ಸಂಪುಟ

ಆದಾಯ ತೆರಿಗೆ ಒಂಬುಡ್ಸ್ ಮನ್ ಮತ್ತು ಪರೋಕ್ಷ ತೆರಿಗೆ ಒಂಬುಡ್ಸ್ ಮನ್ ಸಂಸ್ಥೆಯ ರದ್ದತಿಗೆ ಸಂಪುಟದ ಅನುಮೋದನೆ.

Posted On: 06 FEB 2019 9:45PM by PIB Bengaluru

ಆದಾಯ ತೆರಿಗೆ ಒಂಬುಡ್ಸ್ ಮನ್ ಮತ್ತು ಪರೋಕ್ಷ ತೆರಿಗೆ ಒಂಬುಡ್ಸ್ ಮನ್ ಸಂಸ್ಥೆಯ ರದ್ದತಿಗೆ ಸಂಪುಟದ ಅನುಮೋದನೆ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಆದಾಯ ತೆರಿಗೆ ಒಂಬುಡ್ಸ್ ಮನ್ ಮತ್ತು ಪರೋಕ್ಷ ತೆರಿಗೆ ಒಂಬುಡ್ಸ್ ಮನ್ ಸಂಸ್ಥೆಯ ರದ್ದತಿಗೆ ಅನುಮೋದನೆ ನೀಡಿತು.

ಪರ್ಯಾಯ ದೂರು ಪರಿಹಾರ ವ್ಯವಸ್ಥೆಯ ಆಯ್ಕೆ ಇರುವುದರಿಂದ ಮತ್ತು ಒಂಬುಡ್ಸ್ ಮನ್ ಸಂಸ್ಥೆಯು ಹಾಲಿ ನಿಯಮಿತವಾಗಿ ಸಮಾನಾಂತರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದೂರು, ಕುಂದು ಕೊರತೆ ಪರಿಹಾರ ವ್ಯವಸ್ಥೆಗಳಿಗಿಂತ ಹೆಚ್ಚು ದಕ್ಷ ಯಾ ಕ್ರಿಯಾಶಾಲಿ ಎಂಬುದು ಸಾಬೀತಾಗದಿರುವ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಒಂಬುಡ್ಸ್ ಮನ್ ಮತ್ತು ಪರೋಕ್ಷ ತೆರಿಗೆ ಒಂಬುಡ್ಸ್ ಮನ್ ಗಳನ್ನು ರದ್ದು ಮಾಡಲು ಅನುಮೋದನೆ ನೀಡಲಾಗಿದೆ.

ಹಿನ್ನೆಲೆ:

ಆದಾಯ ತೆರಿಗೆ ಒಂಬುಡ್ಸ್ ಮನ್ ಸಂಸ್ಥೆಯನ್ನು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆಗಳ ಪರಿಹಾರಕ್ಕಾಗಿ 2003 ರಲ್ಲಿ ಸ್ಥಾಪಿಸಲಾಗಿತ್ತು. ಆದಾಗ್ಯೂ ಒಂಬುಡ್ಸ್ ಮನ್ ಸಂಸ್ಥೆ ತನ್ನ ಉದ್ದೇಶ ಸಾಧನೆಯಲ್ಲಿ ಸಫಲವಾಗಲಿಲ್ಲ. ದೂರುಗಳ ಸಂಖ್ಯೆ ಏಕ ಅಂಕೆಗಳ ಮಟ್ಟಕ್ಕೆ ಕುಸಿದುದರಿಂದ ಮತ್ತು ತೆರಿಗೆ ಪಾವತಿದಾರರು ಸಿ.ಪಿ.ಜಿ.ಆರ್. ಎ.ಎಂ.ಎಸ್. ( ಕೇಂದ್ರೀಕೃತ ಸಾರ್ವಜನಿಕ ಕುಂದು ಕೊರತೆ ಪರಿಹಾರ ಮತ್ತು ನಿಗಾ ವ್ಯವಸ್ಥೆ ) , ಆಯಕರ ಸೇವಾ ಕೇಂದ್ರ ಇತ್ಯಾದಿ ಪರ್ಯಾಯ ವಿಧಾನಗಳನ್ನು ಬಳಸಲು ಆಯ್ಕೆ ಮಾಡಿಕೊಂಡದ್ದರಿಂದ , 2011 ರಲ್ಲ್ಲಿ ಪರೋಕ್ಷ ತೆರಿಗೆ ಒಂಬುಡ್ಸ್ ಮನ್ ವ್ಯವಸ್ಥೆಯ ಖಾಲಿ ಕಚೇರಿಯನ್ನು ಮುಚ್ಚಲು ನಿರ್ಧರಿಸಲಾಗಿತ್ತು.
 

***



(Release ID: 1563128) Visitor Counter : 69