ಸಂಪುಟ

ಭಾರತ ಮತ್ತು ಫಿನ್ಲ್ಯಾಂಡ್ ನಡುವೆ ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕಾಗಿ ಬಳಸುವ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ.

Posted On: 13 FEB 2019 9:28PM by PIB Bengaluru

ಭಾರತ ಮತ್ತು ಫಿನ್ಲ್ಯಾಂಡ್ ನಡುವೆ ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕಾಗಿ ಬಳಸುವ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ. 
 

ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ಫಿನ್ಲ್ಯಾಂಡ್ ನಡುವೆ ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕಾಗಿ ಬಳಸುವ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಅನುಮೋದನೆ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ 2019 ರ ಜನವರಿ 10ರಂದು ಹೊಸದಿಲ್ಲಿಯಲ್ಲಿ ಅಂಕಿತ ಹಾಕಲಾಗಿದೆ. 

ಪರಿಣಾಮ: 

ಅಂಕಿತ ಹಾಕಲಾದ ತಿಳುವಳಿಕಾ ಒಡಂಬಡಿಕೆ ಹೊಸ ಸಂಶೋಧನಾ ಕಾರ್ಯಚಟುವಟಿಕೆಗಳಿಗೆ ವೇಗ ನೀಡಲಿದೆ ಮತ್ತು ಭೂಮಿಯ ದೂರ ಸಂವೇದಿ ಕ್ಷೇತ್ರದಲ್ಲಿ ಆನ್ವಯಿಕತೆ ಸಾಧ್ಯತೆಗಳಿಗೂ ವೇಗ ದೊರೆಯಲಿದೆ. ಉಪಗ್ರಹ ಸಂಪರ್ಕ, ಉಪಗ್ರಹ ಸಂಚಾರ, ಬಾಹ್ಯಾಕಾಶ ವಿಜ್ಞಾನ ಮತ್ತು ಬಾಹ್ಯಾಕಾಶ ಅನ್ವೇಷಣೆಗೂ ಇದು ನೆರವಾಗಲಿದೆ. 

ಫಿನ್ಲ್ಯಾಂಡ್ ಸರಕಾರದ ಜೊತೆ ಸಹಕಾರವು ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಮನುಕುಲದ ಪ್ರಯೋಜನಕ್ಕಾಗಿ ಬಳಕೆ ಮಾಡುವ ಕ್ಷೇತ್ರದಲ್ಲಿ ಜಂಟಿ ಕಾರ್ಯಚಟುವಟಿಕೆ ಅಭಿವೃದ್ದಿಗೆ ನೆರವಾಗಲಿದೆ. 

ವಿವರಗಳು: 

ತಿಳುವಳಿಕಾ ಒಡಂಬಡಿಕೆಯು ಈ ಕೆಳಗಿನ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಒಳಗೊಂಡಿರುತ್ತದೆ. 

· ಭೂಮಿಯ ದೂರಸಂವೇದಿತ್ವ. 

· ಉಪಗ್ರಹ ಸಂಪರ್ಕ ಮತ್ತು ಉಪಗ್ರಹ ಆಧಾರಿತ ಚಲನೆ. 

· ಬಾಹ್ಯಾಕಾಶ ವಿಜ್ಞಾನ ಮತ್ತು ಗ್ರಹಗಳ ಅನ್ವೇಷಣೆ. 

· ಬಾಹ್ಯಾಕಾಶ ವಸ್ತುಗಳು ಮತ್ತು ಭೂ ವ್ಯವಸ್ಥೆಯ ಅಭಿವೃದ್ದಿ, ಪರೀಕ್ಷೆ ಮತ್ತು ಕಾರ್ಯನಿರ್ವಹಣೆ. 

· ಭಾರತೀಯ ಉಡ್ಡಾಯಕಗಳ ಮೂಲಕ ಫಿನ್ನಿಶ್ ಬಾಹ್ಯಾಕಾಶ ವಸ್ತುಗಳ ಉಡ್ಡಯನ. 

· ಬಾಹ್ಯಾಕಾಶ ದತ್ತಾಂಶಗಳ ಸಂಸ್ಕರಣೆ ಮತ್ತು ಬಳಕೆ. 

