ಸಂಪುಟ

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಬಹರೇನ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

Posted On: 18 JUL 2018 5:31PM by PIB Bengaluru

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ ಮತ್ತು ಬಹರೇನ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಲೆಕ್ಕಪತ್ರ, ಹಣಕಾಸು ಮತ್ತು ಲೆಕ್ಕಪರಿಶೋಧನೆಯ ಜ್ಞಾನನೆಲೆಯನ್ನು ಬಹರೇನೊಳಗೆ ಬಲಪಡಿಸಲು ಒಗ್ಗೂಡಿ ಶ್ರಮಿಸುವ ಸಲುವಾಗಿ ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಮತ್ತು ಬಹರೇನ್ ನ ಬ್ಯಾಂಕಿಂಗ್ ಮತ್ತು ಹಣಕಾಸು ಬಹರೇನ್ ಸಂಸ್ಥೆ (ಬಿಐಬಿಎಫ್) ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.

 

ಮುಖ್ಯಾಂಶಗಳು:

  1.             ಲೆಕ್ಕಶಾಸ್ತ್ರ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ ಬಿಐಬಿಎಫ್.ನ ಪ್ರಸಕ್ತ ಪಠ್ಯಕ್ರಮವನ್ನು ಪರಾಮರ್ಶಿಸಿ ಬಿಐಬಿಎಫ್.ಗೆ ಐ.ಸಿ.ಎ.ಐ. ತಾಂತ್ರಿಕ ನೆರವು ಒದಗಿಸಲಿದೆ;
  2.             ಐ.ಸಿ.ಎ.ಐ. ತನ್ನ ಸಿಎ ಕೋರ್ಸ್ ಪಠ್ಯಕ್ರಮವನ್ನು ಪರಿಚಯಿಸುವಂತೆ ಶಿಫಾರಸು ಮಾಡಲಿದ್ದು, ಅದು ಐಸಿಎಐನ ಸದಸ್ಯತ್ವವನ್ನು ಪಡೆದುಕೊಳ್ಳಲು ಇಚ್ಛಿಸುವ ಬಿಐಬಿಎಫ್ ವಿದ್ಯಾರ್ಥಿಗಳಿಗೆ ಐಸಿಎಐ ಪರೀಕ್ಷೆ ಬರೆಯಲು ಅನುಕೂಲ ಕಲ್ಪಿಸುತ್ತದೆ;

  iii.            ಐ.ಸಿ.ಎ.ಐ. ವೃತ್ತಿಪರ ಪರೀಕ್ಷೆಯನ್ನು ನಡೆಸಲು ಅರ್ಹ ಬಿಐಬಿಎಫ್ ವಿದ್ಯಾರ್ಥಿಗಳಿಗೆ ಐ.ಸಿ.ಎ.ಐ. ತಾಂತ್ರಿಕ ನೆರವು ಒದಗಿಸುತ್ತದೆ.

 

ಈ ತಿಳಿವಳಿಕೆ ಒಪ್ಪಂದವು ಐ.ಸಿ.ಎ.ಐ. ಸದಸ್ಯರಿಗೆ ತಮ್ಮ ವೃತ್ತಿಯ ದಿಗಂತವನ್ನು ವಿಸ್ತರಿಸಿಕೊಳ್ಳಲು ಅವಕಾಶ ಕಲ್ಪಿಸುತ್ತದೆ ಮತ್ತು ಜೊತೆ ಜೊತೆಗೆ ಐ.ಸಿ.ಎ.ಐ. ಸ್ಥಳೀಯ ರಾಷ್ಟ್ರೀಯ ಸಾಮರ್ಥ್ಯವರ್ಧನೆಗೆ ನೆರವಾಗುವ ಒಂದು ಘಟಕವಾಗಿ ಪರಿಣಮಿಸುತ್ತದೆ.

