Social Welfare
ಎಲ್ಲರಿಗೂ ಸಾಕ್ಷರತೆ
प्रविष्टि तिथि:
29 SEP 2026 11:13 AM
ವಿಕಸಿತ ಭಾರತದೆಡೆಗೆ ಭಾರತದ ಪಯಣ
ಭಾರತದ ಸಾಕ್ಷರತಾ ಜಿಗಿತ: ಪೂರ್ಣ ಸಾಕ್ಷರತೆಯೆಡೆಗೆ ಹಾದಿ ನಿರ್ಮಾಣ
ಸಾಕ್ಷರತೆಯು ದೇಶದ ಅಭಿವೃದ್ಧಿಯ ಮೂಲಪಾಯವಾಗಿದೆ. ಇದು ಕೇವಲ ಶೈಕ್ಷಣಿಕ ಪ್ರಗತಿಯ ಸೂಚಕವಾಗಿರದೆ, ವ್ಯಕ್ತಿಗಳು ಅವಕಾಶಗಳನ್ನು ಪಡೆದುಕೊಳ್ಳಲು, ಆರ್ಥಿಕತೆಯಲ್ಲಿ ಪಾಲ್ಗೊಳ್ಳಲು ಮತ್ತು ಸಮಾಜದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳಲು ಸಶಕ್ತಗೊಳಿಸುತ್ತದೆ. ಯುನೆಸ್ಕೋ ಸಾಕ್ಷರತೆಯನ್ನು ಮೂಲಭೂತ ಮಾನವ ಹಕ್ಕು ಹಾಗೂ ಸಮಾನತೆ, ನ್ಯಾಯ, ಒಳಗೊಳ್ಳುವಿಕೆ ಮತ್ತು ಕಾನೂನಿನ ಆಡಳಿತಕ್ಕೆ ಗೌರವವನ್ನು ಸಾಧಿಸುವಲ್ಲಿ ಪ್ರಮುಖ ಚಾಲಕ ಶಕ್ತಿ ಎಂದು ಗುರುತಿಸಿದೆ.
ಕಳೆದ ಎಂಟು ದಶಕಗಳಲ್ಲಿ ಭಾರತವು ತನ್ನ ಸಾಕ್ಷರತಾ ದರವನ್ನು ಸುಧಾರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 1947ರಲ್ಲಿ ದೇಶದ ಒಟ್ಟಾರೆ ಸಾಕ್ಷರತಾ ದರವು ಕೇವಲ ಶೇಕಡಾ 14 ರಷ್ಟಿದ್ದರೆ, ಮಹಿಳಾ ಸಾಕ್ಷರತೆಯು ಶೇಕಡಾ 8 ರಷ್ಟು ಅತ್ಯಂತ ಕನಿಷ್ಠ ಮಟ್ಟದಲ್ಲಿತ್ತು. ಸಾಕ್ಷರತೆಯನ್ನು ಸುಧಾರಿಸಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಭಾರತವು ವರ್ಷಗಳಿಂದ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ. ಎಲ್ಲಾ ಹಂತಗಳಲ್ಲಿ ಶಿಕ್ಷಣವನ್ನು ಸುಧಾರಿಸಲು ಹಾಗೂ ಪರಿಣಿತ, ಹೊಂದಿಕೊಳ್ಳುವ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸಲು ಸರ್ಕಾರವು 'ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020' ಅನ್ನು ಜಾರಿಗೆ ತಂದಿದೆ.
|
ಸಾಕ್ಷರತೆ ಎಂದರೇನು?
ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮೊದಲ ಬಾರಿಗೆ ಸಾಕ್ಷರತೆಯನ್ನು ಹೀಗೆ ವ್ಯಾಖ್ಯಾನಿಸಿದೆ: “ಸಾಕ್ಷರತೆ ಎಂದರೆ ಗ್ರಹಿಕೆಯೊಂದಿಗೆ ಓದುವ, ಬರೆಯುವ ಮತ್ತು ಲೆಕ್ಕಾಚಾರ ಮಾಡುವ ಸಾಮರ್ಥ್ಯವಾಗಿದೆ; ಅಂದರೆ, ಡಿಜಿಟಲ್ ಸಾಕ್ಷರತೆ, ಹಣಕಾಸು ಸಾಕ್ಷರತೆ ಮುಂತಾದ ನಿರ್ಣಾಯಕ ಜೀವನ ಕೌಶಲ್ಯಗಳೊಂದಿಗೆ ಗುರುತಿಸುವ, ಅರ್ಥಮಾಡಿಕೊಳ್ಳುವ, ಅರ್ಥೈಸುವ ಮತ್ತು ರಚಿಸುವ ಸಾಮರ್ಥ್ಯವಾಗಿದೆ.” ಇದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಶೇಕಡಾ 95 ಸಾಕ್ಷರತೆಯನ್ನು ಪೂರ್ಣ ಸಾಕ್ಷರತೆಗೆ ಸಮಾನವೆಂದು ಪರಿಗಣಿಸುತ್ತದೆ.
ಜಾಗತಿಕ ಸಂದರ್ಭದಲ್ಲಿ, ಯುನೆಸ್ಕೋ ಸಾಕ್ಷರತೆಯನ್ನು ಹೀಗೆ ವ್ಯಾಖ್ಯಾನಿಸುತ್ತದೆ: "ದಿನದಿಂದ ದಿನಕ್ಕೆ ತಾಂತ್ರಿಕವಾಗಿ ಮತ್ತು ಮಾಹಿತಿಯಿಂದ ಸಮೃದ್ಧವಾಗುತ್ತಿರುವ ವಾತಾವರಣದಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಓದುವ, ಬರೆಯುವ ಮತ್ತು ಸಂಖ್ಯೆಗಳನ್ನು ಬಳಸುವ, ಹಾಗೆಯೇ ಡಿಜಿಟಲ್ ಸಾಮಗ್ರಿಗಳನ್ನು ಬಳಸುವ ಸಾಮರ್ಥ್ಯವಾಗಿದೆ — ಇದು ಕೆಲಸ, ಕಲಿಕೆ ಮತ್ತು ಜೀವನದಲ್ಲಿ ವ್ಯಕ್ತಿಗಳ ತೊಡಗಿಸಿಕೊಳ್ಳುವಿಕೆಗೆ ಕೇಂದ್ರವಾಗಿರುವ ಒಂದು ಮೂಲಭೂತ ಕೌಶಲ್ಯವಾಗಿದೆ." ಇದು ಶಿಕ್ಷಣದ ಹಕ್ಕಿನ ಅತ್ಯಗತ್ಯ ಭಾಗವಾಗಿದೆ ಮತ್ತು ಇತರ ಮಾನವ ಹಕ್ಕುಗಳನ್ನು ಅನುಭವಿಸಲು ಅಗತ್ಯವಾದ ಪೂರ್ವಾಪೇಕ್ಷಿತವಾಗಿದೆ.
