ಸಂಪುಟ

ಎನ್.ಎಚ್.ಪಿ.ಸಿ.ಲಿಮಿಟೆಡ್ , ಈಶಾನ್ಯ ವಿದ್ಯುಚ್ಛಕ್ತಿ ನಿಗಮ, ಟಿ.ಎಚ್.ಡಿ.ಸಿ. ಇಂಡಿಯಾ ಲಿಮಿಟೆಡ್ ಮತ್ತು ಎಸ್.ಜೆ.ವಿ.ಎನ್. ಲಿಮಿಟೆಡ್ ಗಳ ಮಂಡಳಿ ಮಟ್ಟಕ್ಕಿಂತ ಕೆಳಗಿನ ಅಧಿಕಾರಿಗಳಿಗೆ 1-1-97 ರಿಂದ ಅನ್ವಯವಾಗುವಂತೆ ವೇತನ ಶ್ರೇಣಿಯ ಸಕ್ರಮೀಕರಣಕ್ಕೆ ಸಂಪುಟ ಅನುಮೋದನೆ

Posted On: 16 JAN 2019 4:07PM by PIB Bengaluru

ಎನ್.ಎಚ್.ಪಿ.ಸಿ.ಲಿಮಿಟೆಡ್ , ಈಶಾನ್ಯ ವಿದ್ಯುಚ್ಛಕ್ತಿ ನಿಗಮ, ಟಿ.ಎಚ್.ಡಿ.ಸಿ. ಇಂಡಿಯಾ ಲಿಮಿಟೆಡ್ ಮತ್ತು ಎಸ್.ಜೆ.ವಿ.ಎನ್. ಲಿಮಿಟೆಡ್ ಗಳ ಮಂಡಳಿ ಮಟ್ಟಕ್ಕಿಂತ ಕೆಳಗಿನ ಅಧಿಕಾರಿಗಳಿಗೆ 1-1-97 ರಿಂದ ಅನ್ವಯವಾಗುವಂತೆ ವೇತನ ಶ್ರೇಣಿಯ ಸಕ್ರಮೀಕರಣಕ್ಕೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ನ್ಯಾಶನಲ್ ಹೈಡ್ರೋಇಲೆಕ್ಟ್ರಿಕ್ ಪವರ್ ಕಾರ್ಪೋರೇಶನ್ ಲಿಮಿಟೆಡ್ (ಎನ್.ಎಚ್.ಪಿ.ಸಿ.) , ಈಶಾನ್ಯ ವಿದ್ಯುಚ್ಚಕ್ತಿ ನಿಗಮ ( ಎನ್.ಇ.ಇ.ಪಿ.ಸಿ.ಒ) , ಟಿ.ಎಚ್.ಡಿ.ಸಿ. ಇಂಡಿಯಾ ಲಿಮಿಟೆಡ್  (ಹಳೆಯ ತೇಹ್ರಿ ಜಲ ಅಭಿವೃದ್ಧಿ ಕಾರ್ಪೋರೇಶನ್ ಲಿಮಿಟೆಡ್ ) ಮತ್ತು ಸಟ್ಲಜ್ ಜಲ ವಿದ್ಯುತ್ ನಿಗಮ ಲಿಮಿಟೆಡ್ (ಎಸ್.ಜೆ.ವಿ.ಎನ್.) ಗಳಲ್ಲಿ ಮಂಡಳಿ ಮಟ್ಟಕ್ಕಿಂತ ಕೆಳಗಿನ ಅಧಿಕಾರಿಗಳಿಗೆ ಇಂಧನ ಸಚಿವಾಲಯವು ದಿನಾಂಕ 04-04-2006 ಮತ್ತು 01-09-2006 ರಂದು ಹೊರಡಿಸಿದ ಆದೇಶಗಳಿಗೆ ಅನುಸಾರವಾಗಿ 01-01-1997 ರಿಂದ ಜಾರಿಗೆ ಬರುವಂತೆ ವೇತನ ಶ್ರೇಣಿಯನ್ನು ಸಕ್ರಮಗೊಳಿಸಲು ತನ್ನ ಮಂಜೂರಾತಿ ನೀಡಿತು. 

