ಪ್ರಧಾನ ಮಂತ್ರಿಯವರ ಕಛೇರಿ

ಸರ್ಕಾರ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದೆ, ಶ್ರೀನಗರದಲ್ಲಿ ಪಿಎಂ ಹೇಳಿಕೆ

Posted On: 03 FEB 2019 9:22PM by PIB Bengaluru

ಸರ್ಕಾರ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಿದೆ, ಶ್ರೀನಗರದಲ್ಲಿ ಪಿಎಂ ಹೇಳಿಕೆ

 

ಹೊಸದಾಗಿ ಆಯ್ಕೆಯಾದ ಸರಪಂಚರೊಂದಿಗೆ ಪ್ರಧಾನಿ ಸಂವಾದ, ಪ್ರಜಾಪ್ರಭುತ್ವ ಮತ್ತು ಅಭಿವೃದ್ಧಿಗೆ ಜೆ ಮತ್ತು ಕೆಯ ನಾಗರಿಕರ ಬದ್ಧತೆಯ ಪ್ರಶಂಸೆ, ಅವಾಂತಿಪೋರಾದಲ್ಲಿ ನೂತನ ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿದ ಪಿ.ಎಂ., ಶ್ರೀನಗರದಲ್ಲಿ 6000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳ ಅನಾವರಣ, ಪ್ರಧಾನಿಯವರಿಂದ ಬಂಡಿಪೋರಾದಲ್ಲಿ ಪ್ರಥಮ ಗ್ರಾಮೀಣ ಬಿಪಿಓ ಉದ್ಘಾಟನೆ

 

ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಉತ್ತೇಜಿಸುತ್ತಿರುವವರಿಗೆ ದೇಶ ತಕ್ಕ ಉತ್ತರ ನೀಡುತ್ತದೆ ಎಂದು  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಶ್ರೀನಗರದಲ್ಲಿಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಎಲ್ಲ ಭಯೋತ್ಪಾದಕರನ್ನೂ ಪ್ರತ್ಯುತ್ತರದೊಂದಿಗೆ ಹತ್ತಿಕ್ಕುತ್ತೇವೆ ಎಂದರು. ನಾವು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಯ ಬೆನ್ನುಮೂಳೆ ಮುರಿದಿದ್ದೇವೆ ಮತ್ತು ಸಂಪೂರ್ಣ ಶಕ್ತಿಯೊಂದಿಗೆ ಅದರ ವಿರುದ್ಧ ಹೋರಾಡುತ್ತಿದ್ದೇವೆ” ಎಂದರು.

 

ಭಯೋತ್ಪಾದಕರ ವಿರುದ್ಧ ಹೋರಾಡುತ್ತಾ ಮಡಿದ ಹುತಾತ್ಮ ನಜೀರ್ ಅಹಮದ್ ವಾನಿ ಅವರಿಗೆ ಪ್ರಧಾನಮಂತ್ರಿಯವರು ಶ್ರದ್ಧಾಂಜಲಿ ಸಲ್ಲಿಸಿದರು. ಹುತಾತ್ಮ ನಜೀರ್ ಅಹ್ಮದ್ ವಾನಿ ಅವರಿಗೆ ಮತ್ತು ದೇಶಕ್ಕಾಗಿ ಮತ್ತು ಶಾಂತಿಗಾಗಿ ಬಲಿದಾನ ಮಾಡಿದ ಎಲ್ಲ ಇತರ ವೀರ ಯೋಧರಿಗೆ ನನ್ನ ಗೌರವ ನಮನಗಳು. ನಜೀರ್ ಅಹ್ಮದ್ ವಾನಿ ಅವರಿಗೆ ಅಶೋಕ ಚಕ್ರ ನೀಡಲಾಗಿದೆ. ಅವರ ಶೌರ್ಯ ಮತ್ತು ಸಾಹಸ ಜಮ್ಮು ಮತ್ತು ಕಾಶ್ಮೀರದ ಮತ್ತು ಇಡೀ ದೇಶದ ಯುವಜನರಿಗೆ ದೇಶಕ್ಕಾಗಿ ಬದುಕುವ ದಾರಿ ತೋರುತ್ತದೆ” ಎಂದರು. 