|
ಸಾಕ್ಷರತೆ ಮತ್ತು ಶಿಕ್ಷಣದಲ್ಲಿನ ಪ್ರಗತಿಯ ಮಾಪನ
1951 ರಿಂದೀಚೆಗೆ ಭಾರತದ ಸಾಕ್ಷರತಾ ದರವು ಗಮನಾರ್ಹ ಪ್ರಗತಿಯನ್ನು ಕಂಡಿದ್ದು, 1951ರಲ್ಲಿ ಶೇಕಡಾ 18.32 ರಷ್ಟಿದ್ದ ಸಾಕ್ಷರತೆಯು 2011ರ ವೇಳೆಗೆ ಶೇಕಡಾ 74.04 ಕ್ಕೆ ಏರಿಕೆಯಾಗಿದೆ. ಪುರುಷರ ಸಾಕ್ಷರತೆಯು ಶೇಕಡಾ 27.15 ರಿಂದ ಶೇಕಡಾ 82.14 ಕ್ಕೆ ಹೆಚ್ಚಳವಾಗಿದ್ದರೆ, ಮಹಿಳಾ ಸಾಕ್ಷರತೆಯು ಶೇಕಡಾ 8.86 ರಿಂದ ಶೇಕಡಾ 65.46 ಕ್ಕೆ ಗಣನೀಯವಾಗಿ ಏರಿಕೆಯಾಗಿದೆ.

ನಗರ ಪ್ರದೇಶದ ಸಾಕ್ಷರತಾ ದರವು ೧೯೫೧ ರಲ್ಲಿ ಶೇಕಡಾ 34.59 ರಷ್ಟಿದ್ದುದು 2011 ರ ವೇಳೆಗೆ ಶೇಕಡಾ 84.1 ಕ್ಕೆ ಏರಿಕೆಯಾಯಿತು. ಅದೇ ಸಮಯದಲ್ಲಿ ಗ್ರಾಮೀಣ ಸಾಕ್ಷರತಾ ದರವು ಶೇಕಡಾ 12.10 ರಿಂದ ಶೇಕಡಾ 67.8 ಕ್ಕೆ ಹೆಚ್ಚಳವಾಯಿತು. 2001ಮತ್ತು 2011 ರ ನಡುವೆ, ಗ್ರಾಮೀಣ ಪುರುಷರ ಸಾಕ್ಷರತೆಯು ಶೇಕಡಾ 10 ರಷ್ಟು ಹೆಚ್ಚಾಗಿದ್ದರೆ, ಗ್ರಾಮೀಣ ಮಹಿಳೆಯರ ಸಾಕ್ಷರತೆಯು ಶೇಕಡಾ 26 ರಷ್ಟು ಬೆಳವಣಿಗೆ ಕಂಡಿತು; ಇದು ಮಹಿಳಾ ಸಾಕ್ಷರತೆಯಲ್ಲಿ ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
ಆವರ್ತಕ ಕಾರ್ಮಿಕ ಪಡೆಯ ಸಮೀಕ್ಷೆ 2025 ರ ಪ್ರಕಾರ, ನಗರ ಪ್ರದೇಶಗಳಲ್ಲಿ 7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತಾ ದರವು ಶೇಕಡಾ 89 ರಷ್ಟನ್ನು ತಲುಪಿದೆ ಹಾಗೂ 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತಾ ದರವು ಶೇಕಡಾ 88% ರಷ್ಟನ್ನು ತಲುಪಿದೆ. ನಗರ ನಿವಾಸಿಗಳಲ್ಲಿ 7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತೆಯು ಪುರುಷರಲ್ಲಿ ಶೇಕಡಾ 93.1 ಮತ್ತು ಮಹಿಳೆಯರಲ್ಲಿ ಶೇಕಡಾ 84.8 ರಷ್ಟನ್ನು ತಲುಪಿದೆ. ಗ್ರಾಮೀಣ ಪ್ರದೇಶಗಳಲ್ಲಿ, 7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತಾ ದರವು ಶೇಕಡಾ 77.4 ರಷ್ಟಿದ್ದರೆ, 5 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಾಕ್ಷರತಾ ದರವು ಶೇಕಡಾ 76.4 ರಷ್ಟಿದೆ. 7 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಗ್ರಾಮೀಣ ಜನಸಂಖ್ಯೆಯಲ್ಲಿ, ಸಾಕ್ಷರತಾ ದರವು ಪುರುಷರಲ್ಲಿ ಶೇಕಡಾ 84.8 ಮತ್ತು ಮಹಿಳೆಯರಲ್ಲಿ ಶೇಕಡಾ 70.3 ರಷ್ಟಿದೆ. ಈ ಸಮೀಕ್ಷೆಯ ಪ್ರಕಾರ ದೇಶದ ಒಟ್ಟಾರೆ ಸಾಕ್ಷರತಾ ದರವು ಶೇಕಡಾ 81.1 ಆಗಿದೆ.

