ಸಂಪುಟ

ವಿಜಯ, ದೇನಾ ಮತ್ತು  ಬ್ಯಾಂಕ್ ಆಫ್ ಬರೋಡಾ  ವಿಲೀನದೊಂದಿಗೆ ಭಾರತೀಯ ಬ್ಯಾಂಕಿಂಗ್  ವ್ಯವಸ್ಥೆಯಲ್ಲಿ ಹಿಂದೆಂದೂ ಜರುಗದ  ಮೂರು ರೀತಿಯ ಬ್ಯಾಂಕುಗಳ  ವಿಲೀನಕ್ಕೆ ಸಂಪುಟದ ಅಂಗೀಕಾರ.

Posted On: 02 JAN 2019 5:55PM by PIB Bengaluru

ವಿಜಯ, ದೇನಾ ಮತ್ತು  ಬ್ಯಾಂಕ್ ಆಫ್ ಬರೋಡಾ  ವಿಲೀನದೊಂದಿಗೆ ಭಾರತೀಯ ಬ್ಯಾಂಕಿಂಗ್  ವ್ಯವಸ್ಥೆಯಲ್ಲಿ ಹಿಂದೆಂದೂ ಜರುಗದ  ಮೂರು ರೀತಿಯ ಬ್ಯಾಂಕುಗಳ  ವಿಲೀನಕ್ಕೆ ಸಂಪುಟದ ಅಂಗೀಕಾರ.

 

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಇಂದು ಬ್ಯಾಂಕ್ ಆಫ್ ಬರೋಡಾ , ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್  ಗಳ  ವಿಲೀನಕ್ಕೆ ಅನುಮೋದನೆ ನೀಡಿತು. ಬ್ಯಾಂಕ್ ಆಫ್ ಬರೋಡಾ  ವಿಲೀನವನ್ನು ಸ್ವೀಕರಿಸಿದ ಮತ್ತು ವಿಜಯಾ ಬ್ಯಾಂಕ್ ಹಾಗು ದೇನಾ ಬ್ಯಾಂಕುಗಳು ವಿಲೀನಗೊಂಡ ಬ್ಯಾಂಕುಗಳಾಗಿವೆ.

 

ಈ ಏಕೀಕರಿಸುವಿಕೆಯ ವಿಲೀನ ಭಾರತದಲ್ಲಿ ಬ್ಯಾಂಕುಗಳ ಮೊದಲ ತ್ರಿವಿಧ ವಿಲೀನವಾಗಿದೆ ಮತ್ತು ಒಗ್ಗೂಡಿಸಿದ ಬ್ಯಾಂಕ್ ಭಾರತದ ಎರಡನೇ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಆಗಿದೆ.

 

ವಿಲೀನವು ಆರ್ಥಿಕ ವ್ಯವಸ್ಥೆಯಲ್ಲಿ  ಜಾಗತಿಕವಾಗಿ ಸ್ಪರ್ಧಾ ಸಾಮರ್ಥ್ಯದ ಬ್ಯಾಂಕನ್ನು ರೂಪಿಸಲು ಸಹಾಯ ಮಾಡಲಿದೆ. ಮತ್ತು ವ್ಯಾಪಕ ರೀತಿಯ ಸಮೀಕರಣದ ಸಾಧ್ಯತೆಯನ್ನು ಅನಾವರಣ ಮಾಡಲಿದೆ. ವ್ಯಾಪಕವಾದ ಜಾಲ ನೆರವು, ಕಡಿಮೆ ವೆಚ್ಚದ ಠೇವಣಿಗಳು, ಮತ್ತು ಮೂರು ಬ್ಯಾಂಕುಗಳ ಅಂಗ ಸಂಸ್ಥೆಗಳು ಹೊಸ ಸಂಸ್ಥೆಯನ್ನು ಗ್ರಾಹಕ ನೆಲೆ , ಮಾರುಕಟ್ಟೆ ತಲುಪುವಿಕೆ , ಕಾರ್ಯಾಚರಣಾ ದಕ್ಷತೆ, ವಿಸ್ತಾರ ವ್ಯಾಪ್ತಿಯ ಉತ್ಪನ್ನಗಳ ಗುಚ್ಚ ಮತ್ತು ಸೇವೆಗಳಿಂದಾಗಿ ಮತ್ತು ಗ್ರಾಹಕರಿಗೆ ಸುಧಾರಿತ ಸಂಪರ್ಕ ಲಭ್ಯತೆಯನ್ನು ಒದಗಿಸುವಂತಹ ಸಂಯುಕ್ತ ವ್ಯವಸ್ಥೆಗಳೊಂದಿಗೆ ಬಲಿಷ್ಟ   ಸಂಸ್ಥೆಯಾಗಿ ರೂಪಿಸಲಿವೆ.

