ದೇಶಕ್ಕಾಗಿ ಬಳಸಬಹುದು.

  • ಸ್ವಚ್ಚ ಭಾರತ್ ಅಭಿಯಾನ್

+2014 ರ ಅಕ್ಟೋಬರ್ 2 ರ ನಂತರ 9.6 ಕೋಟಿ ಶೌಚಾಲಯಗಳನ್ನು  ನಿರ್ಮಿಸಲಾಗಿದೆ.

+ 5.6 ಲಕ್ಷಕ್ಕೂ ಅಧಿಕ ಗ್ರಾಮಗಳು ಬಯಲು ಶೌಚ ಮುಕ್ತವಾಗಿವೆ. (ಒ.ಡಿ.ಎಫ್.)

+ ಪ್ರತೀ ಗ್ರಾಮದಲ್ಲಿಯೂ ಸುಸ್ಥಿರ ಘನ ತ್ಯಾಜ್ಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳುವುದಕ್ಕಾಗಿ  ಸ್ವಚ್ಚ ಭಾರತ್ ಯೋಜನೆಯನ್ನು ವಿಸ್ತರಿಸಲಾಗುತ್ತದೆ.

  • ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ :

+ 2  ಕೋಟಿಗೂ ಅಧಿಕ ಭಾರತೀಯರನ್ನು ಡಿಜಿಟಲ್ ಸಾಕ್ಷರರನ್ನಾಗಿಸಲಾಗಿದೆ.

+ ಪ್ರತೀ ಪಂಚಾಯತಿಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಭಾರತ್ ನೆಟ್ ಅಡಿಯಲ್ಲಿ ಅಂತರ್ಜಾಲ ಸಂಪರ್ಕ  ಗ್ರಾಮೀಣ –ನಗರ ಅಂತರವನ್ನು ನಿವಾರಿಸಿದೆ.

+ ಭಾರತ್ ನೆಟ್ ಅನ್ನು ತ್ವರಿತಗೊಳಿಸಲು ಪಿ.ಪಿ.ಪಿ. ವ್ಯವಸ್ಥೆಯಡಿಯಲ್ಲಿ  ಯುನಿವರ್ಸಲ್ ಅಬ್ಲಿಗೇಶನ್ ನಿಧಿಯನ್ನು ಬಳಸಬಹುದು.

ಶಹರಿ ಭಾರತ್ /ನಗರ ಭಾರತ

  • ಪ್ರಧಾನ ಮಂತ್ರಿ ಆವಾಸ್ ಯೋಜನಾ

+ 4.83  ಲಕ್ಷ ಕೋ.ರೂ. ಬಂಡವಾಳ ಹೂಡಿಕೆಯೊಂದಿಗೆ 81 ಲಕ್ಷಕ್ಕೂ ಅಧಿಕ ಮನೆಗಳಿಗೆ ಮಂಜೂರಾತಿ ನೀಡಲಾಗಿದ್ದು 47  ಲಕ್ಷ ಮನೆಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ.

+ 26  ಲಕ್ಷಕ್ಕೂ ಅಧಿಕ ಮನೆಗಳು ಪೂರ್ಣಗೊಂಡಿವೆ , ಸುಮಾರು 24  ಲಕ್ಷ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.

+ ಇದುವರೆಗೆ 13  ಲಕ್ಷ ಮನೆಗಳ ನಿರ್ಮಾಣದಲ್ಲಿ ಹೊಸ ತಂತ್ರಜ್ಞಾನ ಬಳಸಲಾಗಿದೆ.

  • 95 % ಗೂ  ಅಧಿಕ ನಗರಗಳು ಬಯಲು ಬಹಿರ್ದೆಸೆ ಮುಕ್ತವೆಂದು ಘೋಷಿಸಲ್ಪಟ್ಟಿವೆ. (ಒ.ಡಿ.ಎಫ್.)
  • ಸುಮಾರು 1 ಕೋಟಿ ನಾಗರಿಕರು ಸ್ವಚ್ಚತಾ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
  • ಗಾಂಧೀಜಿಯವರ ಕನಸಾದ ಸ್ವಚ್ಚ ಭಾರತವನ್ನು ಸಾಧಿಸಲು 2019  ಅಕ್ಟೋಬರ್ 2 ರೊಳಗೆ  ಭಾರತವನ್ನು ಸಂಪೂರ್ಣ ಬಯಲು ಶೌಚ ಮುಕ್ತವನ್ನಾಗಿಸುವ ಗುರಿ ಹೊಂದಲಾಗಿದೆ.

+ ಈ ಸಂದರ್ಭದ ಅಂಗವಾಗಿ ರಾಷ್ಟ್ರೀಯ ಸ್ವಚ್ಚತಾ ಕೇಂದ್ರವನ್ನು 2019 ರ ಅಕ್ಟೋಬರ್ 2 ರಂದು ರಾಜಘಾಟಿನ ಗಾಂಧಿ ದರ್ಶನದಲ್ಲಿ ಅನಾವರಣ ಮಾಡಲಾಗುವುದು.