ಸಾಕ್ಷರತೆಯ ಪ್ರಗತಿಗೆ ಪೂರಕವಾಗಿ, ಶಾಲೆಗಳಿಗೆ ದಾಖಲಾತಿ, ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದು (ಉಳಿಕೆ) ಮತ್ತು ಉನ್ನತ ತರಗತಿಗಳಿಗೆ ಪ್ರಗತಿಯನ್ನು ಸುಧಾರಿಸಲು ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. 2014-15 ರಿಂದೀಚೆಗೆ ಒಟ್ಟು ದಾಖಲಾತಿ ಪ್ರಮಾಣ, ಸ್ಥಿತ್ಯಂತರ (ಒಂದರಿಂದ ಇನ್ನೊಂದು ಹಂತಕ್ಕೆ ತಲುಪುವಿಕೆ) ಮತ್ತು ಶಾಲಾ ಉಳಿಕೆ ದರಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ.
ಯುಡೈಸ್+ ವರದಿ 2026 (UDISE+ Report 2025-26) ರ ಪ್ರಕಾರ:
- ಶಾಲಾ ದಾಖಲಾತಿ: 24.72 ಕೋಟಿಗಿಂತಲೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಗೆ ದಾಖಲಾಗಿದ್ದಾರೆ.
- ಒಟ್ಟು ದಾಖಲಾತಿ ಪ್ರಮಾಣ (GER): ಪೂನಾಡಿ (ಫೌಂಡೇಷನಲ್) ಹಂತದಲ್ಲಿ ಶೇಕಡಾ 42.8, ಪೂರ್ವಭಾವಿ (ಪ್ರಿಪರೇಟರಿ) ಹಂತದಲ್ಲಿ ಶೇಕಡಾ 91.7, ಮಧ್ಯಮ (ಮಿಡಲ್) ಹಂತದಲ್ಲಿ ಶೇಕಡಾ 89.6 ಮತ್ತು ಪ್ರೌಢ (ಸೆಕೆಂಡರಿ) ಹಂತದಲ್ಲಿ ಶೇಕಡಾ 71.7 ರಷ್ಟಿದೆ.
- ಶಾಲೆಯಿಂದ ಹೊರಗುಳಿಯುವ ದರ (ಡ್ರಾಪ್‌ಔಟ್ ದರ): ಪೂರ್ವಭಾವಿ ಹಂತದಲ್ಲಿ ಶೇಕಡಾ 1.8%, ಮಧ್ಯಮ ಹಂತದಲ್ಲಿ ಶೇಕಡಾ 3.6 ಮತ್ತು ಪ್ರೌಢ ಹಂತದಲ್ಲಿ ಶೇಕಡಾ 7.0 ರಷ್ಟಿದೆ.
- ಶಾಲಾ ಉಳಿಕೆ ದರ (ರಿಟೆಂಷನ್ ದರ): ಪೂನಾಡಿ ಹಂತದಲ್ಲಿ ಶೇಕಡಾ 98.5, ಪೂರ್ವಭಾವಿ ಹಂತದಲ್ಲಿ ಶೇಕಡಾ 91.1, ಮಧ್ಯಮ ಹಂತದಲ್ಲಿ ಶೇಕಡಾ 83.7 ಮತ್ತು ಪ್ರೌಢ ಹಂತದಲ್ಲಿ ಶೇಕಡಾ 51.9 ರಷ್ಟಿದೆ.
- ಸ್ಥಿತ್ಯಂತರ ದರ (ಟ್ರಾನ್ಸಿಷನ್ ದರ): ಈ ದರಗಳು ಸುಧಾರಿಸಿದ್ದು, ಶೇಕಡಾ 99.2 ರಷ್ಟು ವಿದ್ಯಾರ್ಥಿಗಳು ಪೂನಾಡಿ ಹಂತದಿಂದ ಪೂರ್ವಭಾವಿ ಹಂತಕ್ಕೆ, ಶೇಕಡಾ 93.8 ರಷ್ಟು ವಿದ್ಯಾರ್ಥಿಗಳು ಪೂರ್ವಭಾವಿ ಹಂತದಿಂದ ಮಧ್ಯಮ ಹಂತಕ್ಕೆ ಮತ್ತು ಶೇಕಡಾ 88.3 ರಷ್ಟು ವಿದ್ಯಾರ್ಥಿಗಳು ಮಧ್ಯಮ ಹಂತದಿಂದ ಪ್ರೌಢ ಹಂತಕ್ಕೆ ಪ್ರಗತಿ ಸಾಧಿಸಿದ್ದಾರೆ.
|
ಸ್ಥಿತ್ಯಂತರ ದರವು (ಟ್ರಾನ್ಸಿಷನ್ ದರ) ಶಿಕ್ಷಣದ ಒಂದು ಹಂತದಿಂದ ಮುಂದಿನ ಹಂತಕ್ಕೆ ಯಶಸ್ವಿಯಾಗಿ ತಲುಪುವ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವನ್ನು ಸೂಚಿಸುತ್ತದೆ.
|
ಕಳೆದ ದಶಕದಲ್ಲಿ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯು ಗಮನಾರ್ಹವಾಗಿ ವಿಸ್ತರಿಸಿದೆ:
- ದಾಖಲಾತಿ: 2014-15 ರಲ್ಲಿ 3.42 ಕೋಟಿಯಷ್ಟಿದ್ದ ದಾಖಲಾತಿಯು 2023-24 ರ ವೇಳೆಗೆ ೪.೫೦ ಕೋಟಿಗೆ ಹೆಚ್ಚಳವಾಗಿದೆ.
- ಒಟ್ಟು ದಾಖಲಾತಿ ಪ್ರಮಾಣ: ಇದೇ ಅವಧಿಯಲ್ಲಿ ಒಟ್ಟು ದಾಖಲಾತಿ ಪ್ರಮಾಣವು ಶೇಕಡಾ 23.7 ರಿಂದ ಶೇಕಡಾ 30ಕ್ಕೆ ಏರಿಕೆಯಾಗಿದೆ.
