ಸಂಪುಟ

ರಾಷ್ಟ್ರೀಯ ಆರೋಗ್ಯ ಮಿಷನ್ - ಎನ್ಎಚ್ಎಂ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ಉನ್ನತ ಮಟ್ಟದ ಕಾರ್ಯಸಮಿತಿ ನಿರ್ಧಾರಗಳು ಹಾಗೂ ಎನ್ಎಚ್ಎಂನ ಸ್ಥಾಯಿ ಸಮಿತಿ ಕಾರ್ಯಕ್ರಮಗಳಿಗೆ ಸಂಪುಟ ಅನುಮೋದನೆ

Posted On: 02 JAN 2019 6:00PM by PIB Bengaluru

ರಾಷ್ಟ್ರೀಯ ಆರೋಗ್ಯ ಮಿಷನ್ - ಎನ್ಎಚ್ಎಂ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಮತ್ತು ಉನ್ನತ ಮಟ್ಟದ ಕಾರ್ಯಸಮಿತಿ ನಿರ್ಧಾರಗಳು ಹಾಗೂ ಎನ್ಎಚ್ಎಂನ ಸ್ಥಾಯಿ ಸಮಿತಿ ಕಾರ್ಯಕ್ರಮಗಳಿಗೆ ಸಂಪುಟ ಅನುಮೋದನೆ

 

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ,

 

ಸಭೆ ರಾಷ್ಟ್ರೀಯ ಆರೋಗ್ಯ ಮಿಷನ್ - ಎನ್ಎಚ್ಎಂ ಅಡಿಯಲ್ಲಿ ಸಾಧಿಸಿರುವ ಪ್ರಗತಿ ಹಾಗೂ

ಹೊಸ ಉಪಕ್ರಮಗಳು ಮತ್ತು ಉನ್ನತ ಮಟ್ಟದ ಕಾರ್ಯಸಮಿತಿ ನಿರ್ಧಾರಗಳು ಹಾಗೂ ಎನ್ಎಚ್ಎಂನ ಸ್ಥಾಯಿ ಸಮಿತಿಯ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿತು.

 

ಪ್ರಮುಖಾಂಶಗಳು :-

        ಎನ್ಎಚ್ಎಂ ಅಡಿಯಲ್ಲಿ ಕಳೆದ 5 ವರ್ಷಗಳಲ್ಲಿ ಮತ್ತು 2017-18ನೇ ಸಾಲಿನಲ್ಲಿ ಸಾಧಿಸಿರುವ ಪ್ರಗತಿ ಈ ಕೆಳಗಿನಂತಿವೆ.

 

1.      ಹೆರಿಗೆ ಸಂದರ್ಭದಲ್ಲಿ ತಾಯಂದಿರ ಮರಣ ಪ್ರಮಾಣ(ಎಂಎಂಆರ್) ಶೇ.2.7ರಷ್ಟು ಕುಸಿತ, 2010-12ರ ಅವಧಿಯಲ್ಲಿ 178ಇದ್ದದ್ದು, 2014-16ರ ಅವಧಿಯಲ್ಲಿ 130ಕ್ಕೆ ಇಳಿಕೆ.

2.      ನವಜಾತ ಶಿಶು ಮರಣ(ಐಎಂಆರ್) 2016ರಲ್ಲಿ 34ಕ್ಕೆ ಇಳಿಕೆ. ಇದು 2011ರಲ್ಲಿ 44 ಇತ್ತು. ವಾರ್ಷಿಕ ಐಎಂಆರ್ ದರ 2015 ಮತ್ತು 2018ರ ನಡುವಿನ ಅವಧಿಯಲ್ಲಿ ಶೇ.8.1ಕ್ಕೆ ಇಳಿಕೆಯಾಗಿದೆ.

3.      ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ(ಯು5ಎಂಆರ್) 2016ರಲ್ಲಿ 39ಕ್ಕೆ ಇಳಿಕೆಯಾಗಿದೆ. ಇದು 2011ರಲ್ಲಿ 55 ಇತ್ತು. ವಾರ್ಷಿಕ ಯು5ಎಂಆರ್ ದರ 2015-16ರಲ್ಲಿ ಶೇ. 9.3ಕ್ಕೆ ಇಳಿದಿದೆ.

4.      ಒಟ್ಟಾರೆ ಸಂತಾನೋತ್ಪತ್ತಿ ದರ(ಟಿಎಫ್ಆರ್) 2016ರಲ್ಲಿ ಶೇ.2.3ಕ್ಕೆ ಇಳಿದಿದೆ. 2011ರಲ್ಲೂ ಸಹ ಶೇ.2.3ರಷ್ಟಿತ್ತು. 2011-16ರ ನಡುವಿನ ಅವಧಿಯಲ್ಲಿ ವಾರ್ಷಿಕ ಟಿಎಫ್ಆರ್ ದರ ಶೇ.1.7ರಷ್ಟು ಕುಸಿದಿದೆ ಎಂಬುದನ್ನು ಗಮನಿಸಲಾಗಿದೆ ಮತ್ತು ಇದಲ್ಲದೆ ಹಲವು ಕಾಯಿಲೆ ಸಂಬಂಧಿ ಆರೋಗ್ಯ ಸೂಚ್ಯಂಕಗಳಲ್ಲೂ ಗಮನಾರ್ಹ ಸುಧಾರಣೆ ಕಾಣಲಾಗುತ್ತಿದೆ. ಅವುಗಳೆಂದರೆ