ಪ್ರಧಾನಮಂತ್ರಿಯವರು ಹೊಸದಾಗಿ ಆಯ್ಕೆಯಾದ ಸರಪಂಚರೊಂದಿಗೆ ಸಂವಾದ ನಡೆಸಿದರು. ರಾಜ್ಯದಲ್ಲಿ ಹಲವು ವರ್ಷಗಳ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿರುವುದಕ್ಕೆ ತಮಗೆ ಸಂತಸವಾಗುತ್ತದೆ ಎಂದರು. ಪ್ರತೀಕೂಲ ಪರಿಸ್ಥಿತಿಯಲ್ಲೂ ಹೊರಬಂದು ಮತ ಚಲಾಯಿಸಿ, ರಾಜ್ಯದ ಜನತೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಇದು  ಪ್ರಜಾಪ್ರಭುತ್ವದ ಬಗ್ಗೆ ಮತ್ತು ರಾಜ್ಯದ ಅಭಿವೃದ್ಧಿಗಾಗಿ ಅವರಿಗೆ ಇರುವ ವಿಶ್ವಾಸದ ಪ್ರದರ್ಶನ ಎಂದು ಹೇಳಿದರು. 

 

ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಆದ್ಯತೆಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ನಾನು 6 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲು ಇಲ್ಲಿಗೆ ಬಂದಿದ್ದೇನೆ ಎಂದರು. ಈ ಎಲ್ಲ ಯೋಜನೆಗಳೂ ಶ್ರೀನಗರ ಮತ್ತು ಸುತ್ತಮುತ್ತಲ ಜನರ ಬದುಕು ಸುಗಮಗೊಳಿಸುತ್ತದೆ ಎಂದರು. 

ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಪ್ರಧಾನಮಂತ್ರಿಯವರು ಸರಣಿ ಅಭಿವೃದ್ಧಿ ಯೋಜನೆಗಳನ್ನು ಅನಾವರಣ ಮಾಡಿದರು. ಪುಲ್ವಾಮಾದ ಅವಾಂತಿಪೋರಾದಲ್ಲಿ ಅವರು ಏಮ್ಸ್ ಗೆ ಶಂಕುಸ್ಥಾಪನೆ ನೆರವೇರಿಸಿದರು. ಇದು ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲಿದೆ ಎಂದು ಹೇಳಿದರು.  ವಿಶ್ವದ ಅತಿ ದೊಡ್ಡ ಆರೋಗ್ಯ ಆರೈಕೆ ಯೋಜನೆ ಆಯುಷ್ಮಾನ್ ಭಾರತದೊಂದಿಗೆ ಸಂಪರ್ಕಿತವಾಗಿದೆ, ಈ ಯೋಜನೆ ಆರಂಭವಾದ ದಿನದಿಂದ ಈವರೆಗೆ 10 ಲಕ್ಷ ಜನರು ಇದರ ಪ್ರಯೋಜನ ಪಡೆದಿದ್ದಾರೆ ಎಂದರು. ಇದು ಜಮ್ಮು ಮತ್ತು ಕಾಶ್ಮೀರ ರಾಜ್ಯವೊಂದರಲ್ಲೇ 30 ಲಕ್ಷ ಜನರಿಗೆ ಪ್ರಯೋಜನ ಒದಗಿಸಲಿದೆ ಎಂದರು.

 

ಪ್ರಥಮ ಗ್ರಾಮೀಣ ಬಿಪಿಓ ಅನ್ನು ಬಂಡಿಪೋರಾದಲ್ಲಿ ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ

ಉದ್ಘಾಟಿಸಿದರು. ಇದು ಬಂಡಿಪೋರ ಮತ್ತು ಸುತ್ತಮುತ್ತಲ ಜಿಲ್ಲೆಗಳ ಯುವಜನರಿಗೆ ಉದ್ಯೋಗಾವಕಾಶಗಳನ್ನು ತೆರೆಯಲಿದೆ ಎಂದರು. ಬಂಡಿಪೋರ ಗ್ರಾಮೀಣ ಬಿಪಿಓ ಈ ವಲಯದ ಯುವಜನರಿಗೆ ಅವಕಾಶಗಳ ಬಾಗಿಲು ತೆರೆಯಲಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. 