- ಉನ್ನತ ಶಿಕ್ಷಣ ಪೂರ್ಣಗೊಳಿಸಿದವರ ಸಂಖ್ಯೆ (ಔಟ್‌ಟರ್ನ್): 2014-15ರಲ್ಲಿ 88.28 ಲಕ್ಷದಷ್ಟಿದ್ದ ಉನ್ನತ ಶಿಕ್ಷಣ ಪೂರ್ಣಗೊಳಿಸಿದ ಪದವೀಧರರ ಸಂಖ್ಯೆಯು 2023-24 ರಲ್ಲಿ 1.09 ಕೋಟಿಗೂ ಹೆಚ್ಚು ತಲುಪಿದೆ.
|
ಉನ್ನತ ಶಿಕ್ಷಣ ಪೂರ್ಣಗೊಳಿಸಿದವರ ಸಂಖ್ಯೆ (ಔಟ್‌ಟರ್ನ್) ಎಂದರೆ ನೀಡಲಾದ ಒಂದು ಶೈಕ್ಷಣಿಕ ವರ್ಷದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಯಶಸ್ವಿಯಾಗಿ ಉತ್ತೀರ್ಣರಾಗಿ ಹೊರಬರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯನ್ನು ಸೂಚಿಸುತ್ತದೆ.
|
ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ವಂಚಿತ ಸಮುದಾಯಗಳ ಒಳಗೊಳ್ಳುವಿಕೆಯೊಂದಿಗೆ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಿರುವುದು, ಶೈಕ್ಷಣಿಕ ಅವಕಾಶಗಳು ಮತ್ತು ಸಮಾನತೆ ಸುಧಾರಿಸಿರುವುದನ್ನು ಪ್ರತಿಬಿಂಬಿಸುತ್ತದೆ. ಇದು ಉನ್ನತ ಶಿಕ್ಷಣದ ಲಭ್ಯತೆಯಲ್ಲಿ ಕಂಡುಬರುತ್ತಿರುವ ನಿರಂತರ ಸುಧಾರಣೆಯನ್ನು ಬಿಂಬಿಸುತ್ತಿದ್ದು, ೨೦೩೫ ರ ವೇಳೆಗೆ ಉನ್ನತ ಶಿಕ್ಷಣದಲ್ಲಿ ಶೇಕಡಾ ೫೦ (50%) ಒಟ್ಟು ದಾಖಲಾತಿ ಪ್ರಮಾಣವನ್ನು (GER) ತಲುಪುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಗುರಿಯನ್ನು ಬೆಂಬಲಿಸುತ್ತದೆ.
ಸಾಕ್ಷರತೆಯನ್ನು ಉತ್ತೇಜಿಸಲು ಸರ್ಕಾರದ ಪ್ರಮುಖ ಉಪಕ್ರಮಗಳು ಸಾಕ್ಷರತೆಯ ಕುರಿತಾದ ಭಾರತದ ಧೋರಣೆಯು ಕೇವಲ ಮೂಲಭೂತ ಓದು ಮತ್ತು ಬರವಣಿಗೆಗೆ ಸೀಮಿತವಾಗದೆ, ವೇಗವಾಗಿ ಬದಲಾಗುತ್ತಿರುವ ಆರ್ಥಿಕತೆ ಮತ್ತು ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯವಿರುವ ವ್ಯಾಪಕ ಕೌಶಲ್ಯಗಳ ಕಡೆಗೆ ವಿಕಸನಗೊಂಡಿದೆ. ಎನ್‌ಇಪಿ 2020 ಕ್ಕೆ ಅನುಗುಣವಾಗಿ, ಶಿಕ್ಷಣದ ಲಭ್ಯತೆಯನ್ನು ವಿಸ್ತರಿಸಲು, ಕಲಿಕಾ ಫಲಿತಾಂಶಗಳನ್ನು ಬಲಪಡಿಸಲು, ಸಮಗ್ರತೆಯನ್ನು ಉತ್ತೇಜಿಸಲು ಮತ್ತು ಆಜೀವ ಕಲಿಕೆಗೆ ಬೆಂಬಲ ನೀಡಲು ಸರ್ಕಾರವು ಉಲ್ಲಾಸ್ ಮತ್ತು ನಿಪುಣ ಭಾರತದಂತಹ ಉಪಕ್ರಮಗಳನ್ನು ಜಾರಿಗೆ ತಂದಿದೆ.
ಉಲ್ಲಾಸ್ (ಸಮಾಜದಲ್ಲಿ ಎಲ್ಲರಿಗೂ ಆಜೀವ ಕಲಿಕೆಯ ಗ್ರಹಿಕೆ) ಉಲ್ಲಾಸ್ - ನವ ಭಾರತ ಸಾಕ್ಷರತಾ ಕಾರ್ಯಕ್ರಮ: ಉಲ್ಲಾಸ್, ಅಥವಾ 'ನವ ಭಾರತ ಸಾಕ್ಷರತಾ ಕಾರ್ಯಕ್ರಮ', ಕೇಂದ್ರ ಪ್ರಾಯೋಜಿತ ಉಪಕ್ರಮವಾಗಿದೆ. ಇದು ಎನ್‌ಇಪಿ 2020 ರ ತತ್ವಗಳಿಗೆ ಅನುಗುಣವಾಗಿದೆ. ಔಪಚಾರಿಕ ಶಾಲಾ ಶಿಕ್ಷಣದಿಂದ ವಂಚಿತರಾದ 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರನ್ನು ಸಶಕ್ತಗೊಳಿಸುವುದರ ಮೇಲೆ ಇದು ಗಮನಹರಿಸುತ್ತದೆ. ಈ ಕಾರ್ಯಕ್ರಮವು ಕಾರ್ಯಕಾರಿ ಸಾಕ್ಷರತೆ, ಸಂಖ್ಯಾಜ್ಞಾನ, ನಿರ್ಣಾಯಕ ಜೀವನ ಕೌಶಲ್ಯಗಳು ಮತ್ತು ಆಜೀವ ಕಲಿಕೆಯ ಅವಕಾಶಗಳನ್ನು ಒದಗಿಸುತ್ತದೆ. ಇದು ಈ ಗುರಿಯ ಜನಸಮೂಹದ ಸಾಮಾಜಿಕ ಸಮಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಅವರ ಕೊಡುಗೆಯನ್ನು ಪ್ರೋತ್ಸಾಹಿಸುತ್ತದೆ.