+ ವಿಜ್ಞಾನ ವಸ್ತುಸಂಗ್ರಹಾಲಯಗಳಿಗಾಗಿರುವ ರಾಷ್ಟ್ರೀಯ ಮಂಡಳಿಯು ಯುವಕರಲ್ಲಿ ಮತ್ತು ಸಮಾಜದಲ್ಲಿ ಗಾಂಧೀ ಮೌಲ್ಯಗಳ ಬಗ್ಗೆ ಸಂವೇದನೆ ಮೂಡಿಸಲು ಗಾಂಧಿಪೀಡಿಯಾವನ್ನು ಅಭಿವೃದ್ದಿಗೊಳಿಸುತ್ತಿದೆ.

  • ಎಸ್.ಪಿ.ವಿ. ರಚನೆಗಳಾದಂತಹ  ಉದಾಹರಣೆಗೆ ದಿಲ್ಲಿ-ಮೀರತ್ ಮಾರ್ಗದಲ್ಲಿ ಉದ್ದೇಶಿಸಲಾಗಿರುವ ತ್ವರಿತ ಪ್ರಾದೇಶಿಕ ಸಾರಿಗೆ ವ್ಯವಸ್ಥೆ  (ಆರ್.ಅರ್.ಟಿ.ಎಸ್.) ಗಳಂತಹ ಉಪನಗರ ರೈಲ್ವೇಗಳಲ್ಲಿ ಹೆಚ್ಚು ಹೂಡಿಕೆ ಮಾಡುವಂತೆ ರೈಲ್ವೇಯನ್ನು ಪ್ರೋತ್ಸಾಹಿಸಲಾಗುವುದು.
  • ಮೆಟ್ರೋ ರೈಲ್ವೇ  ಉಪಕ್ರಮಗಳನ್ನು ಈ ಕೆಳಗಿನ ಕ್ರಮಗಳ ಮೂಲಕ ವಿಸ್ತರಿಸುವ ಪ್ರಸ್ತಾಪಗಳಿವೆ:

+ ಹೆಚ್ಚು ಹೆಚ್ಚು ಪಿ.ಪಿ.ಪಿ. ಉಪಕ್ರಮಗಳನ್ನು ಪ್ರೋತ್ಸಾಹಿಸುವುದು

+ ಮಂಜೂರಾದ ಕಾಮಗಾರಿಗಳು ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸುವುದು.

+ ಟ್ರಾನ್ಸಿಟ್ ತಾಣಗಳ ಸುತ್ತ ವಾಣಿಜ್ಯಿಕ ಚಟುವಟಿಕೆಗಳನ್ನು ಖಾತ್ರಿಪಡಿಸಲು  ಟ್ರಾನ್ಸಿಟ್ ಆಧಾರಿತ ಅಭಿವೃದ್ದಿ (ಟಿ.ಒ.ಡಿ.)ಯನ್ನು ಬೆಂಬಲಿಸುವುದು.

ಯುವಜನತೆ

  • ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗುತ್ತಿದ್ದು ಅದು ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ.

+ ಶಾಲಾ ಮತ್ತು ಉನ್ನತ ಶಿಕ್ಷಣದಲ್ಲಿ ಪ್ರಮುಖ ಬದಲಾವಣೆಗಳು

+ ಉತ್ತಮ ಆಡಳಿತ ವ್ಯವಸ್ಥೆಗಳು

+ ಸಂಶೋಧನೆ ಮತ್ತು ಅನ್ವೇಷಣೆಗೆ ಹೆಚ್ಚಿನ ಗಮನ

  • ರಾಷ್ಟ್ರೀಯ ಸಂಶೋಧನಾ ಪ್ರತಿಷ್ಟಾನ (ಎನ್.ಆರ್.ಎಫ್.) ಪ್ರಸ್ತಾಪ.

 + ದೇಶದಲ್ಲಿ ಸಂಶೋದನೆಯನ್ನು ಉತ್ತೇಜಿಸಲು , ಸಮನ್ವಯಗೊಳಿಸಲು ಹೂಡಿಕೆ ಮಾಡುವುದಕ್ಕಾಗಿ

+ ವಿವಿಧ ಸಚಿವಾಲಯಗಳು ಕೊಡ ಮಾಡುವ ಸ್ವತಂತ್ರ ಸಂಶೋಧನಾ ಹಣಕಾಸನ್ನು  ಏಕೀಕರಿಸುವುದು.

+ ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು

+ ಇದಕ್ಕೆ ಹೆಚ್ಚುವರಿ ನಿಧಿಯ ಮೂಲಕ ಸಾಕಷ್ಟು ನೆರವು ನೀಡಲಾಗುವುದು.

