ಸಂಪುಟ

ಭಯೋತ್ಪಾದನೆ ನಿಗ್ರಹ ಕುರಿತಂತೆ ಜಂಟಿ ಕಾರ್ಯ ಗುಂಪು ರಚಿಸಲು ಭಾರತ ಮತ್ತು ಮೊರಕ್ಕೋ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 13 FEB 2019 9:30PM by PIB Bengaluru

ಭಯೋತ್ಪಾದನೆ ನಿಗ್ರಹ ಕುರಿತಂತೆ ಜಂಟಿ ಕಾರ್ಯ ಗುಂಪು ರಚಿಸಲು ಭಾರತ ಮತ್ತು ಮೊರಕ್ಕೋ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಯೋತ್ಪಾದನೆ ನಿಗ್ರಹ ಕುರಿತಂತೆ ಜಂಟಿ ಕಾರ್ಯ ಗುಂಪು (ಜೆಡಬ್ಲ್ಯುಜಿ) ರಚಿಸಲು ಭಾರತ ಮತ್ತು ಮೊರಕ್ಕೋ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

ಭಯೋತ್ಪಾದನೆ ನಿಗ್ರಹಕ್ಕಾಗಿ ಭಾರತ ಮತ್ತು ಮೊರಕ್ಕೋ ಜೆಡಬ್ಲ್ಯುಜಿ ಸ್ಥಾಪಿಸುವುದು ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ನೆರವಾಗಲಿದೆ. ಈ ತಿಳಿವಳಿಕೆ ಒಪ್ಪಂದವು ಭಯೋತ್ಪಾದಕ ಚಟುವಟಿಕೆಗಳ ಮಾಹಿತಿಯನ್ನು ಪಡೆಯಲು/ವಿನಿಮಯ ಮಾಡಿಕೊಳ್ಳಲು ಆಧಾರವಾಗಲಿದೆ.
 

------



(Release ID: 1564458) Visitor Counter : 44