ಉಲ್ಲಾಸ್ ಕಾರ್ಯಕ್ರಮದ ದೃಷ್ಟಿಕೋನ 'ಜನ್ ಜನ್ ಸಾಕ್ಷರ್' ಆಗಿದ್ದು, ಸಾಕ್ಷರತೆಯ ಮೂಲಕ ಪ್ರತಿಯೊಬ್ಬ ವ್ಯಕ್ತಿಯನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಇದು 'ಕರ್ತವ್ಯ ಬೋಧನೆ'ಯ (ಕರ್ತವ್ಯ ಪ್ರಜ್ಞೆ) ಸ್ಪೂರ್ತಿಯನ್ನು ಅನುಸರಿಸುತ್ತದೆ. ಸಾರ್ವತ್ರಿಕ ಸಾಕ್ಷರತೆಯನ್ನು ಸಾಧಿಸಲು ಇದು ಸ್ವಯಂಸೇವಕತ್ವ ಮತ್ತು 'ಜನಭಾಗೀದಾರಿ' ಅಥವಾ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ.
ಉಲ್ಲಾಸ್ ಕಾರ್ಯಕ್ರಮವು ಹೈಬ್ರಿಡ್ (ಮಿಶ್ರಿತ) ಕಲಿಕಾ ವಿಧಾನವನ್ನು ಅನುಸರಿಸುತ್ತದೆ. ಐಒಎಸ್ ಮತ್ತು ಆಂಡ್ರಾಯ್ಡ್ ವೇದಿಕೆಗಳಲ್ಲಿ ಲಭ್ಯವಿರುವ 'ಉಲ್ಲಾಸ್ ಆ್ಯಪ್' 27 ಭಾಷೆಗಳಲ್ಲಿ ಬೋಧನಾ-ಕಲಿಕಾ ಸಾಮಗ್ರಿಗಳನ್ನು ಹೊಂದಿದೆ. ಈ ಯೋಜನೆಯಡಿಯಲ್ಲಿ, ಜಿಲ್ಲಾ ಅಥವಾ ಬ್ಲಾಕ್ ಮಟ್ಟದಲ್ಲಿ ಸರ್ವೇಕ್ಷಕರು ಕಲಿಕಾರ್ಥಿಗಳು ಮತ್ತು ಸ್ವಯಂಸೇವಕರನ್ನು ಗುರುತಿಸುತ್ತಾರೆ. ಈ ಸರ್ವೇಕ್ಷಕರಲ್ಲಿ ಶಾಲಾ ಶಿಕ್ಷಕರು, ನಾಗರಿಕ ಸಮಾಜದ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿರಬಹುದು. ಸಾಕ್ಷರರಲ್ಲದ ವ್ಯಕ್ತಿಗಳನ್ನು ಮತ್ತು ಸಂಭಾವ್ಯ ಸ್ವಯಂಸೇವಕ ಶಿಕ್ಷಕರನ್ನು ಗುರುತಿಸಲು ಸರ್ವೇಕ್ಷಕರು ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಾರೆ. ಮುಂದಿನ ಹಂತದಲ್ಲಿ, ಉಲ್ಲಾಸ್ ಆ್ಯಪ್‌ನಲ್ಲಿ ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಕಲಿಕಾರ್ಥಿಗಳನ್ನು ಸ್ವಯಂಸೇವಕ ಶಿಕ್ಷಕರೊಂದಿಗೆ ಜೋಡಿಸಲಾಗುತ್ತದೆ. ಮುಖಾಮುಖಿ ಮತ್ತು ಆನ್‌ಲೈನ್ ವಿಧಾನಗಳ ಮೂಲಕ ತರಬೇತಿ, ಓರಿಯಂಟೇಶನ್‌ಗಳು ಮತ್ತು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಕಲಿಕಾರ್ಥಿಗಳು ಕಲಿಕಾ ಸಾಮಗ್ರಿಗಳನ್ನು ಪಡೆದುಕೊಂಡು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನದ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ನಂತರ ಅವರು ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಮೌಲ್ಯಮಾಪನ ಪರೀಕ್ಷೆಗೆ ಹಾಜರಾಗುತ್ತಾರೆ, ತದನಂತರ ಮೌಲ್ಯಮಾಪನ ಮತ್ತು ಪ್ರಮಾಣಪತ್ರ ವಿತರಣೆ ನಡೆಯುತ್ತದೆ.

ಉಲ್ಲಾಸ್ ಯೋಜನೆಯ ಪ್ರಗತಿ ಮತ್ತು ಪ್ರಭಾವ: ಈ ಯೋಜನೆಯು 2022-27 ರ ಅವಧಿಯಲ್ಲಿ 1,037.90 ಕೋಟಿ ರೂಪಾಯಿಗಳ ಹಣಕಾಸು ವೆಚ್ಚದೊಂದಿಗೆ ೫ ಕೋಟಿ ಕಲಿಕಾರ್ಥಿಗಳನ್ನು ತಲುಪುವ ಗುರಿಯನ್ನು ಹೊಂದಿದೆ. ಉಲ್ಲಾಸ್ ಕಾರ್ಯಕ್ರಮವು ಪ್ರಸ್ತುತ ಸುಮಾರು 4.03 ಕೋಟಿ ನೋಂದಾಯಿತ ಕಲಿಕಾರ್ಥಿಗಳನ್ನು ಮತ್ತು 52.20 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರನ್ನು ಹೊಂದಿದೆ. ಇಲ್ಲಿಯವರೆಗೆ, 3.3 ಕೋಟಿಗೂ ಹೆಚ್ಚು ಕಲಿಕಾರ್ಥಿಗಳು 'ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಮೌಲ್ಯಮಾಪನ ಪರೀಕ್ಷೆ'ಯಲ್ಲಿ ಪಾಲ್ಗೊಂಡಿದ್ದಾರೆ.

