ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ಟಿವಿ ಧಾರಾವಾಹಿಗಳ ತಾರಾಗಣ/ಗೌರವಾರ್ಪಣೆ /ಶೀರ್ಷಿಕೆಗಳ ಪ್ರದರ್ಶನ ಕುರಿತು ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಎಲ್ಲಾ ಉಪಗ್ರಹ ಟಿವಿ ವಾಹಿನಿಗಳಿಗೆ ಸೂಚನೆ

Posted On: 14 JUN 2019 3:39PM by PIB Bengaluru

ಹಿಂದಿ ಮತ್ತು  ಪ್ರಾದೇಶಿಕ ಭಾಷೆಗಳ ಟಿವಿ ಧಾರಾವಾಹಿಗಳ ತಾರಾಗಣ/ ಗೌರವಾರ್ಪಣೆ/ ಶೀರ್ಷಿಕೆಗಳ ಪ್ರದರ್ಶನ ಕುರಿತು ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ಎಲ್ಲಾ ಉಪಗ್ರಹ ಟಿವಿ ವಾಹಿನಿಗಳಿಗೆ  ಸೂಚನೆ

ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳ ಟಿವಿ ಧಾರಾವಾಹಿಗಳ ತಾರಾಗಣ/ಗೌರವಾರ್ಪಣೆ/ಶೀರ್ಷಿಕೆಗಳನ್ನು ಕೇವಲ ಇಂಗ್ಲೀಷ್ ಭಾಷೆಯಲ್ಲಿ ಪ್ರದರ್ಶಿಸುತ್ತಿರುವುದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಗಮನಕ್ಕೆ ಬಂದಿದೆ. ಈ ಪದ್ಧತಿಯಿಂದಾಗಿ ಟಿವಿ ಧಾರಾವಾಹಿಗಳು ಮತ್ತು ಕಾರ್ಯಕ್ರಮಗಳ ತಾರಾಗಣದ ಕುರಿತು ಮೌಲ್ಯಯುತ ಮಾಹಿತಿಯನ್ನು ಪಡೆಯುವಲ್ಲಿ ಹಿಂದಿ ಹಾಗೂ ಇತರ ಪ್ರಾದೇಶಿಕ ಭಾಷೆಗಳನ್ನು ಚೆನ್ನಾಗಿ ಅರಿತಿರುವ ಜನರು ವಂಚಿತರಾಗುತ್ತಿದ್ದಾರೆ.


ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಸಲುವಾಗಿ ನಾವು ಎಲ್ಲ ಟಿವಿ ಚಾನೆಲ್ ಗಳು ತಾವು ಪ್ರಸಾರ ಮಾಡುವ ಕಾರ್ಯಕ್ರಮದ ಶೀರ್ಷಿಕೆಗಳನ್ನು ಭಾರತೀಯ ಭಾಷೆಗಳಲ್ಲೇ ಪ್ರದರ್ಶಿಸಬೇಕು ಎಂದು ಸೂಚಿಸುತ್ತಿದ್ದೇವೆ: ಕೇಂದ್ರ ಸಚಿವ  ಶ್ರೀ. ಪ್ರಕಾಶ್ ಜಾವಡೇಕರ್

ದೇಶದ ಟಿವಿ ವೀಕ್ಷಕರ ಅನುಕೂಲಕ್ಕಾಗಿ ಮತ್ತು ಅದನ್ನು ಇನ್ನಷ್ಟು ಜನರಿಗೆ ತಲುಪಿಸುವ ಸಲುವಾಗಿ ಸಚಿವಾಲಯ ಎಲ್ಲಾ ಖಾಸಗಿ ಉಪಗ್ರಹ ವಾಹಿನಿಗಳಿಗೆ ತಾವು ಪ್ರಸಾರ ಮಾಡುವ ಎಲ್ಲ ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ಟಿವಿ ಧಾರಾವಾಹಿಗಳ ತಾರಾಗಣ ಮತ್ತು ಶೀರ್ಷಿಕೆಗಳನ್ನು ಆಯಾ ಪ್ರಾದೇಶಿಕ ಭಾಷೆಗಳಲ್ಲೇ ಪ್ರಸಾರ ಮಾಡಬೇಕೆಂದು ಸೂಚಿಸಲಾಗಿದೆ.


Click the link for video  http://pib.nic.in/PressReleseDetail.aspx?PRID=1574609


************

 

 


(Release ID: 1574676) Visitor Counter : 210