ಹಣಕಾಸು ಸಚಿವಾಲಯ

ಭಾರತ ಮತ್ತು ಜಪಾನ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆಗೆ ಸಂಪುಟದ ಅನುಮೋದನೆ

Posted On: 10 JAN 2019 8:46PM by PIB Bengaluru

ಭಾರತ ಮತ್ತು ಜಪಾನ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆಗೆ ಸಂಪುಟದ ಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತ ಮತ್ತು ಜಪಾನ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆ (ಬಿಎಸ್ಎ)ಯ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ. ಅಲ್ಲದೇ 75 ಶತಕೋಟಿ ಅಮೆರಿಕನ್ ಡಾಲರ್ ಗರಿಷ್ಠ ಮೊತ್ತಕ್ಕಾಗಿ ಆರ್.ಬಿ.ಐ. ಮತ್ತು ಜಪಾನ್ ಬ್ಯಾಂಕ್ ನಡುವೆ ದ್ವಿಪಕ್ಷೀಯ ಅದಲು ಬದಲು ವ್ಯವಸ್ಥೆಯ ಒಪ್ಪಂದಕ್ಕೆ ಸಹಿ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್ ಗೆ ಅಧಿಕಾರ ನೀಡಿದೆ. 

ಪ್ರಮುಖ ಅಂಶಗಳು:

ವಿದೇಶಿ ವಿನಿಮಯದಲ್ಲಿ ಅಲ್ಪಾವಧಿಯ ಕೊರತೆಯನ್ನು ಪೂರೈಸಲು ಸೂಕ್ತವಾದ ಸಮತೋಲನದ ಪಾವತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶಕ್ಕಾಗಿ, ದೇಶೀಯ ಕರೆನ್ಸಿಗೆ 75 ಶತಕೋಟಿ ಅಮೆರಿಕನ್ ಡಾಲರ್ ಗಳ ಗರಿಷ್ಠ ಮೊತ್ತವನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಮರು ವಿನಿಮಯ ಮಾಡುವ ಸಲುವಾಗಿ.ಅದಲು ಬದಲು ವ್ಯವಸ್ಥೆಯು ಭಾರತ ಮತ್ತು ಜಪಾನ್ ನಡುವಿನ ಒಪ್ಪಂದವಾಗಿದೆ. 

ಪ್ರಯೋಜನಗಳು:

ಬಿ.ಎಸ್.ಎ. ತೊಡಕಿನ ಸಮಯದಲ್ಲಿ ಪರಸ್ಪರರಿಗೆ ನೆರವಾಗಲು ಮತ್ತು ಅಂತಾರಾಷ್ಟ್ರೀಯ ವಿಶ್ವಾಸವನ್ನು ಪುನರ್ ಸ್ಥಾಪಿಸಲು ವ್ಯೂಹಾತ್ಮಕ ಉದ್ದೇಶದ ಭಾರತ ಮತ್ತು ಜಪಾನ್ ನಡುವಿನ ಪರಸ್ಪರ ಸಹಕಾರಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಈ ಸೌಲಭ್ಯವು ಭಾರತಕ್ಕೆ ಅಗತ್ಯ ಬಿದ್ದಾಗ ಒಪ್ಪಿತ ಮೊತ್ತದ ಲಭ್ಯ ಬಂಡವಾಳದ ಬಳಕೆಗೆ ಅವಕಾಶ ನೀಡುತ್ತದೆ. ಈ ವ್ಯವಸ್ಥೆ ಕಾರ್ಯಗತವಾದಾಗ, ವಿದೇಶೀ ಬಂಡವಾಳ ಪಡೆಯುವಲ್ಲಿ ಭಾರತೀಯ ಕಂಪನಿಗಳ ಭವಿಷ್ಯ ಸುಧಾರಿಸುತ್ತದೆ, ಇದರಿಂದ ದೇಶದ ವಿನಿಮಯ ದರದ ಸ್ಥಿರತೆಯಲ್ಲಿ ಹೆಚ್ಚಿನ ವಿಶ್ವಾಸವಿರುತ್ತದೆ. ಬ್ಯಾಲೆನ್ಸ್ ಆಫ್ ಪೇಮೆಂಟ್ (ಬಿಒಪಿ) ಯಿಂದ ಎದುರಾಗುವ ತೊಂದರೆಗಳ ಮೇಲೆ ಭೀತಿಗೊಳಿಸುವಂತಹ ಅದಲು ಬದಲಿನಿಂದ ದೊರಕುವ ದೇಶೀಯ ಕರೆನ್ಸಿಯ ಮೇಲೆ ಊಹಾತ್ಮಕ ದಾಳಿಗಳನ್ನು ಇದು ತಡೆಗಟ್ಟುತ್ತದೆ ಮತ್ತು ವಿನಿಮಯ ದರ ಚಂಚಲತೆಯನ್ನು ನಿರ್ವಹಿಸಲು ಆರ್.ಬಿ.ಐ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 

ಈ ವ್ಯವಸ್ಥೆಯು ಭಾರತ ಮತ್ತು ಜಪಾನ್ ನಡುವೆ ಪರಸ್ಪರ ಆರ್ಥಿಕ ಸಹಕಾರದಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ ಮತ್ತು ವಿಶೇಷ ವ್ಯೂಹಾತ್ಮಕ ಮತ್ತು ಜಾಗತಿಕ ಪಾಲುದಾರಿಕೆಯಾಗಿದೆ.
 

***


(Release ID: 1559510)
Read this release in: English , Urdu , Hindi , Tamil , Telugu