2024 ಮತ್ತು 2026ರ ನಡುವೆ ಹತ್ತು (10) ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ತಮ್ಮನ್ನು ಪೂರ್ಣ ಸಾಕ್ಷರ ರಾಜ್ಯಗಳೆಂದು ಘೋಷಿಸಿಕೊಂಡಿವೆ. ಇವುಗಳಲ್ಲಿ ಲಡಾಖ್, ಮಿಜೋರಾಂ, ಗೋವಾ, ತ್ರಿಪುರ, ಹಿಮಾಚಲ ಪ್ರದೇಶ, ಚಂಡೀಗಢ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಸಿಕ್ಕಿಂ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರ ಸೇರಿವೆ. ಉಲ್ಲಾಸ್ ಯೋಜನೆಯು ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ ಪ್ರೌಢರ ಸಾಕ್ಷರತೆಯನ್ನು ವಿಸ್ತರಿಸುತ್ತಿದ್ದು, ಕೋಟ್ಯಂತರ ಕಲಿಕಾರ್ಥಿಗಳನ್ನು ತಲುಪುವ ಮೂಲಕ ಸಾರ್ವತ್ರಿಕ ಸಾಕ್ಷರತೆಯ ಭಾರತದ ಗುರಿಯನ್ನು ಮುನ್ನಡೆಸುತ್ತಿದೆ.
ನಿಪುಣ್ ಭಾರತ್ : (ಓದುವಿಕೆ, ಅರ್ಥಗ್ರಹಿಕೆ ಮತ್ತು ಸಂಖ್ಯಾಜ್ಞಾನದಲ್ಲಿ ಪ್ರಾವೀಣ್ಯತೆಗಾಗಿ ರಾಷ್ಟ್ರೀಯ ಉಪಕ್ರಮ)
ಸಮಗ್ರ ಶಿಕ್ಷಣ ಅಭಿಯಾನದ ಅಡಿಯಲ್ಲಿ ಜುಲೈ 2021 ರಲ್ಲಿ ಪ್ರಾರಂಭಿಸಲಾದ ಈ ಉಪಕ್ರಮವು, ಆರಂಭಿಕ ಕಲಿಕೆಯನ್ನು ಬಲಪಡಿಸುವುದು ಮತ್ತು ನಿರಂತರ ಶೈಕ್ಷಣಿಕ ಅಭಿವೃದ್ಧಿಗೆ ಬೆಂಬಲ ನೀಡುವುದರ ಮೇಲೆ ಗಮನಹರಿಸುತ್ತದೆ. ಇದು 2026-27 ರ ವೇಳೆಗೆ ಸಾರ್ವತ್ರಿಕ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನವನ್ನು ಸಾಧಿಸುವ ಗುರಿಯನ್ನು ಹೊಂದಿದೆ, ಪ್ರತಿಯೊಂದು ಮಗುವೂ ೨ ನೇ ತರಗತಿ ವೇಳೆಗೆ ಮೂಲಭೂತ ಕೌಶಲ್ಯಗಳನ್ನು ಪಡೆದುಕೊಳ್ಳುವುದನ್ನು ಖಚಿತಪಡಿಸುತ್ತದೆ. ಈ ಮಿಷನ್ ೩ ರಿಂದ ೮ ವರ್ಷ ವಯಸ್ಸಿನ ಪೂನಾಡಿ (ಫೌಂಡೇಷನಲ್) ಹಂತದ ಮೇಲೆ ಗಮನಹರಿಸುತ್ತದೆ.
ಇದರ ಜೊತೆಗೆ, ಶಾಲೆಗಳಲ್ಲಿ ದಾಖಲಾತಿಯನ್ನು ಹೆಚ್ಚಿಸಲು ಮತ್ತು ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಳ್ಳುವುದನ್ನು (ಉಳಿಕೆ) ಸುಧಾರಿಸಲು ಸರ್ಕಾರವು ಹಲವು ಉಪಕ್ರಮಗಳನ್ನು ಕೈಗೊಂಡಿದೆ. ಪ್ರಮುಖ ಉಪಕ್ರಮಗಳಲ್ಲಿ ಸಮಗ್ರ ಶಿಕ್ಷಣ, ಪಿಎಂ ಶ್ರೀ, ಪಿಎಂ ಇ-ವಿದ್ಯಾ, ಮತ್ತು ಪಿಎಂ ಪೋಷಣ ಸೇರಿವೆ.
ಸಮಗ್ರ ಶಿಕ್ಷಣ ಯೋಜನೆಯು ಶಾಲೆಯ ಪರಿಣಾಮಕಾರಿಯತ್ವವನ್ನು ಹೆಚ್ಚಿಸುವುದು ಮತ್ತು ಕಲಿಕಾ ಫಲಿತಾಂಶಗಳನ್ನು ಸುಧಾರಿಸಲು ಶಾಲಾ ಶಿಕ್ಷಣದಲ್ಲಿ ಸಮಾನ ಅವಕಾಶಗಳನ್ನು ಖಚಿತಪಡಿಸುವುದರ ಮೇಲೆ ಗಮನಹರಿಸುತ್ತದೆ. ಈ ಯೋಜನೆಯು ಶಿಕ್ಷಣಕ್ಕೆ ಸಂಬಂಧಿಸಿದ ಸುಸ್ಥಿರ ಅಭಿವೃದ್ಧಿ ಗುರಿ 4 ಕ್ಕೆ ಅನುಗುಣವಾಗಿದೆ. ಈ ಹಿಂದೆ ಇದ್ದ ಮೂರು ಯೋಜನೆಗಳಾದ — ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಮತ್ತು ಶಿಕ್ಷಕರ ಶಿಕ್ಷಣ ಅನ್ನು ವಿಲೀನಗೊಳಿಸಿ ಈ ಯೋಜನೆಯನ್ನು ಪರಿಚಯಿಸಲಾಯಿತು. ಈ ಯೋಜನೆಯು ಮೂಲಭೂತ ಕಲಿಕೆ, ಶಿಕ್ಷಕರ ಅಭಿವೃದ್ಧಿ ಮತ್ತು ವೃತ್ತಿಪರ ಶಿಕ್ಷಣದ ಸಂಯೋಜನೆಯ ಮೇಲೆ ಗಮನಹರಿಸುವುದರೊಂದಿಗೆ ಸಮಾನ, ಒಳಗೊಳ್ಳುವ ಮತ್ತು ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುತ್ತದೆ.