1.      ಮಲೇರಿಯಾಗೆ ಸಂಬಂಧಿಸಿದಂತೆ ವಾರ್ಷಿಕ ಪ್ಯಾರಾಸೈಟ್ ಇನ್ಸಿಡೆನ್ಸ್(ಎಪಿಐ) 2011ರಲ್ಲಿ 1.10ಇತ್ತು. ಅದು 2016ರಲ್ಲಿ 0.84ಗೆ ಕುಸಿದಿದೆ. 2017ರಲ್ಲಿ ಮಲೇರಿಯಾ ರೋಗದ ತೀವ್ರತೆ ಶೇ.30ರಷ್ಟು ತಗ್ಗಿದೆ ಮತ್ತು ಮಲೇರಿಯಾ ಸಂಬಂಧಿ ಸಾವುಗಳ ಸಂಖ್ಯೆಯೂ ಕೂಡ ಶೇ.70ರಷ್ಟು ಕಡಿಮೆಯಾಗಿದೆ.

2.      ಕ್ಷಯರೋಗ ಕೂಡ 2017ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 204 ಮಂದಿಗೆ ಕುಸಿದಿದೆ. ಈ ಪ್ರಮಾಣ 2013ರಲ್ಲಿ 234 ಇತ್ತು. ಹಾಗೆಯೇ 2017ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಯಲ್ಲಿ 204 ಕ್ಷಯರೋಗಿಗಳಿದ್ದರೆ, 2016ರಲ್ಲಿ ಆ ಪ್ರಮಾಣ 211 ಇತ್ತು. ಹಾಗೆಯೇ ಕ್ಷಯರೋಗದಿಂದಾಗಿ ಆಗುತ್ತಿದ್ದ ಸಾವುಗಳ ಸಂಖ್ಯೆಯೂ ಕೂಡ 2016ರಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 32ಇದ್ದದ್ದು, 2017ರಲ್ಲಿ ಅದು 21ಕ್ಕೆ ಕುಸಿದಿದೆ.

3.      ತೊನ್ನು ರೋಗ ನಿಯಂತ್ರಣದಲ್ಲಿ ಮಹತ್ವದ ಸಾಧನೆ ಮಾಡಲಾಗಿದ್ದು, ರಾಷ್ಟ್ರಮಟ್ಟದಲ್ಲಿ ಒಂದು ಲಕ್ಷ ಜನಸಂಖ್ಯೆಗೆ ಒಬ್ಬರಲ್ಲಿ ಈ ರೋಗವಿದೆ. ತೊನ್ನು ರೋಗ ನಿವಾರಣೆ ಸಾಧಿಸಿರುವ ಜಿಲ್ಲೆಗಳ ಸಂಖ್ಯೆ 2017ರಲ್ಲಿ 554 ಇತ್ತು. 2018ರ ಮಾರ್ಚ್ ವೇಳೆಗೆ 571ಕ್ಕೆ ಏರಿಕೆಯಾಗಿದೆ.

4.      ಕಾಲ ಅಜರ್ ರೋಗ ಎಲ್ಲ ಬ್ಲಾಕ್ ಗಳಲ್ಲೂ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ ಒಂದಕ್ಕಿಂತ ಕಡಿಮೆ ಇದೆ. ಆ ಕಾಯಿಲೆ ಹೆಚ್ಚಾಗಿದ್ದ ಬ್ಲಾಕ್ ಗಳಲ್ಲೂ ಸಹ ಒಂದು ಲಕ್ಷ ಜನಸಂಖ್ಯೆಗೆ ಒಬ್ಬರಿಗಿಂತ ಅಧಿಕ ಜನಸಂಖ್ಯೆಯಲ್ಲಿ ಆ ರೋಗವಿದ್ದು 2017ರಲ್ಲಿ 72 ಮಂದಿಯಲ್ಲಿತ್ತು, 2016ರಲ್ಲಿ 94 ಮಂದಿಯಲ್ಲಿತ್ತು.

5.      ತಂಬಾಕು ಬಳಕೆಯಿಂದ ಬರುವ ಕಾಯಿಲೆಗಳಾದ, ನಾಲ್ಕು ಪ್ರಮುಖ ಸಾಂಕ್ರಾಮಿಕವಲ್ಲದ(ಎನ್ ಸಿ ಡಿ) ಕಾಯಿಲೆಗಳಾದ ಕ್ಯಾನ್ಸರ್, ಮಧುಮೇಹ, ಪಾರ್ಶ್ವವಾಯು ಮತ್ತು ಹೃದಯಸಂಬಂಧಿ ರೋಗಗಳು ಹಾಗೂ ತೀವ್ರ ಶ್ವಾಸಕೋಶದ ತೊಂದರೆಗಳನ್ನೂ ಸಹ ನಿಯಂತ್ರಿಸಲಾಗಿದೆ. ತಂಬಾಕು ಬಳಕೆ ಪ್ರಮಾಣ 2009-10ರಲ್ಲಿ ಶೇ.34.6ರಷ್ಟಿತ್ತು, 2016-17ರಲ್ಲಿ ಆ ಪ್ರಮಾಣ ಶೇ.28.6ಕ್ಕೆ ಅಂದರೆ ಶೇ.6ರಷ್ಟು ಇಳಿಕೆ ಮಾಡುವ ಮೂಲಕ ಈ ರೋಗಗಳ ನಿಯಂತ್ರಣದಲ್ಲಿ ಯಶಸ್ಸು ಸಾಧಿಸಲಾಗಿದೆ.

 

*****************

 



(Release ID: 1558323) Visitor Counter : 119