ಸಂಪುಟ

ಅಂಚೆ ಚೀಟಿಯ ಜಂಟಿ ಬಿಡುಗಡೆಗೆ ಭಾರತ ಮತ್ತು ಆರ್ಮೇನಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 06 DEC 2018 9:22PM by PIB Bengaluru

ಅಂಚೆ ಚೀಟಿಯ ಜಂಟಿ ಬಿಡುಗಡೆಗೆ ಭಾರತ ಮತ್ತು ಆರ್ಮೇನಿಯಾ ನಡುವೆ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಭಾರತ ಮತ್ತು ಆರ್ಮೇನಿಯಾ ನಡುವೆ ಜಂಟಿಯಾಗಿ ಅಂಚೆ ಚೀಟಿ ಬಿಡುಗಡೆ ಕುರಿತಂತೆ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದದ ಬಗ್ಗೆ ಕೇಂದ್ರ ಸಚಿವ ಸಂಪುಟಕ್ಕೆ ವಿವರಿಸಲಾಯಿತು. ಈ ತಿಳಿವಳಿಕೆ ಒಪ್ಪಂದಕ್ಕೆ 2018ರ ಜೂನ್ ನಲ್ಲಿ ಅಂಕಿತ ಹಾಕಲಾಗಿತ್ತು. 

ತಿಳಿವಳಿಕೆ ಒಪ್ಪಂದದ ರೀತ್ಯ, ಸಂವಹನ ಸಚಿವಾಲಯದ ಅಂಚೆ ಇಲಾಖೆ ಮತ್ತು ಆರ್ಮೇನಿಯಾದ ರಾಷ್ಟ್ರೀಯ ಅಂಚೆ ಕಾರ್ಯನಿರ್ವಾಹಕ ("ಹೇಪೋಸ್ಟ್" ಸಿಜೆಎಸ್ಸಿ) ಭಾರತ-ಆರ್ಮೇನಿಯಾದ ಅಂಚೆ ಚೀಟಿಯನ್ನು "ನೃತ್ಯ" ಜಂಟಿ ವಿಷಯಕ್ಕೆ ಸಂಬಂಧಿಸಿದಂತೆ ಜಂಟಿಯಾಗಿ ಬಿಡುಗಡೆ ಮಾಡಲು ಪರಸ್ಪರ ಒಪ್ಪಿದ್ದು, ಈ ಜಂಟಿ ಅಂಚೆ ಚೀಟಿಗಳನ್ನು 2018ರ ಆಗಸ್ಟ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. 

ಈ ಸ್ಮರಣಾರ್ಥ ಅಂಚೆ ಚೀಟಿಗಳು ಭಾರತದ "ಮಣಿಪುರಿ ನೃತ್ಯ" ಮತ್ತು ಆರ್ಮೇನಿಯಾದ "ಹೋವ್ ಆರ್ಕ್ ನೃತ್ಯ"ವನ್ನು ಬಿಂಬಿಸಿವೆ. 


(Release ID: 1555363) Visitor Counter : 126