ಪ್ರಧಾನ ಮಂತ್ರಿಯವರ ಕಛೇರಿ

ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ನೈರ್ಮಲ್ಯ ಸಮಾವೇಶದ ಸಮಾರೋಪ ಸಭೆಯಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು.

Posted On: 02 OCT 2018 3:35PM by PIB Bengaluru

ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ನೈರ್ಮಲ್ಯ ಸಮಾವೇಶದ ಸಮಾರೋಪ ಸಭೆಯಲ್ಲಿ ಪ್ರಧಾನಮಂತ್ರಿ ಭಾಷಣ ಮಾಡಿದರು.

 

ನವದೆಹಲಿಯಲ್ಲಿಂದು ಜರುಗಿದ ಮಹಾತ್ಮಾ ಗಾಂಧಿ ಅಂತರರಾಷ್ಟ್ರೀಯ ನೈರ್ಮಲ್ಯ ಸಮಾವೇಶದ (ಎಮ್.ಜಿ.ಐ.ಎಸ್.ಸಿ) ಸಮಾರೋಪ ಸಭೆಯಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು. ವಿಶ್ವದಾದ್ಯಂತ ಎಲ್ಲಡೆಯ ನೈರ್ಮಲ್ಯ ಸಚಿವರು ಮತ್ತು ವಾಷ್ ( ಜಲ, ನೈರ್ಮಲ್ಯ ಮತ್ತು ಶುಚಿತ್ವ ) ಕ್ಷೇತ್ರದ ಇತರ ನಾಯಕರನ್ನು  ನಾಲ್ಕು ದಿನಗಳ ಎಮ್.ಜಿ.ಐ.ಎಸ್.ಸಿ ಅಂತರರಾಷ್ಟ್ರೀಯ ಸಮಾವೇಶದ ಸನಿಹಕ್ಕೆ ತಂದಿದೆ. ಪ್ರಧಾನಮಂತ್ರಿ ಅವರು ಡಿಜಿಟಲ್ ವಸ್ತುಪ್ರದರ್ಶನಕ್ಕೆ ಭೇಟಿನೀಡಿದರು, ಹಾಗೂ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಶ್ರೀ ಅಂಟನಿಯೊ ಗುಟೆರ್ರೆಸ್ ಅವರೂ ಜೊತೆಗಿದ್ದರು. ಮಹಾತ್ಮಾಗಾಂಧಿ ಅವರ ಅಚ್ಚುಮೆಚ್ಚಿನ “ವೈಷ್ಣವ ಜನ ತೊ” ಹಾಡು ಆಧಾರಿತ ಸಮಿಶ್ರ ಗಾನ ಸಿಡಿ ಮತ್ತು ಸ್ಮರಣಾ ಅಂಚೆ ಚೀಟಿಗಳನ್ನು ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಪ್ರಧಾನಮಂತ್ರಿ ಅವರು ತಮ್ಮ ಭಾಷಣದಲ್ಲಿ,  “ಮಹಾತ್ಮಾ ಗಾಂಧಿ ಅವರು ಶುಚಿತ್ವಕ್ಕೆ ಸದಾ ಮಹತ್ವದ ಸ್ಥಾನನೀಡಿದ್ದರು” ಎಂದರು. 1945ರಲ್ಲಿ ಪ್ರಕಟವಾದ ಗ್ರಾಮೀಣ ನೈರ್ಮಲ್ಯತೆ ಪ್ರಧಾನ ವಿಷಯವಾಗಿರುವ ಮಹಾತ್ಮಾ ಗಾಂಧಿ ಅವರ “ಸಕಾರಾತ್ಮಕ ಕಾರ್ಯಕ್ರಮಗಳು” ಎಂಬ ಪುಸ್ತಕವನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ನಾವೊಂದು ವೇಳೆ ಸ್ವಚ್ಛಗೊಳಿಸಿಲ್ಲವಾದರೆ, ಶುಚಿಗೊಳಿಸದ ಪರಿಸರ, ಅದು ನಮ್ಮನ್ನು ಅಂತಹ ಪರಿಸ್ಥಿತಿಯನ್ನು ಸ್ವೀಕರಿಸುವ ಹಂತಕ್ಕೊಯ್ಯುತ್ತದೆ. ಆದರೆ ಅದಕ್ಕೆ ವಿರುದ್ಧವಾಗಿ ನಮ್ಮ ಸುತ್ತುಮುತ್ತಲ ಪರಿಸರವನ್ನು ಶುಚಿಗೊಳಿಸಲು ಒಬ್ಬ ವ್ಯಕ್ತಿ ಪ್ರಾರಂಭಿಸಿದರೆ, ಆ ವ್ಯಕ್ತಿಗೆ ಶಕ್ತಿ ತುಂಬುತ್ತದೆ, ಪ್ರತಿರೋಧ ಸಂದರ್ಭಗಳಲ್ಲಿ ರಾಜಿ ಮಾಡಿಕೊಳ್ಳಬೇಕಾಗಿ ಬರುವುದಿಲ್ಲ. ಎಂದು ಪ್ರಧಾನಮಂತ್ರಿ ಹೇಳಿದರು.