ಪ್ರಧಾನಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಯೋಜನೆಯು ದೇಶದಾದ್ಯಂತ 14,500 ಕ್ಕೂ ಹೆಚ್ಚು ಮಾದರಿ ಶಾಲೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ವಿವಿಧ ಹಿನ್ನೆಲೆಗಳು, ಬಹುಭಾಷಾ ಅಗತ್ಯಗಳು ಮತ್ತು ವೈವಿಧ್ಯಮಯ ಶೈಕ್ಷಣಿಕ ಸಾಮರ್ಥ್ಯಗಳನ್ನು ಪೂರೈಸುವ ಸಮಾನ, ಒಳಗೊಳ್ಳುವ ಮತ್ತು ಆನಂದದಾಯಕ ಕಲಿಕಾ ವಾತಾವರಣವನ್ನು ರೂಪಿಸುವ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಮೇಲೆ ಗಮನಹರಿಸುತ್ತದೆ.
ಪಿಎಂ ಇ-ವಿದ್ಯಾ ಎಂಬುದು ಡಿಜಿಟಲ್, ಆನ್‌ಲೈನ್ ಮತ್ತು ಪ್ರಸಾರ ಆಧಾರಿತ ಶಿಕ್ಷಣಕ್ಕೆ ಸಂಬಂಧಿಸಿದ ವಿವಿಧ ಪ್ರಯತ್ನಗಳನ್ನು ಒಂದೇ ಸೂರಿನಡಿ ತರುವ ಮೂಲಕ ಬಹು-ಮಾದರಿಯ ಕಲಿಕಾ ಲಭ್ಯತೆಯನ್ನು ಒದಗಿಸುವ ಸಮಗ್ರ ಉಪಕ್ರಮವಾಗಿದೆ. ಈ ಉಪಕ್ರಮದಿಂದ ದೇಶದಾದ್ಯಂತ ಸುಮಾರು ೨೫ ಕೋಟಿ ಶಾಲೆಗೆ ಹೋಗುವ ಮಕ್ಕಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.
ಪಿಎಂ ಪೋಷಣ ಎಂಬುದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು, 10.36 ಲಕ್ಷ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಬಾಲವಾಟಿಕಾ ಮತ್ತು 1 ರಿಂದ 8 ನೇ ತರಗತಿಯವರೆಗೆ ದಾಖಲಾಗಿರುವ 11.20 ಕೋಟಿ ವಿದ್ಯಾರ್ಥಿಗಳಿಗೆ ಎಲ್ಲಾ ಶಾಲಾ ದಿನಗಳಲ್ಲಿ ಬಿಸಿ ಬೇಯಿಸಿದ ರಿಸಿಯೂಟವನ್ನು ಒದಗಿಸುತ್ತದೆ. ಈ ಯೋಜನೆಯು ಪೌಷ್ಟಿಕಾಂಶದ ಬೆಂಬಲವನ್ನು ಒದಗಿಸುವ ಮತ್ತು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಶಾಲಾ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಈ ಎಲ್ಲಾ ಉಪಕ್ರಮಗಳು ಒಂದಾಗಿ ದಾಖಲಾತಿ, ಶಾಲಾ ಉಳಿಕೆ ಮತ್ತು ಕಲಿಕಾ ಫಲಿತಾಂಶಗಳನ್ನು ಹೆಚ್ಚಿಸುವ ಅನುಕೂಲಕರ ವಾತಾವರಣವನ್ನು ನಿರ್ಮಿಸುತ್ತವೆ. ಇವು ಎಲ್ಲಾ ವಯೋಮಾನದ ಮತ್ತು ಕಲಿಕಾ ಹಂತಗಳ ಸಾಕ್ಷರತೆಯನ್ನು ತಲುಪುವ ಮೂಲಕ ಮೂಲಭೂತ ಶಿಕ್ಷಣ, ಪ್ರೌಢ ಸಾಕ್ಷರತೆ ಮತ್ತು ಆಜೀವ ಕಲಿಕೆಯನ್ನು ಬಲಪಡಿಸುತ್ತವೆ.
ವಿಕಸಿತ ಭಾರತ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಸಾಕ್ಷರತೆ
ಸುಸ್ಥಿರ ಅಭಿವೃದ್ಧಿ ಗುರಿಗಳು ಎಲ್ಲರಿಗೂ ಹೆಚ್ಚು ಸಮಾನ, ಒಳಗೊಳ್ಳುವ ಮತ್ತು ಸುಸ್ಥಿರ ಭವಿಷ್ಯವನ್ನು ಉತ್ತೇಜಿಸಲು ಸಮಗ್ರ ಚೌಕಟ್ಟನ್ನು ಒದಗಿಸುತ್ತವೆ. ಸಾಕ್ಷರತೆ ಮತ್ತು ಶಿಕ್ಷಣವು ಎಸ್‌ಡಿಜಿ 4 ರ ಕೇಂದ್ರಬಿಂದುವಾಗಿದ್ದು, ಇದು ಎಲ್ಲರಿಗೂ ಒಳಗೊಳ್ಳುವ ಮತ್ತು ಸಮಾನ ಗುಣಮಟ್ಟದ ಶಿಕ್ಷಣ ಹಾಗೂ ಆಜೀವ ಕಲಿಕೆಯ ಅವಕಾಶಗಳನ್ನು ಖಚಿತಪಡಿಸಲು ಶ್ರಮಿಸುತ್ತದೆ. ಸಾಕ್ಷರತೆಯು ಜಿಡಿಪಿ ಮತ್ತು ತಲಾ ಆದಾಯದೊಂದಿಗೆ ಧನಾತ್ಮಕ ಸಂಬಂಧವನ್ನು ಹೊಂದಿದ್ದು, ಆರ್ಥಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಭಾರತಕ್ಕೆ 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಸಾಧಿಸಲು ಸಾಕ್ಷರತೆ, ಶಿಕ್ಷಣ ಮತ್ತು ಕೌಶಲ್ಯ ಹೊಂದಿರುವ ಜನಸಂಖ್ಯೆಯ ಅಗತ್ಯವಿದೆ.