  • “ವಿಶ್ವ ದರ್ಜೆಯ ಸಂಸ್ಥೆಗಳಿಗೆ” ಹಣಕಾಸು ವರ್ಷ 2019-20 ರಲ್ಲಿ 400  ಕೋ.ರೂ.ಗಳನ್ನು ಒದಗಿಸಲಾಗಿದೆ, ಇದು ಹಿಂದಿನ ವರ್ಷದ ಪುನರ್ವಿಮರ್ಶಿತ ಅಂದಾಜಿಗಿಂತ ಮೂರು ಪಟ್ಟಿಗೂ ಅಧಿಕತಮ.
  • “ಭಾರತದಲ್ಲಿ ಓದಿ” -ಇದನ್ನು ವಿದೇಶೀ ವಿದ್ಯಾರ್ಥಿಗಳು ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಬರುವುದಕ್ಕಾಗಿ ರೂಪಿಸಲಾಗಿದೆ.
  • ಉನ್ನತ ಶಿಕ್ಷಣ್ದ ನಿಯಂತ್ರಣ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸಲಾಗುವುದು

+ ಹೆಚ್ಚಿನ ಸ್ವಾಯತ್ತೆಯನ್ನು ಉತ್ತೇಜಿಸಲಾಗುವುದು

+ ಉತ್ತಮ ಅಕಾಡೆಮಿಕ್  ಫಲಿತಕ್ಕೆ ಗಮನ

  • ಭಾರತದ ಉನ್ನತ ಶಿಕ್ಷಣ ಆಯೋಗ ( ಎಚ್.ಇ.ಸಿ.ಐ.) ಸ್ಥಾಪನೆಗಾಗಿ ಕರಡು ಶಾಸನವನ್ನು ಮಂಡಿಸಲಾಗುವುದು.
  • ಖೇಲೋ ಇಂಡಿಯಾ ಯೋಜನೆ ಎಲ್ಲಾ ಅವಶ್ಯ ಹಣಕಾಸು ಬೆಂಬಲದೊಂದಿಗೆ ವಿಸ್ತರಣೆ.
  • ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಯನ್ನು  ಖೇಲೋ ಇಂಡಿಯಾ ಅಡಿಯಲ್ಲಿ ಎಲ್ಲಾ ಮಟ್ಟದಲ್ಲಿ ಕ್ರೀಡೆಯನ್ನು ಜನಪ್ರಿಯಗೊಳಿಸುವುದಕ್ಕಾಗಿ  ಕ್ರೀಡಾಳುಗಳ ಅಭಿವೃದ್ದಿಗಾಗಿ ಸ್ಥಾಪಿಸಲಾಗುವುದು.
  • ಸಾಗರೋತ್ತರ ಉದ್ಯೋಗಗಳಿಗಾಗಿ ಯುವಕರನ್ನು ಸಜ್ಜುಗೊಳಿಸಲು ಜಾಗತಿಕ ಮಟ್ಟದಲ್ಲಿ  ಮಾನ್ಯತೆ ಹೊಂದಿರುವ ಕೌಶಲ್ಯಗಳನ್ನು ಭಾಷಾ ತರಬೇತಿ, ಎ.ಐ., ಐ.ಒ.ಟಿ., ಬಿಗ್ ಡಾಟಾ, ತ್ರಿ ಡಿ ಮುದ್ರಣ , ವರ್ಚುವಲ್ ರಿಯಾಲಿಟಿ ಮತ್ತು ರೊಬಾಟಿಕ್ಸ್ ಸಹಿತ ಒದಗಿಸಲಾಗುವುದು.
  • ಬಹು ಕಾರ್ಮಿಕ ಕಾನೂನುಗಳನ್ನು ಸಾಮಾನ್ಯೀಕರಿಸಲು ಮತ್ತು ರಿಟರ್ನ್ ಗಳ ಸಲ್ಲಿಕೆ ಹಾಗು ನೋಂದಣಿಯನ್ನು ಸರಳಗೊಳಿಸಲು ನಾಲ್ಕು ಕಾರ್ಮಿಕ ಸಂಹಿತೆಗಳ ತಂಡವನ್ನು ಉದ್ದೇಶಿಸಲಾಗಿದೆ.
  • ಡಿ.ಡಿ. ವಾಹಿನಿಗಳಲ್ಲಿ ವಿಶೇಷವಾಗಿ ನವೋದ್ಯಮಗಳಿಗಾಗಿ  ಕಾರ್ಯಕ್ರಮವನ್ನು ಯೋಜಿಸಲು ಉದ್ದೇಶಿಸಲಾಗಿದೆ.

 

ಜೀವಿಸಲು ಅನುಕೂಲಕರ ವಾತಾವರಣ

+ ಸುಮಾರು 30  ಲಕ್ಷ ಕಾರ್ಮಿಕರು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆಗೆ ಸೇರ್ಪಡೆಯಾಗಿದ್ದಾರೆ. ಇದು ಅಸಂಘಟಿತ ಮತ್ತು ಅನೌಪಚಾರಿಕ ವಲಯದ ಆ ಕಾರ್ಮಿಕರು 60 ವರ್ಷದವರಾದಾಗ  ತಿಂಗಳಿಗೆ 3,000  ರೂ. ನಿವೃತ್ತಿ ವೇತನ ನೀಡುವ ಯೋಜನೆಯಾಗಿದೆ.

