ಸಂಪುಟ

ಪ್ರವಾಸೋದ್ಯಮ ಕ್ಷೇತ್ರದ ಸಹಕಾರ ವರ್ಧನೆಗಾಗಿ ಭಾರತ ಮತ್ತು ಕೊರಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

प्रविष्टि तिथि: 01 NOV 2018 11:42AM by PIB Bengaluru

ಪ್ರವಾಸೋದ್ಯಮ ಕ್ಷೇತ್ರದ ಸಹಕಾರ ವರ್ಧನೆಗಾಗಿ ಭಾರತ ಮತ್ತು ಕೊರಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪ್ರವಾಸೋದ್ಯಮ ಕ್ಷೇತ್ರದ ಸಹಕಾರ ವರ್ಧನೆಗಾಗಿ ಭಾರತ ಮತ್ತು ಕೊರಿಯಾ ನಡುವೆ ತಿಳಿವಳಿಕೆ ಒಪ್ಪಂದ (ಎಂ.ಓ.ಯು.)ಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.

 

ಈ ತಿಳಿವಳಿಕೆ ಒಪ್ಪಂದದ ಪ್ರಮುಖ ಉದ್ದೇಶಗಳು:

 

a.      ಪ್ರವಾಸೋದ್ಯಮ ವಲಯದಲ್ಲಿ ದ್ವಿಪಕ್ಷೀಯ ಸಹಕಾರ ವಿಸ್ತರಿಸಲು

 

b.       ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ದತ್ತಾಂಶ ಮತ್ತು ಮಾಹಿತಿಯ ವಿನಿಮಯ ಹೆಚ್ಚಿಸಲು

 

c.      ಹೊಟೆಲ್ ಗಳು ಮತ್ತು ಪ್ರವಾಸ ಏರ್ಪಡಿಸುವ ಸಂಸ್ಥೆಗಳು ಸೇರಿದಂತೆ ಪ್ರವಾಸೋದ್ಯಮ ವಲಯದ ಬಾಧ್ಯಸ್ಥರೊಂದಿಗೆ ಸಹಕಾರ ಉತ್ತೇಜಿಸಲು.

 

d.      ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿನ ಸಹಕಾರಕ್ಕಾಗಿ ವಿನಿಮಯ ಕಾರ್ಯಕ್ರಮ ರೂಪಿಸಲು.

 

e.      ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯದಲ್ಲಿ ಹೂಡಿಕೆಯನ್ನು ಉತ್ತೇಜಿಸಲು.

 

f.       ಎರಡೂ ಕಡೆಯ ಪ್ರವಾಸ ಉತ್ತೇಜಿಸಲು ಪ್ರವಾಸ ಏರ್ಪಡಿಸುವವರು/ಮಾಧ್ಯಮ/ಅಭಿಪ್ರಾಯ ಮೂಡಿಸುವವರ ವಿನಿಮಯ ಭೇಟಿಗಾಗಿ.

 

g.      ಪ್ರಚಾರ, ಮಾರುಕಟ್ಟೆ, ಗಮ್ಯಸ್ಥಾನ ಅಭಿವೃದ್ಧಿ ಮತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಅನುಭವವನ್ನು ವಿನಿಮಯ ಮಾಡಿಕೊಳ್ಳಲು.

 

h.      ಪರಸ್ಪರ ರಾಷ್ಟ್ರಗಳಲ್ಲಿನ ಪ್ರವಾಸ ಉತ್ಸವಗಳು/ವಸ್ತುಪ್ರದರ್ಶನದಲ್ಲಿ ಭಾಗಿಯಾಗುವುದನ್ನು ಉತ್ತೇಜಿಸಲು ಮತ್ತು

 

i.        ಸುರಕ್ಷಿತ, ಗೌರವಯುತ ಮತ್ತು ಸುಸ್ಥಿರ ಪ್ರವಾಸೋದ್ಯಮ ಉತ್ತೇಜಿಸಲು

 

ಹಿನ್ನೆಲೆ:

 

ಭಾರತ ಮತ್ತು ಕೊರಿಯಾ ದೇಶಗಳು ದೀರ್ಘ ಕಾಲೀನ ಆರ್ಥಿಕ ಮತ್ತು ಬಲವಾದ ರಾಜತಾಂತ್ರಿಕ ಬಾಂಧವ್ಯವನ್ನು ಅನುಭವಿಸುತ್ತಿವೆ. ಎರಡೂ ಕಡೆಯವರು ಈಗ ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಸಹಕಾರವರ್ಧನೆಗಾಗಿ ಸ್ಥಾಪಿತ ಬಾಂಧವ್ಯ ಸ್ಥಾಪನೆ ಮತ್ತು ಹೆಚ್ಚಿನ ಅಭಿವೃದ್ಧಿ ಹಾಗೂ ವರ್ಧನೆಯ ಇಂಗಿತವನ್ನು ಹೊಂದಿವೆ.

 

ಪೂರ್ವ ಏಷ್ಯಾದಿಂದ ಭಾರತಕ್ಕೆ ಪ್ರಮುಖ ಪ್ರವಾಸಿ ಉತ್ಪಾದನಾ ಮಾರುಕಟ್ಟೆಗಳಲ್ಲಿ ಕೊರಿಯಾ ಕೂಡ ಒಂದಾಗಿದೆ. ಕೊರಿಯಾದೊಂದಿಗೆ ಈ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕುವುದರಿಂದ ಈ ಮೂಲ ಮಾರುಕಟ್ಟೆಯಿಂದ ಬರುವವರ ಹೆಚ್ಚಳಕ್ಕೆ ಕಾರಣವಾಗಲಿದೆ.


(रिलीज़ आईडी: 1551675) आगंतुक पटल : 112
इस विज्ञप्ति को इन भाषाओं में पढ़ें: English , Marathi , Bengali , Assamese , Gujarati , Tamil , Telugu , Malayalam