ಸಂಪುಟ

ಜಮ್ಮು & ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪ  

Posted On: 19 SEP 2018 1:22PM by PIB Bengaluru

ಜಮ್ಮು & ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪ  

ಜಮ್ಮು ಮತ್ತು ಕಾಶ್ಮೀರಕ್ಕೆ ದೀನದಯಾಳ  ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ನನ್ನು ಅನುಷ್ಠಾನಗೊಳಿಸಲು ವಿಶೇಷ ಪ್ಯಾಕೇಜ್ – ಉಮ್ಮೀದ್ ವಿಸ್ತರಣೆ ಜಮ್ಮು & ಕಾಶ್ಮೀರಕ್ಕೆ ದೀನದಯಾಳ  ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿಯಲ್ಲಿ ಬಡತನದ ಅನುಪಾತಕ್ಕೆ ಜೋಡಿಸದೆ  ಅನುದಾನ ನೀಡಲು ಕೇಂದ್ರ ಸಂಪುಟ ಸಭೆ ಅಂಗೀಕಾರ 
 

ಜಮ್ಮು & ಕಾಶ್ಮೀರಕ್ಕೆ ದೀನದಯಾಳ  ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ವಿಶೇಷ ಪ್ಯಾಕೇಜನ್ನು ಅನುಷ್ಠಾನಗೊಳಿಸಲು 2018-19ರ ಅವಧಿಯನ್ನು ಇನ್ನೊಂದು ವರ್ಷದ ತನಕ ವಿಸ್ತಾರಗೊಳಿಸಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿತು.

 

 

ರಾಜ್ಯ ಸರಕಾರಕ್ಕೆ ದೀನದಯಾಳ  ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ವಿಶೇಷ ಪ್ಯಾಕೇಜ್ ನ್ನು ಬಡತನದ ಅನುಪಾತಕ್ಕೆ ಜೋಡಿಸದೆ ಆವಶ್ಯಕತೆಯ ಆಧಾರದ ಮೇಲೆ ಅನುಷ್ಠಾನಗೊಳಿಸುವುದಕ್ಕಾಗಿ ಅನುದಾನ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಮೊದಲೇ ಅನುಮೋದನೆಗೊಂಡ ಮೂಲ ಆರ್ಥಿಕ ಮೊತ್ತ ರೂ 755.32 ಕೋಟಿಗಳ ಚೌಕಟ್ಟಿನೊಳಗೆ  ಯಾವುದೇ ಹೆಚ್ಚುವರಿ ಆರ್ಥಿಕ ಬಾಧ್ಯತೆಗಳಾಗದಂತೆ ರಾಜ್ಯದಲ್ಲಿರುವ ಮೂರರಲ್ಲಿ ಎರಡು ಪಾಲಿನಷ್ಟು ದುರ್ಬಲ ಕುಟುಂಬಗಳನ್ನು ತಲುಪಲು ಸಮಯಾವಕಾಶವನ್ನು ವಿಸ್ತರಿಸಲಾಗಿದೆ. 2018-19ರ ಒಂದು ವರ್ಷದ ಅವಧಿಗೆ ರೂ 143.604 ಕೋಟಿಯಷ್ಟು ಮೊತ್ತದ ಅಗತ್ಯವಿದೆ.

 

 

ಪರಿಣಾಮ:

 

 

• ಇದು ನಿರ್ಧಿಷ್ಟ ಕಾಲ ಮಿತಿಯೊಳಗೆ ರಾಜ್ಯ ಎಲ್ಲ ದುರ್ಬಲ ಕುಟುಂಬಗಳನ್ನು ವ್ಯಾಪ್ತಿಯೊಳಗೆ ತರಲು ಸಹಾಯ ಮಾಡುತ್ತದೆ. ( ಒಟ್ಟಾರೆ ಇರುವ ಕುಟುಂಬಗಳಲ್ಲಿ ಮೂರರಲ್ಲಿ ಎರಡು ಪಾಲಿನಷ್ಟು ಎಂದು ಅಂದಾಜಿಸಲಾಗಿದೆ) 

