ಸಂಪುಟ

ಭಾರತ ಮತ್ತು ವಿದೇಶಗಳ ನಡುವಿನ ಪರಿಷ್ಕೃತ ಮಾದರಿ ಒಪ್ಪಂದಕ್ಕೆ ಸಂಪುಟ ಅನುಮೋದನೆ ಹಣಕಾಸು ಗುಪ್ತಚರ ಘಟಕ(ಎಫ್ಐಯು)ಗಳ ನಡುವೆ ಮಾಹಿತಿ ವಿನಿಮಯ

Posted On: 06 DEC 2018 9:38PM by PIB Bengaluru

ಭಾರತ ಮತ್ತು ವಿದೇಶಗಳ ನಡುವಿನ ಪರಿಷ್ಕೃತ ಮಾದರಿ ಒಪ್ಪಂದಕ್ಕೆ ಸಂಪುಟ ಅನುಮೋದನೆ 

ಹಣಕಾಸು ಗುಪ್ತಚರ ಘಟಕ(ಎಫ್ಐಯು)ಗಳ ನಡುವೆ ಮಾಹಿತಿ ವಿನಿಮಯ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಭಾರತದ ಹಣಕಾಸು ವಿಚಕ್ಷಣಾ ಘಟಕ(ಎಫ್ಐಯು-ಇಂಡ್) ಮತ್ತು ವಿದೇಶಿ ಹಣಕಾಸು ಗುಪ್ತಚರ ಸಂಸ್ಥೆಗಳ ನಡುವೆ ಮಾಹಿತಿ ವಿನಿಮಯದ ಪರಿಷ್ಕೃತ ಮಾದರಿ ಒಪ್ಪಂದಕ್ಕೆ ಅನುಮೋದನೆ ನೀಡಿದೆ. ಈ ಪರಿಷ್ಕೃತ ಮಾದರಿ ಒಪ್ಪಂದ 2014ರ ಎಗ್ಮೋಂಟ್ ಗ್ರೂಪ್ ಸೆಕ್ರೇಟರಿಯೇಟ್ ನ ಕರಡು ಆಧರಿಸಿದೆ. 

 

 

ಹಿನ್ನೆಲೆ:-

        ಎಫ್ಐಯು – ಇಂಡ್ (FIU-IND)  ನ ಪ್ರಮುಖ ಕಾರ್ಯಗಳೆಂದರೆ, ವಿದೇಶಿ ಹಣಕಾಸು ವಿಚಕ್ಷಣಾ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸುವುದು, ವಿದೇಶಿ ಹಣಕಾಸು ಗುಪ್ತಚರ ಸಂಸ್ಥೆಗಳ ಮನವಿಗಳನ್ನು ಪರಿಶೀಲಿಸುವುದು, ವಿದೇಶಿ ಎಫ್ಐಯುಗಳಿಗೆ ಮಾಹಿತಿ ವಿನಿಮಯ ಮಾಡುವುದು,  ವಿದೇಶಿ ಎಫ್ಐಯುಗಳ ಜೊತೆ ಸಂಬಂಧವನ್ನು ಸ್ಥಾಪಿಸುವುದು ಮತ್ತು ಕಾಯ್ದುಕೊಳ್ಳುವುದು ಮತ್ತು ವಿದೇಶಿ ಎಫ್ಐಯುಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಮಾತುಕತೆಗಳನ್ನು ನಡೆಸುವುದು ಮತ್ತು ಅವುಗಳನ್ನು ಕಾರ್ಯರೂಪಗೊಳಿಸುವುದು. ಬಹುತೇಕ ವಿದೇಶಿ ಎಫ್ಐಯುಗಳ ಜೊತೆ ಮಾಹಿತಿ ಹಂಚಿಕೆ ಒಪ್ಪಂದಕ್ಕೆ ಸಹಿ ಹಾಕುವುದು ಅತ್ಯಗತ್ಯವಾಗಿದೆ. 

 

****



(Release ID: 1555155) Visitor Counter : 98