+ ಸುಮಾರು 35  ಕೋಟಿ ಎಲ್.ಇ.ಡಿ. ಬಲ್ಬುಗಳನ್ನು ಉಜಾಲಾ ಯೋಜನೆ ಅಡಿಯಲ್ಲಿ ವಿತರಿಸಲಾಗಿದ್ದು, ಇದರಿಂದ 18,341  ಕೋ.ರೂ.ವಾರ್ಷಿಕ  ಉಳಿತಾಯ ಸಾಧ್ಯವಾಗಿದೆ.

+ ಸೌರ ಒಲೆಗಳನ್ನು ಮತ್ತು ವಿದ್ಯುತ್ ಕೋಶ ಚಾರ್ಜರ್ ಗಳನ್ನು ಬಳಸುವಿಕೆಯನ್ನು ಎಲ್.ಇ.ಡಿ. ಬಲ್ಬುಗಳ ಮಾದರಿಯನ್ನು ಅನುಸರಿಸಿ ಉತ್ತೇಜಿಸಲಾಗುವುದು.

+ ರೈಲ್ವೇ ನಿಲ್ದಾಣಗಳನ್ನು ಆಧುನೀಕರಣ ಮಾಡುವ ದೊಡ್ಡ ಕಾರ್ಯಕ್ರಮವನ್ನು ಆರಂಭಿಸಲಾಗುವುದು. 

 

ನಾರಿ ತು ನಾರಾಯಣಿ / ಮಹಿಳೆ

  • ಮಹಿಳಾ ಕೇಂದ್ರಿತ ನೀತಿ ರೂಪಿಸುವಿಕೆಯಿಂದ ಮಹಿಳಾ ನಾಯಕತ್ವದ ಉಪಕ್ರಮಗಳು ಮತ್ತು ಆಂದೋಲನಗಳತ್ತ ಧೋರಣೆಯ ಸ್ಥಾನಾಂತರ
  • ಲಿಂಗತ್ವ ಬಜೆಟಿಂಗ್ ಉಪಕ್ರಮದತ್ತ ಮುಂದಡಿ ಇಡಲು ಸರಕಾರ ಮತ್ತು ಖಾಸಗಿ ಭಾಗೀದಾರರನ್ನೊಳಗೊಂಡ ಸಮಿತಿ ರಚನೆಗೆ ಪ್ರಸ್ತಾಪ.
  • ಎಸ್.ಎಚ್.ಜಿ.:

+ ಮಹಿಳಾ ಎಸ್.ಎಚ್.ಜಿ. ಬಡ್ಡಿ ರಿಯಾಯತಿ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲು ಪ್ರಸ್ತಾವಿಸಲಾಗಿದೆ.

+ಪ್ರತೀ ಮಹಿಳಾ ಎಸ್.ಎಚ್.ಜಿ.ಸದಸ್ಯೆಗೆ , ಆಕೆ ಜನ ಧನ ಬ್ಯಾಂಕ್ ಖಾತೆ ಹೊಂದಿದ್ದರೆ  5,000  ರೂ.ಗಳ ಓವರ್ ಡ್ರಾಫ್ಟ್ ಸೌಲಭ್ಯ ಒದಗಿಸಲಾಗುವುದು.


ಭಾರತದ ಸೌಮ್ಯಶಕ್ತಿ
* ಭಾರತೀಯ ಪಾಸ್ ಪೋರ್ಟ್ ಹೊಂದಿರುವ ಅನಿವಾಸಿ ಭಾರತೀಯರಿಗೆ ಆಧಾರ್ ಕಾರ್ಡ್ ಗಾಗಿ 180 ದಿನ ಕಾಯಿಸದೇ ತಕ್ಷಣವೇ ನೀಡುವುದನ್ನು ಪರಿಗಣಿಸುವ ಪ್ರಸ್ತಾಪ.
*
ಸಾಂಪ್ರದಾಯಿಕ ಕುಶಲಕರ್ಮಿಗಳು ಜಾಗತಿಕ ಮಾರುಕಟ್ಟೆಯಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತೆ ಅಗತ್ಯ ಪೇಟೆಂಟ್ ಮತ್ತು ಭೌಗೋಳಿಕ ದಿಕ್ಸೂಚಿಗಳನ್ನು ಕಲ್ಪಿಸುವ ಉದ್ದೇಶ.
*
ಆಫ್ರಿಕಾದಲ್ಲಿ 18 ಹೊಸ ಭಾರತೀಯ ರಾಜತಾಂತ್ರಿಕ ಕಾರ್ಯಾಚರಣೆಗಳನ್ನು ನಡೆಸಲು 2018 ಮಾರ್ಚ್ ನಲ್ಲಿ ಅನುಮೋದನೆ ನೀಡಲಾಗಿದ್ದು, ಪೈಕಿ ಈಗಾಗಲೇ 5ನ್ನು ಆರಂಭಿಸಲಾಗಿದೆ. 2019-20ರಲ್ಲಿ ನಾಲ್ಕು ಹೊಸ ರಾಯಭಾರ ಕಚೇರಿಗಳ ಆರಂಭ.
*
ಭಾರತೀಯ ಅಭಿವೃದ್ಧಿ ನೆರವು ಯೋಜನೆಯ (ಐಡಿಇಎಎಸ್) ಪುನರುಜ್ಜೀವನ.
* 17
ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ವಿಶ್ವ ದರ್ಜೆಯ ಮಾದರಿ ತಾಣಗಳಾಗಿ ಅಭಿವೃದ್ಧಿಪಡಿಸುವುದು.
*
ಶ್ರೀಮಂತ ಬುಡಕಟ್ಟು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಡಿಜಿಟಲ್ ಭಂಡಾರ ಸ್ಥಾಪನೆ.