ಇಲ್ಲಿಗೆ ಮತ್ತೆ ವಾಪಸಾಗಿ ಜೀವನ ನಡೆಸಲು ಬಯಸುವ ಕಾಶ್ಮೀರಿ ವಲಸಿಗರಿಗೆ ತಮ್ಮ ಸರ್ಕಾರ ಸಂಪೂರ್ಣ ಭದ್ರತೆ ಒದಗಿಸಲಿದೆ ಎಂದು ಪ್ರಧಾನಿ ಹೇಳಿದರು. ಕಾಶ್ಮೀರಿ ವಲಸಿಗ ಉದ್ಯೋಗಿಗಳಿಗೆ ಟ್ರಾನ್ಸಿಟ್ ವಸತಿ ಸೌಕರ್ಯ ಒದಗಿಸಲು ಸುಮಾರು 700 ಟ್ರಾನ್ಸಿಟ್ ಫ್ಲಾಟ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಚದುರಿದ ಕಾಶ್ಮೀರಿಗಳನ್ನು 3 ಸಾವಿರ ಹುದ್ದೆಗಳಿಗೆ ನೇಮಕ ಮಾಡುವ ಕಾರ್ಯ ನಡೆದಿದೆ ಎಂದರು 

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ವಿವಿಧ ಭಾಗಗಳ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. 

ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ (ಆರ್.ಯು.ಎಸ್.ಎ.) ಅಡಿಯಲ್ಲಿ ವಿವಿಧ ಯೋಜನೆಗಳಿಗೆ ಗುಂಡಿ ಒತ್ತುವ ಮೂಲಕ ಡಿಜಿಟಲ್ ಚಾಲನೆ ನೀಡಿದ್ದು, ಪ್ರಧಾನಮಂತ್ರಿಯವರ ಭೇಟಿಯ ಮತ್ತೊಂದು ಆಕರ್ಷಣೆಯಾಗಿತ್ತು. ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಮತ್ತು ಕುಪ್ವಾರ ಮತ್ತು ಕಿಸ್ತ್ವಾರ್ ನಲ್ಲಿ 3 ಮಾದರಿ ಪದವಿ ಕಾಲೇಜುಗಳಿಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಅವರು ಜಮ್ಮು ವಿಶ್ವವಿದ್ಯಾಲಯದಲ್ಲಿ ಉದ್ಯಮಶೀಲತೆ, ನಾವಿನ್ಯತೆ ಮತ್ತು ವೃತ್ತಿಬದುಕಿನ ತಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. 

400 ಕೆ.ವಿ. ಡಿ/ಸಿ ಜಲಂಧರ್ – ಸಾಂಬಾ – ರಜೌರಿ – ಶೋಪಿಯಾನ್ – ಅಮರ್ ಗರ್ (ಸೊಪೋರೆ) ಸರಬರಾಜು ಮಾರ್ಗಕ್ಕೆ ಪ್ರಧಾನಮಂತ್ರಿಯವರು ಚಾಲನೆ ನೀಡಿದರು. ಈ ಯೋಜನೆಯು ಜಮ್ಮು ಮತ್ತು ಕಾಶ್ಮೀರದ ಗ್ರಿಡ್ ಸಂಪರ್ಕಕ್ಕೆ ವೇಗ ನೀಡಿದೆ. 

ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಹಿಂದಿನ ಸರ್ಕಾರ ದೆಹಲಿಯ ವಿಜ್ಞಾನ ಭವನದಿಂದ ದೊಡ್ಡ ದೊಡ್ಡ ಯೋಜನೆ ಉದ್ಘಾಟಿಸಿರಬಹುದು. ಆದರೆ, ಎನ್.ಡಿ.ಎ. ಸರ್ಕಾರ ವಿವಿಧ ವಲಯಗಳಿಂದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದೆ. ನಮ್ಮ ಸರ್ಕಾರ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರ್ಖಂಡ್ ನಿಂದ, ಉಜ್ವಲ ಯೋಜನೆಯನ್ನು ಉತ್ತರ ಪ್ರದೇಶದಿಂದ, ಪ್ರಧಾನಮಂತ್ರಿ ಸುರಕ್ಷತಾ ವಿಮಾ ಯೋಜನೆಗಳನ್ನು ಪಶ್ಚಿಮ ಬಂಗಾಳದಿಂದ, ಕೈಮಗ್ಗದ ಅಭಿಯಾನವನ್ನು ತಮಿಳುನಾಡಿನಿಂದ, ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಅಭಿಯಾನಕ್ಕೆ ಹರಿಯಾಣದಿಂದ ಚಾಲನೆ ನೀಡಿದೆ ಎಂದರು. 