 

ಸದಸ್ಯರು, ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳ ಹಿತಾಸಕ್ತಿಯಲ್ಲಿ ಪರಸ್ಪರ ಲಾಭದಾಯಕ ಸಂಬಂಧವನ್ನು ಬೆಳೆಸಲು ಒಟ್ಟಾಗಿ ಕೆಲಸ ಮಾಡುವುದು ಇದರ ಗುರಿಯಾಗಿದೆ.

 

ಫಲಾನುಭವಿಗಳು:

ಬಹರೇನ್ ಸ್ಥಳೀಯ ವೃತ್ತಿಪರ ಲೆಕ್ಕಶಾಸ್ತ್ರ ಸಂಸ್ಥೆಯನ್ನು ಹೊಂದಿಲ್ಲದ ಕಾರಣ ಮತ್ತು ಬಿಐಬಿಎಫ್.ನೊಂದಿಗೆ ಐ.ಸಿ.ಎ.ಐ ಸಹಯೋಗ ಹೊಂದಿರುವುದರಿಂದ ಪ್ರಸ್ತುತ ಬಹರೇನಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಆ ದೇಶಕ್ಕೆ ತೆರಳಲು ಇಂಗಿತ ಹೊಂದಿರುವವರಿಗೆ ಇದು ಧನಾತ್ಮಕವಾಗಿ ಸುಲಭವಾಗಲಿದೆ. ಬಹರೇನ್ ಗೆ ಐ.ಸಿ.ಎ.ಐ. ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಯ ಬಗ್ಗೆ ನಂಬಿಕೆಯಿಟ್ಟಿದ್ದು, ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಕಾರ್ಯಕ್ಷಮತೆಯ ಕ್ಷೇತ್ರದಲ್ಲಿ ತನ್ನ ಪ್ರಜೆಗಳಿಗೆ ಉತ್ತೇಜಿಸುವ ಮತ್ತು ಅಭಿವೃದ್ಧಿಪಡಿಸುವಲ್ಲಿ ಐಸಿಎಐನ ಸಹಾಯವನ್ನು ಅಪೇಕ್ಷಿಸುತ್ತದೆ, ಇದು ಕ್ರಮೇಣ ಕೌಶಲ್ಯಕ್ಕೆ ದಾರಿ ಮಾಡಿಕೊಟ್ಟು, ಸಮರ್ಥವಾದ ಲೆಕ್ಕಪತ್ರ ವೃತ್ತಿಪರರ ನೆಲೆಯನ್ನು ಹಂತ ಹಂತವಾಗಿ ಹೆಚ್ಚಿಸುತ್ತದೆ.

 

ಹಿನ್ನೆಲೆ:

ಭಾರತೀಯ ಚಾರ್ಟರ್ಡ್ ಅಕೌಂಟೆಂಟರುಗಳ ಸಂಸ್ಥೆ (ಐ.ಸಿ.ಎ.ಐ.) ಭಾರತೀಯ ಸಂಸತ್ತಿನಲ್ಲಿ ಅನುಮೋದನೆಗೊಂಡ ಕಾಯಿದೆಯಡಿ ಸ್ಥಾಪಿತವಾದ ಶಾಸನಾತ್ಮಕ ಸಂಸ್ಥೆಯಾಗಿದ್ದು, ಭಾರತದಲ್ಲಿ ಚಾರ್ಟರ್ಡ್ ಅಕೌಂಟೆಂಟರುಗಳ ಕಾಯಿದೆ 1949 ಚೌರ್ಟರ್ಡ್ ಅಕೌಂಟೆನ್ಸಿ ವೃತ್ತಿಪರರನ್ನು ನಿಯಂತ್ರಿಸುತ್ತದೆ. ಬಹರೇನ್ ಸಂಸ್ಥಾನದಲ್ಲಿ ಮಾನವ ಸಂಪನ್ಮೂಲದ ತರಬೇತಿ ಮತ್ತು ಅಭಿವೃದ್ಧಿಗಾಗಿ ಬಹರೇನ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ (ಬಿಐಬಿಎಫ್) ಅನ್ನು 1981ರಲ್ಲಿ ಸ್ಥಾಪಿಸಲಾಗಿದೆ.



(Release ID: 1539388) Visitor Counter : 111