ಸಂಪುಟ

ತಂಬಾಕು ನಿಯಂತ್ರಣ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅನುಸಾರ ತಂಬಾಕು ಪದಾರ್ಥಗಳ ಅಕ್ರಮ ವ್ಯಾಪಾರ ನಿರ್ಮೂಲನೆಗೆ ಪಾಲಿಸಬೇಕಾಗಿರುವ ಶಿಷ್ಟಾಚಾರಕ್ಕೆ ಕೇಂದ್ರ ಸಂಪುಟ ಅನುಮೋದನೆ

Posted On: 02 MAY 2018 3:30PM by PIB Bengaluru

ತಂಬಾಕು ನಿಯಂತ್ರಣ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅನುಸಾರ  ತಂಬಾಕು ಪದಾರ್ಥಗಳ ಅಕ್ರಮ ವ್ಯಾಪಾರ ನಿರ್ಮೂಲನೆಗೆ ಪಾಲಿಸಬೇಕಾಗಿರುವ ಶಿಷ್ಟಾಚಾರಕ್ಕೆ ಕೇಂದ್ರ ಸಂಪುಟ ಅನುಮೋದನೆ


            ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಹೆಚ್ಒ)ಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದದ ಅನುಸಾರ  ತಂಬಾಕು ಪದಾರ್ಥಗಳ ಅಕ್ರಮ ವ್ಯಾಪಾರ ನಿರ್ಮೂಲನೆಗೆ ಪಾಲಿಸಬೇಕಾಗಿರುವ ಶಿಷ್ಟಾಚಾರಕ್ಕೆ ಅನುಮೋದನೆ ನೀಡಲಾಯಿತು. ವಿಶ್ವ ಆರೋಗ್ಯ ಸಂಸ್ಥೆ ತಂಬಾಕು ನಿಯಂತ್ರಣ ಕುರಿತ ಒಪ್ಪಂದ(ಡಬ್ಲ್ಯೂಹೆಚ್ಒ ಎಫ್ ಸಿ ಟಿ ಸಿ)ದ 15ನೇ ಪರಿಚ್ಛೇದದಡಿ ಅಳವಡಿಸಿಕೊಂಡು ಒಪ್ಪಿಕೊಂಡಿರುವಂತೆ ಇದು ಧೂಮಪಾನ ಮಾಡುವ ಮತ್ತು ಜಗಿಯುವ ಅಥವಾ ಹೊಗೆರಹಿತ ತಂಬಾಕು ಪದಾರ್ಥಗಳೆರಡಕ್ಕೂ ಅನ್ವಯವಾಗಲಿದೆ. ಭಾರತ ಡಬ್ಲ್ಯೂಹೆಚ್ಒ ಎಫ್ ಸಿ ಟಿ ಸಿಯ ಭಾಗವಾಗಿದೆ.


ವಿವರ :


            ಈ ಶಿಷ್ಟಾಚಾರ ಕೆಲವು ನಿಬಂಧನೆಗಳನ್ನು ವಿಧಿಸುತ್ತದೆ. ಇದರಡಿ ಸರಣಿ ಪೂರೈಕೆ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಆ ಪ್ರಕಾರ ತಂಬಾಕು ಪದಾರ್ಥಗಳ ಉತ್ಪಾದನೆಗೆ ಪರವಾನಗಿ ನೀಡುವುದು, ತಂಬಾಕು ಪದಾರ್ಥಗಳ ಉತ್ಪಾದನೆ, ಯಂತ್ರೋಪಕರಣ ಬಳಕೆ, ಈ ಉದ್ಯಮದಲ್ಲಿ ತೊಡಗಿರುವವರನ್ನು ನಿರ್ಲಕ್ಷಿಸಬಾರದು. ದಾಖಲೆಗಳನ್ನು ಕಾಯ್ದುಕೊಳ್ಳುವುದು ಮತ್ತು ಈ ಉದ್ಯಮದಲ್ಲಿ ತೊಡಗಿರುವವರ ಭದ್ರತೆ, ಮುಕ್ತ ವ್ಯಾಪಾರ ವಲಯದಲ್ಲಿ ಉತ್ಪಾದನೆ ಮತ್ತು ಸುಂಕರಹಿತ ಮಾರಾಟ ಮತ್ತಿತರ ಹಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ.


