ಸಂಪುಟ

ಭಾರತೀಯ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸೇವೆ(ಐಪಿಇಎಸ್ಎಸ್) ಹೆಸರಿನಲ್ಲಿ ಪೆಟ್ರೋಲಿಯಂ ಮತ್ತು ಸುರಕ್ಷತಾ ಸಂಸ್ಥೆ(ಪೆಸ್ಕೋ)ಯಲ್ಲಿನ ತಾಂತ್ರಿಕ ವೃಂದದ ಸೇವೆಗಳಲ್ಲಿ 'ಎ' ವರ್ಗದ ಶ್ರೇಣಿ ಸೃಷ್ಟಿಗೆ ಮತ್ತು ಪರಾಮರ್ಶೆಗೆ ಕೇಂದ್ರ ಸಂಪುಟ ಅನುಮೋದನೆ

Posted On: 02 MAY 2018 3:35PM by PIB Bengaluru

ಭಾರತೀಯ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸೇವೆ(ಐಪಿಇಎಸ್ಎಸ್) ಹೆಸರಿನಲ್ಲಿ ಪೆಟ್ರೋಲಿಯಂ ಮತ್ತು ಸುರಕ್ಷತಾ ಸಂಸ್ಥೆ(ಪೆಸ್ಕೋ)ಯಲ್ಲಿನ ತಾಂತ್ರಿಕ ವೃಂದದ ಸೇವೆಗಳಲ್ಲಿ 'ಎ' ವರ್ಗದ ಶ್ರೇಣಿ ಸೃಷ್ಟಿಗೆ ಮತ್ತು ಪರಾಮರ್ಶೆಗೆ ಕೇಂದ್ರ ಸಂಪುಟ ಅನುಮೋದನೆ


            ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಭಾರತೀಯ ಪೆಟ್ರೋಲಿಯಂ ಮತ್ತು ಸ್ಫೋಟಕಗಳ ಸುರಕ್ಷತಾ ಸೇವೆ(ಐಪಿಇಎಸ್ಎಸ್) ಹೆಸರಿನಲ್ಲಿ ಪೆಟ್ರೋಲಿಯಂ ಮತ್ತು ಸುರಕ್ಷತಾ ಸಂಸ್ಥೆ(ಪೆಸ್ಕೋ)ಯಲ್ಲಿನ ತಾಂತ್ರಿಕ ವೃಂದದ ಸೇವೆಗಳಲ್ಲಿ 'ಎ' ವರ್ಗದ ಶ್ರೇಣಿ ಸೃಷ್ಟಿಗೆ ಮತ್ತು ಪರಾಮರ್ಶೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದೆ.


            ಈ ಕ್ರಮದಿಂದ ಸಂಸ್ಥೆಯ ದಕ್ಷತೆ ಹಾಗೂ ಸಾಮರ್ಥ್ಯ ಹೆಚ್ಚಳವಾಗಲಿದೆ ಮತ್ತು ಇದು 'ಎ' ವೃಂದದ ಅಧಿಕಾರಿಗಳ ವೃತ್ತಿ ಪ್ರಗತಿಯನ್ನು ವೃದ್ಧಿಸುತ್ತದೆ.

ಹಿನ್ನೆಲೆ:

            ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ(ಡಿಐಪಿಪಿ) ಅಡಿ ಕಾರ್ಯನಿರ್ವಹಿಸುವ ಅಧೀನ ಸಂಸ್ಥೆ ಪೆಸ್ಕೋ. ಇದು 1898ರಿಂದ ಸ್ಪೋಟಕಗಳು, ಘನೀಕೃತ ಅನಿಲ ಮತ್ತು ಪೆಟ್ರೋಲಿಯಂ ಮತ್ತಿತರ ಸುರಕ್ಷತಾ ನಿಯಂತ್ರಣ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಕಾಲಕ್ರಮೇಣ ಪೆಸ್ಕೋದ ಪಾತ್ರ ಮತ್ತು ಹೊಣೆಗಾರಿಕೆಗಳು ಹಲವು ಪಟ್ಟು ಹೆಚ್ಚಾಗಿವೆ ಮತ್ತು ನಾನಾ ಕ್ಷೇತ್ರಗಳಲ್ಲಿ ವಿಸ್ತರಣೆಗೊಂಡಿವೆ. ಇಂದು ಸಂಸ್ಥೆ ಸ್ಫೋಟಕಗಳು, ಪೆಟ್ರೋಲಿಯಂ, ಘನೀಕೃತ ಅನಿಲ, ಅನಿಲ ಸಿಲಿಂಡರ್, ಬೇರೆ ರಾಷ್ಟ್ರಗಳಿಂದ ಅನಿಲ ಪೂರೈಸುವ ಕೊಳವೆ ಮಾರ್ಗಗಳು, ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್(ಎಲ್ ಎನ್ ಜಿ), ಕಂಪ್ರಸಡ್ ನ್ಯಾಚುರಲ್ ಗ್ಯಾಸ್(ಸಿ ಎನ್ ಜಿ), ಆಟೋ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್(ಆಟೋ ಎಲ್ ಪಿ ಜಿ) ಮತ್ತಿತರ ಹಲವು ವಿಷಯಗಳ ಕುರಿತಂತೆ ಕಾರ್ಯನಿರ್ವಹಿಸುತ್ತಿದೆ. ಪರವಾನಗಿಗಳ ಸಂಖ್ಯೆ ಮತ್ತು ಇತರ ಚಟುವಟಿಕೆಗಳು ಹೆಚ್ಚಾಗುತ್ತಿರುವುದರಿಂದ ಅದರ ಕಾರ್ಯಭಾರ ಹಲವು ಪಟ್ಟು ಹೆಚ್ಚಾಗಿ ಭಾರೀ ಏರಿಕೆ ಕಂಡುಬಂದಿದೆ.