ಸೆಪ್ಟೆಂಬರ್ 2018ರಲ್ಲೇ ರಾಜ್ಯವನ್ನು ಬಯಲು ಶೌಚಮುಕ್ತ ಮಾಡಿದ್ದಕ್ಕಾಗಿ ಜಮ್ಮು ಕಾಶ್ಮೀರ ಜನತೆಗೆ ಅವರು ಅಭಿನಂದನೆ ಸಲ್ಲಿಸಿದರು. 

ನಾವಿನ್ಯತೆಯ ಹೊಸ ಮನೋಧರ್ಮ, ಇಂಕ್ಯುಬೇಷನ್, ನವೋದ್ಯಮದ ದೇಶದಲ್ಲಿ ಬಂದಿದ್ದು, ನವೋದ್ಯಮ ಅಭಿಯಾನ ಹೊಸ ವೇಗ ಪಡೆದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. 3 ರಿಂದ ನಾಲ್ಕೂವರೆ ವರ್ಷಗಳ ಅಲ್ಪಾವಧಿಯಲ್ಲಿ ದೇಶದ I ಮತ್ತು IIನೇ ಹಂತದ ಪಟ್ಟಣಗಳಲ್ಲಿ 15 ಸಾವಿರ ನವೋದ್ಯಮಗಳು ಕಾರ್ಯಾಚರಣೆ ಮಾಡುತ್ತಿವೆ ಎಂದು ತಿಳಿಸಿದರು.  

ಗಂದೇರ್ಬಾಲ್ ನ ಶೆಪ್ಹೋರಾದಲ್ಲಿ ಪ್ರಧಾನಮಂತ್ರಿಯವರು ಬಹು ಉದ್ದೇಶದ ಒಳಾಂಗಣ ಕ್ರೀಡಾ ಸೌಲಭ್ಯವನ್ನು ಉದ್ಘಾಟಿಸಿದರು. ಈ ಒಳಾಂಗಣ ಕ್ರೀಡಾ ಸೌಲಭ್ಯ ಯುವಜನರಿಗೆ ನೆರವಾಗಲಿದ್ದು, ಒಳಾಂಗಣ ಕ್ರೀಡೆಗಳನ್ನು ಆಡಲು ಅವಕಾಶ ನೀಡುತ್ತದೆ. ಹೊಸ ಪ್ರತಿಭೆಗಳನ್ನು ಹುಡುಕಲು ಮತ್ತು ಕ್ರೀಡಾ ಮೂಲ ಸೌಕರ್ಯ ಸುಧಾರಿಸಲು ಜಮ್ಮು ಮತ್ತು ಕಾಶ್ಮೀರದ ಎಲ್ಲ 22 ಜಿಲ್ಲೆಗಳನ್ನು ಖೇಲೋ ಇಂಡಿಯಾ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ ಎಂದು ಪಿ.ಎಂ. ಹೇಳಿದರು.

ಪ್ರಧಾನಮಂತ್ರಿಯವರು ದಾಲ್ ಸರೋವರಕ್ಕೆ ಭೇಟಿ ನೀಡಿ, ಅಲ್ಲಿನ ಸೌಲಭ್ಯ ಪರಿಶೀಲಿಸಿದರು. 

 

ಇದು ಪ್ರಧಾನಮಂತ್ರಿಯವರು ರಾಜ್ಯಕ್ಕೆ ನೀಡಿದ ದಿನವಿಡಿಯ ಭೇಟಿಯಾಗಿದ್ದು, ಅವರು ಲೆಹ್, ಜಮ್ಮು ಮತ್ತು ಶ್ರೀನಗರದ ಎಲ್ಲ ಮೂರು ವಲಯಗಳಿಗೂ ಭೇಟಿ ನೀಡಿದರು. 

****


(Release ID: 1562492) Visitor Counter : 117