            ಶಿಷ್ಟಾಚಾರದಡಿ ಕೆಲವು ಅಪರಾಧಗಳ ಪಟ್ಟಿ ಮಾಡಲಾಗಿದೆ. ಜೊತೆಗೆ ಜಾರಿ ಕ್ರಮಗಳಾದ ಜಪ್ತಿ ಮತ್ತು ಶೋಧಕಾರ್ಯ ಹಾಗೂ ಜಪ್ತಿ ಮಾಡಲಾದ ವಸ್ತುಗಳ ಬಿಡುಗಡೆ ಮತ್ತಿತರ ಅಂಶಗಳಿವೆ. ಇದರಡಿ ಮಾಹಿತಿ ಹಂಚಿಕೆ, ಗೌಪ್ಯತೆ ಕಾಪಾಡಿಕೊಳ್ಳುವುದು, ತಾಂತ್ರಿಕ ಮತ್ತು ವೈಜ್ಞಾನಿಕ ವಿಷಯಗಳಲ್ಲಿ ತರಬೇತಿ, ತಾಂತ್ರಿಕ ಸಹಾಯ ಮತ್ತು ಸಹಕಾರ ನೀಡುವ ಅಂಶಗಳು ಸೇರಿವೆ.


            ನಿಗದಿತ ಕಾರ್ಯತಂತ್ರದ ಮೂಲಕ ತಂಬಾಕು ಉತ್ಪನ್ನಗಳ ಅಕ್ರಮ ವ್ಯಾಪಾರ ನಿರ್ಮೂಲನೆಯಿಂದ ತಂಬಾಕು ನಿಯಂತ್ರಣ ಕ್ರಮಗಳು  ಸಮಗ್ರವಾಗಿ ಬಲವರ್ಧನೆಗೊಳ್ಳಲಿವೆ. ಇದರಿಂದ ಸಹಜವಾಗಿಯೇ ತಂಬಾಕು ಬಳಕೆ ಪ್ರಮಾಣ ತಗ್ಗಲಿದೆ ಮತ್ತು ತಂಬಾಕಿನಿಂದಾಗಿ ಸಂಭವಿಸುವ ಸಾವುಗಳು ಹಾಗೂ ಅವುಗಳಿಂದ ಬರುವ ಕಾಯಿಲೆಗಳ ಹೊರೆಯೂ ಇಳಿಮುಖವಾಗಲಿದೆ.


            ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಇಂತಹ ಪದ್ಧತಿಗಳನ್ನು ಹೊಡೆದೋಡಿಸಲು ಇಂತಹ ಒಪ್ಪಂದಗಳಲ್ಲಿ ಅವಕಾಶವಿದೆ. ತಂಬಾಕು ನಿಯಂತ್ರಣದಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಅದು ಅಕ್ರಮ ವ್ಯಾಪಾರ ನಿಯಂತ್ರಣದಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ವರ್ಲ್ಡ್ ಕಸ್ಟಮ್ ಆರ್ಗನೈಸೇಶನ್ ನಂತಹ ಸಂಸ್ಥೆಗಳ ಮೇಲೆ ಪ್ರಭಾವ ಬೀರಿದೆ. ಶಿಷ್ಟಾಚಾರದಿಂದ ತಂಬಾಕು ಪದಾರ್ಥಗಳ ಅಕ್ರಮ ವ್ಯಾಪಾರ ನಿರ್ಮೂಲನೆಯಾಗುವುದಲ್ಲದೆ, ತಂಬಾಕಿನ ವಿರುದ್ಧದ ಜಾಗತಿಕ ಕ್ರಿಯೆ ಬಲವರ್ಧನೆಗೊಳ್ಳುವುದಲ್ಲದೆ, ಇದೊಂದು ಮಹತ್ವದ ಕ್ರಮವಾಗಲಿದೆ ಹಾಗೂ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಇದೊಂದು ಹೊಸ ಕಾನೂನು ಅಸ್ತ್ರವಾಗಲಿದೆ. ಅಂತಾರಾಷ್ಟ್ರೀಯ ಆರೋಗ್ಯ ಸಹಕಾರ ಕುರಿತ ಕಾನೂನು ಆಯಾಮಗಳನ್ನು ಬಲವರ್ಧನೆಗೊಳಿಸುವ ಜತೆಗೆ ತಂಬಾಕು ಪದಾರ್ಥಗಳ ಅಕ್ರಮ ವ್ಯಾಪಾರ ನಿರ್ಮೂಲನೆಗೆ ಇದು ಸಮಗ್ರ ಅಸ್ತ್ರವಾಗಿ ಬಳಕೆಯಾಗಲಿದೆ.


