ಸಂಪುಟ

ಭಾರತ ಮತ್ತು ರಶ್ಯಾ ನಡುವೆ ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮದಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿರುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ. 

Posted On: 03 OCT 2018 7:00PM by PIB Bengaluru

ಭಾರತ ಮತ್ತು ರಶ್ಯಾ ನಡುವೆ ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮದಲ್ಲಿ ದ್ವಿಪಕ್ಷೀಯ ಸಹಕಾರಕ್ಕಾಗಿರುವ ತಿಳುವಳಿಕಾ ಒಡಂಬಡಿಕೆಗೆ ಸಂಪುಟದ ಅಂಗೀಕಾರ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಭಾರತ ಮತ್ತು ರಶ್ಯಾ ನಡುವೆ ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮದಲ್ಲಿ ದ್ವಿಪಕ್ಷೀಯ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಗೆ ಅಂಗೀಕಾರ ನೀಡಿತು. ಈ ತಿಳುವಳಿಕಾ ಒಡಂಬಡಿಕೆಗೆ ರಶ್ಯಾದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಅಂಕಿತ ಹಾಕಲಾಗುವುದು. 

ಸಾರಿಗೆ ಮತ್ತು ಹೆದ್ದಾರಿ ವಲಯದಲ್ಲಿ ಸಹಕಾರಕ್ಕಾಗಿ ಔಪಚಾರಿಕ ವೇದಿಕೆಯನ್ನು ಸ್ಥಾಪಿಸಲು ಮತ್ತು ಅಭಿವೃದ್ದಿಪಡಿಸಲು ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮದಲ್ಲಿ ತಿಳುವಳಿಕಾ ಒಡಂಬಡಿಕೆಯನ್ನು ಉಭಯ ದೇಶಗಳು ಜಂಟಿಯಾಗಿ ಚರ್ಚಿಸಿ ಅಂತಿಮಗೊಳಿಸಿವೆ. 

ರಸ್ತೆ ಸಾರಿಗೆ ಮತ್ತು ರಸ್ತೆ ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಪರಸ್ಪರ ಸಹಕಾರದಿಂದಾಗಿ ಎರಡೂ ದೇಶಗಳಿಗೆ ಲಾಭವಾಗಲಿದೆ. ರಶ್ಯಾದೊಂದಿಗೆ ಸಹಕಾರ ಹೆಚ್ಚಳ, ವಿನಿಮಯ ಮತ್ತು ಸಹಯೋಗವು ಸಂಪರ್ಕ ಕ್ಷೇತ್ರದಲ್ಲಿ ಧೀರ್ಘಾವಧಿ ಕ್ರಿಯಾಶೀಲ ದ್ವಿಪಕ್ಷೀಯ ಸಂಬಂಧವನ್ನು ಸ್ಥಾಪಿಸಲಿದೆ ಮತ್ತು ರಸ್ತೆ ಸಾರಿಗೆ, ರಸ್ತೆ ಕೈಗಾರಿಕೋದ್ಯಮ ಮತ್ತು ಬುದ್ದಿಮತ್ತೆಯ ಸಾರಿಗೆ ವ್ಯವಸ್ಥೆ (ಐ.ಟಿ.ಎಸ್.) ಕ್ಷೇತ್ರದಲ್ಲಿಯೂ ಸಹಕಾರ ಬಲಗೊಳ್ಳಲಿದೆ. ಇದು ರಸ್ತೆ ಮೂಲಸೌಕರ್ಯಗಳ ಯೋಜನೆ ಮತ್ತು ನಿರ್ವಹಣೆಗೆ ಸಹಾಯವಾಗಲಿದೆ ಮಾತ್ರವಲ್ಲದೆ ರಸ್ತೆ ಜಾಲ ನಿರ್ವಹಣೆ, ಸಾರಿಗೆ ನೀತಿ, ತಂತ್ರಜ್ಞಾನ ಮತ್ತು ದೇಶದಲ್ಲಿ ಹೆದ್ದಾರಿಗಳ ನಿರ್ಮಾಣ ಮತ್ತು ಕಾರ್ಯಾಚರಣೆ ಗುಣಮಾನಕಗಳ ರೂಪಿಸುವಿಕೆಗೂ ನೆರವಾಗಲಿದೆ. ಭಾರತ ಮತ್ತು ರಶ್ಯಾ ನಡುವೆ ದ್ವಿಪಕ್ಷೀಯ ಬಾಂಧವ್ಯ ಬಲಪಡಿಸುವ ನಿಟ್ಟಿನಲ್ಲಿಯೂ ಇದು ದೂರಗಾಮಿ ಪರಿಣಾಮ ಬೀರಲಿದೆ. 

