ಪ್ರಧಾನ ಮಂತ್ರಿಯವರ ಕಛೇರಿ

ರಿಪಬ್ಲಿಕ್‌ ಆಫ್‌ ಕೊರಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಕೊರಿಯಾ ವ್ಯಾಪಾರ ಕುರಿತ ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

Posted On: 21 FEB 2019 12:31PM by PIB Bengaluru

ರಿಪಬ್ಲಿಕ್‌ ಆಫ್‌ ಕೊರಿಯಾಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತ ಮತ್ತು ಕೊರಿಯಾ ವ್ಯಾಪಾರ ಕುರಿತ ವಿಚಾರ ಸಂಕಿರಣದಲ್ಲಿ ಪ್ರಧಾನಮಂತ್ರಿ ಅವರ ಭಾಷಣ

 

ಗೌರವಾನ್ವಿತ ಯುನ್ಮೊ ಸಂಗ್‌ ಅವರೇ,

 

ವ್ಯಾಪಾರ, ಕೈಗಾರಿಕೆ ಮತ್ತು ಇಂಧನ ಸಚಿವರು

 

ಗೌರವಾನ್ವಿತ ಉದ್ಯಮ ವಲಯದ ನಾಯಕರೇ

 

ಸ್ನೇಹಿತರೇ

 

ಎಲ್ಲರಿಗೂ ಮಧ್ಯಾಹ್ನದ ಶುಭಾಶಯಗಳು. ಸಿಯೋಲ್ ನಲ್ಲಿ ನಿಮ್ಮನ್ನು ಭೇಟಿಯಾಗಿ ಸಂತೋಷವಾಗಿದೆ.  ಕೇವಲ 12 ತಿಂಗಳಲ್ಲಿ  ಕೋರಿಯಾದ ಉದ್ಯಮ ವಲಯದ ನಾಯಕರ ಜತೆ ಇದು ಮೂರನೇ ಸಮಾಲೋಚನಾ ಸಭೆಯಾಗಿದೆ. ಕೊರಿಯಾದ ಉದ್ಯಮಿಗಳು ಭಾರತದ ಬಗ್ಗೆ ಹೆಚ್ಚು ಗಮನಹರಿಸಲು ಎನ್ನುವುದು ನನ್ನ ಇಚ್ಛೆಯಾಗಿದೆ. ನಾನು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಲೂ ಕೊರಿಯಾಗೆ ಭೇಟಿ ನೀಡಿದ್ದೆ. ಆರ್ಥಿಕ ಬೆಳವಣಿಗೆಗೆ ಕೊರಿಯಾ ನನಗೆ ಇಂದಿಗೂ ಮಾದರಿಯಾಗಿದೆ.

 

ಸ್ನೇಹಿತರೇ,

 

1.25 ಬಿಲಿಯನ್‌ (125 ಕೋಟಿ) ಜನಸಂಖ್ಯೆ ಹೊಂದಿರುವ ಭಾರತ ಇಂದು ಭಾರಿ ಸ್ಥಿತ್ಯಂತರ ಹಂತದಲ್ಲಿದೆ.

 

ಇದು ಬದಲಾವಣೆಯಾಗುತ್ತಿದೆ:

 

– ಕೃಷಿ ಪ್ರಾಬಲ್ಯ ಹೊಂದಿದ್ದ ದೇಶ ಪರಿವರ್ತನೆ ಹೊಂದುತ್ತಿದ್ದು, ಕೈಗಾರಿಕೆ ಮತ್ತು ಸೇವಾ ವಲಯದ ನೇತೃತ್ವದ ಆರ್ಥಿಕತೆಯತ್ತ ದಾಪುಗಾಲು ಹಾಕುತ್ತಿದೆ.

