ಸಂಪುಟ

ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಕ್ಷೇತ್ರದ ಸಹಕಾರ ಕುರಿತಂತೆ ಆಗಿರುವ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ

Posted On: 22 NOV 2018 1:34PM by PIB Bengaluru

ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಕ್ಷೇತ್ರದ ಸಹಕಾರ ಕುರಿತಂತೆ ಆಗಿರುವ ಒಪ್ಪಂದದ ಬಗ್ಗೆ ಸಂಪುಟಕ್ಕೆ ವಿವರಣೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಉಜ್ಬೇಕಿಸ್ತಾನ್ ನಡುವೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆ ಕ್ಷೇತ್ರದ ಸಹಕಾರ ಕುರಿತಂತೆ ಆಗಿರುವ ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು. ಈ ಒಪ್ಪಂದಕ್ಕೆ 2018ರ ಅಕ್ಟೋಬರ್ 1ರಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಉಜ್ಬೇಕಿಸ್ತಾನ್ ಅಧ್ಯಕ್ಷ ಶ್ರೀ ಶೌಕತ್ ಮಿರಯೋಯೆವ್ ಅವರ ಸಮ್ಮುಖದಲ್ಲಿ ಭಾರತದ ಪರವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ ಸಚಿವ ಡಾ. ಹರ್ಷವರ್ಧನ್ ಮತ್ತು ಉಜ್ಬೇಕಿಸ್ತಾನದ ಕಡೆಯಿಂದ ಅಲ್ಲಿನ ನಾವಿನ್ಯ ಅಭಿವೃದ್ಧಿ ಸಚಿವ ಶ್ರೀ ಇಬ್ರಾಹಿಂ ಅಬ್ದುರಖುಮನೌ ಅಂಕಿತ ಹಾಕಿದ್ದರು.


ಪ್ರಯೋಜನಗಳು :

ಈ ಒಪ್ಪಂದಕ್ಕೆಹಾಕಿರುವ ಅಂಕಿತ, ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಹೊಸ ಅಧ್ಯಾಯ ತೆರೆದಿದೆ, ಏಕೆಂದರೆ ಎರಡೂ ಪಕ್ಷಕಾರರು ಈಗ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಸ್ಪರ ಹಿತಾಸಕ್ತಿಗಳನ್ನು ಒಗ್ಗೂಡಿಸುವ ಮೂಲಕ ಪೂರಕವಾದ ಸಾಮರ್ಥ್ಯಗಳನ್ನು ಪ್ರಚೋದಿಸುತ್ತಿದ್ದಾರೆ. ಈ ಒಪ್ಪಂದದ ಉದ್ದೇಶ ಎರಡೂ ರಾಷ್ಟ್ರಗಳ ನಡುವೆ ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯ ಕ್ಷೇತ್ರದಲ್ಲಿ ಸಹಕಾರ ಉತ್ತೇಜಿಸುವುದಾಗಿದೆ. ಭಾರತ ಮತ್ತು ಉಜ್ಬೇಕಿಸ್ತಾನದ ವೈಜ್ಞಾನಿಕ ಸಂಸ್ಥೆಗಳ, ಶೈಕ್ಷಣಿಕ ರಂಗದ, ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳ ಮತ್ತು ಕೈಗಾರಿಕೆಗಳ ಸಂಶೋಧಕರುಗಳು ಇದರ ಬಾಧ್ಯಸ್ಥರಲ್ಲಿ ಸೇರುತ್ತಾರೆ. ಕೃಷಿ ಮತ್ತು ಆಹಾರ ವಿಜ್ಞಾನ ಹಾಗೂ ತಂತ್ರಜ್ಞಾನ; ಎಂಜಿನಿಯರಿಂಗ್ ವಿಜ್ಞಾನ; ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಆನ್ವಯಿಕ ಗಣಿತ ಮತ್ತು ದತ್ತಾಂಶ ವಿಜ್ಞಾನ ಹಾಗೂ ತಂತ್ರಜ್ಞಾನ; ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನ;  ಭೌತಿಕ ವಿಜ್ಞಾನ ; ಜೀವ ವಿಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ; ಭೌತಶಾಸ್ತ್ರ ಮತ್ತು ಖಭೌತ ವಿಜ್ಞಾನ ಹಾಗೂ ಇಂಧನ, ಜಲ, ಹವಾಗುಣ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ತತ್ ಕ್ಷಣದ ಸಹಯೋಗಕ್ಕೆ ಸಾಮರ್ಥ್ಯವಿರುವ ಕ್ಷೇತ್ರಗಳು ಎಂದು ಗುರುತಿಸಲಾಗಿದೆ.

***


(Release ID: 1553516)