· ನವೀನ ಆನ್ವಯಿಕತೆಗಳ ಅಭಿವೃದ್ದಿ ಮತ್ತು ಪರಿಹಾರ ಆಧಾರಿತ ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ಕೃತಕ ಬುದ್ದಿಮತ್ತೆ ಬಳಕೆ. 

· ಉದಯಿಸುತ್ತಿರುವ ಹೊಸ ಬಾಹ್ಯಾಕಾಶ ಅವಕಾಶಗಳಲ್ಲಿ ಸಹಕಾರ ಮತ್ತು ದತ್ತಾಂಶ ಪರಿಸರ ವ್ಯವಸ್ಥೆಗಳು ಹಾಗು ಬಾಹ್ಯಾಕಾಶದ ಸಹ್ಯ ಬಳಕೆ. 

ಈ ಎಂ.ಒ.ಯು. ಅಡಿಯಲ್ಲಿ ಅನುಷ್ಟಾನ ವ್ಯವಸ್ಥೆಯಡಿ ಕೈಗೆತ್ತಿಕೊಳ್ಳುವ ನಿರ್ದಿಷ್ಟ ಸಹಕಾರಿ ಯೋಜನೆಗಳ ನಿರ್ವಹಣೆಗೆ, ಸಹಭಾಗಿಗಳು ಅಥವಾ ಅವರ ಅಧಿಕಾರಿಗಳ ಮೂಲಕ, ಅನುಷ್ಟಾನ ಏಜೆನ್ಸಿಗಳ ಮೂಲಕ ಯೋಜನಾ ತಂಡಗಳನ್ನು, ಅವಶ್ಯವಿದ್ದ ಸಂದರ್ಭದಲ್ಲಿ ರಚಿಸಿಕೊಳ್ಳಬಹುದು 

ಅನುಷ್ಟಾನ ತಂತ್ರ ಮತ್ತು ಗುರಿಗಳು : 

ತಿಳುವಳಿಕಾ ಒಡಂಬಡಿಕೆಯಡಿ ಸಹಕಾರಿ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಉದ್ದೇಶದಿಂದ ಸಹಭಾಗಿಗಳು ಸಮನ್ವಯಕಾರರನ್ನು ನೇಮಿಸಿಕೊಳ್ಳಬಹುದು. ಈ ತಿಳುವಳಿಕಾ ಒಡಂಬಡಿಕೆಯನ್ನು (ಎಂ.ಒ.ಯು.) ಅನುಷ್ಟಾನಿಸಲು ಅನುಕೂಲವಾಗುವಂತೆ ಸಹಭಾಗಿಗಳು ಪರಸ್ಪರ ನಿರ್ಧರಿಸುವ ಮೂಲಕ ಭಾರತ ಅಥವಾ ಫಿನ್ಲ್ಯಾಂಡ್ ಗಳಲ್ಲಿ ಅನುಕ್ರಮವಾಗಿ ಭೇಟಿಯಾಗಬಹುದು ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚಿಸಬಹುದು. 

ಅನುಷ್ಟಾನ ವ್ಯವಸ್ಥೆಯಡಿ ಕೈಗೆತ್ತಿಕೊಳ್ಳಲಾಗುವ ನಿರ್ದಿಷ್ಟ ಸಹಕಾರ ಯೋಜನೆಗಳ ನಿರ್ವಹಣೆಗಾಗಿ ಸಹಭಾಗಿಗಳು ಅಥವಾ ಅವರ ಅಧಿಕಾರಿಗಳು , ಅನುಷ್ಟಾನ ಏಜೆನ್ಸಿಗಳು ಅವಶ್ಯವಿದ್ದರೆ ಯೋಜನಾ ತಂಡಗಳನ್ನು ಸ್ಥಾಪಿಸಬಹುದು. 

ಫಿನ್ಲ್ಯಾಂಡ್ ಸರಕಾರವು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರಕ್ಕೆ ಆಸಕ್ತಿ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. 



(Release ID: 1564518) Visitor Counter : 92