 

ಮಹಾತ್ಮಾ ಗಾಂಧಿ ಅವರ ಪ್ರೇರಣೆಯಿಂದ “ಸ್ವಚ್ಛ ಭಾರತ ಮಿಷನ್” ಮುನ್ನಡೆಯಿತು. ಮಹಾತ್ಮಾಗಾಂಧಿ ಅವರಿಂದ ಪ್ರೇರಿತರಾಗಿ ಭಾರತೀಯರು “ಸ್ವಚ್ಛ ಭಾರತ ಮಿಷನ್” ವಿಶ್ವದ ಅತಿದೊಡ್ಡ ಜನತೆಯ ಆಂದೋಲನವನ್ನಾಗಿಸಿದರು. 2014ರಲ್ಲಿದ್ದ 38% ರಷ್ಟಿದ್ದ ಗ್ರಾಮೀಣ ನೈರ್ಮಲ್ಯತೆಯಿಂದು 94%ರಷ್ಟಕ್ಕೇರಿದೆ. ಇಂದು 5 ಲಕ್ಷ ಗ್ರಾಮಗಳು ಬಯಲು ಶೌಚಾಲಯ (ಬಹಿರ್ದೆಶೆ) ಮುಕ್ತವಾಗಿವೆ ಎಂದು ಪ್ರಧಾನಮಂತ್ರಿ ತಿಳಿಸಿದರು.

 

ಸ್ವಚ್ಛ ಭಾರತ ಮಿಷನ್ ಮೂಲಕ ಭಾರತದ ಜನತೆಯ ಜೀವನಶೈಲಿಯಲ್ಲಿಂಟಾದ ಬದಲಾವಣೆಗಳ ಕುರಿತು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಹಾದಿಯಲ್ಲಿ ಭಾರತ ಸಾಗುತ್ತಿದ್ದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಜಗತ್ತಿನ ಶುಚಿಗೊಳಿಸಲು ಅಗತ್ಯವಿರುವ: ರಾಜಕೀಯ ನಾಯಕತ್ವ  (ಪೊಲಿಟಿಕಲ್ ಲೀಡರ್ಶಿಪ್), ಸಾರ್ವಜನಿಕ ನಿಧಿಸಂಗ್ರಹಣೆ (ಪಬ್ಲಿಕ್ ಫಂಡಿಂಗ್), ಪಾಲುಗಾರಿಕೆ (ಪಾರ್ಟ್ನರ್ಶಿಪ್) ಮತ್ತು ಜನತೆಯ ಪಾಲ್ಗೊಳ್ಳುವಿಕೆ (ಪೀಪ್ಲ್ಸ್ ಪಾರ್ಟಿಸಿಪೇಷನ್) ಎಂಬ “4-ಪಿ”ಗಳ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ವಿವರಿಸಿದರು.



(Release ID: 1549393) Visitor Counter : 119