ಸಂಪುಟ

ಭಾರತ ಮತ್ತು ಕಿರ್ಗಿಸ್ತಾನ ನಡುವಣ ಆರೋಗ್ಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿರುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

Posted On: 12 JUN 2019 8:01PM by PIB Bengaluru

ಭಾರತ ಮತ್ತು ಕಿರ್ಗಿಸ್ತಾನ ನಡುವಣ ಆರೋಗ್ಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿರುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಮತ್ತು ಕಿರ್ಗಿ ರಿಪಬ್ಲಿಕ್ ನ ಆರೋಗ್ಯ ಸಚಿವಾಲಯದ ನಡುವೆ ಆರೋಗ್ಯ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸಲ್ಲಿಸಿದ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.

 

ಸಹಕಾರದ ವ್ಯಾಪ್ತಿ:

ಸಹಕಾರ ಕುರಿತ ಈ ತಿಳುವಳಿಕಾ ಒಡಂಬಡಿಕೆ ಈ ಕೆಳಗಿನ ಸಹಕಾರ ವಲಯಗಳನ್ನು ಒಳಗೊಂಡಿದೆ:

·        ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವಿಕೆ.

 

·        ಸಾಂಕ್ರಾಮಿಕವಲ್ಲದ ರೋಗಗಳು , ಸಾಂಕ್ರಾಮಿಕ ರೋಗಗಳು ಮತ್ತು ಸೂಕ್ಷ್ಮಜೀವಿ ಪ್ರತಿರೋಧಕ

 

·        ಆಸ್ಪತ್ರೆಗಳ ಆಡಳಿತ ವ್ಯವಸ್ಥೆಯ ಅಭಿವೃದ್ಧಿ ಮತ್ತು ಆರೋಗ್ಯ ಮಾಹಿತಿ ವ್ಯವಸ್ಥೆಗಳು ಹಾಗು ಆಸ್ಪತ್ರೆ ಆಡಳಿತ.

 

·        ಮಾತೃತ್ವ ಮತ್ತು ಮಕ್ಕಳ ಆರೋಗ್ಯ

 

·        ವೈದ್ಯಕೀಯ ಸಂಶೋಧನೆಗಳು

 

·        ಕಿಡ್ನಿ ಕಸಿ ಮತ್ತು ಲಿವರ್, ಹೃದಯ ಶಸ್ತ್ರಚಿಕಿತ್ಸೆ, ರಕ್ತ/ಕ್ಯಾನ್ಸರ್ ಸಂಬಂಧಿ ಶಾಸ್ತ್ರ, ಮೂಳೆ ಶಾಸ್ತ್ರ, ತುರ್ತು ಚಿಕಿತ್ಸಾ ವಿಜ್ಞಾನ, ಇತ್ಯಾದಿ ಕ್ಷೇತ್ರಗಳಲ್ಲಿ ಪರಿಣಿತಿಯ ವಿನಿಮಯ.

 

·        ಆರೋಗ್ಯ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲಗಳ ಸಾಮರ್ಥ್ಯ ಸುಧಾರಣೆ.

 

·        ಔಷಧಗಳು ಮತ್ತು ವೈದ್ಯಕೀಯ ಸಲಕರಣೆ ಪ್ರಸರಣ ನಿಯಂತ್ರಣ ಕ್ಷೇತ್ರದಲ್ಲಿ ಮಾಹಿತಿ ಮತ್ತು ಪರಿಣತಿಯ ವಿನಿಮಯ.

 

·        ಔಷಧ ಮತ್ತು ವೈದ್ಯಕೀಯ ಉತ್ಪನ್ನಗಳ ಚಿಕಿತ್ಸಾ ಪ್ರಾಯೋಗಿಕ ವಿಧಾನಗಳಲ್ಲಿ ಉತ್ತಮ ವಿಧಾನಗಳನ್ನು ಕುರಿತ ಮಾಹಿತಿ ಮತ್ತು ಅನುಭವದ ವಿನಿಮಯ.

 

·        ರೋಗಗಳ ಸಮಗ್ರ ನಿಗಾ ವ್ಯವಸ್ಥೆ.

 

·        ವೈದ್ಯರು, ದಾದಿಯರು ಮತ್ತು ಮಾಹಿತಿ ತಂತ್ರಜ್ಞಾನದ ವಿಶೇಷ ತಜ್ಞರ ಪರಿಣತಿ ವಿನಿಮಯಕ್ಕಾಗಿ ಭೇಟಿಗಳನ್ನು ಏರ್ಪಡಿಸುವಿಕೆ.

 

·        ಇ-ಆರೋಗ್ಯ ಕ್ಷೇತ್ರದಲ್ಲಿ ಅನುಭವದ ವಿನಿಮಯ.

 

·        ಆರೋಗ್ಯ ತಜ್ಞರು ತರಬೇತಿ ಪಡೆಯಲು ಮತ್ತು ವೃತ್ತಿಪರ ನೈಪುಣ್ಯತೆಯನ್ನು ಅಭಿವೃದ್ದಿಪಡಿಸಲು “ ಭಾರತ-ಕಿರ್ಗಿ ಮಾಹಿತಿ ತಂತ್ರಜ್ಞಾನಗಳ ಕೇಂದ್ರ”ದಲ್ಲಿ ಅವಕಾಶ ಮತ್ತು ಭಾರತದಲ್ಲಿ ಇಂಟರ್ನ್ ಶಿಪ್.

 

·        ಆರೋಗ್ಯ ಪ್ರವಾಸೋದ್ಯಮ; ಮತ್ತು

 

·        ಸಹಕಾರಕ್ಕೆ ಸಂಬಂಧಿಸಿ ಪರಸ್ಪರ ನಿರ್ಧರಿಸಲಾಗುವ ಇತರ ಯಾವುದೇ ಕ್ಷೇತ್ರ.

 

ಅನುಷ್ಟಾನ:

ಸಹಕಾರಕ್ಕೆ ಸಂಬಂಧಿಸಿದ ಇತರ ವಿವರಗಳಿಗಾಗಿ ಮತ್ತು ಈ ತಿಳುವಳಿಕಾ ಒಡಂಬಡಿಕೆಯ ಅನುಷ್ಟಾನದ ಮೇಲುಸ್ತುವಾರಿಗಾಗಿ ಕಾರ್ಯ ಗುಂಪನ್ನು ಸ್ಥಾಪಿಸಲಾಗುವುದು.



(Release ID: 1574370) Visitor Counter : 153