 

ಜಾಗತಿಕವಾಗಿ ಅಂತರ -ಸಂಬಂಧ ಹೊಂದಿದ ಆರ್ಥಿಕತೆ

 

ಕೆಂಪು ಪಟ್ಟಿಯ ಆರ್ಥಿಕತೆಯ ಬದಲಾಗಿ ಕೆಂಪು ಹಾಸಿಗೆಯಿಂದ ಸ್ವಾಗತ ಕೋರುವ ಆರ್ಥಿಕತೆ

 

ಭಾರತ ಈಗ ಅವಕಾಶ ನಾಡು.  ‘ಭಾರತದ ಕನಸು’ ನನಸಾಗಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಿದ್ದೇವೆ. ಹೀಗಾಗಿ, ನಾವು ಸಮಾನ ಮನಸ್ಕರ ನೆರವು ಕೋರುತ್ತಿದ್ದೇವೆ. ಇವರಲ್ಲಿ ದಕ್ಷಿಣ ಕೊರಿಯಾ ನಿಜವಾದ ಮತ್ತು ಸಹಜವಾದ ಸ್ನೇಹ ರಾಷ್ಟ್ರವಾಗಿದೆ. ದಶಕಗಳಿಂದ ಭಾರತ ಮತ್ತು ದಕ್ಷಿಣ ಕೊರಿಯಾ ಉದ್ಯಮ ವಹಿವಾಟು ನಡೆಸಿವೆ. ವಿಶೇಷವಾಗಿ ಕಳೆದ ಕೆಲವು ವರ್ಷಗಳಿಂದ ಉಭಯ ರಾಷ್ಟ್ರಗಳು ಮತ್ತಷ್ಟು ಸನಿಹಕ್ಕೆ ಬಂದಿದ್ದು, ಉತ್ತಮ ವಹಿವಾಟು ನಡೆಸಿವೆ. ಕೊರಿಯಾದ ಹತ್ತು ಉನ್ನತ ಸಹಭಾಗಿತ್ವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಕೊರಿಯಾದ ಸರಕುಗಳನ್ನು ರಫ್ತು ಮಾಡುವಲ್ಲಿ ಭಾರತ ಆರನೇ ಅತಿ ದೊಡ್ಡ ರಾಷ್ಟ್ರವಾಗಿದೆ. ನಮ್ಮ ವ್ಯಾಪಾರ ಗಾತ್ರ 2018ರಲ್ಲಿ  21.5 ಬಿಲಿಯನ್‌ ಡಾಲರ್‌ಗೆ ತಲುಪಿದೆ.  ಈ ವ್ಯಾಪಾರ ವಹಿವಾಟಿನ ಗಾತ್ರವನ್ನು 2030ಕ್ಕೆ 50 ಬಿಲಿಯನ್‌ ಡಾಲರ್‌ ಗುರಿ ತಲುಪುವ ನಿಟ್ಟಿನಲ್ಲಿ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕಾಗಿ ಸಂಧಾನ ಕೈಗೊಳ್ಳುವುದನ್ನು ತ್ವರಿತಗೊಳಿಸಲಾಗಿದೆ. ಕೇವಲ ವ್ಯಾಪಾರವಷ್ಟೇ ಅಲ್ಲ, ಹೂಡಿಕೆಯಲ್ಲೂ ನಾವು ಸಕಾರಾತ್ಮಕವಾದ ಆಶಾವಾದ ಹೊಂದಿದ್ದೇವೆ. ಭಾರತದಲ್ಲಿ ಕೊರಿಯಾದ ಹೂಡಿಕೆ ಈಗ 6 ಬಿಲಿಯನ್‌ ಡಾಲರ್‌ ತಲುಪಿದೆ.