ಹಿನ್ನೆಲೆ: 

ಭಾರತ ಮತ್ತು ರಶ್ಯಾಗಳು ಬಹಳ ಧೀರ್ಘಕಾಲದಿಂದ ಪರಸ್ಪರ ಬಾಂಧವ್ಯವನ್ನು ಹೊಂದಿವೆ. ಮತ್ತು ಅವುಗಳು ಬಲವಾದ ಆರ್ಥಿಕ ಒಪ್ಪಂದಗಳನ್ನು ವ್ಯೂಹಾತ್ಮಕ ಸಹಭಾಗಿತ್ವದ ಮಟ್ಟದಲ್ಲಿ ನಿರ್ವಹಿಸಿಕೊಂಡು ಬಂದಿವೆ. ರಶ್ಯಾವು ಉಪಗ್ರಹ ಆಧಾರಿತ ಶುಲ್ಕ ವಸೂಲಿ ತಂತ್ರಜ್ಞಾನ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿದೆ. ಅದೇ ರೀತಿಯಲ್ಲಿ ಅವರು ಆಧುನಿಕ ಬುದ್ದಿಮತ್ತೆಯ ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು, ಅದರಲ್ಲಿ ತಕ್ಷಣವೇ ವರದಿ ಲಭ್ಯವಾಗುವಂತೆ ಮೇಲುಸ್ತುವಾರಿ ವ್ಯವಸ್ಥೆಗಳನ್ನು ಅಳವಡಿಸಿಕೊಂಡಿದ್ದಾರೆ. ರಸ್ತೆ ಸಾರಿಗೆ ವಲಯದಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವ ರಶ್ಯಾದ ಅನುಭವ ಸಿದ್ದತೆಯನ್ನು ಪರಿಗಣಿಸಿದಾಗ ಇಂತಹ ಉತ್ತಮ ಅಂಶಗಳನ್ನು ನಿಕಟವಾದ ಸಂವಾದದ ಮೂಲಕ ಕಲಿತುಕೊಳ್ಲುವುದು ಪ್ರಯೋಜನಕಾರಿಯಗಿರುತ್ತದೆ. ಭಾರತ ಈಗ ತನ್ನ ಹೆದ್ದಾರಿ ಮೂಲಸೌಕರ್ಯಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಕ್ಕೆ ತರುತ್ತಿದೆ. ರಸ್ತೆ ಮೂಲಸೌಕರ್ಯಗಳ ಪೂರ್ಣ ಪ್ರಮಾಣದ ಬಳಕೆಗಾಗಿ ಸಾರಿಗೆ ಉತ್ಪಾದಕತೆ ಮತ್ತು ಸುರಕ್ಷೆಯ ಹೆಚ್ಚಳಕ್ಕಾಗಿ ತಂತ್ರಜ್ಞಾನವನ್ನು ಅನುಸರಿಸುವುದು ಅತ್ಯವಶ್ಯವಾಗಿದೆ. ಇದು ಒಟ್ಟು ಸಾಗಾಟದ ಮೆಲಿನ ಖರ್ಚನ್ನೂ ಕಡಿಮೆ ಮಾಡುತ್ತದೆ. ಭಾರತದ ವ್ಯಾಪಕ ಹೆದ್ದಾರಿ ಮತ್ತು ಎಕ್ಸ್ ಪ್ರೆಸ್ ವೇ ಮೂಲಸೌಕರ್ಯಗಳ ಅಭಿವೃದ್ದಿ ಯೋಜನೆಗಳು ರಶ್ಯಾದಲ್ಲಿಯಂತಹ ಮೂಲಸೌಕರ್ಯಗಳ ಅಭಿವೃದ್ದಿಯನ್ನು ಸಾಧಿಸಲು ಅತ್ಯಪೂರ್ವ ಅವಕಾಶಗಳಾಗಿವೆ. ಎರಡು ದೇಶಗಳ ನಡುವಿನ ಸಹಭಾಗಿತ್ವವು ಕಾರ್ಯಾಚರಣೆ ಮಟ್ಟದಲ್ಲಿ ಪರಸ್ಪರ ಸಮಾಲೋಚನೆಗೆ ಒಂದು ವೇದಿಕೆಯನ್ನು ಒದಗಿಸುವುದಲ್ಲದೆ ಎರಡೂ ದೇಶಗಳು ಸದಸ್ಯತ್ವ ಹೊಂದಿರುವ ಎಲ್ಲಾ ಅಂತಾರಾಷ್ಟ್ರೀಯ ಗುಂಪು ಮತ್ತು ವೇದಿಕೆಗಳ ಉಪಕ್ರಮಗಳಿಗೆ ಅನುಕೂಲಕರ ಪೂರಕ ವ್ಯವಸ್ಥೆಯನ್ನು ರೂಪಿಸುತ್ತದೆ.



(Release ID: 1549395) Visitor Counter : 122