ಸಂಪುಟ

ಭೋಪಾಲ್ ನಲ್ಲಿ ಮೆಟ್ರೋ ರೈಲು ಸಂಪರ್ಕಕ್ಕೆ ಭಾರೀ ಉತ್ತೇಜನ 

Posted On: 03 OCT 2018 6:56PM by PIB Bengaluru

ಭೋಪಾಲ್ ನಲ್ಲಿ ಮೆಟ್ರೋ ರೈಲು ಸಂಪರ್ಕಕ್ಕೆ ಭಾರೀ ಉತ್ತೇಜನ 

ಎರಡು ಕಾರಿಡಾರ್ ಒಳಗೊಂಡ ಭೋಪಾಲ್ ಮೆಟ್ರೋ ರೈಲು ಯೋಜನೆಗೆ ಸಂಪುಟ ಅನುಮೋದನೆ; 

(i) ಕರೋಂಡ್ ವೃತ್ತದಿಂದ ಏಮ್ಸ್ ವರೆಗೆ 

(ii) ಭಾದ್ ಭಾದಾ ವೃತ್ತದಿಂದ ರತ್ನಗಿರಿ ತಿರಹ ವರೆಗೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಟ್ಟು 27.87 ಕಿಲೋಮೀಟರ್ ಒಳಗೊಂಡ ಎರಡು ಕಾರಿಡಾರ್ ಗಳ ಭೋಪಾಲ್ ಮೆಟ್ರೋ ರೈಲು ಯೋಜನೆಗೆ ಅನುಮೋದನೆ ನೀಡಿತು. (i) ಕರೋಂಡ್ ವೃತ್ತದಿಂದ ಏಮ್ಸ್ ವರೆಗೆ(14.99 ಕಿ.ಮೀ.) ಮತ್ತು (ii) ಭಾದ್ ಭಾದಾ ವೃತ್ತದಿಂದ ರತ್ನಗಿರಿ ತಿರಹದ ವರೆಗೆ(12.88 ಕಿ.ಮೀ.) ಇದು ಭೋಪಾಲ್ ನಗರ ಪ್ರದೇಶದ ಬಹುತೇಕ ಕ್ಲಸ್ಟರ್ ಪ್ರದೇಶ ಹಾಗೂ ಪ್ರಮುಖ ಸಾರ್ವಜನಿಕ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿದೆ. 

ವಿವರ : 

1. ಕರೋಂಡ್ ವೃತ್ತದಿಂದ ಏಮ್ಸ್ ವರೆಗಿನ ಕಾರಿಡಾರ್ ನ ಉದ್ದ 14.99 ಕಿ.ಮೀ.ಇದು ಬಹುತೇಕ ಮೇಲುಸೇತುವೆ ಮತ್ತು ಭಾಗಶಃ ಸುರಂಗ ಮಾರ್ಗ(ಭೋಪಾಲ್ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣದ ಬಳಿ) ಮತ್ತು 16 ನಿಲ್ದಾಣಗಳನ್ನು ಒಳಗೊಂಡಿದೆ.(14 ನಿಲ್ದಾಣಗಳು ಮೇಲ್ಸೇತುವೆ ಮೇಲೆ ಮತ್ತು ಎರಡು ಸುರಂಗ ಮಾರ್ಗದಲ್ಲಿ). 

2. ಭಾದ್ ಭಾದಾ ವೃತ್ತದಿಂದ ರತ್ನಗಿರಿ ತಿರಹದ ವರೆಗಿನ ಕಾರಿಡಾರ್ ನ ಉದ್ದ 12.88 ಕಿ.ಮೀ. ಇದರಲ್ಲಿ 14 ನಿಲ್ದಾಣಗಳು ಒಳಗೊಂಡಿವೆ. 