 

ಸ್ನೇಹಿತರೇ,

 

2015ರಲ್ಲಿ ಕೊರಿಯಾಗೆ ಭೇಟಿ ನೀಡಿದ ನಂತರ ಕೊರಿಯಾಗೆ ನಿರ್ದಿಷ್ಟವಾದ ಹಲವು ಅನುಕೂಲಗಳನ್ನು ಕಲ್ಪಿಸುವ ’ಕೊರಿಯಾ ಪ್ಲಸ್‌’ ಘಟಕ ಆರಂಭಿಸಲಾಯಿತು. ಇದು ‘ಇನ್ವೆಸ್ಟ್‌ ಇಂಡಿಯಾ’ ಅಡಿಯಲ್ಲಿ ಆರಂಭಿಸಲಾಗಿತ್ತು. ಉದ್ಯಮ ವಹಿವಾಟು ನಡೆಸುವವರಿಗೆ ಎಲ್ಲ ರೀತಿಯಲ್ಲಿ ಮಾರ್ಗದರ್ಶನ ಮತ್ತು ಸಹಾಯ ನೀಡಲು ಈ ಘಟಕ ಆರಂಭಿಸಲಾಗಿತ್ತು. ಹುಂಡೈ,  ಸ್ಯಾಮ್ಸಂಗ್‌, ಎಲ್‌ಜಿ ಎಲೆಕ್ಟ್ರಾನಿಕ್ಸ್‌ ಕಂಪನಿಯ ಉತ್ಪನ್ನಗಳ ಭಾರತೀಯ ವಿಶ್ವಾಸವನ್ನು ಗಳಿಸಿವೆ. ಶೀಘ್ರದಲ್ಲಿ ‘ಕಿಯಾ’ ಸಹ ಈ ಗುಂಪಿಗೆ ಸೇರಲಿದೆ.  ಕೊರಿಯಾದ ಸುಮಾರು 600 ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಭವಿಷ್ಯದಲ್ಲಿ ಇನ್ನೂ ಹೆಚ್ಚು ಸಂಖ್ಯೆಯಲ್ಲಿ ಕೊರಿಯಾದ ಕಂಪನಿಗಳು ಹೂಡಿಕೆ ಮಾಡುವ ವಿಶ್ವಾಸವಿದೆ. ಕಳೆದ ವರ್ಷ ಅಕ್ಟೋಬರ್‌ನಿಂದ ಕೊರಿಯಾದ ನಾಗರಿಕರು ಭಾರತಕ್ಕೆ ಬಂದ ತಕ್ಷಣ ವೀಸಾ ನೀಡುವ ಸೌಲಭ್ಯ ಕಲ್ಪಿಸಲಾಗಿದೆ. ಭಾರತದಲ್ಲಿ ಕೊರಿಯಾದ ವ್ಯಾಪಾರಿ ಕಚೇರಿಯನ್ನು ಆರಂಭಿಸಲು ನಾವು ಉತ್ತೇಜನ ನೀಡುತ್ತೇವೆ. ಅಹಮದಾಬಾದ್‌ನಲ್ಲಿ ಇತ್ತೀಚೆಗೆ ‘ಕೊಟ್ರಾ’ ಕಚೇರಿಯನ್ನು ಆರಂಭಿಸಿರುವುದಕ್ಕೆ ನಮಗೆ ಸಂತೋಷವಾಗಿದೆ.

