ಸಂಪುಟ
ಜಾರ್ಕಂಡ್ ನ ಕರ್ಮಾದ ಕೇಂದ್ರೀಯ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕಾರ್ಮಿಕ ಕಲ್ಯಾಣ ಸಂಘಟನೆಗೆ ವರ್ಗಾಯಿಸಲು ಸಂಪುಟ ಸಮ್ಮತಿ
Posted On:
09 AUG 2018 5:04PM by PIB Bengaluru
ಜಾರ್ಕಂಡ್ ನ ಕರ್ಮಾದ ಕೇಂದ್ರೀಯ ಆಸ್ಪತ್ರೆಯನ್ನು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕಾರ್ಮಿಕ ಕಲ್ಯಾಣ ಸಂಘಟನೆಗೆ ವರ್ಗಾಯಿಸಲು ಸಂಪುಟ ಸಮ್ಮತಿ
ಪ್ರಧಾನ ಮಂತ್ರಿ ಶ್ರೀ. ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯದ ಅಧೀನದಲ್ಲಿರುವ , ಜಾರ್ಕಂಡ್ ನ ಕರ್ಮಾದಲ್ಲಿರುವ ಕೇಂದ್ರೀಯ ಆಸ್ಪತ್ರೆಯನ್ನು , ಕಟ್ಟಡ ಹಾಗೂ ಭೂಮಿಯ ಜೊತೆಗೆ ಯಾವುದೇ ಹಣ ಪಡೆಯದೆ ಕೇಂದ್ರೀಯ ಪ್ರಾಯೋಜಿತ ಯೋಜನೆ(ಸಿಎಸ್ಎಸ್)ಯಡಿ ನೂತನ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಕಾರ್ಮಿಕ ಕಲ್ಯಾಣ ಸಂಘಟನೆಗೆ ವರ್ಗಾಯಿಸಲು ಸಂಪುಟ ಸಮ್ಮತಿ ನೀಡಿತು. ಹಾಲಿ ಇರುವ ಜಿಲ್ಲಾ/ರೆಫರಲ್ ಆಸ್ಪತ್ರೆಗಳಿಗೆ ಜೋಡಣೆಯಾಗಿರುವ ಈ ಆಸ್ಪತ್ರೆಗಳು ಪ್ರಾಂತ್ಯದ ಜನರ ಆರೋಗ್ಯ ಅಗತ್ಯತೆಗಳನ್ನು ತೀರಿಸಲು ನೆರವಾಗುತ್ತಿವೆ.
ಅನುಷ್ಠಾನ ಕಾರ್ಯತಂತ್ರ ಹಾಗೂ ಗುರಿಗಳು:
ಕೇಂದ್ರೀಯ ಆಸ್ಪತ್ರೆಯನ್ನು ಮೂರು ತಿಂಗಳೊಳಗೆ ಕಟ್ಟಡ ಹಾಗೂ ಭೂಮಿಯೊಂದಿಗೆ ಜಾರ್ಖಂಡ್ ಸರ್ಕಾರಕ್ಕೆ ವರ್ಗಾಯಿಸಲಾಗುತ್ತದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಹಾಗೂ ರಾಜ್ಯ ಸರ್ಕಾರಗಳು ವರ್ಗಾವಣೆಯ ವಿಧಿವಿಧಾನ, ಸಿಬ್ಬಂದಿಗಳ ಸೇರ್ಪಡೆ ಇತ್ಯಾದಿ ವಿಷಯವನ್ನು ಒಳಗೊಂಡ ಒಡಂಬಡಿಕೆಗೆ ಸಹಿ ಹಾಕಲಿವೆ.
ಪ್ರಮುಖ ಪರಿಣಾಮ:
ಈ ಪ್ರಸ್ತಾವವು ದೇಶದಲ್ಲಿ ವರ್ಷವೊಂದಕ್ಕೆ ತರಬೇತಿ ಪಡೆಯುತ್ತಿರುವ ವೈದ್ಯರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಲಿದೆ. ಈ ಪ್ರಾಂತ್ಯದಲ್ಲಿ ಆರೋಗ್ಯ ರಕ್ಷಣೆ ಮೂಲಸೌಕರ್ಯದ ಉತ್ತಮಗೊಳಿಸುವಿಕೆಗೆ ನೆರವಾಗಲಿದ್ದು, ಇದರಿಂದ ಜನಸಾಮಾನ್ಯರಿಗೆ ಉತ್ತಮ ಆರೋಗ್ಯ ರಕ್ಷಣೆ ಸೇವೆಗಳು ಲಭ್ಯವಾಗಲಿವೆ.
ಫಲಾನುಭವಿಗಳು:
ಜಾರ್ಕಂಡ್ ನ ಕರ್ಮಾ ಹಾಗೂ ಸುತ್ತಮುತ್ತಲಿನ ಜನರಿಗೆ ಉತ್ತಮ ಆರೋಗ್ಯ ರಕ್ಷಣೆ ಸೇವೆಗಳು ಲಭ್ಯವಾಗಲಿದ್ದು, ಉಪಯೋಗವಾಗಲಿದೆ.
ಹಿನ್ನೆಲೆ:
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ತನ್ನ ಆಸ್ಪತ್ರೆ ಹಾಗೂ ದವಾಖಾನೆಗಳ ಮೂಲಕ ಅಸಂಘಟಿತ ಕ್ಷೇತ್ರದ ಕೆಲ ವರ್ಗದ ಕಾರ್ಮಿಕರು ಹಾಗೂ ಅವರ ಕುಟುಂಬ ದವರಿಗೆ ಆರೋಗ್ಯ ರಕ್ಷಣೆ ಸವಲತ್ತುಗಳನ್ನು ಒದಗಿಸುತ್ತದೆ. ಜಾರ್ಖಂಡ್ ನ ಕರ್ಮಾದಲ್ಲಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ವು ಮೈಕಾ ಗಣಿ/ಬೀಡಿ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಸೇವೆಯನ್ನು ಒದಗಿಸಲು 50 ಹಾಸಿಗೆಗಳ ಟಿಬಿ ಆಸ್ಪತ್ರೆ ಸೇರಿದಂತೆ 150 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಿದೆ. ಜಾರ್ಖಂಡ್ ಸರ್ಕಾರವು ನೂತನ ವೈದ್ಯ ಕೀಯ ಆಸ್ಪತ್ರೆಯನ್ನು ನಿರ್ಮಿಸಲು ಕಟ್ಟಡ ಹಾಗೂ ಭೂಮಿಯೊಂದಿಗೆ ಕೇಂದ್ರೀಯ ಆಸ್ಪತ್ರೆಯನ್ನು ಯಾವುದೇ ಹಣ ಪಡೆಯದೆ ನೀಡಬೇಕೆಂದು ಕೇಂದ್ರಕ್ಕೆ ಪ್ರಸ್ತಾವವನ್ನು ಸಲ್ಲಿಸಿತ್ತು.
(Release ID: 1542648)
Visitor Counter : 114