ಪ್ರಧಾನ ಮಂತ್ರಿಯವರ ಕಛೇರಿ

ಸಿಂಗಾಪುರಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

Posted On: 13 NOV 2018 5:40PM by PIB Bengaluru

ಸಿಂಗಾಪುರಕ್ಕೆ ತೆರಳುವ ಮುನ್ನ ಪ್ರಧಾನಮಂತ್ರಿ ಅವರ ಹೇಳಿಕೆ

 

ಸಿಂಗಾಪುರಕ್ಕೆ ಭೇಟಿ ನೀಡಲು ತೆರಳುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಯ ಪಠ್ಯ ಹೀಗಿದೆ.

“ಭಾರತ-ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸಲು ನಾನು ನವೆಂಬರ್ 14-15ರಂದು ಸಿಂಗಾಪುರಕ್ಕೆ ಭೇಟಿ ನೀಡಲಿದ್ದೇನೆ. ಇದರ ಜೊತೆಗೆ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ನಾಯಕರ ಸಭೆ (Regional Comprehensive Economic Partnership Leaders' Meeting) ಯಲ್ಲೂ ಭಾಗವಹಿಸಲಿದ್ದೇನೆ.

 

ಅಸಿಯಾನ್ (ಎ.ಎಸ್.ಇ.ಎ.ಎನ್) ಸದಸ್ಯ ದೇಶಗಳ ಜೊತೆ ಮತ್ತು ಇನ್ನೂ ವಿಶಾಲವಾಗಿ ಭಾರತ-ಫೆಸಿಫಿಕ್ ವಲಯದಲ್ಲಿ, ನಮ್ಮ ನಿಗದಿತ ಕಾರ್ಯಕ್ರಮಗಳನ್ನು  ಬಲಿಷ್ಠಗೊಳ್ಳುವ ನಿಟ್ಟಿನಲ್ಲಿ ನಮ್ಮ ಬದ್ಧತೆಗಳ ಮುಂದುವರಿಯುವಿಕೆಯ ಸಂಕೇತವಾಗಿ ನಾನು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಇತರ ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳ ನಾಯಕರೊಂದಿಗೆ  ಮಾತುಕತೆ ಯನ್ನು ನಾನು  ಎದುರು ನೋಡುತ್ತಿದ್ದೇನೆ.

 

ನಾನು  ನವೆಂಬರ್ 14ರಂದು ಸಿಂಗಾಪುರ ಫಿನ್ಟೆಕ್ ಫೆಸ್ಟಿವಲ್ ನಲ್ಲಿ ಪ್ರಧಾನ ಭಾಷಣ ಮಾಡಲಿದ್ದೇನೆ. ಪ್ರಪ್ರಥಮ ಬಾರಿಗೆ ಸರಕಾರದ ಮುಖ್ಯಸ್ಥನೊಬ್ಬನಿಗೆ ಈ ಅವಕಾಶ ದೊರಕಿದ ಗೌರವ ನನಗೆ ಲಭಿಸಿದೆ. ಈ ಉತ್ಸವ ಆರ್ಥಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿಶ್ವದ ಅತಿದೊಡ್ಡ ಸಮಾರಂಭವಾಗಿದೆ  . ತ್ವರಿತ-ಪ್ರಗತಿಯ ಕ್ಷೇತ್ರಗಳಲ್ಲಿ ಭಾರತದ ಸದೃಢತೆಯನ್ನು ಪ್ರದರ್ಶಿಸುವ ಸೂಕ್ತ ವೇದಿಕೆ ಇದಾಗಿದೆ.  ಮಾತ್ರವಲ್ಲದೆ,   ಆವಿಷ್ಕಾರ ಮತ್ತು ಅಭಿವೃದ್ಧಿಗಳ ಪ್ರೋತ್ಸಾಹಕ್ಕಾಗಿ ಜಾಗತಿಕ ಪಾಲುದಾರಿಕೆಗಳನ್ನು ಇದು ಬೆಸೆಯುತ್ತದೆ .

 

ಭೇಟಿಯ ಅವಧಿಯಲ್ಲಿ, ಜಂಟಿ ಭಾರತ-ಸಿಂಗಾಪುರ ಹಾಕಥೋನ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮತ್ತು ವಿಜೇತರೊಂದಿಗೆ ಸಂವಾದ ನಡೆಸುವ ಅವಕಾಶವೂ ನನಗೆ ದೊರೆಯಲಿದೆ. ನಮ್ಮ ಯುವಜನತೆಗೆ ಸರಿಯಾದ ಪ್ರೋತ್ಸಾಹ ಮತ್ತು ಪೋಷಣೆ ನೀಡುವ ವಾತಾವರಣವನ್ನು ಕಲ್ಪಿಸಿದರೆ ಮುಂದೆ ಮಾನವೀಯತೆಯ ಸವಾಲುಗಳಿಗೆ ಪರಿಹಾರ ದೊರಕಿಸುವ ಜಾಗತಿಕ ನಾಯಕತ್ವದ ಅರ್ಹತೆಗಳೂ ಅವರಲ್ಲಿ  ಮೂಡಲಿವೆ   ಎಂಬ ನಂಬಿಕೆ ನನ್ನದಾಗಿದೆ. 

 

ನನ್ನ ಸಿಂಗಾಪುರದ ಭೇಟಿಯಿಂದ ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಪೂರ್ವ ಏಷ್ಯಾ ಶೃಂಗಸಭೆಯ ದೇಶಗಳಲ್ಲಿ ಭಾರತದ ಪಾಲುದಾರಿಕೆಗೆ ಹೊಸ ಚೈತನ್ಯ ಮೂಡಲಿದೆ ಎಂಬ ವಿಶ್ವಾಸ ನನಗಿದೆ.

 

ನಾನು ಸಿಂಗಾಪುರಕ್ಕೆ ತೆರಳುವ ಮುನ್ನ, ಈ ವರ್ಷದ ಅಸಿಯಾನ್ (ಎ.ಎಸ್.ಇ.ಎ.ಎನ್) ಅಧ್ಯಕ್ಷತೆ ವಹಿಸಿದ ಸಿಂಗಾಪುರಕ್ಕೆ ನನ್ನ ಹೃದಯಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ . ಅಸಿಯಾನ್ (ಎ.ಎಸ್.ಇ.ಎ.ಎನ್) ಮತ್ತು ಸಂಬಂಧಿತ ಶೃಂಗಸಭೆಗಳ  ಯಶಸ್ವೀ ಆತಿಥ್ಯಕ್ಕಾಗಿ  ನನ್ನ ಅಭಿನಂದನೆಗಳು”.  

 

###



(Release ID: 1552694) Visitor Counter : 70