 

• ಸಾಮಾಜಿಕ – ಆರ್ಥಿಕ  ಜಾತಿ ಜನಗಣತಿ 2011ರಲ್ಲಿ ಪಟ್ಟಿಮಾಡಿರುವ ವಂಚಿತ ವರ್ಗಕ್ಕೆ ಸೇರಿದ ಕನಿಷ್ಟ ಒಂದು ಕುಟುಂಬ ಮತ್ತು ಸ್ವಯಂ ಸೇರ್ಪಡೆ ವರ್ಗದಡಿ ಕುಟುಂಬಗಳ ಸಂಚಲನವನ್ನು ಇದು ದೃಢೀಕರಿಸುತ್ತದೆ.

 

• ಜಮ್ಮು ಮತ್ತು ಕಾಶ್ಮೀರದ ಎಲ್ಲಾ ಬ್ಲಾಕ್ ಗಳೂ ದೀನದಯಾಳ  ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ನ ವ್ಯಾಪ್ತಿಯೊಳಗೆ ಬರುವುದನ್ನು ದೃಢೀಕರಿಸುತ್ತದೆ ಮತ್ತು ರಾಜ್ಯದಲ್ಲಿ ಸಾಮಾಜಿಕ ಒಳಗೊಳ್ಳುವಿಕೆ, ಸಾಮಾಜಿಕ ಅಭಿವೃದ್ಧಿ  ಹಾಗೂ ಜೀವನೋಪಾಯಗಳಲ್ಲಿ ಸುಧಾರಣೆ ತರುವ ಮೂಲಕ  ಬಡತನ ನಿರ್ಮೂಲನೆಗೆ ಒತ್ತು ನೀಡಲಾಗಿದೆ .

 

 

ಹಿನ್ನಲೆ: 

 

ಮೇ. 2013ರಲ್ಲಿ ಅಂಗಿಕರಿಸಿದ ವಿಶೇಷ ಪ್ಯಾಕೇಜ್ ಗಳನ್ನು ರಾಜ್ಯದಲ್ಲಿದ್ದ ಗೊಂದಲದ ವಾತಾವರಣ ಮತ್ತು ತಡೆಗಟ್ಟಲಾಗದ ಕಾರಣಗಳಿಂದಾಗಿ ಸಂಪೂರ್ಣವಾಗಿ ಅನುಷ್ಠಾನಗೊಳಿಸಲಾಗಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕಾಗಿ ಈ ವಿಸ್ತರಿಸಿದ ಅವಧಿಯಲ್ಲಿ ಬಡತನದ ಅನುಪಾತವನ್ನು ಜೋಡಿಸದೆ, ಬೇಡಿಕೆಯಾಧಾರದಲ್ಲಿ ದೀನದಯಾಳ  ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಮಿಷನ್ ಅಡಿ ಅನುದಾನ ಬಿಡುಗಡೆಯನ್ನು ಮುಂದುವರಿಸಲು ಮತ್ತು ಈ ಹಿಂದೆ ಅನುಮೋದನೆಗೊಂಡ ಅನುಷ್ಠಾನದ ಅವಧಿಯ ವಿಸ್ತರಣೆಗಾಗಿ ಈಗ ರಾಜ್ಯ ಸರಕಾರವು ಭಾರತ ಸರಕಾರವನ್ನು ಪುನಃ ಮನವಿ ಮಾಡಿಕೊಂಡಿತ್ತು. ಆದುದರಿಂದ, ಸಂಪುಟ ಸಭೆಯ ಅಂಗೀಕಾರವು ಜಮ್ಮು ಮತ್ತು ಕಾಶ್ಮೀರದ ಗ್ರಾಮೀಣ ದುರ್ಬಲ ಕುಟುಂಬಗಳಿಗೆ ಕಾಯಕಲ್ಪವಾಗಲಿದೆ.

 



(Release ID: 1547178) Visitor Counter : 66