3. ಈ ಯೋಜನೆಯಿಂದ ನಗರದಲ್ಲಿ ಅತ್ಯಂತ ತ್ವರಿತ ಮತ್ತು ಸುರಕ್ಷ ಹಾಗೂ ಕೈಗೆಟಕುವ ದರದಲ್ಲಿ ನಿರಂತರ ಲಭ್ಯವಿರುವ ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ಉದ್ದೇಶವಿದೆ. ಜೊತೆಗೆ ಇದರಿಂದ ಅಪಘಾತಗಳು ತಗ್ಗುವುದಲ್ಲದೆ, ಮಾಲಿನ್ಯ ನಿಯಂತ್ರಣವಾಗಲಿದೆ, ಪ್ರಯಾಣದ ಅವಧಿ ತಗ್ಗಲಿದೆ, ಇಂಧನ ಬಳಕೆ ಉಳಿತಾಯವಾಗಲಿದೆ, ಸುಸ್ಥಿರ ಅಭಿವೃದ್ಧಿಗಾಗಿ ಭೂಬಳಕೆ ಮಾಡಿಕೊಂಡು ನಗರ ವಿಸ್ತರಣೆ ಮಾಡುವುದರಿಂದ ಸಮಾಜಘಾತುಕ ಕೃತ್ಯಗಳು ನಿಯಂತ್ರಣಗೊಳ್ಳಲಿವೆ. 

4. ಈ ಯೋಜನೆಗೆ ಸುಮಾರು 6,941.40 ಕೋಟಿ ಎಂದು ಅಂದಾಜಿಸಲಾಗಿದೆ ಮತ್ತು ಇದನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 

ಪ್ರಯೋಜನಗಳು : 

ಭೋಪಾಲ್ ನಗರ ಪ್ರದೇಶದಲ್ಲಿರುವ ಸುಮಾರು 23 ಲಕ್ಷ ಜನಸಂಖ್ಯೆ ಭೋಪಾಲ್ ಮೆಟ್ರೋ ರೈಲು ಯೋಜನೆಯಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಯೋಜನ ಪಡೆಯಲಿದ್ದಾರೆ. ಕಾರಿಡಾರ್ ಗಳು ಮಲ್ಟಿ ಮಾಡಲ್ ಸೇರ್ಪಡೆ ಒಳಗೊಂಡಿದ್ದು, ರೈಲು ನಿಲ್ದಾಣ ಹಾಗೂ ಬಿ ಆರ್ ಟಿ ಎಸ್ ಸ್ಟೇಷನ್ ಗಳಿಗೆ ಸಂಪರ್ಕ ಕಲ್ಪಿಸಲಿದೆ ಮತ್ತು ಇಂಟರ್ ಮೀಡಿಯೇಟ್ ಸಾರ್ವಜನಿಕ ಸಾರಿಗೆ ಮತ್ತು ಮೋಟಾರೇತರ ಸಾರಿಗೆ ವ್ಯವಸ್ಥೆಗೆ ಬಸ್ ಗಳ ಪೂರಕ ಸಂಪರ್ಕಜಾಲವನ್ನು ಒದಗಿಸಲಾಗುವುದು. ಅಭಿವೃದ್ಧಿ ಹಕ್ಕು ವರ್ಗಾವಣೆ(ಟಿಡಿಆರ್), ಸಂಚಾರ ಆಧಾರಿತ ಅಭಿವೃದ್ಧಿ ಕಾರ್ಯತಂತ್ರ(ಟಿಒಡಿ) ಮೂಲಕ ವ್ಯಾಲ್ಯು ಕ್ಯಾಪ್ಚರ್ ಫೈನಾನ್ಸಿಂಗ್ ಜೊತೆಗೆ ಬಾಡಿಗೆ ಮತ್ತು ಜಾಹಿರಾತುಗಳಿಂದ ಆದಾಯವನ್ನು ಗಳಿಸುವ ಉದ್ದೇಶವನ್ನು ಯೋಜನೆಯಡಿ ಹೊಂದಲಾಗಿದೆ. 

ಈ ಮೆಟ್ರೋ ರೈಲು ಯೋಜನೆಯಿಂದ ವಸತಿ ಪ್ರದೇಶಗಳು ಸೇರಿದಂತೆ ಮೆಟ್ರೋ ರೈಲು ಕಾರಿಡಾರ್ ಪ್ರದೇಶಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಭಾಗದ ಜನ ಪ್ರಯಾಣಕ್ಕೆ ರೈಲನ್ನು ಬಳಸುವುದರಿಂದ ಅವರು ತಮ್ಮ ನೆರೆಹೊರೆಯ ಪ್ರದೇಶಗಳಿಗೆ ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ. 