            ಪ್ರಸ್ತುತ ಪೆಸ್ಕೋದಲ್ಲಿ ತಾಂತ್ರಿಕ ವರ್ಗದ 'ಎ' ಶ್ರೇಣಿಯಲ್ಲಿ ಮಂಜೂರಾಗಿರುವ ಹುದ್ದೆಗಳು 137, ಅವುಗಳಲ್ಲಿ 60 ಜೂನಿಯರ್ ಟೈಮ್ಸ್ ಸ್ಕೇಲ್(ಜೆಟಿಎಸ್) ಅಧಿಕಾರಿಗಳು, 46 ಸೀನಿಯರ್ ಟೈಮ್ಸ್ ಸ್ಕೇಲ್(ಎಸ್ ಟಿ ಎಸ್) ಮಟ್ಟದ ಅಧಿಕಾರಿಗಳು, 23 ಕಿರಿಯ ಆಡಳಿತಾತ್ಮಕ ದರ್ಜೆ ಅಧಿಕಾರಿಗಳು(12ರ ಮಟ್ಟ), 7 ಕಿರಿಯ ಆಡಳಿತಾತ್ಮಕ ಅಧಿಕಾರಿಗಳು(13ರ ಮಟ್ಟ) ಮತ್ತು ಸ್ಫೋಟಕಗಳ ಮುಖ್ಯ ನಿಯಂತ್ರಿಕರ ಹುದ್ದೆಯ ಓರ್ವ ಹಿರಿಯ ಆಡಳಿತಾಧಿಕಾರಿ ದರ್ಜೆ.


            ಎಲ್ಲ ವರ್ಗಗಳಲ್ಲೂ ಪದೋನ್ನತಿ ಸ್ಥಗಿತಗೊಂಡಿದೆ ಮತ್ತು ಸಿಬ್ಬಂದಿಯ ನೈತಿಕ ಸ್ಥೈರ್ಯ ಹಾಗೂ ಅವರ ಸಾಧನೆಯನ್ನು ಹೆಚ್ಚಿಸಲು ಐಪಿಇಎಸ್ಎಸ್ ಹೆಸರಿನಲ್ಲಿ ಪೆಸ್ಕೋದ ತಾಂತ್ರಿಕ ವರ್ಗದಲ್ಲಿ 'ಎ' ದರ್ಜೆ ಸೇವೆಗಳನ್ನು ಸೃಷ್ಟಿಸಲು ನಿರ್ಧರಿಸಲಾಗಿದೆ.  ಮರು ವಿನ್ಯಾಸಗೊಳಿಸಿದ ಹೊಸ ಸೇವೆಗಳಲ್ಲಿ 13ರ ಮಟ್ಟದಲ್ಲಿ 5 ಹುದ್ದೆಗಳು ಹೆಚ್ಚಾಗಲಿವೆ ಮತ್ತು 12ರ ಮಟ್ಟದಲ್ಲಿ 3 ಹುದ್ದೆಗಳು ಹೆಚ್ಚಳವಾಗಲಿವೆ ಹಾಗೂ 11ರ ಮಟ್ಟದಲ್ಲಿ 8 ಹುದ್ದೆಗಳು ಕಡಿತಗೊಳ್ಳಲಿವೆ.



(Release ID: 1531129) Visitor Counter : 92