ಭಾರತದಲ್ಲಿ ಈಗ ಏನು ನಡೆಯುತ್ತಿದೆ ಎನ್ನುವ ಬಗ್ಗೆ ನಿಮಗೆ ತಿಳಿಸಲು ಬಯಸುತ್ತೇನೆ. ನಮ್ಮ ಆರ್ಥಿಕತೆ ಈಗ ಉತ್ತಮವಾಗಿದೆ. ಶೀಘ್ರದಲ್ಲೇ  ಐದು ಟ್ರಿಲಿಯನ್‌ ಡಾಲರ್ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಭಾರತ. ವರ್ಷದಿಂದ ವರ್ಷಕ್ಕೆ ಜಗತ್ತಿನಲ್ಲಿ ಯಾವುದೇ ರಾಷ್ಟ್ರ ಶೇಕಡ 7ರಷ್ಟು ಬೆಳವಣಿಗೆ ಸಾಧಿಸುತ್ತಿಲ್ಲ. ಕೆಲವು ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ವಿಶ್ವಬ್ಯಾಂಕ್‌ನ ಸುಲಲಿತ ವಹಿವಾಟಿನಲ್ಲಿ 77ನೇ ಸ್ಥಾನ ಪಡೆದಿದ್ದೇವೆ ಹಾಗೂ 65 ಸ್ಥಾನಗಳಷ್ಟು ಮುಂದಕ್ಕೆ ಜಿಗಿದಿದ್ದೇವೆ. ಮುಂದಿನ ವರ್ಷ 50ನೇ ಸ್ಥಾನದಲ್ಲಿರುವ ಗುರಿ ಹೊಂದಿದ್ದೇವೆ. ವಿದೇಶಿ ನೇರ ಹೂಡಿಕೆಗೆ ಮುಕ್ತವಾದ ಬಾಗಿಲು ತೆರೆದ ರಾಷ್ಟ್ರವಾಗಿದೆ.  ಶೇಕಡ 90ರಷ್ಟು ವಲಯಗಳಲ್ಲಿ ಅನುಮೋದನೆ ಪಡೆಯುವುದು ಸುಲಭ ಮತ್ತು ಸರಳವಾಗಿದೆ. ಇದರಿಂದಾಗಿ, ಭಾರತದ ಮೇಲೆ ಅತಿ ಹೆಚ್ಚು ವಿಶ್ವಾಸ ಉಂಟಾಗಿದೆ. ಹೀಗಾಗಿ, ಕಳೆದ ನಾಲ್ಕು ವರ್ಷಗಳಲ್ಲಿ 250 ಬಿಲಿಯನ್‌ ಡಾಲರ್‌ನಷ್ಟು ವಿದೇಶ ಬಂಡವಾಳ ಹೂಡಿಕೆಯನ್ನು ಭಾರತದಲ್ಲಿ ಮಾಡಲಾಗಿದೆ.

 

ಸ್ನೇಹಿತರೇ,

 

ಭಾರತದಲ್ಲಿ, ನಾವು ಈಗ ಒಳಗೊಳ್ಳುವಿಕೆಯ ಬೆಳವಣಿಗೆಯ ಬಗ್ಗೆ ಗಮನಹರಿಸಲಾಗಿದೆ. ಇದೇ ಕಾರಣಕ್ಕೆ ಆರ್ಥಿಕ ಸೇರ್ಪಡೆ ಕಾರ್ಯಕ್ರಮಕ್ಕಾಗಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಇದುವರೆಗೆ ಬ್ಯಾಂಕ್‌ ಖಾತೆಗಳನ್ನು ಹೊಂದದೇ ಇದ್ದ ಜನರಿಗೆ ಖಾತೆಗಳನ್ನು ತೆರೆಯಲಾಯಿತು. ಇದರಿಂದ,  ಕಳೆದ ಮೂರು ವರ್ಷಗಳಲ್ಲಿ  300 ಮಿಲಿಯನ್‌ ಬ್ಯಾಂಕ್‌ ಖಾತೆಗಳನ್ನು ತೆರೆಯಲಾಗಿದೆ. ಈಗ ಶೇಕಡ 99ರಷ್ಟು ಭಾರತೀಯ ಕುಟುಂಬಗಳು ಬ್ಯಾಂಕ್‌ ಖಾತೆ ಹೊಂದಿವೆ ಮತ್ತು  ಈ ಖಾತೆಗಳಲ್ಲಿ 12 ಬಿಲಿಯನ್‌ ಡಾಲರ್‌ ಮೊತ್ತದಷ್ಟು ಹಣ ಇಡಲಾಗಿದೆ. ಈಗ ಇವರಿಗೆ ಸುಲಭವಾಗಿ ಪಿಂಚಣಿ ಮತ್ತು ವಿಮೆ ಸೌಲಭ್ಯ ದೊರೆಯಲಿದೆ.

