ಸಂಪುಟ

ಜಲ್‌ಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ ನಾಲ್ಕು ಜಿಲ್ಲೆಗಳಲ್ಲಿ ಅಧಿಕಾರ ವ್ಯಾಪ್ತಿ: ಡಾರ್ಜಿಲಿಂಗ್, ಕಾಲಿಂಪಾಂಗ್, ಜಲ್‌ಪೈಗುರಿ ಮತ್ತು ಕೂಚ್ ಬೆಹಾರ್

Posted On: 06 FEB 2019 9:35PM by PIB Bengaluru

ಜಲ್‌ಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸಲು ಕ್ಯಾಬಿನೆಟ್ ಅನುಮೋದನೆ 

ನಾಲ್ಕು ಜಿಲ್ಲೆಗಳಲ್ಲಿ ಅಧಿಕಾರ ವ್ಯಾಪ್ತಿ: ಡಾರ್ಜಿಲಿಂಗ್, ಕಾಲಿಂಪಾಂಗ್, ಜಲ್‌ಪೈಗುರಿ ಮತ್ತು ಕೂಚ್ ಬೆಹಾರ್ 
 

ಜಲ್‌ಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಸಂಚಾರಿ ಪೀಠ ಸ್ಥಾಪಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಇದು ನಾಲ್ಕು ಜಿಲ್ಲೆಗಳಾದ ಡಾರ್ಜಿಲಿಂಗ್, ಕಾಲಿಂಪಾಂಗ್, ಜಲ್‌ಪೈಗುರಿ ಮತ್ತು ಕೂಚ್ ಬೆಹಾರ್‌ಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿದೆ. 

1988ರಲ್ಲಿ ನಡೆದ ಕಲ್ಕತ್ತಾ ಹೈಕೋರ್ಟ್ ಫುಲ್ ಕೋರ್ಟ್ ಚರ್ಚೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಜಲ್‌ಪೈಗುರಿಯಲ್ಲಿ ಕಲ್ಕತ್ತಾ ಹೈಕೋರ್ಟ್‌ನ ಸಂಚಾರಿ ಪೀಠವನ್ನು ಸ್ಥಾಪಿಸಲು ಕ್ಯಾಬಿನೆಟ್ 16-6-2006 ರಲ್ಲಿ ನಿರ್ಧಾರ ಕೈಗೊಂಡಿತ್ತು. ಸಂಚಾರಿ ಪೀಠದ ಸ್ಥಾಪನೆಗೆ ಜಾಗವನ್ನು ಪ್ರಸ್ತಾಪಿಸಲು ಮತ್ತು ಅಗತ್ಯ ಮೂಲ ಸೌಕರ್ಯದ ಪ್ರಗತಿಯನ್ನು ನಿರ್ಣಯಿಸಲು ಕಲ್ಕತ್ತಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಜಲ್‌ಪೈಗುರಿಗೆ 30-08-2018 ರಂದು ಭೇಟಿ ನೀಡಿತ್ತು. 



(Release ID: 1563135) Visitor Counter : 72