ಬ್ಯಾಂಕಿಂಗ್ ಮತ್ತು ಹಣಕಾಸು ವಲಯ
* ವಾಣಿಜ್ಯ ಬ್ಯಾಂಕುಗಳ ಎನ್ಪಿಎಗಳು ಕಳೆದ ವರ್ಷಕ್ಕೆ ಹೋಲಿಸಿದರೆ 1 ಲಕ್ಷ ಕೋಟಿ ರೂ.ಗೆ ಇಳಿದಿದೆ.
*
ಕಳೆದ ನಾಲ್ಕು ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ದಾಖಲೆಯ ವಸೂಲಿ
* ಎನ್ ಪಿಎ ಅನುಪಾತವನ್ನು ಕಡಿಮೆಗೊಳಿಸಲು ಏಳು ವರ್ಷಗಳಲ್ಲೇ ಗರಿಷ್ಠ ಅವಕಾಶ
* ಶೇ. 13.8ಕ್ಕೇರಿದ ಆಂತರಿಕ ದೇಶೀಯ ಸಾಲದ ಬೆಳವಣಿಗೆ

ಖಾಸಗಿ ವಲಯದ ಬ್ಯಾಂಕ್ ಗಳಿಗೆ ಸಂಬಂಧಿಸಿದ ಕ್ರಮಗಳು
* ಸಾಲ ನೀಡುವ ಪ್ರಮಾಣ ಹೆಚ್ಚಿಸಲು ಖಾಸಗಿ ವಲಯದ ಬ್ಯಾಂಕ್ ಗಳಿಗೆ 70,000 ಕೋಟಿ ರೂ. ನೀಡುವ ಪ್ರಸ್ತಾಪ
* ಖಾಸಗಿ ವಲಯದ ಎಲ್ಲಾ ಬ್ಯಾಂಕ್ ಗಳು ತಂತ್ರಜ್ಞಾನದ ನೆರವಿನೊಂದಿಗೆ ಆನ್ ಲೈನ್ ಮೂಲಕ ವೈಯಕ್ತಿಕ ಸಾಲ, ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೌಲಭ್ಯ ನೀಡುವುದಕ್ಕೆ ಅನುಕೂಲ ಕಲ್ಪಿಸುವುದು.
*
ಇತರರು ತಮ್ಮ ಖಾತೆಯಲ್ಲಿ ಹಣವನ್ನು ಠೇವಣಿ ಇಡುವುದರ ಮೇಲೆ ಖಾತೆದಾರರು ನಿಯಂತ್ರಣ ಹೊಂದಲು ಅಧಿಕಾರ ನೀಡಲು ಅಗತ್ಯ ಕ್ರಮ.
*
ಖಾಸಗಿ ವಲಯದ ಬ್ಯಾಂಕ್ ಗಳ ಆಡಳಿತದಲ್ಲಿ ಸುಧಾರಣೆಗೆ ಕ್ರಮ

ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ ಸಂಬಂಧಿಸಿದ ಕ್ರಮಗಳು
* ಬ್ಯಾಂಕೇತರ ಹಣಕಾಸು ಸಂಪನಿಗಳ ಮೇಲೆ ಆರ್ಬಿಐ ನಿಯಂತ್ರಣವನ್ನು ಬಲಪಡಿಸಲು ಹಣಕಾಸು ಮಸೂದೆಯಲ್ಲಿ ಪ್ರಸ್ತಾಪ.
*
ಬ್ಯಾಂಕೇತರ ಹಣಕಾಸು ಕಂಪನಿಗಳು ಸಾರ್ವಜನಿಕ ಉದ್ದೇಶಕ್ಕೆ ಹಣ ಎತ್ತಲು ಡಿಬೆಂಚರ್ ರಿಡೆಂಪ್ಷನ್ ರಿಸರ್ವ್ ವ್ಯವಸ್ಥೆ ರಚಿಸುವ ಅಗತ್ಯತೆ.
*
ಎಲ್ಲಾ ಬ್ಯಾಂಕೇತರ ಹಣಕಾಸು ಕಂಪನಿಗಳು ಎಲೆಕ್ಟ್ರಾನಿಕ್ ರಿಯಾಯಿತಿ ವ್ಯವಸ್ಥೆ ಮೂಲಕ ವ್ಯಾಪಾರ ಕರಾರು (TReDS) ನಲ್ಲಿ ಭಾಗವಹಿಸಲು ಅನುಮತಿ
* ಗೃಹ ವಲಯದ ಹಣಕಾಸು ಕ್ಷೇತ್ರದ ನಿಯಂತ್ರಣ ಪ್ರಾಧಿಕಾರವನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಿಂದ ಆರ್ ಬಿಐಗೆ ವಾಪಸ್ ನೀಡುವುದು
* ಮುಂದಿನ ಐದು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ 100 ಲಕ್ಷ ಕೋಟಿ ರೂ. ಹೂಡಿಕೆಗೆ ನಿರ್ಧರಿಸಲಾಗಿದ್ದು, ಮೊತ್ತವನ್ನು ಅಭಿವೃದ್ಧಿ ಹಣಕಾಸು ಸಂಸ್ಥೆಗಳ ಮೂಲಕ ಮಂಜೂರು ಮಾಡುವಂತೆ ಶಿಫಾರಸು ಮಾಡಲು ಸಮಿತಿ ಪ್ರಸ್ತಾಪಿಸಿದೆ.
*
ನ್ಯಾಷನಲ್ ಪೆನ್ಷನ್ ಸ್ಕೀಮ್ ಟ್ರಸ್ಟ್ ಅನ್ನು ಪೆನ್ಷನ್ ಫಂಡ್ ರೆಗ್ಯುಲೇಟರಿ ಮತ್ತು ಡೆವಲಪ್ ಮೆಂಟ್ ಅಥಾರಿಟಿಯಿಂದ ಪ್ರತ್ಯೇಕಿಸಲು ಕ್ರಮ.
*
ನಿವ್ವಳ ಸ್ವ- ನಿಧಿಯ 5,000 ಕೋಟಿ ರೂ.ನಿಂದ 1,000 ಕೋಟಿ ರೂ. ಗೆ ಇಳಿಸುವ ಪ್ರಸ್ತಾಪ.
*
ಅಂತಾರಾಷ್ಟ್ರೀಯ ವಿಮಾ ವಹಿವಾಟುಗಳ ಹರಿವಿಗೆ ಅನುಕೂಲ ಕಲ್ಪಿಸುವುದು.
* ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರದಲ್ಲಿ ವಿದೇಶಿ ಮರುವಿಮೆದಾರರಿಗೆ ಶಾಖೆಗಳನ್ನು ತೆರೆಯಲು ಅನುವು ಮಾಡಿಕೊಡುವುದು.

