ಸಂಪುಟ

ಕೃಷಿ ಮತ್ತು ಆಹಾರ ಕೈಗಾರಿಕೆಯಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಉಕ್ರೇನ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ

Posted On: 06 FEB 2019 9:50PM by PIB Bengaluru

ಕೃಷಿ ಮತ್ತು ಆಹಾರ ಕೈಗಾರಿಕೆಯಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಉಕ್ರೇನ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಮತ್ತು ಆಹಾರ ಕೈಗಾರಿಕೆಯಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಉಕ್ರೇನ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ. 

ಈ ಉದ್ದೇಶಿತ ಒಪ್ಪಂದವು, ಕೃಷಿ ಮತ್ತು ಆಹಾರ ಕೈಗಾರಿಕೆಯ ವಿವಿಧ ವಲಯಗಳಲ್ಲಿ ಸಹಕಾರವನ್ನು ಒದಗಿಸುತ್ತದೆ. ಗುರುತಿಸಲಾದ ಕ್ಷೇತ್ರಗಳಲ್ಲಿ ಸಹಕಾರ ಯೋಜನೆಗಳನ್ನು ಚರ್ಚಿಸಲು ಮತ್ತು ರೂಪಿಸಲು ಮತ್ತು ಪಕ್ಷಕಾರರು ನಿರ್ಧರಿಸುವ ಕಾರ್ಯಗಳ ಅನುಷ್ಠಾನದ ಮೇಲ್ವಿಚಾರಣೆ ಮಾಡುವ ಕಾರ್ಯಕ್ಕಾಗಿ ಎರಡೂ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಗುಂಪನ್ನು ರಚಿಸಲಾಗುವುದು. ಕಾರ್ಯ ಗುಂಪಿನ ಸಭೆ ಭಾರತ ಗಣರಾಜ್ಯ ಮತ್ತು ಉಕ್ರೇನ್ ನಲ್ಲಿ ಪರ್ಯಾಯವಾಗಿ ಕನಿಷ್ಠ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯಲೇಬೇಕು. ಈ ಒಪ್ಪಂದಕ್ಕೆ ಅಂಕಿತ ಹಾಕಿದ ದಿನದಿಂದ ಅದು ಜಾರಿಗೆ ಬರುತ್ತದೆ ಮತ್ತು ಐದು ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ, ಮತ್ತು ನಂತರದ ಐದು ವರ್ಷಗಳ ಅವಧಿಗೆ ತಂತಾನೆ ವಿಸ್ತರಣೆಯೂ ಆಗುತ್ತದೆ. ಈ ಒಪ್ಪಂದವನ್ನು ರದ್ದುಪಡಿಸುವ ಇಂಗಿತ ವ್ಯಕ್ತವಾದಲ್ಲಿ, ಯಾವುದೇ ಪಕ್ಷಕಾರರ ಅಧಿಸೂಚನೆ ಕೈಸೇರಿದ ದಿನಾಂಕದಿಂದ ಆರು ತಿಂಗಳುಗಳ ಬಳಿಕ ಈ ಒಪ್ಪಂದವು ರದ್ದಾಗುತ್ತದೆ.
 

***



(Release ID: 1563061) Visitor Counter : 85