ಸಂಪುಟ

ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ಕಾರ್ಯವಿಧಾನದ ಅಡಿಯಲ್ಲಿ ಎಕ್ಸಿಮ್ ಬ್ಯಾಂಕ್ನಿಂದ ಡಿಜಿಟಲ್ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ಸಹಯೋಗಾತ್ಮಕ ಸಂಶೋಧನೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ.

Posted On: 12 SEP 2018 4:29PM by PIB Bengaluru

ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ಕಾರ್ಯವಿಧಾನದ ಅಡಿಯಲ್ಲಿ ಎಕ್ಸಿಮ್ ಬ್ಯಾಂಕ್ನಿಂದ ಡಿಜಿಟಲ್ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ಸಹಯೋಗಾತ್ಮಕ ಸಂಶೋಧನೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಕ್ಸ್ ಪೋರ್ಟ್ –ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ (ಎಕ್ಸಿಮ್ ಬ್ಯಾಂಕ್), ಭಾಗಿಯಾಗುವ ಸದಸ್ಯ ಬ್ಯಾಂಕ್ ಗಳೊಂದಿಗೆ ಬ್ರಿಕ್ಸ್ ಅಂತರ ಬ್ಯಾಂಕ್ ಸಹಕಾರ ಕಾರ್ಯವಿಧಾನದ ಅಡಿಯಲ್ಲಿ ಅಂದರೆ,  ಬ್ಯಾಂಕೊ ನ್ಯಾಶನಲ್ ಡೆ ಡೆಸೆನ್ವೋಲ್ವಿಮೆಂಟೊ ಎಕನಾಮಿಕ್ ಇ ಸೋಶಿಯಲ್ (ಬಿ.ಎನ್.ಡಿ.ಇ.ಎಸ್, ಬ್ರೆಜಿಲ್), ಚೈನಾ ಅಭಿವೃದ್ಧಿ ಬ್ಯಾಂಕ್ (ಸಿಡಿಬಿ), ಅಭಿವೃದ್ಧಿ ಮತ್ತು ವಿದೇಶೀ ಆರ್ಥಿಕ ವ್ಯವಹಾರಗಳ ಕುರಿತ ಸ್ಟೇಟ್ ಕಾರ್ಪೊರೇಷನ್ ಬ್ಯಾಂಕ್ (ವನೆಸ್ಶನಂಬ್ಯಾಂಕ್, ರಷ್ಯಾ) ಮತ್ತು ದಕ್ಷಿಣ ಆಫ್ರಿಕಾ ಅಭಿವೃದ್ಧಿ ಬ್ಯಾಂಕ್ (ಡಿಬಿಎಸ್ಎ)ಗಳೊಂದಿಗೆ ಡಿಜಿಟಲ್ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ಸಹಯೋಗಾತ್ಮಕ ಸಂಶೋಧನೆ ಕುರಿತ ತಿಳಿವಳಿಕೆ ಒಪ್ಪಂದ (ಎಂ.ಓ.ಯು)ಕ್ಕೆ ತನ್ನಪೂರ್ವಾನ್ವಯ ಅನುಮೋದನೆ ನೀಡಿದೆ.

ಪ್ರಮುಖ ಪರಿಣಾಮ

ಡಿಸ್ಟ್ರಿಬ್ಯೂಟೆಡ್ ಲೆಡ್ಜರ್/ಬ್ಲಾಕ್ ಚೈನ್ ತಾಂತ್ರಿಕತೆಯು ಬ್ರಿಕ್ಸ್ ರಾಷ್ಟ್ರಗಳ ಹಣಕಾಸು ಕ್ಷೇತ್ರ ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ಪರಿಹಾರ ಒದಗಿಸುವ ಸಾಮರ್ಥ್ಯ ಹೊಂದಿದೆ. ಈ ತಿಳಿವಳಿಕೆ ಒಪ್ಪಂದವು ಕಾರ್ಯಾಚರಣೆಯ ದಕ್ಷತೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಆನ್ವಯಿಕಗಳಿಗೆ ಸಂಭಾವ್ಯತೆಯನ್ನು ಹೊಂದಿರುವ ಆಯಾ ವ್ಯಾಪಾರ ವ್ಯವಹಾರಗಳ ಪ್ರದೇಶಗಳನ್ನು ಗುರುತಿಸಲು ಜಂಟಿ ಸಂಶೋಧನಾ ಪ್ರಯತ್ನಗಳ ಮೂಲಕ ಡಿಸ್ಟ್ರಿಬ್ಯೂಟೆಡ್ / ಬ್ಲಾಕ್ ಚೈನ್ ತಾಂತ್ರಿಕತೆಯ ಅರಿವನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.

ಹಿನ್ನೆಲೆ:

ಬ್ರಿಕ್ಸ್ ನಾಯಕರಿಂದ ಚೈನಾದಲ್ಲಿ ಡಿಜಿಟಲ್ ಆರ್ಥಿಕತೆ ಕುರಿತಂತೆ ಅಂಕಿತ ಹಾಕಲಾದ ಕ್ಸಿಯಾಮೆನ್ ನಿರ್ಣಯವು ಡಿಜಿಟಲ್ ಆರ್ಥಿಕತೆಯ ಮಹತ್ವವನ್ನು ಮತ್ತು ಬ್ರಿಕ್ಸ್ ರಾಷ್ಟ್ರಗಳು ಹೇಗೆ ಜಾಗತಿಕ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರಿಗೂ ಪ್ರಯೋಜನವನ್ನುಂಟುಮಾಡುವ ಅಭಿವೃದ್ಧಿಶೀಲ ಮತ್ತು ಕ್ರಿಯಾತ್ಮಕ ಡಿಜಿಟಲ್ ಆರ್ಥಿಕತೆಯನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದನ್ನು ಒತ್ತಿ ಹೇಳಿದೆ. ಆ ಪ್ರಕಾರವಾಗಿ ಡಿಜಿಟಲ್ ಆರ್ಥಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಮತ್ತು ಬ್ಲಾಕ್ ಚೈನ್ ತಂತ್ರಜ್ಞಾನದ ಮೇಲೆ ಸಹಯೋಗಾತ್ಮಕ ಸಂಶೋಧನೆ ಕುರಿತ ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಬೇಕು ಎಂಬ ಸಲಹೆಯನ್ನು ಎಲ್ಲ ಸದಸ್ಯ ಬ್ಯಾಂಕ್ ಗಳಿಗೂ ಮಾಡಲಾಗಿತ್ತು.

*****



(Release ID: 1546088) Visitor Counter : 84