ಕೇಂದ್ರ ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗೆ (ಸಿಪಿಎಸ್) ಸಂಬಂಧಿಸಿದ ಕ್ರಮಗಳು
* 2019-20ನೇ ಸಾಲಿನಲ್ಲಿ 1,05,000 ಕೋಟಿ ರೂ. ಬಂಡವಾಳ ಹಿಂತೆಗೆತದ ಗುರಿ ಹೊಂದಲಾಗಿದೆ.
*
ಏರ್ ಇಂಡಿಯಾದಲ್ಲಿ ಬಂಡವಾಳ ಹಿಂತೆಗೆತ ಪ್ರಕ್ರಿಯೆಯನ್ನು ಪುನಾರಂಭಿಸಲು ನಿರ್ಧರಿಸಲಾಗಿದ್ದು, ಅದರಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಇತರೆ ಉದ್ಯಮಗಳೂ ಖಾಸಗಿ ಪಾಲುದಾರಿಕೆ ಹೊಂದಲು ಪ್ರೋತ್ಸಾಹ
* ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳ ಮಾರಾಟ ಮತ್ತು ಹಣಕಾಸೇತರ ವಿಭಾಗದಲ್ಲಿ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳನ್ನು ಮುಂದುವರಿಸಲು ಕ್ರಮ
* ಸಾರ್ವಜನಿಕ ಸ್ವಾಮ್ಯದ ಉದ್ಯಮದಲ್ಲಿ ಸರ್ಕಾರದ ಪಾಲನ್ನು ಶೇ. 51ಕ್ಕಿಂತ ಕಡಿಮೆ ಮಾಡಿಕೊಳ್ಳಲು ತೀರ್ಮಾನ. ಆದರೆ, ಅವುಗಳ ಮೇಲೆ ಸರ್ಕಾರದ ನಿಯಂತ್ರಣ ಸಾಧಿಸಲು ಪ್ರತಿ ಪ್ರಕರಣ ಆಧರಿಸಿ ಕ್ರಮ ಕೈಗೊಳ್ಳಲು ನಿರ್ಧಾರ.
*
ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ಭಾಗವಹಿಸಲು ಪ್ರೋತ್ಸಾಹ.
*
ಹೆಚ್ಚುವರಿ ಹೂಡಿಕೆ ಅವಕಾಶ ಒದಗಿಸಲು-
-
ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ತನ್ನ ಹಿಡಿತ ಮರು ಸಾಧಿಸುವುದು.
-
ಬ್ಯಾಂಕ್ ಗಳು ತನ್ನ ಶೇರುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಮತ್ತು ಮಾರುಕಟ್ಟೆಯ ಆಳ ವಿಸ್ತರಿಸಿಕೊಳ್ಳಲು ಅವಕಾಶ
* ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ಇಎಲ್ಎಸ್ಎಸ್) ಮಾದರಿಯಲ್ಲಿ ಎಕ್ಸ್ ಚೇಂಜ್ ಟ್ರೇಡ್ ಫಂಡ್ ಗಳಲ್ಲಿ ಹೂಡಿಕೆಗೆ ಸರ್ಕಾರದಿಂದ ಆಹ್ವಾನ
* ಆಯ್ದೆ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳಲ್ಲಿ ಸಾರ್ವಜನಿಕ ಶೇರುದಾರರ ಮಾನದಂಡವಾದ ಶೇ. 25ನ್ನು ಪೂರೈಸಲು ವಿದೇಶಿ ಶೇರುದಾರರ ಮಿತಿ ಹೆಚ್ಚಳ. ಮೂಲಕ ಬೆಳೆಯುತ್ತಿರುವ ಮಾರುಕಟ್ಟೆ ಸೂಚ್ಯಂಕದ ಭಾಗವಾಗಿ ಉದ್ದಿಮೆಗಳನ್ನು ಬೆಳೆಸಲು ಕ್ರಮ.
*
ದೇಶೀಯ ಮಾರುಕಟ್ಟೆಯಲ್ಲಿ ಸರ್ಕಾರಿ ಭದ್ರತೆಗಳ ಮೇಲಿನ ಬೇಡಿಕೆ ಆಧರಿಸಿ ಸರ್ಕಾರವು ತನ್ನ ಒಟ್ಟು ಸಾಲದ ಒಂದು ಭಾಗವನ್ನು ಬಾಹ್ಯ ಮಾರುಕಟ್ಟೆಗಳಲ್ಲಿ ಇತರೆ ಕರೆನ್ಸಿಗಳ ಮೂಲಕ ಸಂಗ್ರಹಿಸಲು ಕ್ರಮ.
*
ಒಂದು ರೂ., ಎರಡು ರೂ., ಐದು ರೂ., ಹತ್ತು ರೂ. ಮತ್ತು ಇಪ್ಪತ್ತು ರೂ. ಹೊಸ ಸರಣಿ ನಾಣ್ಯಗಳ ಬಿಡುಗಡೆ. ದೃಷ್ಟಿಹೀನರಿಗೆ ಸುಲಭವಾಗಿ ಗುರುತಿಸಲು ಸಹಾಯವಾಗುವ ನಾಣ್ಯಗಳು ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಲಭ್ಯ.

ಡಿಜಿಟಲ್ ಪಾವತಿಗಳು
* ಬ್ಯಾಂಕ್ ಖಾತೆಯಿಂದ ವರ್ಷದಲ್ಲಿ ಒಂದು ಕೋಟಿ ರೂ.ಗಿಂತ ಹೆಚ್ಚು ನಗದು ಹಿಂಪಡೆಯುವಿಕೆಗೆ ಶೇ. 2ರಷ್ಟು ಟಿಡಿಎಸ್.
*
ವಾರ್ಷಿಕ 50 ಕೋಟಿ ರೂ.ಗಿಂತ ಹೆಚ್ಚು ವಹಿವಾಟು ನಡೆಸುವ ಉದ್ಯಮ ಕ್ಷೇತ್ರದವರಿಗೆ ಕಡಿಮೆ ವೆಚ್ಚದ ಡಿಜಿಟಲ್ ಹಣಕಾಸು ವಿಧಾನಗಳನ್ನು ಯಾವುದೇ ಶುಲ್ಕವಿಲ್ಲದೆ ಒದಗಿಸುವುದು.

ಸುಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರೀ ಹೂಡಿಕೆ
* ಸೆಮಿ-ಕಂಡಕ್ಟರ್ ಫ್ಯಾಬ್ರಿಕೇಷನ್ (ಎಫ್ಎಬಿ), ಸೋಲಾರ್ ಫೋಟೋ ವೋಲ್ಟಾನಿಕ್ ಸೆಲ್ಸ್, ಲೀಥಿಯಂ ಸ್ಟೋರೇಜ್ ಬ್ಯಾಟರಿಗಳು, ಕಂಪ್ಯೂಟರ್ ಸರ್ವರ್, ಲ್ಯಾಪ್ ಟಾಪ್ ಮತ್ತಿತರ ಕ್ಷೇತ್ರಗಳಲ್ಲಿ ಬೃಹತ್ ಪ್ರಮಾಣದ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಾಗತಿಕ ಮಟ್ಟದ ಕಂಪನಿಗಳಿಗೆ ಆಹ್ವಾನ
* ಪರೋಕ್ಷ ತೆರಿಗೆ ವಿನಾಯಿತಿ ಅನುಕೂಲಗಳೊಂದಿಗೆ ಹೂಡಿಕೆ ಸಂಬಂಧಿತ ಆದಾಯ ತೆರಿಗೆ ವಿನಾಯಿತಿಗಳನ್ನು ಒದಗಿಸುವುದು

2014-19 ಅವಧಿಯಲ್ಲಿ ಸಾಧನೆಗಳು
* ಭಾರತದ ಆರ್ಥಿಕತೆಗೆ ಕಳೆದ 5 ವರ್ಷಗಳಲ್ಲಿ 1 ಟ್ರಿಲಿಯನ್ ಡಾಲರ್ ಸೇರ್ಪಡೆಯಾಗಿದೆ. (ಮೊದಲ ಟ್ರಿಲಿಯನ್ ಡಾಲರ್ ತಲುಪಲು 55 ವರ್ಷ ಬೇಕಾಗಿತ್ತು).
*
ಅತಿ ದೊಡ್ಡ ಆರ್ಥಿಕತೆಯಲ್ಲಿ ಐದು ವರ್ಷದ ಹಿಂದೆ ವಿಶ್ವದ 11ನೇ ಭಾರತವು ಈಗ ವಿಶ್ವದ 6 ನೇ ಅತಿದೊಡ್ಡ ಆರ್ಥಿಕತೆಯಾಗಿದೆ.
*
ಖರೀದಿ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಭಾರತವು ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರವಾಗಿದೆ.
* 2014-19
ಅವಧಿಯಲ್ಲಿ ಆರ್ಥಿಕ ಶಿಸ್ಥಿಗೆ ಬದ್ಧವಾಗಿದ್ದುದಲ್ಲದೆ, ಕೇಂದ್ರ- ರಾಜ್ಯಗಳ ಸಂಬಂಧ ವೃದ್ಧಿಗೆ ಆದ್ಯತೆ ನೀಡಲಾಗಿದೆ.
* ಪರೋಕ್ಷ ತೆರಿಗೆ, ದಿವಾಳಿತನ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ರಚನಾತ್ಮಕ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲಾಗಿದೆ.

* ಆಹಾರ ಭದ್ರತಾ ಕಾಯ್ದೆ ಜಾರಿಗೆ ಪ್ರತಿ ವರ್ಷ ವೆಚ್ಚ ಮಾಡುತ್ತಿರುವ ಸರಾಸರಿ ಮೊತ್ತ 2009-14ಕ್ಕೆ ಹೋಲಿಸಿದರೆ 2014-19ರ ವೇಳೆಗೆ ದ್ವಿಗುಣಗಂಡಿದೆ.

* ಪೇಟೆಂಟ್‌ ನೀಡುವ ಪ್ರಮಾಣವೂ ಸಾಕಷ್ಟು ಏರಿಕೆಯಾಗಿದ್ದು, 2014ರ ನವೆಂಬರ್ ಗೆ ಹೋಲಿಸಿದರೆ 2017-18ರಲ್ಲಿ ಮೂರು ಪಟ್ಟು ಹೆಚ್ಚಾಗಿದೆ.

* ನೀತಿ ಆಯೋಗದ ಯೋಜನೆ ಮತ್ತು ಸಹಾಯದೊಂದಿಗೆ ನವ ಬಾರತಕ್ಕಾಗಿ ವೇದಿಕೆ ಸಿದ್ಧಪಡಿಸಲಾಗಿದೆ.

 

ಭವಿಷ್ಯಕ್ಕಾಗಿ ಮಾರ್ಗಸೂಚಿ

* ಕಾರ್ಯ ನಿರ್ವಹಣಾ ವಿಧಾನಗಳಲ್ಲಿ ಸರಳೀಕರಣ

* ಕಾರ್ಯಕ್ಷಮತೆಯ ಉತ್ತೇಜನ

* ಭ್ರಷ್ಟಾಚಾರದಲ್ಲಿ ಇಳಿಮುಖ

* ತಂತ್ರಜ್ಞಾನದ ಅತ್ಯುತ್ತಮ ಬಳಕೆ

* ಈಗಾಗಲೇ ಆರಂಭವಾಗಿರುವ ಬೃಹತ್ ಕಾರ್ಯಕ್ರಮ ಮತ್ತು ಸೇವೆಗಳಿಗೆ ವೇಗ ನೀಡಿ ಗುರಿ ತಲುಪುವುದು.

**********


(Release ID: 1577580) Visitor Counter : 2432