ಸಂಪುಟ

ಎಂ.ಇ.ಐ.ಟಿ.ವೈ. ಅಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಪಿ.ಎಂ.-ಎಸ್.ವೈ.ಎಂ.ನ ನೋಂದಣಿ ಸಂಸ್ಥೆಯಾಗಿ ಸೇರ್ಪಡೆ ಮಾಡಲು ಸಂಪುಟದ ಅನುಮೋದನೆ

Posted On: 28 FEB 2019 11:03PM by PIB Bengaluru

ಎಂ.ಇ.ಐ.ಟಿ.ವೈ. ಅಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಪಿ.ಎಂ.-ಎಸ್.ವೈ.ಎಂ.ನ ನೋಂದಣಿ ಸಂಸ್ಥೆಯಾಗಿ ಸೇರ್ಪಡೆ ಮಾಡಲು ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಂ.ಇ.ಐ.ಟಿ.ವೈ. ಅಡಿಯಲ್ಲಿ ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ. ಭಾರತೀಯ ಇ- ಆಡಳಿತ ಸೇವೆಗಳ ನಿಯಮಿತ) ಗಳನ್ನು ಪಿ.ಎಂ.-ಎಸ್.ವೈ.ಎಂ.ನ ನೋಂದಣಿ ಸಂಸ್ಥೆಯಾಗಿ ಸೇರ್ಪಡೆ ಮಾಡಲು ಮತ್ತು ಚಂದಾದಾರರ ಪಾಲಿನ ಬದಲಾಗಿ ಇತರ ಸಚಿವಾಲಯಗಳು/ಇಲಾಖೆಗಳು/ಕಲ್ಯಾಣ ಮಂಡಳಿಗಳು/ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಸಂಸ್ಥೆಗಳಿಂದ ಬೃಹತ್ ಠೇವಣಿ ಹೂಡಿಕೆಗೆ ತನ್ನ ಅನುಮೋದನೆ ನೀಡಿದೆ. 

ಪ್ರಯೋಜನಗಳು: 

ಈ ಅನುಮೋದನೆಯು ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷ ತುಂಬಿದ ತರುವಾಯ 3,000/- ರೂಪಾಯಿ ಮಾಸಿಕ ಪಿಂಚಣಿಯ ರೂಪದಲ್ಲಿ ಸಾಮಾಜಿಕ ಭದ್ರತೆ ಒದಗಿಸಲು ಅವಕಾಶ ನೀಡುತ್ತದೆ. 


(Release ID: 1566975) Visitor Counter : 93