ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಅಮೆರಿಕದ ವಿದೇಶಾಂಗ ಸಚಿವ ಮೈಖೆಲ್ ಪ್ಯಾಂಪಿಯೋ 

Posted On: 26 JUN 2019 2:35PM by PIB Bengaluru

ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ ಅಮೆರಿಕದ ವಿದೇಶಾಂಗ ಸಚಿವ ಮೈಖೆಲ್ ಪ್ಯಾಂಪಿಯೋ 
 

ಅಮೆರಿಕದ ವಿದೇಶಾಂಗ ಸಚಿವ ಮೈಖೆಲ್ ಆರ್. ಪ್ಯಾಂಪಿಯೋ ಅವರಿಂದು ಬೆಳಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. 

ವಿದೇಶಾಂಗ ಸಚಿವ ಪ್ಯಾಂಪಿಯೋ, ಅಧ್ಯಕ್ಷ ಟ್ರಂಪ್ ಅವರು ಚುನಾವಣೆ ಗೆಲುವಿಗಾಗಿ ನರೇಂದ್ರ ಮೋದಿ ಅವರಿಗೆ ತಿಳಿಸಲು ಹೇಳಿರುವ ಅಭಿನಂದನೆಗಳನ್ನು ಸಲ್ಲಿಸಿದರು.

ಪ್ರಧಾನ ಮಂತ್ರಿಯವರು ಸಚಿವ ಪ್ಯಾಂಪಿಯೋ ಅವರಿಗೆ ಅವರ ಆಪ್ತ ಶುಭಾಶಯಗಳಿಗೆ ಧನ್ಯವಾದ ಅರ್ಪಿಸಿದರು ಮತ್ತು ಅಧ್ಯಕ್ಷ ಟ್ರಂಪ್ ಅವರ ಶುಭಾಶಯಗಳಿಗಾಗಿ ಅವರಿಗೆ ತಮ್ಮ ಧನ್ಯವಾಪ ಅರ್ಪಿಸುವಂತೆಯೂ ತಿಳಿಸಿದರು. 

ಪ್ರಧಾನಮಂತ್ರಿಯವರು ಅಮೆರಿಕದೊಂದಿಗೆ ಹೊಂದಿರುವ ಬಾಂಧವ್ಯಕ್ಕೆ ನೀಡುವ ಆದ್ಯತೆಯ ಬಗ್ಗೆ ಪುನರುಚ್ಚರಿಸಿದರು ಮತ್ತು ಹೊಸ ಸರ್ಕಾರದ ಅವಧಿಯಲ್ಲಿ ಮತ್ತು ಅದರಾಚೆ, ಹಂಚಿಕೆಯ ಹಿತಾಸಕ್ತಿ ಮತ್ತು ನಂಬಿಕೆಯ ಬಲವಾದ ಬುನಾದಿಯ ಮೇಲೆ ಕಟ್ಟಲಾಗುವ ವ್ಯೂಹಾತ್ಮಕ ಸಹಭಾಗಿತ್ವದ ಕುರಿತಂತೆ ತಮ್ಮ ನಿಲುವನ್ನು ಒತ್ತಿ ಹೇಳಿದರು.

ಸಚಿವ ಪ್ಯಾಂಪಿಯೋ ಅವರು ಭಾರತದೊಂದಿಗೆ ಬಲವಾದ ಬಾಂಧವ್ಯ ಬೆಳೆಸುವ ಅಮೆರಿಕಾ ಸರ್ಕಾರದ ಮುಂದುವರಿದ ಆಸಕ್ತಿಯ ಬಗ್ಗೆ ತಿಳಿಯಪಡಿಸಿದರು ಮತ್ತು ಹಂಚಿಕೆಯ ಮುನ್ನೋಟ ಮತ್ತು ಗುರಿಯ ಸಾಕಾರಕ್ಕಾಗಿ ಒಗ್ಗೂಡಿ ಶ್ರಮಿಸುವ ಇಂಗಿತ ವ್ಯಕ್ತಪಡಿಸಿದರು. 

ಪ್ರಧಾನಮಂತ್ರಿಯವರು ವಾಣಿಜ್ಯ ಮತ್ತು ಆರ್ಥಿಕತೆ, ಇಂಧನ, ರಕ್ಷಣೆ, ಭಯೋತ್ಪಾದನೆ ನಿಗ್ರಹ ಮತ್ತು ಜನರೊಂದಿಗಿನ ನಂಟಿನ ವಿಚಾರದಲ್ಲಿ ದ್ವಿಪಕ್ಷೀಯ ಬಾಂಧವ್ಯದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವ ಬಲವಾದ ಬದ್ಧತೆಯ ಬಗ್ಗೆ ಪ್ರಸ್ತಾಪಿಸಿದರು. 

 

****



(Release ID: 1575923) Visitor Counter : 99