ಕಳೆದ ಮೂರು ವರ್ಷಗಳಲ್ಲಿ  ಮುದ್ರಾ ಯೋಜನೆ ಅಡಿಯಲ್ಲಿ  90 ಬಿಲಿಯನ್‌ ಡಾಲರ್‌ನಿಂದ 128 ಮಿಲಿಯನ್‌ ಡಾಲರ್‌ವರೆಗೆ ಸಾಲ ವಿತರಿಸಲಾಗಿದೆ.  ಶೇಕಡ 74ರಷ್ಟು ಸಾಲವನ್ನು ಮಹಿಳೆಯರಿಗೆ ನೀಡಲಾಗಿದೆ. ಈ ಮೊದಲು ಬ್ಯಾಂಕ್‌ ಸೌಲಭ್ಯ ಹೊಂದದೆ ಇದ್ದವರಿಗೆ ಸಬ್ಸಿಡಿ ಮತ್ತು ಸೇವೆಯನ್ನು ತಲುಪಿಸಲು  ಈಗ  ಬಯೊಮೆಟ್ರಿಕ್‌, ಬ್ಯಾಂಕ್‌ ಖಾತೆಗಳು ಮತ್ತು ಮೊಬೈಲ್‌ ದೂರವಾಣಿ ವ್ಯವಸ್ಥೆಯನ್ನು ಬಳಸಲಾಗುತ್ತಿದೆ.  ನಿಜವಾದ ಫಲಾನುಭವಿಗಳಿಗೆ  50 ಬಿಲಿಯನ್‌ ಡಾಲರ್ ಮೊತ್ತದಷ್ಟು ಸರ್ಕಾರಿ ಸೌಲಭ್ಯವನ್ನು ತಲುಪಿಸಲಾಗಿದೆ. ಈ ಮೂಲಕ ಸೋರಿಕೆಯನ್ನು ತಡೆಯಲಾಗಿದೆ.

 ಗ್ರಾಮೀಣ ಪ್ರದೇಶದ ವಿದ್ಯುದ್ದೀಕರಣಕ್ಕೆ ಒತ್ತು ನೀಡಲಾಗಿದೆ. 2018ರಲ್ಲಿ ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿ ಯಶಸ್ಸು ಗಳಿಸಿದ್ದಕ್ಕಾಗಿ ಭಾರತಕ್ಕೆ ಅಂತರರಾಷ್ಟ್ರೀಯ ಇಂಧನ ಸಂಸ್ಥೆಯಿಂದ ಮಾನ್ಯತೆ ದೊರೆತಿದೆ.  ನವೀಕರಣ ಇಂಧನದ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲೇ ಆರನೇ ಬೃಹತ್  ಉತ್ಪಾದಕ ರಾಷ್ಟ್ರವಾಗಿದೆ.  ಈ ಎಲ್ಲ ಅಂಶಗಳಿಂದ ಭಾರತ ಹಸಿರು ಜಾಗತಿಕ ಆರ್ಥಿಕತೆಯಾಗಿ ಹೊರಹೊಮ್ಮುತ್ತಿದೆ. ಹಸಿರು ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ನಾವು ನಮ್ಮ ಬದ್ಧತೆಯನ್ನು ಪ್ರದರ್ಶಿಸುತ್ತಿದ್ದೇವೆ. ಈ ಎಲ್ಲ ಕ್ರಮಗಳಿಂದ ದೇಶದ ಮೂಲೆ ಮೂಲೆಯಲ್ಲಿರು ಜನ ಈಗ ಅಭಿವೃದ್ಧಿಯ ಪಥದಲ್ಲಿದ್ದಾರೆ. ಈ ಮೂಲಕ  ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ಪರಿವರ್ತನೆಯಾಗಿದೆ.

