ಪ್ರಧಾನ ಮಂತ್ರಿಯವರ ಕಛೇರಿ

ಉತ್ತರಾಖಂಡದ ಹರ್ಸಿಲ್ ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಮಂತ್ರಿ

Posted On: 07 NOV 2018 10:05AM by PIB Bengaluru

ಉತ್ತರಾಖಂಡದ ಹರ್ಸಿಲ್ ನಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಮಂತ್ರಿ

 

 

ಉತ್ತರಾಖಂಡದ ಹರ್ಸಿಲ್ ನಲ್ಲಿ ಭಾರತೀಯ ಸೇನೆ ಮತ್ತು ಐ.ಟಿ.ಬಿ.ಪಿ.ಯ ಯೋಧರೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬ ಆಚರಿಸಿದರು.

 

ಯೋಧರಿಗೆ ಹಬ್ಬದ ಶುಭಾಶಯ ಕೋರಿದ ಪ್ರಧಾನಮಂತ್ರಿ ಅವರು,   ಸಂಪರ್ಕರಹಿತ, ಎತ್ತರದ, ಮಂಜು ಪ್ರದೇಶದಲ್ಲಿ  ಕಾರ್ಯನಿರ್ವಹಿಸುವ ಯೋಧರಿಗಿರುವ  ಕರ್ತವ್ಯನಿಷ್ಠೆ  ದೇಶದ ಶಕ್ತಿಯನ್ನು ವೃದ್ಧಿಸುತ್ತದೆ. 125 ಕೋಟಿ ಭಾರತೀಯರ ಭವಿಷ್ಯ ಮತ್ತು ಕನಸುಗಳನ್ನು ಸುರಕ್ಷಿತಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ದೀಪಾವಳಿಯು ದೀಪಗಳ ಹಬ್ಬವಾಗಿದೆ; ಇದು ಶಿಷ್ಠತೆಯ ಬೆಳಕನ್ನು ಪಸರಿಸುತ್ತದೆ ಮತ್ತು ಭಯವನ್ನು   ಹೋಗಲಾಡಿಸುತ್ತದೆ, ಜನತೆಯಲ್ಲಿ ನಿರ್ಭೀತಿ ಮತ್ತು ಸುರಕ್ಷತೆಯ ಭಾವನೆಗಳು ಪಸರಿಸಲು ಸಹಾಯಕಾರಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.  

 

ಗುಜರಾತಿನ ಮುಖ್ಯಮಂತ್ರಿಯಾದಾಗಿನಿಂದ, ನಾನು ದೀಪಾವಳಿಯಂದು ಯೋಧರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಪ್ರಧಾನಮಂತ್ರಿ ಹೇಳಿದರು. ಕೆಲವು ವರ್ಷಗಳ ಹಿಂದೆ ಕೈಲಾಸ ಮಾನಸ ಸರೋವರ ಯಾತ್ರೆ ಸಂದರ್ಭದಲ್ಲಿ, ಐಟಿಬಿಪಿಯ ಯೋಧರೊಂದಿಗೆ ಅವರು ನಡೆಸಿದ ಸಂವಾದಗಳ ಕುರಿತಾಗಿ ಪ್ರಧಾನಮಂತ್ರಿ ಅವರು ಮಾತನಾಡಿದರು. 

 

ರಕ್ಷಣಾ ಕ್ಷೇತ್ರದಲ್ಲಿ ಭಾರತ ಮಹತ್ತರ ದಾಪುಗಾಲಿಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ಒ.ಆರ್.ಒ.ಪಿ. ( ಒಂದು ಶ್ರೇಣಿ, ಒಂದು ಪಿಂಚಣಿ) ಸೇರಿದಂತೆ ಮಾಜಿ ಸೈನಿಕರ ಯೋಗಕ್ಷೇಮಕ್ಕಾಗಿ ಕೈಗೊಂಡ ಹಲವಾರು ಕ್ರಮಗಳ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು.  

 

ವಿಶ್ವಸಂಸ್ಥೆಯ ಶಾಂತಿ ಕಾರ್ಯಯೋಜನೆಗಳಲ್ಲಿ ಭಾರತೀಯ ಸಶಸ್ತ್ರ ಪಡೆ ವಿಶ್ವದಾದ್ಯಂತ ಗೌರವ ಮತ್ತು ಪ್ರಶಂಸೆ ಪಡೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು.  

 

ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಯೋಧರಿಗೆ ಸಿಹಿ ಹಂಚಿದರು. ಅವರಿಗೆ ದೀಪಾವಳಿಯ ಶುಭಾಶಯ ಕೋರಲು ಬಂದು ನೆರೆದಿದ್ದ  ಜನಸಮೂಹದೊಂದಿಗೆ ಪ್ರಧಾನಮಂತ್ರಿ ಅವರು  ಸಂವಾದ ನಡೆಸಿದರು.



(Release ID: 1552054) Visitor Counter : 70