 

ವಿಲೀನ ಯೋಜನೆಯ ಪ್ರಮುಖಾಂಶಗಳು:

 

(a) ವಿಜಯಾ ಬ್ಯಾಂಕ್ ಮತ್ತು ದೇನಾ ಬ್ಯಾಂಕ್  ಗಳು  ವಿಲೀನಗೊಳ್ಳುವ ಬ್ಯಾಂಕುಗಳು ಮತ್ತು ಬಿ.ಒ.ಬಿ.ಯು  ವಿಲೀನವನ್ನು ಸ್ವೀಕರಿಸುವ ಬ್ಯಾಂಕ್

 

 (b) ಯೋಜನೆ 1.4.2019 ರಿಂದ ಜಾರಿಗೆ ಬರುತ್ತದೆ.

 

 (c) ಯೋಜನೆ ಜಾರಿಯೊಂದಿಗೆ  ವಿಲೀನಗೊಳ್ಳುವ ಬ್ಯಾಂಕುಗಳ ಬಾಧ್ಯತೆಗಳು  ವಿಲೀನ   ಸ್ವೀಕರಿಸಿದ ಬ್ಯಾಂಕಿನ ಸೊತ್ತಾಗುತ್ತವೆ. ಎಲ್ಲಾ ವ್ಯಾಪಾರೋದ್ಯಮ, ಆಸ್ತಿಗಳು, ಹಕ್ಕುಗಳು, ಬಾಧ್ಯತೆಗಳು,  ಪರವಾನಗಿಗಳು, ಅನುಮೋದನೆಗಳು ಮತ್ತು ಇತರ ವ್ಯವಸ್ಥೆಗಳು ಮತ್ತು ಎಲ್ಲಾ ಸಾಲಗಳು, ಕರಾರುಗಳು  ವಿಲೀನ  ಸ್ವೀಕರಿಸಿದ ಬ್ಯಾಂಕಿನ ಹೊಣೆಗಾರಿಕೆಗಳಾಗುತ್ತವೆ.

 

(d)  ವಿಲೀನ ಗೊಂಡ ಬ್ಯಾಂಕಿನ ಪ್ರತೀ ಖಾಯಂ ಮತ್ತು ಸಕ್ರಮಗೊಂಡ ಅಧಿಕಾರಿ ಅಥವಾ ಸಿಬ್ಬಂದಿಗಳು  ವಿಲೀನ   ಸ್ವೀಕರಿಸಿದ ಬ್ಯಾಂಕಿನ ಅಧಿಕಾರಿ ಅಥವಾ ಸಿಬ್ಬಂದಿಯಾಗಿ ಅಧಿಕಾರ ಯಾ ಸೇವೆಗಳಲ್ಲಿ ಮುಂದುವರಿಯುತ್ತಾರೆ.  ವಿಲೀನಗೊಂಡ ಬ್ಯಾಂಕುಗಳ ಅಧಿಕಾರಿಗಳು/ ಸಿಬ್ಬಂದಿಗಳಿಗೆ ಲಭಿಸುವ  ವೇತನ ಮತ್ತು ಇತರ ಭತ್ತೆಗಳು ಅವರು  ವಿಲೀನಗೊಳ್ಳುವುದಕ್ಕೆ ಮೊದಲು ಆಯಾ ಬ್ಯಾಂಕುಗಳಲ್ಲಿ ಪಡೆಯುತ್ತಿದ್ದುದಕ್ಕಿಂತ ಕಡಿಮೆ ಪ್ರಮಾಣದವಾಗಿರಬಾರದು.