 

ಅನುಷ್ಟಾನ ತಂತ್ರ: 

 

ಮಂಜೂರಾತಿ ಬಳಿಕ , ಜಲ ಸಿ.ಪಿ.ಎಸ್.ಇ.ಗಳು ಇಂಧನ ಸಚಿವಾಲಯದ ದಿನಾಂಕ 04-04-2006 ಮತ್ತು 01-09-2006 ರ ಆದೇಶಗಳ ಅನುಸಾರ ಅಂಗೀಕರಿಸಿದ ವೇತನ ಶ್ರೇಣಿಗಳು ಸಕ್ರಮೀಕರಣಗೊಳ್ಳುತ್ತವೆ. 

 

ಪರಿಣಾಮ: 

 

ಜಲ ಸಿ.ಪಿ.ಎಸ್.ಇ. ಗಳಲ್ಲಿ 01-01-2007ಕ್ಕೆ ಮೊದಲು ಸೇವಾಪಟ್ಟಿಯಲ್ಲಿ ದಾಖಲಿರುವ ಸುಮಾರು 5,254 ಅಧಿಕಾರಿಗಳಿಗೆ ಈ ಮಂಜೂರಾತಿಯಿಂದ ಲಾಭವಾಗಲಿದೆ. ಇದು ಜಲ ಸಿ.ಪಿ.ಎಸ್.ಇ.ಗಳ ಅಧಿಕಾರಿಗಳ ನೈತಿಕ ಸ್ಥೈರ್ಯವನ್ನು, ಕಾರ್ಯದಕ್ಷತೆಯನ್ನು  ಹೆಚ್ಚಿಸಲಿದೆ.

 

ಖರ್ಚು: 

 

ವೇತನ ಶ್ರೇಣಿ ಸಕ್ರಮೀಕರಣಕ್ಕೆ 323 ಕೋ.ರೂ.ಗಳವರೆಗೆ ಖರ್ಚು ಬರಲಿದೆ

 

ಹಿನ್ನೆಲೆ: 

 

ಎನ್.ಎಚ್.ಪಿ.ಸಿ, ಎನ್.ಇ.ಇ.ಪಿ.ಸಿ.ಒ., ಟಿ.ಎಚ್.ಡಿ.ಸಿ.ಐ.ಎಲ್. ಮತ್ತು ಎಸ್.ಜೆ.ವಿ.ಎನ್.ಎಲ್.ಗಳ ಅಧಿಕಾರಿಗಳ ವೇತನ ಶ್ರೇಣಿಯಲ್ಲಿ ದೋಷಗಳಿದ್ದವು. 01-01-1997 ರಿಂದ ಜಾರಿಗೆ ಬರುವಂತೆ ಸಂಘಟನಾತ್ಮಕ ವರ್ಗದ ಕಾರ್ಮಿಕರು / ಅಧಿಕಾರೇತರರ ವೇತನ ಶ್ರೇಣಿಗಳನ್ನು ಎನ್.ಟಿ.ಪಿ.ಸಿ. / ತೈಲ ವಲಯದ ಮಾದರಿಯಲ್ಲಿ ಪರಿಷ್ಕರಿಸಲಾಗಿತ್ತು. ಇದರಿಂದ ಕಾರ್ಮಿಕರ ಮತ್ತು ಸೂಪರ್ ವೈಸರ್ ಗಳ ವೇತನ ಶ್ರೇಣಿಯು  ಇ-1 ಶ್ರೇಣಿಯ ಅಧಿಕಾರಿಗಳ ವೇತನ ಶ್ರೇಣಿಗಿಂತ ಹೆಚ್ಚಿನದಾಗಿತ್ತು.

ಈ ಪ್ರಸ್ತಾಪವನ್ನು ಈ ಮೊದಲು ಕಾರ್ಯದರ್ಶಿಗಳ  ಸಮಿತಿ (ಸಿ.ಒ.ಎಸ್.) ಪರಿಗಣನೆಗೆ ತೆಗೆದುಕೊಂಡಿತ್ತು ಮತ್ತು ಸಂಪುಟವು ಹಲವಾರು ಸಂದರ್ಭಗಳಲ್ಲಿ ಪರಿಗಣಿಸಿತ್ತು. 2013ರ ಡಿಸೆಂಬರ್ ತಿಂಗಳಲ್ಲಿ ಸಂಪುಟವು ಈ ಕೆಳಗಿನಂತೆ ನಿರ್ಧಾರ ಕೈಗೊಂಡಿತ್ತು: 

 

•01-01-1997 ರಿಂದ ಜಾರಿಗೆ ಬರುವಂತೆ ನಿಗದಿ ಮಾಡಲಾದ ನಿಯಮ ಮೀರಿದ ವೇತನ ಶ್ರೇಣಿಯನ್ನು ಸಕ್ರಮೀಕರಿಸತಕ್ಕುದಲ್ಲ. 