            ಡಬ್ಲ್ಯೂಹೆಚ್ಒ ಎಫ್ ಸಿ ಟಿ ಸಿ, ಇದು ವಿಶ್ವ ಆರೋಗ್ಯ ಸಂಸ್ಥೆಯಡಿ ಸಹಿಹಾಕಿದ ಮೊದಲ ಸಾರ್ವಜನಿಕ ಆರೋಗ್ಯ ಒಪ್ಪಂದವಾಗಿದೆ. ಎಫ್ ಸಿ ಟಿ ಸಿಯ ಉದ್ದೇಶವೆಂದರೆ ರಾಷ್ಟ್ರೀಯ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ತಂಬಾಕು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ತಂಬಾಕು ಪದಾರ್ಥಗಳ ಬೇಡಿಕೆ, ಪೂರೈಕೆಯನ್ನು ತಗ್ಗಿಸುವ ಗುರಿ ಹೊಂದಿದೆ.


            ಡಬ್ಲ್ಯೂಹೆಚ್ಒ ಎಫ್ ಸಿ ಟಿ ಸಿಯ15ನೇ ವಿಧಿಯಡಿ ಉಲ್ಲೇಖಿಸಿರುವ ಪ್ರಮುಖ ಅಂಶವೆಂದರೆ ತಂಬಾಕು ಪೂರೈಕೆ ತಗ್ಗಿಸಲು ಕಾರ್ಯತಂತ್ರಗಳನ್ನು ಪಾಲಿಸುವುದು. ಅವುಗಳೆಂದರೆ ಎಲ್ಲ ಬಗೆಯ ತಂಬಾಕು ಪದಾರ್ಥಗಳ ಅಕ್ರಮ ವ್ಯಾಪಾರ ನಿರ್ಮೂಲನೆ ಮಾಡುವುದು, ಕಳ್ಳಸಾಗಣೆ ತಡೆಯುವುದು, ಅಕ್ರಮ ಉತ್ಪಾದನೆ ಮತ್ತು ನಕಲಿಯನ್ನು ತಡೆಗಟ್ಟುವುದಾಗಿದೆ. ಅದರಂತೆ ಎಫ್ ಸಿ ಟಿ ಸಿಯ ಆಡಳಿತ ಮಂಡಳಿ ಕಾನ್ಫರೆನ್ಸ್ ಆಫ್ ಪಾರ್ಟೀಸ್(ಸಿಒಪಿ) ಅಭಿವೃದ್ಧಿಪಡಿಸಿರುವ ಶಿಷ್ಟಾಚಾರವನ್ನು ಒಪ್ಪಿಕೊಳ್ಳಲಾಗಿದೆ. ಈ ಶಿಷ್ಟಾಚಾರವನ್ನು ಹತ್ತು ಭಾಗಗಳಾಗಿ ವಿಂಗಡಿಸಲಾಗಿದೆ ಮತ್ತು ಅವು 47 ಪರಿಚ್ಛೇದಗಳನ್ನು ಒಳಗೊಂಡಿವೆ.


*********  
 



(Release ID: 1531132) Visitor Counter : 72