ಸಂಪುಟ

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಭಾರತ ಮತ್ತು ರಷ್ಯಾ ನಡುವೆ ಪರಸ್ಪರ ಸಹಕಾರ ಸಾಧಿಸುವ ಒಪ್ಪಂದಕ್ಕೆ ಸಂಪುಟ ಅನುಮೋದನೆ

Posted On: 03 OCT 2018 6:59PM by PIB Bengaluru

ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದಲ್ಲಿ ಭಾರತ ಮತ್ತು ರಷ್ಯಾ ನಡುವೆ ಪರಸ್ಪರ ಸಹಕಾರ ಸಾಧಿಸುವ ಒಪ್ಪಂದಕ್ಕೆ ಸಂಪುಟ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಭಾರತ ಸರ್ಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕಾ ಸಚಿವಾಲಯದ(ಎಂಎಸ್ಎಂಇ) ಅಡಿ ಬರುವ ಸಾರ್ವಜನಿಕ ವಲಯದ ಉದ್ದಿಮೆ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ನಿಯಮಿತ(ಎನ್ಎಸ್ಐಸಿ) ಮತ್ತು ರಷ್ಯಾದ ಜೆಎಸ್ಇ-ರಷ್ಯಾ ಸಣ್ಣ ಮತ್ತು ಮಧ್ಯಮ ವ್ಯಾಪಾರ ನಿಗಮ(ಆರ್ ಎಸ್ ಎಂ ಬಿ ನಿಗಮ)ದ ನಡುವಿನ ಒಡಂಬಡಿಕೆಗೆ ಅನುಮೋದನೆ ನೀಡಿದೆ. ಮುಂಬರುವ ದಿನಗಳಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ರಷ್ಯಾ ಅಧ್ಯಕ್ಷರ ಭೇಟಿ ವೇಳೆ ಒಪ್ಪಂದಕ್ಕೆ ಸಹಿ ಹಾಕಲಾಗುವುದು.

 

 

ಈ ಒಡಂಬಡಿಕೆಯ ಉದ್ದೇಶವೆಂದರೆ ಎರಡೂ ರಾಷ್ಟ್ರಗಳ ನಡುವೆ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಡುವೆ ಸಹಕಾರವನ್ನು ಉತ್ತೇಜಿಸುವುದಾಗಿದೆ. ಇದು ಎರಡೂ ದೇಶಗಳ ನಡುವಿನ  ಈ ಎಂಎಸ್ಎಂಇ ವಲಯದ ಪರಿಸರ ಮತ್ತು ವ್ಯವಸ್ಥಿತ ನೀತಿ ನಿರೂಪಣೆಗೆ ಸಹಕಾರಿಯಾಗುವ ಜೊತೆಗೆ ಎರಡೂ ದೇಶಗಳು ತಮ್ಮ ತಮ್ಮ ಸಾಮರ್ಥ್ಯ, ಮಾರುಕಟ್ಟೆ, ತಂತ್ರಜ್ಞಾನಗಳು ಮತ್ತು ನೀತಿ ಮತ್ತಿತರ ಅಂಶಗಳನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಇದು ಉಭಯ ದೇಶಗಳ ನಡುವಿನ ಎಂಎಸ್ಎಂಇ ವಲಯದಲ್ಲಿ ತಂತ್ರಜ್ಞಾನ ವರ್ಗಾವಣೆ, ಜಂಟಿ ಸಹಯೋಗ ಮತ್ತು ವ್ಯವಹಾರ ಪಾಲುದಾರಿಕೆ ಸಾಧಿಸುವ ಜೊತೆಗೆ  ಉದ್ದಿಮೆಗಳ ನಡುವೆ ಸಹಕಾರ ವೃದ್ಧಿಯಾಗಲಿದೆ ಮತ್ತು ಸುಸ್ಥಿರ ವ್ಯವಹಾರ ಪಾಲುದಾರಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.  ಸಾಮರ್ಥ್ಯವೃದ್ಧಿ ಉದ್ಯಮಶೀಲತೆಯ ಅಭಿವೃದ್ಧಿಗೆ ಕ್ಷಿಪ್ರ ಸಂಪೋಷಣಾ ಕೇಂದ್ರಗಳ ಸ್ಥಾಪನೆ, ಎರಡೂ ದೇಶಗಳ ಮಾರುಕಟ್ಟೆ ಅವಕಾಶಗಳು ಮತ್ತು ವಸ್ತುಪ್ರದರ್ಶನಗಳಲ್ಲಿ ಭಾಗಿಯಾಗುವುದನ್ನು ಉತ್ತೇಜಿಸುವ ಅಂಶಗಳು ಈ ಒಡಂಬಡಿಕೆಯಲ್ಲಿವೆ.

 

ಈ ಸಹಕಾರ ಸಂಬಂಧ ವೃದ್ಧಿಯಿಂದ ಭಾರತದ ಎಂಎಸ್ಎಂಇ ವಲಯಕ್ಕೆ ಹೊಸ ಮಾರುಕಟ್ಟೆಗಳು, ಜಂಟಿ ಸಹಭಾಗಿತ್ವ, ತಂತ್ರಜ್ಞಾನ ವರ್ಗಾವಣೆ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಮತ್ತಿತರ ವಿಷಯಗಳಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳುವ ಸಾಧ್ಯತೆ ಇದೆ. ಎಂಎಸ್ಎಂಇ ಸಚಿವಾಲಯದ ಅಡಿ ಬರುವ ಎನ್ಎಸ್ಐಸಿ ಇಂತಹ ಸಹಕಾರ ಸಂಬಂಧಗಳನ್ನು ಕಾಯ್ದುಕೊಳ್ಳುವಲ್ಲಿ ಅವಶ್ಯ ಅನುಭವವನ್ನು ಗಳಿಸಿದೆ. ಆದ್ದರಿಂದ ಒಡಂಬಡಿಕೆಯಲ್ಲಿನ ಕಾರ್ಯ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಇದು ಸೂಕ್ತ ಸಂಸ್ಥೆಯಾಗಿದೆ.



(Release ID: 1548686) Visitor Counter : 116