 

( e)  ವಿಲೀನವನ್ನು ಸ್ವೀಕರಿಸಿದ ಬ್ಯಾಂಕಿನ ಮಂಡಳಿಯು ವಿಲೀನಗೊಂಡ ಬ್ಯಾಂಕುಗಳ ಎಲ್ಲಾ ಸಿಬ್ಬಂದಿಗಳ ಮತ್ತು ಅಧಿಕಾರಿಗಳ ಹಿತರಕ್ಷಣೆಯನ್ನು ಖಾತ್ರಿಪಡಿಸತಕ್ಕದ್ದು.

 

(f)  ವಿಲೀನವನ್ನು ಸ್ವೀಕರಿಸಿದ ಬ್ಯಾಂಕು ,  ವಿಲೀನಗೊಂಡ ಬ್ಯಾಂಕುಗಳ ಶೇರುದಾರರಿಗೆ ಶೇರು ವಿನಿಮಯ ಅನುಪಾತದ ಆಧಾರದಲ್ಲಿ ಶೇರುಗಳನ್ನು ನೀಡತಕ್ಕದ್ದು.  ವಿಲೀನ   ಸ್ವೀಕರಿಸಿದ ಮತ್ತು ವಿಲೀನಗೊಂಡ ಬ್ಯಾಂಕುಗಳ ಶೇರುದಾರರು ಶೇರು ವಿನಿಮಯ ಅನುಪಾತಕ್ಕೆ ಸಂಬಂಧಿಸಿ ತಮ್ಮ ಕುಂದು ಕೊರತೆಗಳೇನಾದರೂ ಇದ್ದರೆ ತಜ್ಞರ ಸಮಿತಿಯ ಮೂಲಕ ಸಲ್ಲಿಸಬಹುದು. 

 

ವಿಲೀನಗೊಂಡ ಬ್ಯಾಂಕುಗಳ ವ್ಯವಸ್ಥೆಯಿಂದ ಲಭ್ಯವಾಗುವ ಕೆಲವು ಶಕ್ತಿಗಳು.

 

·  ವಿಲೀನಗೊಂಡು ರೂಪುಗೊಂಡ ಬ್ಯಾಂಕ್ ಬದಲಾದ ಪರಿಸ್ಥಿತಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆಯ ಸಾಲ ಆವಶ್ಯಕತೆಯನ್ನು ಪೂರೈಸಲು, ತಲ್ಲಣಗಳನ್ನು, ಆಘಾತಗಳನ್ನು ತಡೆದುಕೊಳ್ಳಲು  ಮತ್ತು ಸಂಪನ್ಮೂಲಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಸಾಧಿಸಲು ಹೆಚ್ಚು ಶಕ್ತವಾಗಿರುತ್ತದೆ. ಆರ್ಥಿಕ  ಆಡಳಿತದ ವ್ಯಾಪ್ತಿ ಮತ್ತು ವಿಸ್ತಾರ ವ್ಯಾಪ್ತಿಯಿಂದಾಗಿ ಹೆಚ್ಚು ಲಾಭ ಗಳಿಸಲು , ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸಲು , ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮತ್ತು ಉತ್ತಮ ಪದ್ದತಿಗಳನ್ನು ಅನುಸರಿಸಲು ಇದರಿಂದ ಸಾಧ್ಯವಾಗಲಿದೆ. ವೆಚ್ಚ ದಕ್ಷತೆ ಮತ್ತು ಸುಧಾರಿತ ಅಪಾಯ ನಿರ್ವಹಣೆ, ವಿಸ್ತಾರ ಗ್ರಾಹಕ ಲಭ್ಯತೆಯಿಂದಾಗಿ ಹಣಕಾಸು ಸೇರ್ಪಡೆಯೂ ಸಾಧ್ಯವಾಗಲಿದೆ.

 

·  ಇದರಿಂದ ಜಾಗತಿಕ ಬ್ಯಾಂಕುಗಳಿಗೆ ಹೋಲಿಸಬಹುದಾದ ಮಟ್ಟದಲ್ಲಿ ಬ್ಯಾಂಕೊಂದರ ರಚನೆ ಸಾಧ್ಯವಾಗಲಿದೆ ಮತ್ತು ಭಾರತದಲ್ಲಿ  ಮತ್ತು ಜಾಗತಿಕವಾಗಿ ದಕ್ಷತೆಯ ಸ್ಪರ್ದೆ ನೀಡುವುದು ಸಾಧ್ಯವಾಗಲಿದೆ.

