ಸಂಪುಟ

ಭಾರತ ಮತ್ತು ಆಸ್ಟ್ರೀಯಾ ನಡುವಣ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ.

Posted On: 07 MAR 2019 2:20PM by PIB Bengaluru

ಭಾರತ ಮತ್ತು ಆಸ್ಟ್ರೀಯಾ ನಡುವಣ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗು ಆಸ್ಟ್ರೀಯಾದ ಸಾರಿಗೆ, ಅನ್ವೇಷಣೆ ಮತ್ತು ತಂತ್ರಜ್ಞಾನಗಳ ಫೆಡರಲ್ ಸಚಿವಾಲಯಗಳ ನಡುವೆ ರಸ್ತೆ ಮೂಲಸೌಕರ್ಯ ವಲಯದಲ್ಲಿ ತಂತ್ರಜ್ಞಾನ ಸಹಕಾರಕ್ಕಾಗಿ ಏರ್ಪಟ್ಟ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿರುವುದಕ್ಕೆ ತನ್ನ ಅಂಗೀಕಾರ ನೀಡಿತು. 

 

ಪರಿಣಾಮ:

 

ಈ ಎಂ.ಒ.ಯು. ಉಭಯ ದೇಶಗಳ ನಡುವೆ ರಸ್ತೆ ಸಾರಿಗೆ, ರಸ್ತೆಗಳು/ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ದಿ, ನಿರ್ವಹಣೆ ಮತ್ತು ಆಡಳಿತ, ರಸ್ತೆ ಸುರಕ್ಷೆ ಮತ್ತು ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆಗಳ ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಕ್ರಿಯಾಶೀಲ ಚೌಕಟ್ಟನ್ನು ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದೆ. 

 

ಎಂ.ಒ.ಯು. ಪ್ರಜಾಪ್ರಭುತ್ವವಾದೀ ರಾಷ್ಟ್ರ ಭಾರತ ಮತ್ತು ರಿಪಬ್ಲಿಕ್ ಆಫ್ ಆಸ್ಟ್ರಿಯಾ ನಡುವೆ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸಲಿದೆ , ಧೀರ್ಘಾವಧಿಯ ದ್ವಿಪಕ್ಷೀಯ ಸಂಬಂಧಗಳನ್ನು ಉತ್ತೇಜಿಸಲಿದೆ ಮತ್ತು ವ್ಯಾಪಾರ ಹಾಗು ಪ್ರಾದೇಶಿಕ ಸಮಗ್ರತೆಯನ್ನು ಹೆಚ್ಚಿಸಲಿದೆ

 

ಪ್ರಯೋಜನಗಳು:

 

ರಸ್ತೆ ಸಾರಿಗೆ ವಲಯದಲ್ಲಿ ಭಾರತ –ಆಸ್ಟ್ರಿಯನ್ ದ್ವಿಪಕ್ಷೀಯ ಸಹಕಾರವು ರಸ್ತೆ ಸುರಕ್ಷೆಯ ಹೆಚ್ಚಳದ ದೃಷ್ಟಿಯಿಂದ  ಮತ್ತು  ಈ ವಲಯಕ್ಕೆ ಆಕರ್ಷಕ ಹಣಕಾಸು ಸಾಧ್ಯತೆಯ ಕಾರಣದಿಂದ ಲಾಭದಾಯಕವಾಗಿರುತ್ತದೆ , ಮತ್ತು ಆ ಮೂಲಕ ಉಭಯ ದೇಶಗಳ ನಡುವೆ ಈಗಾಗಲೇ ಇರುವ ಉತ್ತಮ ಸೌಹಾರ್ದ ಸಂಬಂಧಗಳು  ಪ್ರಸ್ತಾವಿತ ಸಾರಿಗೆ ವಲಯದ ಎಂ.ಒ.ಯು. ನಿಂದಾಗಿ ಇನ್ನಷ್ಟು ಬಲಿಷ್ಟಗೊಳ್ಳುತ್ತವೆ

 

ಹಿನ್ನೆಲೆ:

 

1949 ರಲ್ಲಿ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಒಪ್ಪಂದಗಳ ಅನುಷ್ಟಾನದಿಂದಾಗಿ ಆಸ್ಟ್ರಿಯಾದ ಜೊತೆ ಭಾರತ ಉತ್ತಮ ರಾಜತಾಂತ್ರಿಕ ಸಂಬಂಧವನ್ನು ಹೊಂದಿದೆ. ಉಭಯ ದೇಶಗಳೂ ಸೌಹಾರ್ದಯುತ ಆರ್ಥಿಕ ಮತ್ತು ರಾಜತಾಂತ್ರಿಕ ಸಂಬಂಧಗಳ ಇತಿಹಾಸವನ್ನು ಹಂಚಿಕೊಂಡಿವೆ. ಆಸ್ಟ್ರಿಯಾವು ರಸ್ತೆ ಮತ್ತು ಹೆದ್ದಾರಿಗಳಿಗೆ ಸಂಬಂಧಿಸಿ ವಿದ್ಯುನ್ಮಾನ ಸುಂಕ ವ್ಯವಸ್ಥೆಗಳು, ಇಂಟೆಲಿಜೆಂಟ್ ಸಾರಿಗೆ ವ್ಯವಸ್ಥೆ, ಸಾರಿಗೆ ನಿರ್ವಹಣಾ ವ್ಯವಸ್ಥೆಗಳು, ಸುರಂಗ ನಿಗಾ ವ್ಯವಸ್ಥೆಗಳು, ಭೂ-ಮ್ಯಾಪಿಂಗ್ ಮತ್ತು ಭೂಕುಸಿತ ರಕ್ಷಣಾ ಕ್ರಮಗಳಂತಹ  ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದೆ.



(Release ID: 1568279) Visitor Counter : 83