ಸಂಪುಟ

ಹೊಮಿಯೋಪಥಿಯಲ್ಲಿನ ಸುಧಾರಣೆಗಳು    ಕೇಂದ್ರೀಯ ಹೊಮಿಯೋಪಥಿ ಮಂಡಳಿಯ ಅವಧಿ 2018ರ ಮೇ 18ರಿಂದ ಎರಡು ವರ್ಷಗಳ ಮುಂದುವರಿಕೆಗೆ ಹೊಮಿಯೋಪಥಿ ಕೇಂದ್ರೀಯ ಮಂಡಳಿ (ತಿದ್ದುಪಡಿ) ವಿಧೇಯಕ 2019ಕ್ಕೆ ಸಂಪುಟದ ಅನುಮೋದನೆ  

Posted On: 12 JUN 2019 7:53PM by PIB Bengaluru

ಹೊಮಿಯೋಪಥಿಯಲ್ಲಿನ ಸುಧಾರಣೆಗಳು   

ಕೇಂದ್ರೀಯ ಹೊಮಿಯೋಪಥಿ ಮಂಡಳಿಯ ಅವಧಿ 2018ರ ಮೇ 18ರಿಂದ ಎರಡು ವರ್ಷಗಳ ಮುಂದುವರಿಕೆಗೆ ಹೊಮಿಯೋಪಥಿ ಕೇಂದ್ರೀಯ ಮಂಡಳಿ (ತಿದ್ದುಪಡಿ) ವಿಧೇಯಕ 2019ಕ್ಕೆ ಸಂಪುಟದ ಅನುಮೋದನೆ  

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಹೋಮಿಯೋಪಥಿ ಕೇಂದ್ರೀಯ ಮಂಡಳಿ (ತಿದ್ದುಪಡಿ) ಮಸೂದೆ 2019ರ ಕರಡಿಗೆ ತನ್ನ ಅನುಮೋದನೆ ನೀಡಿದೆ.

 

ಪರಿಣಾಮ:

ಈ ಮಸೂದೆಯು ಕೇಂದ್ರೀಯ ಮಂಡಳಿಯ ಪುನಾರಚನೆಯ ಅವಧಿಯನ್ನು ಹಾಲಿ ಇರುವ ಒಂದು ವರ್ಷದಿಂದ ಎರಡು ವರ್ಷಗಳಿಗೆ ವಿಸ್ತರಿಸಲು ಅವಕಾಶ ನೀಡುತ್ತದೆ, ಹೀಗಾಗಿ ಆಡಳಿತ ಮಂಡಳಿಯ ಸದಸ್ಯರ ಅವಧಿ 2019ರ ಮೇ 17ರಿಂದ ಅನ್ವಯವಾಗುವಂತೆ ಮತ್ತೊಂದು ವರ್ಷದ ಅವಧಿಗೆ ವಿಸ್ತರಣೆಯಾಗಲಿದೆ.

 

ಇದು ಹೊಮಿಯೋಪಥಿ ಕೇಂದ್ರೀಯ ಮಂಡಳಿಗೆ ತನ್ನ ಅಧಿಕಾರವನ್ನು ಚಲಾಯಿಸಲು ಮತ್ತು ಮಂಡಳಿಯ ಕಾರ್ಯ ಚಟುವಟಿಕೆಗಳನ್ನು ನಡೆಸಲು ನೆರವಾಗಲಿದೆ.

 

ಅನುಷ್ಠಾನ:

ಈ ಮಸೂದೆಯು ಹೊಮಿಯೋಪಥಿ ಕೇಂದ್ರೀಯ ಮಂಡಳಿ (ತಿದ್ದುಪಡಿ) ಸುಗ್ರೀವಾಜ್ಞೆ 2019ನ್ನು ಬದಲಾಯಿಸಲಿದೆ ಮತ್ತು ಆಡಳಿತ ಮಂಡಳಿ ಸದಸ್ಯರ ಅವಧಿಯನ್ನು ಮತ್ತೊಂದು ವರ್ಷ ವಿಸ್ತರಿಸಲಿದೆ.

 

ಹಿನ್ನೆಲೆ:

ಕೇಂದ್ರೀಯ ಹೊಮಿಯೋಪಥಿ ಮಂಡಳಿಯ ವ್ಯವಹಾರಗಳನ್ನು ಪ್ರಸಿದ್ಧ ಮತ್ತು ಅರ್ಹರಾದ ಹೋಮಿಯೋಪತಿ ವೈದ್ಯರು ಮತ್ತು ಶ್ರೇಷ್ಠ ಆಡಳಿತಾಧಿಕಾರಿಗಳನ್ನು ಒಳಗೊಂಡಿರುವ ಆಡಳಿತ ಮಂಡಳಿಗೆ ವಹಿಸಲು ಯೋಜಿಸಲಾಗಿದೆ. ಆ ಅವಧಿವರೆಗೆ ಮಂಡಳಿಯನ್ನು ಪುನರ್ ಸ್ಥಾಪಿಸಲಾಗಿದೆ. ಹೊಮಿಯೋಪಥಿಯ ರಾಜ್ಯ ದಾಖಲಾತಿಯ ನವೀಕರಣವಾಗದ ಮತ್ತು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ  ಒಂದು ವರ್ಷದ ಅವಧಿಯೊಳಗೆ ಮಂಡಳಿ ಪುನರ್ ಸ್ಥಾಪನೆ ಆಗದ ಹಿನ್ನೆಲೆಯಲ್ಲಿ ಅವಧಿಯನ್ನು ವಿಸ್ತರಿಸಲಾಗಿದೆ.



(Release ID: 1574215) Visitor Counter : 72