 

·  ದೇನಾ ಬ್ಯಾಂಕಿಗೆ ತುಲನಾತ್ಮಕವಾಗಿ ಕಡಿಮೆ ವೆಚ್ಚದ ಸಿ.ಎ.ಎಸ್.ಎ. (ಕಾಸಾ) ಠೇವಣಿಗಳ ಲಭ್ಯತೆ ಇದ್ದು, ವಿಜಯಾ ಬ್ಯಾಂಕಿನ ಲಾಭ ಗಳಿಸುವ ಸಾಮರ್ಥ್ಯ ಮತ್ತು ಬೆಳವಣಿಗೆಗೆ ಅವಶ್ಯ ಬಂಡವಾಳದ ಲಭ್ಯತೆ ಮತ್ತು ಬಿ.ಒ.ಬಿ.ಯ ವಿಸ್ತಾರ ವ್ಯಾಪ್ತಿಯ ಜಾಗತಿಕ ಜಾಲ ಮತ್ತು ಅದರ ಸೇವೆಗಳು ಸಹಿತ ಒಂದೊಂದು ಬ್ಯಾಂಕುಗಳ ಶಕ್ತಿ ಈ ವಿಲೀನದಿಂದ ಮಾರುಕಟ್ಟೆ ತಲುಪುವಿಕೆ, ಕಾರ್ಯಾಚರಣಾ ದಕ್ಷತೆಗಳು, ಮತ್ತು ವ್ಯಾಪಕ ವ್ಯಾಪ್ತಿಯ ಉತ್ಪನ್ನಗಳು ಮತ್ತು ಸೇವೆಗಳಿಂದಾಗಿ ಹೆಚ್ಚು ಪ್ರಯೋಜನಕಾರಿಯಾಗಿ ರೂಪುಗೊಳ್ಳಲಿವೆ.

 

·  ವಿಲೀನಗೊಂಡ ಬ್ಯಾಂಕುಗಳು ವಿಸ್ತಾರ ವ್ಯಾಪ್ತಿಯ ಪ್ರತಿಭಾ ಸಮೂಹವನ್ನು ಹೊಂದಿರುತ್ತವೆ ಮತ್ತು ತ್ವರಿತವಾಗಿ ಡಿಜಿಟಲೀಕರಣಗೊಳ್ಳುತ್ತಿರುವ ಬ್ಯಾಂಕಿಂಗ್ ಕ್ಷೇತ್ರದ ಹಿನ್ನೆಲೆಯಲ್ಲಿ ಈ ಬ್ಯಾಂಕುಗಳು ಹೊಂದಿರುವ ವ್ಯಾಪಕವಾದ ದತ್ತಾಂಶಗಳ ವಿಶ್ಲೇಷಣೆಯಿಂದ  ಸ್ಪರ್ಧಾತ್ಮಕ ಲಾಭವೂ ಲಭ್ಯವಾಗಲಿದೆ. ಈ ಲಾಭಗಳು ವ್ಯಾಪಕ ವ್ಯಾಪ್ತಿಯವುಗಳಾಗಿದ್ದು ಇದರಿಂದ  ಉತ್ಪನ್ನಗಳ ವಿತರಣಾ ವೆಚ್ಚವು ಕಡಿಮೆಯಾಗಲಿದೆ ಮತ್ತು ಅಂಗ ಸಂಸ್ಥೆಗಳ ಮೂಲಕ ಸೇವೆಗಳ ವಿತರಣೆಯಾಗಲಿದೆ.

 

·  ಬಲಿಷ್ಟ ಜಾಲದಿಂದಾಗಿ , ವೈವಿಧ್ಯಮಯ ಉತ್ಪನ್ನಗಳನ್ನು ಬೆಂಬಲಿಸುವ ಸಾಮರ್ಥ್ಯದಿಂದಾಗಿ ಮತ್ತು ಸೇವೆಗಳಿಂದಾಗಿ ಸಾರ್ವಜನಿಕರಿಗೆ ಹೆಚ್ಚು ವಿಸ್ತಾರ ವ್ಯಾಪ್ತಿಯ ಸೇವೆಗಳು ಲಭಿಸಲಿವೆ ಮತ್ತು ಸುಲಭದಲ್ಲಿ ಸಾಲ ಲಭ್ಯವಾಗಲಿದೆ.


(Release ID: 1558362) Visitor Counter : 198