ಸಂಪುಟ

‘ಎ’ ಗುಂಪಿನ ಕಾರ್ಯನಿರ್ವಾಹಕ ಶ್ರೇಣಿ ಅಧಿಕಾರಿಗಳಿಗೆ ಸಂಘಟಿತ ಗುಂಪು ‘ಎ’ ಸೇವೆ (ಒಜಿಎಎಸ್) ಮಂಜೂರು ಮಾಡುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

Posted On: 03 JUL 2019 4:37PM by PIB Bengaluru

‘ಎ’ ಗುಂಪಿನ ಕಾರ್ಯನಿರ್ವಾಹಕ ಶ್ರೇಣಿ ಅಧಿಕಾರಿಗಳಿಗೆ ಸಂಘಟಿತ ಗುಂಪು ‘ಎ’ ಸೇವೆ (ಒಜಿಎಎಸ್) ಮಂಜೂರು ಮಾಡುವ ಪ್ರಸ್ತಾಪಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ‘ಎ’ ಗುಂಪಿನ ಕಾರ್ಯನಿರ್ವಾಹಕ ಶ್ರೇಣಿ ಅಧಿಕಾರಿಗಳಿಗೆ ಸಂಘಟಿತ ಗುಂಪು ‘ಎ’ ಸೇವೆ (ಒಜಿಎಎಸ್) ಮಂಜೂರು ಮಾಡುವ ಮತ್ತು  ನಾನ್ ಫಂಕ್ಷನಲ್ ಹಣಕಾಸು ನವೀಕರಣ (ಎನ್‌ಎಫ್‌ಎಫ್‌ಯು) ಮತ್ತು ನಾನ್ ಫಂಕ್ಷನಲ್  ಆಯ್ಕೆ ಶ್ರೇಣಿಯ (ಎನ್‌ಎಫ್‌ಎಸ್‌ಜಿ) ಪ್ರಯೋಜನಗಳನ್ನು ವಿಸ್ತರಿಸುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

ಪ್ರಯೋಜನಗಳು:

ಎ). ಸಿಎಪಿಎಫ್ ನ ಅರ್ಹ ಗ್ರೂಪ್ ‘ಎ’ ಕಾರ್ಯನಿರ್ವಾಹಕ ಶ್ರೇಣಿಯ ಅಧಿಕಾರಿಗಳಿಗೆ ಎನ್.ಎಫ್.ಎಫ್.ಯು. ಮಂಜೂರು ಮಾಡಲು ಇದು ಕಾರಣವಾಗುತ್ತದೆ; ಮತ್ತು

ಬಿ) ಈ ನಿರ್ಧಾರುವು ಸಿಎಪಿಎಫ್ ನ ಗ್ರೂಪ್ ‘ಎ’ ಕಾರ್ಯನಿರ್ವಾಹಕ ಶ್ರೇಣಿಯ ಅಧಿಕಾರಿಗಳಿಗೆ ಮಾರ್ಗದರ್ಶಿಯಂತೆ ಶೇ.30ರ ಹೆಚ್ಚಿನ ದರದಲ್ಲಿ ಎನ್.ಎಫ್.ಎಸ್.ಜಿ. ಸೌಲಭ್ಯಗಳನ್ನು ಪಡೆದುಕೊಳ್ಳಲು ನೆರವಾಗುತ್ತದೆ.

 

ಹಿನ್ನೆಲೆ:

ಸಿಎಪಿಎಫ್ ನ ಎ ಶ್ರೇಣಿಯ ಅಧಿಕಾರಿಗಳು ಓಜಿಎಎಸ್ ಸ್ಥಾನ ಮಾನ ಮತ್ತು ಎನ್.ಎಫ್.ಎಫ್.ಯು ಮತ್ತು ಎನ್.ಎಫ್.ಎಸ್.ಜಿ. ಮತ್ತು ಅದಕ್ಕೆ ಸಮನಾದ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ದೆಹಲಿ ಹೈಕೋರ್ಟ್ ನಲ್ಲಿ ಹಲವು ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ದೆಹಲಿ ಹೈಕೋರ್ಟ್ ದಿನಾಂಕ 3/9/2015 ಮತ್ತು 15/12/15ರಂದು ನೀಡಿದ್ದ ತನ್ನ ಆದೇಶಗಳಲ್ಲಿ ಸಿ.ಎ.ಪಿ.ಎಫ್. ಗ್ರೂಪ್ ಎ ಕಾರ್ಯನಿರ್ವಹಣಾ ಅಧಿಕಾರಿಗಳನ್ನು ಓಜಿಎಎಸ್ ನ ಅಧಿಕಾರಿಗಳಂತೆಯೇ ಪರಿಗಣಿಸಿತ್ತು ಮತ್ತು ಎನ್.ಎಫ್.ಎಫ್.ಯು ಮತ್ತು ಎನ್.ಎಫ್.ಎಸ್.ಜಿ. ಯನ್ನು ಅವರಿಗೂ ನೀಡುವಂತೆ ಆದೇಶ ನೀಡಿತ್ತು. ದೆಹಲಿ ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಭಾರತ ಸರ್ಕಾರ  ಮತ್ತು ಇತರರು ಸಲ್ಲಿಸಿದ್ದ ವಿಶೇಷ ತೆರವು ಅರ್ಜಿಯನ್ನು ಸುಪ್ರೀಂಕೋರ್ಟ್ ದಿನಾಂಕ 5/2/19ರಂದು ವಜಾ ಮಾಡಿತ್ತು. ಅದು ದೆಹಲಿ ಹೈಕೋರ್ಟ್ ಎನ್.ಎಫ್.ಎಫ್.ಯು. ಮತ್ತು ಎನ್.ಎಫ್.ಎಸ್.ಜಿ.ಯನ್ನು ಸಿಎಪಿಎಫ್ ನ ಎ ಗ್ರೂಪ್  ನ ಕಾರ್ಯನಿರ್ವಹಣಾ ಶ್ರೇಣಿಯ ಅಧಿಕಾರಿಗಳೂ ಮಂಜೂರು ಮಾಡಬೇಕು ಎಂಬ ದೆಹಲಿ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿತ್ತು.

*****



(Release ID: 1576998) Visitor Counter : 269