ಸಂಪುಟ

ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐ.ಸಿ.ಎ.ಐ.) ಮತ್ತು ಕೆನ್ಯಾದ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ ಸಂಸ್ಥೆ (ಐ.ಸಿ.ಪಿ.ಎ.ಕೆ) ನಡುವಿನ ತಿಳುವಳಿಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ.

Posted On: 26 SEP 2018 4:14PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ (ಐ.ಸಿ.ಎ.ಐ.) ಮತ್ತು ಕೆನ್ಯಾದ ಸರ್ಟಿಫೈಡ್ ಪಬ್ಲಿಕ್ ಅಕೌಂಟೆಂಟ್ಸ್ ಸಂಸ್ಥೆ (ಐ.ಸಿ.ಪಿ.ಎ.ಕೆ) ನಡುವಿನ ತಿಳುವಳಿಕಾ ಒಡಂಬಡಿಕೆಗೆ ಅಂಕಿತ ಹಾಕಿರುವುದಕ್ಕೆ ತನ್ನ ಅನುಮೋದನೆ ನೀಡಿತು. ಇದರಿಂದ ಪರಸ್ಪರ ಸಹಕಾರ ಮತ್ತು ಜಂಟಿ ಸಂಶೋಧನೆ , ಗುಣಮಟ್ಟ ಬೆಂಬಲ , ಸಾಮರ್ಥ್ಯ ವರ್ಧನೆ, ತರಬೇತಿ ಲೆಕ್ಕಪತ್ರ ಗಾರರ ವಿನಿಮಯ ಕಾರ್ಯಕ್ರಮಗಳ ಮೂಲಕ ಜ್ಞಾನ ಹಂಚಿಕೆ ಸಹಯೋಗ ಹಮ್ಮಿಕೊಳ್ಳಲು ಸಹಾಯವಾಗಲಿದೆ ಮತ್ತು ನಿರಂತರ ವೃತ್ತಿಪರ ಅಭಿವೃದ್ದಿ (ಸಿ.ಡಿ.ಪಿ.) ಕೋರ್ಸುಗಳನ್ನು ಸಂಘಟಿಸುವುದಕ್ಕೆ , ಕಾರ್ಯಾಗಾರ ಮತ್ತು ಸಮ್ಮೇಳನಗಳನ್ನು ನಡೆಸುವುದಕ್ಕೆ ಇದು ನೆರವಾಗಲಿದೆ. 
br> ವಿವರಗಳು: 
br> ಐ.ಸಿ.ಎ.ಐ. ಮತ್ತು ಐ.ಸಿ.ಪಿ.ಎ.ಕೆ.ಗಳು ಪರಸ್ಪರ ಸಂಸ್ಥೆಗಳ ಸಿಬ್ಬಂದಿಗಳ ಪ್ರಮುಖ ಸದಸ್ಯರಿಗೆ ಪರಸ್ಪರ ಒಪ್ಪಿತವಾದ ಕೆಲಸದ ವೇಳಾಪಟ್ಟಿಯನ್ವಯ ಅನೌಪಚಾರಿಕ ಕೆಲಸಗಳ ಮೇಲೆ ನಿಯೋಜಿಸುವ ಮೂಲಕ ಅವರ ಜ್ಞಾನ ಮತ್ತು ಅನುಭವದಿಂದ ಕಲಿಯಲು ಅವಕಾಶಗಳನ್ನು ಒದಗಿಸಲಿವೆ. 
br> ಐ.ಸಿ.ಎ.ಐ. ಮತ್ತು ಐ.ಸಿ.ಪಿ.ಎ.ಕೆ.ಗಳ ವ್ಯೂಹಾತ್ಮಕ ಪಾಲುದಾರಿಕೆ ದೃಗೋಚರವಾಗಿಸಲು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲು ಜಂಟಿಯಾಗಿ ಜಾಗೃತಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ಉತ್ತೇಜಿಸುವುದು ಮತ್ತು ಈ ತಿಳುವಳಿಕಾ ಒಡಂಬಡಿಕೆಯಲ್ಲಿ ಸದಸ್ಯರೊಂದಿಗೆ ಸೂಚಿಸಲಾದ ವಿಷಯಗಳಲ್ಲಿ ಸಹಯೋಗ. 
