ಸಂಪುಟ

ಗಣಿಗಳಲ್ಲಿನ ಸುರಕ್ಷತೆ, ಪರೀಕ್ಷೆ ಮತ್ತು ಸಂಶೋಧನಾ ಕೇಂದ್ರಗಳ ಕುರಿತಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 16 JAN 2019 4:10PM by PIB Bengaluru

ಗಣಿಗಳಲ್ಲಿನ ಸುರಕ್ಷತೆ, ಪರೀಕ್ಷೆ ಮತ್ತು ಸಂಶೋಧನಾ ಕೇಂದ್ರಗಳ ಕುರಿತಂತೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಗಣಿಗಳ ಸುರಕ್ಷತೆ, ಪರೀಕ್ಷೆ ಮತ್ತು ಸಂಶೋಧನಾ ಕೇಂದ್ರ (ಎಸ್.ಐ.ಎಂ.ಟಿ.ಎ.ಆರ್.ಎಸ್.) ಕುರಿತಂತೆ ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಗಣಿ ಸುರಕ್ಷತೆ ಮಹಾ ನಿರ್ದೇಶನಾಲಯ (ಡಿ.ಜಿ.ಎಂ.ಎಸ್.) ಮತ್ತು ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ಸರ್ಕಾರದ ನೈಸರ್ಗಿಕ ಸಂಪನ್ಮೂಲ ಗಣಿಗಳು ಮತ್ತು ಇಂಧನ ಇಲಾಖೆಯ ನಡುವೆ ಒಡಂಬಡಿಕೆಗೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

ಪರಿಣಾಮಗಳು:

ಈ ತಿಳಿವಳಿಕೆ ಒಪ್ಪಂದವು ಡಿಜಿಎಂಎಸ್ ಮತ್ತು ಎಸ್.ಐ.ಎಂ.ಟಿ.ಎ.ಆರ್.ಎಸ್. ನಡುವೆ ಈ ಕೆಳಕಂಡ ಪಾಲುದಾರಿಕೆ ಸ್ಥಾಪಿಸಲು ನೆರವಾಗುತ್ತದೆ:

·         ತರಬೇತಿ ನೀಡಿಕೆ, ಅಪಾಯ ಆಧಾರಿತ ಸುರಕ್ಷತಾ ನಿರ್ವಹಣೆ ವ್ಯವಸ್ಥೆ ಅನುಷ್ಠಾನ

·         ವಿಚಾರ ಸಂಕಿರಣ, ಸಮಾವೇಶ ಮತ್ತು ಇತರ ತಾಂತ್ರಿಕ ಸಭೆಗಳ ಆಯೋಜನೆ, ಉದ್ಯೋಗಗಳ ಸುರಕ್ಷತೆ ಮತ್ತು ಆರೋಗ್ಯ ಅಕಾಡೆಮಿ ಮತ್ತು ರಾಷ್ಟ್ರೀಯ ಗಣಿ ವಿಪತ್ತು ಕೇಂದ್ರ ಸ್ಥಾಪನೆ,

·         ಡಿಜಿಎಂ.ಎಸ್.ನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ ಆಧುನೀಕರಣ

ಅನುಷ್ಠಾನದ ಕಾರ್ಯತಂತ್ರ: ಈ ತಿಳಿವಳಿಕೆ ಒಪ್ಪಂದವು ಅಂಕಿತ ಹಾಕಿದ ದಿನದಿಂದ ಜಾರಿಗೆ ಬರಲಿದ್ದು, ಮೂರು ವರ್ಷಗಳ ವರೆಗೆ ಜಾರಿಯಲ್ಲಿರುತ್ತದೆ.

ಹಿನ್ನೆಲೆ:

ಆಸ್ಟ್ರೇಲಿಯಾದಲ್ಲಿ ಗಣಿ ದುರಂತಗಳ ಸಂಖ್ಯೆ ವಿಶ್ವದಲ್ಲೇ ಅತ್ಯಂತ ಕಡಿಮೆ ಇದೆ. ಅಪಾಯ ಗುರುತಿಸುವಿಕೆ ಮತ್ತು ಅಪಾಯದ ಮೌಲ್ಯಮಾಪನದ ತಂತ್ರಗಳನ್ನು ಬಳಸಿಕೊಂಡು ಗಣಿಗಾರಿಕೆ ವಲಯಕ್ಕೆ ಅಪಾಯ ಆಧಾರಿತ ಸುರಕ್ಷತಾ ನಿರ್ವಹಣಾ ಯೋಜನೆಗಳನ್ನು ಯೋಜಿಸಲು ಮತ್ತು ಅನುಷ್ಠಾನಗೊಳಿಸುವುದರಲ್ಲಿ ಆಸ್ಟ್ರೇಲಿಯಾ ಮುಂಚೂಣಿಯಲ್ಲಿದೆ. ಎಸ್.ಐ.ಎಂ.ಟಿ.ಎ.ಆರ್.ಎಸ್. ಗಣಿ ಸುರಕ್ಷತಾ ನಿರ್ವಹಣಾ ವ್ಯವಸ್ಥೆಯಲ್ಲಿ ವಿಶೇಷ ಪರಿಣತಿಗೆ ಹೆಸರುವಾಸಿಯಾಗಿದೆ.



(Release ID: 1560280) Visitor Counter : 83