ಸಂಪುಟ

ಭಾರತ ಮತ್ತು ಇಂಡೋನೇಶಿಯಾ ನಡುವೆ ವೈಜ್ಞಾನಿಕ ಹಾಗು ತಾಂತ್ರಿಕ ಸಹಕಾರಕ್ಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ 

Posted On: 09 AUG 2018 5:00PM by PIB Bengaluru

ಭಾರತ ಮತ್ತು ಇಂಡೋನೇಶಿಯಾ ನಡುವೆ ವೈಜ್ಞಾನಿಕ ಹಾಗು ತಾಂತ್ರಿಕ ಸಹಕಾರಕ್ಕಾ ಒಡಂಬಡಿಕೆಗೆ ಸಂಪುಟ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಭಾರತ ಮತ್ತು ಇಂಡೋನೇಶಿಯಾ ನಡುವೆ ವೈಜ್ಞಾನಿಕ ಹಾಗು ತಾಂತ್ರಿಕ ಸಹಕಾರಕ್ಕಾಗಿರುವ ಒಡಂಬಡಿಕೆಗೆ ಅನುಮೋದನೆ ನೀಡಲಾಯಿತು. 

ಈ ತಿಳುವಳಿಕಾ ಒಡಂಬಡಿಕೆಗೆ 2008 ರ ಮೇ ತಿಂಗಳಲ್ಲಿ ಹೊಸದಿಲ್ಲಿಯಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಖಾತೆಗಳ ಸಚಿವರಾದ ಡಾ. ಹರ್ಷ ವರ್ಧನ ಮತ್ತು ಇಂಡೋನೇಶಿಯಾದ ಪರವಾಗಿ ಸಂಶೋಧನೆ, ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವರಾದ ಶ್ರೀ ಮೊಹಮ್ಮದ್ ನಾಸಿರ್ ಇಂಡೋನೇಶಿಯಾದ ಜಕಾರ್ತಾದಲ್ಲಿ 2018ರ ಮೇ ತಿಂಗಳಲ್ಲಿ ಸಹಿ ಹಾಕಿದ್ದರು. ಈ ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕುವ ಮೂಲಕ ಎರಡೂ ಕಡೆಯಲ್ಲಿ ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಪರಸ್ಪರ ಹಿತಾಸಕ್ತಿಗಳ ಒಗ್ಗೂಡುವಿಕೆಯಿಂದ ಎರಡೂ ಕಡೆಯವರಿಗೆ ಪೂರಕ ಶಕ್ತಿ ಒದಗಿ ಬರಲಿದೆ. 

ಈ ತಿಳುವಳಿಕಾ ಒಡಂಬಡಿಕೆಯ ಮುಖ್ಯ ಉದ್ದೇಶ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಮತ್ತು ಇಂಡೋನೇಶಿಯಾ ನಡುವೆ ಸಮಾನತೆ ಮತ್ತು ಉಭಯ ದೇಶಗಳಿಗೆ ಲಾಭವಾಗುವ ರೀತಿಯಲ್ಲಿ ಸಹಕಾರವನ್ನು ಉತ್ತೇಜಿಸುವುದಾಗಿದೆ. ವೈಜ್ಞಾನಿಕ ಸಂಘಟನೆಗಳ ಸಂಶೋಧಕರು, ಅಕಾಡೆಮಿಕ ತಜ್ಞರು, ಸಂಶೋಧನೆ ಮತ್ತು ಅಭಿವೃದ್ದಿ ಪ್ರಯೋಗಾಲಯಗಳು , ಭಾರತ ಮತ್ತು ಇಂಡೋನೇಶಿಯಾದ ಸಂಶೋಧಕರು, ಮಾಹಿತಿ ಮತ್ತು ತಂತ್ರಜ್ಞಾನ , ಸಾಗರ ವಿಜ್ಞಾನ ಮತ್ತು ತಂತ್ರಜ್ಞಾನ ,ಜೀವ ವಿಜ್ಞಾನಗಳು ( ಜೈವಿಕ ತಂತ್ರಜ್ಞಾನ , ಕೃಷಿ ಮತ್ತು ಜೀವ ವೈದ್ಯಕೀಯ ವಿಜ್ಞಾನಗಳು ಸಹಿತ) , ಇಂಧನ ಸಂಶೋಧನೆ, ಜಲ ತಂತ್ರಜ್ಞಾನಗಳು, ವಿಪತ್ತು ನಿರ್ವಹಣೆ, ಬಾಹ್ಯಾಕಾಶ ವಿಜ್ಞಾನಗಳು, ತಂತ್ರಜ್ಞಾನ ಮತ್ತು ಆನ್ವಯಿಸುವಿಕೆ, ಭೂ-ಅಂತರಿಕ್ಷ ಮಾಹಿತಿ ಮತ್ತು ಆನ್ವಯಿಕ ರಸಾಯನ ವಿಜ್ಞಾನ ಕ್ಷೇತ್ರಗಳನ್ನು ತಕ್ಷಣದ ಸಹಕಾರಕ್ಕೆ ಸಾಮರ್ಥ್ಯ ಇರುವ ಕ್ಷೇತ್ರಗಳೆಂದು ಗುರುತಿಸಲಾಗಿದೆ. ,



(Release ID: 1542518) Visitor Counter : 112