 

ಸ್ನೇಹಿತರೇ,

 

ಆರ್ಥಿಕ ಪ್ರಗತಿಯು ವಿಶ್ವದರ್ಜೆಯ ಮೂಲಸೌಕರ್ಯ ಜತೆ ಹೋಲಿಕೆ ಮಾಡಲಾಗುತ್ತದೆ. ಅದು ಸಾರಿಗೆ, ವಿದ್ಯುತ್‌, ಬಂದರು, ಹಡಗು ನಿರ್ಮಾಣ, ವಸತಿ ಮತ್ತು ನಗರಗಳಲ್ಲಿ ಮೂಲಸೌಕರ್ಯ ಕಲ್ಪಿಸುವ ವಿಷಯವಾಗಿರಬಹುದು. ಭಾರತದಲ್ಲಿ ಇವುಗಳಿಗೆ ಅಪಾರ ಬೇಡಿಕೆ ಇದ್ದರೆ ಕೊರಿಯಾದಲ್ಲಿ ಬಲಿಷ್ಠವಾದ ತಂತ್ರಜ್ಞಾನ ಮತ್ತು ಸಾಮರ್ಥ್ಯ ಇದೆ.  ಮೂಲಸೌಕರ್ಯ ಕಲ್ಪಿಸಲು  2022ಕ್ಕೆ ಸುಮಾರು 700 ಬಿಲಿಯನ್‌ ಡಾಲರ್‌ನಷ್ಟು ಹೂಡಿಕೆ ಮಾಡುವ ಅಗತ್ಯವಿದೆ ಎಂದು ನಿರೀಕ್ಷಿಸಲಾಗಿದೆ. ‘ಸಾಗರಮಾಲಾ’ ಯೋಜನೆ ಅಡಿಯಲ್ಲಿ ಬಂದರು ಯೋಜನೆಗಳಿಗೆ 10 ಬಿಲಿಯನ್‌ ಡಾಲರ್‌ ಹೂಡಿಕೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಗಳನ್ನು ಕೈಗೊಳ್ಳಲಾಗುವುದು. ನಗರಗಳ ಬೆಳವಣಿಗೆಗೆ ಮತ್ತು ಸ್ಮಾರ್ಟ್‌ ಸಿಟಿಗಳನ್ನಾಗಿ ಪರಿವರ್ತಿಸಲು ಮಾರ್ಗದರ್ಶನ ಅಗತ್ಯವಿದೆ. ಇದರಿಂದ ಸುಸ್ಥಿರವಾದ ಮತ್ತು ಸ್ವಚ್ಛ ನಗರಗಳ ಅಗತ್ಯವಿದೆ.

2025 ಕ್ಕೆ ಭಾರತದ ಜನಸಂಖ್ಯೆ 500 ಮಿಲಿಯನ್‌ ದಾಟಲಿದೆ. ಇದರಿಂದ ವಿಭಿನ್ನ ರೀತಿಯ ಅವಕಾಶಗಳು ಸಹ ತೆರಯಲಿವೆ. ಹೀಗಾಗಿ, ಭಾರತದಲ್ಲಿ ಮೂಲಸೌಕರ್ಯ ಕಲ್ಪಿಸಲು ಉಭಯ ರಾಷ್ಟ್ರಗಳು ಕೈಜೋಡಿಸಿವೆ. ಕೊರಿಯಾದ ಆರ್ಥಿಕ ಅಭಿವೃದ್ಧಿ ಸಹಕಾರ ನಿಧಿ ಮತ್ತು ರಫ್ತು ಕ್ರೆಡಿಟ್‌ ಅಡಿಯಲ್ಲಿ  10 ಬಿಲಿಯನ್‌ ಡಾಲರ್‌ಗಳಷ್ಟು ಮೊತ್ತದ ಯೋಜನೆಗಳಿಗೆ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ. ಅತಿ ವೇಗದ ಆರ್ಥಿಕತೆ ವೃದ್ಧಿಸುವ ನಿಟ್ಟಿನಲ್ಲಿ ಸುಸ್ಥಿರ ಆರ್ಥಿಕ ಬೆಳವಣಿಗೆ ಸಾಧಿಸಲಾಗುತ್ತಿದೆ. ಉದಾಹರಣೆಗೆ, ಅಟೊಮೊಬೈಲ್‌ ವಲಯ ಮತ್ತು  ರಾಷ್ಟ್ರೀಯ ಎಲೆಕ್ಟ್ರಿಕ್‌ ಮೊಬಿಲಿಟಿ ಮಿಷನ್‌ ಕೈಗೆಟಕುವ ಮತ್ತು ಉತ್ತಮ ಸಾಮರ್ಥ್ಯದ ಎಲೆಕ್ಟ್ರಿಕ್‌ ವಾಹನಗಳನ್ನು ತಯಾರಿಸುವ ಉದ್ದೇಶ ಹೊಂದಿವೆ.  ಎಲೆಕ್ಟ್ರಿಕ್‌ ವಾಹನಗಳನ್ನು ತಯಾರಿಸುವುದರಲ್ಲಿ ಮುಂಚೂಣಿಯಲ್ಲಿ ದಕ್ಷಿಣ ಕೊರಿಯಾಗೆ ಭಾರತದಲ್ಲಿ ವಿಪುಲ ಅವಕಾಶಗಳಿವೆ.

