ಸಂಪುಟ

ಭೋಪಾಲದ ಬದಲು ಸೀಹೋರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಸಂಸ್ಥೆಯನ್ನು ಸ್ಥಾಪಿಸಲು ಸಂಪುಟದ ಅನುಮೋದನೆ. 

Posted On: 03 OCT 2018 6:55PM by PIB Bengaluru

ಭೋಪಾಲದ ಬದಲು ಸೀಹೋರ್ ಜಿಲ್ಲೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಸಂಸ್ಥೆಯನ್ನು ಸ್ಥಾಪಿಸಲು ಸಂಪುಟದ ಅನುಮೋದನೆ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ರಾಷ್ಟ್ರೀಯ ಮಾನಸಿಕ ಆರೋಗ್ಯ ಪುನರ್ವಸತಿ ಸಂಸ್ಥೆಯನ್ನು (ಎನ್.ಐ.ಎಂ.ಎಚ್.ಆರ್.) ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸ್ಥಾಪಿಸುವುದಕ್ಕೆ ಸಂಬಂಧಿಸಿ ಈ ಮೊದಲು 16-05-2018ರಂದು ತೆಗೆದುಕೊಂಡ ನಿರ್ಧಾರವನ್ನು ಆಂಶಿಕವಾಗಿ ಪರಿಷ್ಕರಿಸಿ ಸೀಹೋರ್ ಜಿಲ್ಲೆಯಲ್ಲಿ (ಭೋಪಾಲ್-ಸೀಹೋರ್ ಹೆದ್ದಾರಿ) ಸ್ಥಾಪಿಸಲು ಅನುಮೋದನೆ ನೀಡಿತು. 

ಪ್ರಯೋಜನಗಳು: 

ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಎನ್.ಐ.ಎಂ.ಎಚ್.ಆರ್.ದೇಶದಲ್ಲಿಯೇ ಮೊದಲನೆಯದಾಗಿರಲಿದೆ. ಇದು ಮಾನಸಿಕ ಆರೋಗ್ಯ ಪುನರ್ವಸತಿ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲದ ಸಾಮರ್ಥ್ಯ ವರ್ಧನೆಯ ಮತ್ತು ಸಂಶೋಧನಾ ವಲಯದ ಶ್ರೇಷ್ಠ ಸಂಸ್ಥೆಯಾಗಿ ಸೇವೆ ಸಲ್ಲಿಸದೆ ಮಾತ್ರವಲ್ಲದೆ ಅದು ಮಾನಸಿಕ ಆನಾರೋಗ್ಯ ಇರುವ ವ್ಯಕ್ತಿಗಳ ಸಮರ್ಪಕ ಪುನರ್ವಸತಿ ಮಾದರಿಗಳನ್ನು ಸಲಹೆ ಮಾಡುವ ಸಂಸ್ಥೆಯೂ ಆಗಿರಲಿದೆ. 



(Release ID: 1549403) Visitor Counter : 79