br> ಐ.ಸಿ.ಎ.ಐ. ಮತ್ತು ಐ.ಸಿ.ಪಿ.ಎ.ಕೆ.ಗಳು ಪರಸ್ಪರ ಸಹಯೋಗದಲ್ಲಿ ಗುಣಮಾನಕ ಉಪಕ್ರಮಗಳನ್ನು ರೂಪಿಸುವುದಲ್ಲದೆ ತರಬೇತಿ ಲೆಕ್ಕಪತ್ರಗಾರರ ವಿನಿಮಯ ಕಾರ್ಯಕ್ರಮವನ್ನು ನಿಭಾಯಿಸಲಿವೆ. 
br> ಪ್ರಮುಖ ಪರಿಣಾಮಗಳು: 
br> ಭಾರತವು ಕೆನ್ಯಾದ ಆರನೇಯ ಅತೀ ದೊಡ್ದ ವ್ಯಾಪಾರೀ ಸಹಭಾಗಿ ರಾಷ್ಟ್ರವಾಗಿದೆ ಮತ್ತು ಕೆನ್ಯಾಕ್ಕೆ ಅತ್ಯಧಿಕ ಪ್ರಮಾಣದಲ್ಲಿ ರಫ್ತು ಮಾಡುವ ದೇಶವಾಗಿದೆ. ಆಫ್ರಿಕನ್ ದೇಶಗಳ ವರದಿಯ ಪ್ರಕಾರ 2017ರಲ್ಲಿ ಆಫ್ರಿಕಾ ದೇಶಗಳಲ್ಲಿ ಉತ್ತಮ ಆರ್ಥಿಕ ಸಾದನೆ ಮಾಡಿದ ದೇಶಗಳಲ್ಲಿ ಕೆನ್ಯಾದ ಆರ್ಥಿಕತೆ ಮುಂಚೂಣಿಯಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆ (ಜಿ.ಡಿ.ಪಿ.) ಬೆಳವಣಿಗೆಯಲ್ಲಿ ಉತ್ತಮ ಸಾಧನೆ ದಾಖಲಿಸುವ ನಿರೀಕ್ಷೆ ಇದೆ. ಕೆನ್ಯಾವು ಬಹಳ ವಿಸ್ತಾರವಾದ ವೈವಿಧ್ಯಮಯ ಆರ್ಥಿಕ ತಳಹದಿಯನ್ನು ಹೊಂದಿದೆ ಮತ್ತು ಕೆನ್ಯಾದ ಉತ್ಪಾದನೆಗಳಿಗೆ ಭಾರತದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಅವಕಾಶವನ್ನು ಗಳಿಸಿಕೊಳ್ಳುವ ಉದ್ದೇಶವನ್ನು ಹೊಂದಿದೆ, ಅದಕ್ಕನುಗುಣವಾಗಿ ಕೆನ್ಯಾದ ಅತಿ ದೊಡ್ಡ ವಿದೇಶೀ ವ್ಯಾಪಾರ ಪಾಲುದಾರನಾಗಲು ಹಾದಿಗಳನ್ನು ಅನ್ವೇಷಿಸುವತ್ತ ಭಾರತವೂ ಆಸಕ್ತಿ ವಹಿಸಿದೆ. 
br> ಕೆನ್ಯಾದ ಆರ್ಥಿಕತೆ ಆಫ್ರಿಕನ್ ದೇಶಗಳ ಆರ್ಥಿಕತೆಯಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿರುವುದನ್ನು ಗಣನೆಗೆ ತೆಗೆದುಕೊಂಡು ಮತ್ತು ಇತ್ತೀಚಿನ ಕಾಲಮಾನದಲ್ಲಿ ಉಭಯ ದೇಶಗಳು ಮಾಡಿರುವ ಹೂಡಿಕೆಯ ರೀತಿ ಹಾಗು ಬೆಳೆಸಿಕೊಂಡ ನಂಬಿಕೆಯನ್ನು ಪರಿಗಣಿಸಿ ಭಾರತದ ಲೆಕ್ಕ ಪತ್ರ ಪರಿಶೋಧಕರು ಈಗಾಗಲೇ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು; ಕೆನ್ಯಾದಲ್ಲಿ ಭಾರತೀಯ ಲೆಕ್ಕ ಪತ್ರ ಪರಿಶೋಧಕರಿಗೆ ಅಪಾರ ಪ್ರಮಾಣದಲ್ಲಿ ವೃತ್ತಿಪರ ಅವಕಾಶಗಳಿವೆ. 



(Release ID: 1548046) Visitor Counter : 116