•ಆದಾಗ್ಯೂ 01-01-1997 ರಿಂದ ಪಡೆದ ಹೆಚ್ಚುವರಿ ವೇತನವನ್ನು ಮರು ವಸೂಲಿ ಮಾಡುವಲ್ಲಿ ಇರುವ ತೊಡಕು ಮತ್ತು ಅದರಿಂದ ಸಿಬ್ಬಂದಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದಾದ ಸಾಧ್ಯತೆ ಇರುವುದರಿಂದ ಯಾವುದೇ ಮರು ವಸೂಲಿ ಮಾಡತಕ್ಕುದಲ್ಲ. 

•01-01-2007ರಿಂದ ಅನ್ವಯವಾಗುವಂತೆ ನಿಗದಿ ಮಾಡಲಾದ ವೇತನ ಶ್ರೇಣಿಯಲ್ಲಿಯ ದೋಷಗಳನ್ನು ಸರಿಪಡಿಸಿದ ಬಳಿಕ 01-01-2007ರಿಂದ ಜಾರಿಗೆ ಬರುವಂತೆ ವೇತನ ಶ್ರೇಣಿಯನ್ನು ನಿಗದಿ ಮಾಡತಕ್ಕದ್ದು. 

 

ಈ ಆದೇಶದಿಂದ  ಬಾಧಿತರಾದ ಜಲ ಪಿ.ಎಸ್.ಇ.ಗಳ ವಿವಿಧ ಸಿಬ್ಬಂದಿ ಸಂಘಟನೆಗಳು ವಿವಿಧ ಹೈಕೋರ್ಟುಗಳಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದವು. ಉತ್ತರಾಖಂಡ ಮತ್ತು ಮೇಘಾಲಯ ಹೈಕೋರ್ಟ್ ಮೇಲಿನ ನಿರ್ಧಾರವನ್ನು ರದ್ದು ಮಾಡಿದ್ದವು. 12-04-2017 ರಂದು ಉತ್ತರಾಖಂಡ ಹೈಕೋರ್ಟಿನ ಆದೇಶದ ವಿರುದ್ದ ಸುಪ್ರೀಂ ಕೋರ್ಟಿನಲ್ಲಿ ಎಸ್.ಎಲ್.ಪಿ.ಯನ್ನು ಸಲ್ಲಿಸಲಾಗಿತ್ತು, ಅದು 08-05-2017 ರಂದು ವಜಾಗೊಂಡಿತ್ತು. ಮೇಘಾಲಯ ಮತ್ತು ಉತ್ತರಾಖಂಡ ಹೈಕೋರ್ಟುಗಳಲ್ಲಿ ನ್ಯಾಯಾಲಯ ನಿಂದನೆ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇಂಧನ ಸಚಿವಾಲಯಕ್ಕೆ ಎನ್.ಎಚ್.ಪಿ.ಸಿ, ಎಸ್.ಜೆ.ವಿ.ಎನ್.ಎಲ್. , ಎನ್.ಇ.ಇ..ಪಿ.ಸಿ.ಒ. ಮತ್ತು ಟಿ.ಎಚ್.ಡಿ.ಸಿ.ಐ.ಎಲ್. ಗಳಿಗೆ ಇಂಧನ ಸಚಿವಾಲಯದ ದಿನಾಂಕ 04-04-2006 ಮತ್ತು 01-09-2006 ರ ಆದೇಶಗಳ ಅಂಗೀಕಾರದ ಪರಿಣಾಮ  ವೇತನ ಶ್ರೇಣಿ ಸಕ್ರಮೀಕರಣಕ್ಕೆ ಸಂಪುಟದ ಅನುಮೋದನೆ ಕೋರುವುದರ ಹೊರತು ಬೇರೆ ದಾರಿ ಇರಲಿಲ್ಲ. 



(Release ID: 1560278) Visitor Counter : 73