ಕರೋಂಡ್ ನಿಂದ ಏಮ್ಸ್ ವೃತ್ತದ ವರೆಗಿನ ಕಾರಿಡಾರ್, ನಗರದ ಹೃದಯ ಭಾಗದಲ್ಲಿ ಹಾದುಹೋಗುವ ಜೊತೆಗೆ ಅತ್ಯಂತ ಹೆಚ್ಚಿನ ಜನಸಂದಣಿ ಇರುವ ಬಸ್ ನಿಲ್ದಾಣ, ರೈಲು ನಿಲ್ದಾಣ ಮತ್ತು ಏಮ್ಸ್ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಭಾದ್ ಭಾದಾ ವೃತ್ತದಿಂದ ರತ್ನಗಿರಿ ತಿರಹದ ವರೆಗಿನ ಕಾರಿಡಾರ್ ಸ್ಮಾರ್ಟ್ ಸಿಟಿ ಪ್ರದೇಶಾಭಿವೃದ್ಧಿ(ಎಬಿಡಿ), ಜೊತಗೆ ಬಿಎಫ್ಐಇಎಲ್ ಮತ್ತು ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದೆ. ಮೆಟ್ರೋ ನಿವಾಸಿಗಳಿಗೆ, ಪ್ರಯಾಣಿಕರಿಗೆ, ಕೈಗಾರಿಕೆಗಳ ಕೆಲಸಗಾರರಿಗೆ, ಹೊರಗಿನವರಿಗೆ ಮತ್ತು ಪ್ರವಾಸಿಗರಿಗೆ ಪರಿಸರ ಸ್ನೇಹಿ ಮತ್ತು ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿದೆ. 

ಪ್ರಗತಿ : 

· ಈ ಯೋಜನೆಯ ಅನುಷ್ಠಾನಕ್ಕೆ ವಿಶೇಷ ಉದ್ದೇಶದ ನಿಗಮ, ಮಧ್ಯಪ್ರದೇಶ ಮೆಟ್ರೋ ರೈಲು ನಿಗಮ ನಿಯಮಿತ(ಎಂಪಿಎಂಆರ್ ಸಿ ಎಲ್) ಸ್ಥಾಪಿಸಲಾಗಿದೆ. 

· ಭೋಪಾಲ್ ಮೆಟ್ರೋ ರೈಲು ನಿಗಮಕ್ಕೆ ಭಾರತ ಸರ್ಕಾರದಿಂದ ಭಾಗಶಃ ಆರ್ಥಿಕ ನೆರವು ನೀಡಲಾಗುವುದು ಮತ್ತು ಮಧ್ಯಪ್ರದೇಶ ಸರ್ಕಾರ ಕೂಡ ಸಮಾನ ಷೇರುಗಳನ್ನು ಹೊಂದಲಿದೆ ಹಾಗೂ ಐರೋಪ್ಯ ಬಂಡವಾಳ ಬ್ಯಾಂಕ್(ಇಐಬಿ)ಯಿಂದ ಭಾಗಶಃ ಸಾಲ ಪಡೆಯಲಾಗುವುದು. 

· ಭೋಪಾಲ್ ಮೆಟ್ರೋ ರೈಲು ಯೋಜನೆಗೆ ಮೆಸರ್ಸ್ ಡಿಬಿ ಇಂಜಿನಿಯರಿಂಗ್ ಮತ್ತು ಕನ್ಸಲ್ಟಿಂಗ್, ಜಿಎಂಬಿಎಚ್ ಕನ್ಸ್ ಟೋರಿಯಂ ಹಾಗೂ ಮೆಸರ್ಸ್ ಲೂಯಿಸ್ ಬರ್ಗೆರ್ - ಎಸ್ಎಎಸ್ ಮತ್ತು ಮೆಸರ್ಸ್ ಜಿಯೋ ಡಾಟಾ ಇಂಜಿನಿಯರಿಂಗ್ – ಎಸ್ ಪಿ ಎ - ಸಂಸ್ಥೆಗಳನ್ನು ಜನರಲ್ ಕನ್ಸಲ್ಟೆಂಟ್ಆಗಿ ನೇಮಿಸಲಾಗಿದೆ. 

· ಮೊದಲ ಸಿವಿಲ್ ವರ್ಕ್ ಪ್ಯಾಕೇಜ್ ಗೆ ಟೆಂಡರ್ ಗಳನ್ನು ಕರೆಯಲಾಗಿದೆ ಮತ್ತು ಕೆಲಸ ಸದ್ಯದಲ್ಲೇ ಆರಂಭವಾಗಲಿದೆ. 



(Release ID: 1549400) Visitor Counter : 66