 

ಸ್ನೇಹಿತರೇ,

 

ಸಂಶೋಧನೆ ಮತ್ತು ಅವಿಷ್ಕಾರ ನಾಲ್ಕನೇ ಕೈಗಾರಿಕೆ ಕ್ರಾಂತಿಯ ಪ್ರಮುಖ ಅಂಶಗಳಾಗಿವೆ. ಸರ್ಕಾರ ಈ ನಿಟ್ಟಿನಲ್ಲಿ ಬೆಂಬಲ ನೀಡುವ ವ್ಯವಸ್ಥೆಯನ್ನು ಹೊಂದಬೇಕು ಎನ್ನುವ ಅರಿವು ನಮಗಿದೆ. ಈ ನಿಟ್ಟಿನಲ್ಲಿ  ಭಾರತದಲ್ಲಿ ಸ್ಟಾರ್ಟ್‌ ಅಪ್‌ ಇಕೊ ಸಿಸ್ಟಂ ವ್ಯವಸ್ಥೆಯನ್ನು ನಾಲ್ಕು ವರ್ಷಗಳಲ್ಲಿ ಆರಂಭಿಸಲು 1.4 ಬಿಲಿಯನ್‌ ಡಾಲರನಷ್ಟು ಯೋಜನೆಯನ್ನು ರೂಪಿಸಲಾಗಿದೆ.

ಅಧ್ಯಕ್ಷ ಮೂನ್‌ ಅವರ ಸಮರ್ಥ ನಾಯಕತ್ವದಲ್ಲಿ ದಕ್ಷಿಣ ಕೊರಿಯಾವು ಸ್ಟಾರ್ಟ್‌ಅಪ್‌ ಮತ್ತು ಹೂಡಿಕೆ ಸ್ನೇಹಿ ವಾತಾವರಣ ಕಲ್ಪಿಸಲು 2020ರ ವೇಳೆಗೆ 9.4 ಬಿಲಿಯನ್‌ ಡಾಲರ್‌ನಷ್ಟು ವೆಚ್ಚ ಮಾಡಲು ನಿರ್ಧರಿಸಿದೆ. ಈ ನೀತಿಯ ಭಾರತ ಮತ್ತು ಕೊರಿಯಾಗೆ ಸಾಮಾನ್ಯ ಹಿತಾಸಕ್ತಿ ಹೊಂದಿರುವ ಕ್ಷೇತ್ರಗಳಿಗೆ ಹೆಚ್ಚು ಗಮನ ನೀಡಲಿವೆ.

