ಸಂಪುಟ

ಭಾರತ ಮತ್ತು ನೆದರ್ಲ್ಯಾಂಡ್ ನಡುವೆ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ ನಿರ್ವಹಣೆ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.) ವಿಸ್ತರಣೆಗೆ ಸಂಪುಟ ಅಂಗೀಕಾರ.

Posted On: 06 JUN 2018 3:29PM by PIB Bengaluru

ಭಾರತ ಮತ್ತು ನೆದರ್ಲ್ಯಾಂಡ್ ನಡುವೆ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ ನಿರ್ವಹಣೆ ಕ್ಷೇತ್ರಗಳಲ್ಲಿ ತಾಂತ್ರಿಕ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆ (ಎಂ.ಒ.ಯು.) ವಿಸ್ತರಣೆಗೆ ಸಂಪುಟ ಅಂಗೀಕಾರ. 
 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತ ಮತ್ತು ನೆದರ್ಲ್ಯಾಂಡ್  ನಡುವೆ 2018 ರ ಏಪ್ರಿಲ್ ತಿಂಗಳಲ್ಲಿ ಅಂಕಿತ ಹಾಕಲಾದ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ, ಮತ್ತು ಚಲನೆ ನಿರ್ವಹಣೆ ಕ್ಷೇತ್ರದಲ್ಲಿ ತಾಂತ್ರಿಕ ಸಹಕಾರ ಕುರಿತ ತಿಳುವಳಿಕಾ ಒಡಂಬಡಿಕೆಯನ್ನು ಪರಾಮರ್ಶಿಸಿತು

ವಿವರಗಳು

ಅಂಕಿತ ಹಾಕಿದ ರಾಷ್ಟ್ರಗಳ ನಡುವೆ ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ ನಿರ್ವಹಣೆ ಕ್ಷೇತ್ರದಲ್ಲಿ ಸಹಕಾರ ವರ್ಧನೆ ಈ ತಿಳುವಳಿಕಾ ಒಡಂಬಡಿಕೆಯ ಉದ್ದೇಶಗಳಾಗಿವೆ. ಕೈಗೆಟಕುವ ದರದಲ್ಲಿ ಮನೆ, ಸ್ಮಾರ್ಟ್ ನಗರಗಳ ಅಭಿವೃದ್ದಿ, ಜಲ ಸರಬರಾಜು ಮತ್ತು ತ್ಯಾಜ್ಯ ವ್ಯವಸ್ಥೆ , ತ್ಯಾಜ್ಯ ನೀರು ಸಂಸ್ಕರಣೆ ಮತ್ತು ಪುನರ್ಬಳಕೆ, ಭೌಗೋಳಿಕ  ಮಾಹಿತಿ ವ್ಯವಸ್ಥೆ (ಜಿ.ಐ.ಎಸ್.),ಕೃತಕವಾಗಿ ಅಂತರ್ಜಲ ಮರುಪೂರಣ, ಸಮಗ್ರ ಘನ ತ್ಯಾಜ್ಯ ನಿರ್ವಹಣೆ ಮತ್ತು ಪರಂಪರೆ ಸಂರಕ್ಷಣೆ ಮತ್ತು ಉಭಯ ದೇಶಗಳ ಆವಶ್ಯಕತೆಗಳನ್ನು ಗಮನಿಸಿ ಪರಸ್ಪರ ಲಾಭದಾಯಕವಾಗುವ ವಿಷಯಗಳು ಇದರಲ್ಲಿ ಅಡಕವಾಗಿವೆ.

ಅನುಷ್ಟಾನ ತಂತ್ರಗಳು

ಈ ತಿಳುವಳಿಕಾ ಒಡಂಬಡಿಕೆಯಡಿ  ಜಂಟಿ ಕಾರ್ಯ ಗುಂಪು (ಜೆ.ಡಬ್ಲ್ಯು.ಜಿ.) ಸ್ಥಾಪಿಸಿ ಒಡಂಬಡಿಕೆಯ ಚೌಕಟ್ಟಿನಡಿ ಸಹಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಿಸಲಾಗುತ್ತದೆ. ಜಂಟಿ ಕಾರ್ಯ ಗುಂಪು ವರ್ಷಕ್ಕೊಂದು ಬಾರಿ ಸಭೆ ಸೇರುತ್ತದೆ. ಸಭೆಗಳು ಪರ್ಯಾಯ ಮಾದರಿಯಲ್ಲಿ  ಒಂದು ವರ್ಷ ನೆದರ್ಲ್ಯಾಂಡಿನಲ್ಲಿ ಏರ್ಪಟ್ಟರೆ ಇನ್ನೊಂದು ವರ್ಷ ಭಾರತದಲ್ಲಿ ನಡೆಯುತ್ತವೆ

ಪ್ರಮುಖ ಪರಿಣಾಮ

ಈ ತಿಳುವಳಿಕಾ ಒಡಂಬಡಿಕೆಯು ಉಭಯ ದೇಶಗಳ ನಡುವೆ  ಪ್ರಾದೇಶಿಕ ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ ಆಡಳಿತ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಉತ್ತೇಜಿಸಲಿದೆ.

ಪ್ರಯೋಜನಗಳು

ಈ ತಿಳುವಳಿಕಾ ಒಡಂಬಡಿಕೆ ಪ್ರಾದೇಶಿಕ  ಯೋಜನೆ, ಜಲ ನಿರ್ವಹಣೆ ಮತ್ತು ಚಲನೆ  ನಿರ್ವಹಣೆ, ಸ್ಮಾರ್ಟ್ ನಗರಗಳ ಅಭಿವೃದ್ದಿ, ಕೈಗೆಟಕುವ ದರದಲ್ಲಿ ವಸತಿ, ತ್ಯಾಜ್ಯ ನಿರ್ವಹಣೆ, ನಗರ ಪರಿಸರ ಮತ್ತು ಪರಂಪರೆಯ ಸಂರಕ್ಷಣೆ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಯನ್ನು ಮಾಡುವ ನಿರೀಕ್ಷೆ ಇದೆ. 



(Release ID: 1535108) Visitor Counter : 85