ನಮ್ಮ ದೂರದೃಷ್ಟಿಯಿಂದ ಆರಂಭವಾಗುವ ಭಾರತ–ಕೊರಿಯಾ ಸ್ಟಾರ್ಟ್‌ಅಪ್‌ ಕೇಂದ್ರದಿಂದ  ಕೊರಿಯಾದ ಸ್ಟಾರ್ಟ್‌ಅಪ್‌ ಮತ್ತು ಭಾರತದ ಪ್ರತಿಭೆಗಳಿಗೆ ಮುಕ್ತವಾಗಿ ಸಂವಹನ ನಡೆಸುವ ವಾತಾವರಣ ಸೃಷ್ಟಿಸಲಿದೆ. ಭಾರತದಲ್ಲಿ ಸ್ಟಾರ್ಟ್‌ಅಪ್‌ ಆರಂಭಿಸಲು  ದಕ್ಷಿಣ ಕೊರಿಯಾದ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಉದ್ಯಮ ಉತ್ತೇಜನ ಸಂಸ್ಥೆಯು ಬೆಂಗಳೂರಿನಲ್ಲಿ ಈಗಾಗಲೇ ಕಚೇರಿ ತೆರೆದಿದೆ. ಅವಿಷ್ಕಾರದ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳು ‘ಭಾರತ–ಕೊರಿಯಾ ಭವಿಷ್ಯದ ಕಾರ್ಯತಂತ್ರ ಸಮೂಹ’ ಸ್ಥಾಪಿಸಲಾಗಿದೆ. ಜತೆಗೆ, ‘ಭಾರತ–ಕೊರಿಯಾ ಸಂಶೋಧನಾ ಮತ್ತು ಅವಿಷ್ಕಾರ ಕೇಂದ್ರವನ್ನು’ ಆರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ, ಸಂಶೋಧನೆ, ಅವಿಷ್ಕಾರ ಮತ್ತು ಉದ್ಯಮ ಕ್ಷೇತ್ರಕ್ಕೆ ಅನುಕೂಲವಾಗಲಿದೆ.

 

ಸ್ನೇಹಿತರೇ,

 

ನಮ್ಮ ನಾಗರಿಕರ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ರಿಪಬ್ಲಿಕ್‌ ಆಫ್‌ ಕೊರಿಯಾ ಜತೆ ಸ್ನೇಹದಿಂದ ಕಾರ್ಯನಿರ್ವಹಿಸಲು ಇಚ್ಛಿಸುತ್ತೇವೆ.  ಉದ್ಯಮ ವಲಯದ ನಾಯಕರು ಸಹ ಇದೇ ರೀತಿಯ ಕನಸುಗಳನ್ನು ನನಸಾಗಿಸದಿದ್ದರೆ  ಉಭಯ ರಾಷ್ಟ್ರಗಳ ಪ್ರಯತ್ನಗಳು ಸಫಲವಾಗುವುದಿಲ್ಲ.  ಕೊರಿಯಾದ ಹೇಳಿಕೆಯೊಂದಿಗೆ ನನ್ನ ಭಾಷಣ ಮುಕ್ತಾಯಗೊಳಿಸಲು ಬಯಸುತ್ತೇನೆ.

 

हुंजा खाम्योन पल्ली खाजीमन

हमके खाम्योन मल्ली खम्निदा

 

‘ನೀವು ಒಬ್ಬರೇ ಹೊರಟರೇ ವೇಗದಲ್ಲಿ ಹೋಗುತ್ತೀರಿ. ಆದರೆ, ಇಬ್ಬರು ಜತೆಯಲ್ಲಿ ಹೊರಟರೆ ಇನ್ನೂ ಹೆಚ್ಚಿನ ದೂರ ಸಾಗಬಹುದು’

 

ಧನ್ಯವಾದಗಳು

 

ಅನಂತ ಅನಂತ ಧನ್ಯವಾದಗಳು



(Release ID: 1565904) Visitor Counter : 30