ಶಿಕ್ಷಣದ ಹೊರತಾಗಿ, ಸಾಕ್ಷರತೆಯು ಮಹಿಳಾ ಸಬಲೀಕರಣ, ಸಮಾನತೆ, ಒಳಗೊಳ್ಳುವಿಕೆ ಮತ್ತು ಮಾನವ ಹಕ್ಕುಗಳ ಸಾಕ್ಷಾತ್ಕಾರಕ್ಕೆ ಕೊಡುಗೆ ನೀಡುತ್ತದೆ; ಜೊತೆಗೆ ಉದ್ಯೋಗಾವಕಾಶ, ಉತ್ಪಾದಕತೆ, ನಾವೀನ್ಯತೆ ಮತ್ತು ಆರ್ಥಿಕ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಶಿಕ್ಷಣ ಮತ್ತು ಕೌಶಲ್ಯಗಳು ಹಸಿರು ಉದ್ಯೋಗಗಳಲ್ಲಿ ಪಾಲ್ಗೊಳ್ಳಲು, ವೃತ್ತಾಕಾರದ ಆರ್ಥಿಕತೆಗೆ ಬೆಂಬಲ ನೀಡಲು ಮತ್ತು ಪಾರಿಸರಿಕ ಸುಸ್ಥಿರತೆಗೆ ಕೊಡುಗೆ ನೀಡಲು ಸಹಾಯ ಮಾಡುತ್ತವೆ. ಹೀಗಾಗಿ, ಸಾಕ್ಷರತೆಯಲ್ಲಿನ ಪ್ರಗತಿಯು ಸುಸ್ಥಿರ ಅಭಿವೃದ್ಧಿ ಗುರಿಗಳಾದ್ಯಂತ ಗುಣಾತ್ಮಕ ಪ್ರಭಾವವನ್ನು ಬೀರಬಲ್ಲದು.
ಮುಂದಿನ ಹಾದಿ: ಎಲ್ಲರಿಗೂ ಸಾಕ್ಷರತೆಯನ್ನು ಮುನ್ನಡೆಸುವುದು
ಸ್ವಾತಂತ್ರ್ಯದ ನಂತರದ ಭಾರತದ ಸಾಕ್ಷರತಾ ಪಯಣವು ರಾಷ್ಟ್ರ ನಿರ್ಮಾಣ ಮತ್ತು ಮಾನವ ಅಭಿವೃದ್ಧಿಯಲ್ಲಿನ ವ್ಯಾಪಕ ರೂಪಾಂತರವನ್ನು ಪ್ರತಿಬಿಂಬಿಸುತ್ತದೆ. ಇಂದು ಸಾಕ್ಷರತೆಯು ಕೇವಲ ಓದು ಬರಹಕ್ಕೆ ಸೀಮಿತವಾಗಿಲ್ಲ; ಇದು ಕಲಿಕೆ, ಜೀವನೋಪಾಯ, ಸಬಲೀಕರಣ ಮತ್ತು ಸಮಾಜದಲ್ಲಿ ಅರ್ಥಪೂರ್ಣ ಪಾಲ್ಗೊಳ್ಳುವಿಕೆಯನ್ನು ಸಶಕ್ತಗೊಳಿಸುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ 2020, ಉಲ್ಲಾಸ್ ಮತ್ತು ನಿಪುಣ್ ಭಾರತ್ ನಂತಹ ಉಪಕ್ರಮಗಳು ಈ ದೃಷ್ಟಿಕೋನವನ್ನು ವಿಸ್ತರಿಸುತ್ತಿವೆ. ಇವು ಮೂಲಭೂತ ಕಲಿಕೆಯನ್ನು ಪ್ರೌಢ ಶಿಕ್ಷಣ, ಆಜೀವ ಕಲಿಕೆ ಮತ್ತು ಭವಿಷ್ಯಕ್ಕೆ ಸಿದ್ಧವಿರುವ ಕೌಶಲ್ಯಗಳೊಂದಿಗೆ ಜೋಡಿಸುತ್ತವೆ. ಎಸ್‌ಡಿಜಿ 4 ಕ್ಕೆ ಅನುಗುಣವಾಗಿ, ಈ ಪ್ರಯತ್ನಗಳು ಸಮಗ್ರ ಮತ್ತು ಸಮಾನ ಅಭಿವೃದ್ಧಿಗೆ ಭಾರತದ ಬದ್ಧತೆಯನ್ನು ಬಲಪಡಿಸುತ್ತವೆ.
ಭಾರತವು 'ವಿಕಸಿತ ಭಾರತ'ದತ್ತ ಸಾಗುತ್ತಿರುವಾಗ, ನಿರಂತರ ಅನುಷ್ಠಾನವು ಅತ್ಯಗತ್ಯವಾಗಿದೆ. ಪ್ರಾದೇಶಿಕ ಮತ್ತು ಲಿಂಗ ಅಸಮಾನತೆಗಳತ್ತ ಹೆಚ್ಚಿನ ಗಮನ ಹರಿಸುವುದು ಸಾಕ್ಷರತೆಯ ಪ್ರಯೋಜನಗಳು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ. ಸಾಕ್ಷರತೆ, ಕೌಶಲ್ಯ ಮತ್ತು ಸಬಲೀಕರಣಗೊಂಡ ಜನಸಂಖ್ಯೆಯು ಹೆಚ್ಚು ಒಳಗೊಳ್ಳುವ, ಉತ್ಪಾದಕ ಮತ್ತು ಸುಸ್ಥಿರ ವಿಕಸಿತ ಭಾರತಕ್ಕೆ ಬಲವಾದ ಬಡಿಪಾಯವಾಗಬಲ್ಲದು.
References
Ministry of Education
https://www.pib.gov.in/PressReleaseDetail.aspx?PRID=2282525®=48&lang=1
https://www.pib.gov.in/PressReleasePage.aspx?PRID=2049494®=48&lang=2
https://www.pib.gov.in/PressReleasePage.aspx?PRID=1882765®=48&lang=2
https://ullas.education.gov.in/nilp/about-us
https://static.pib.gov.in/WriteReadData/specificdocs/documents/2021/jul/doc20217531.pdf
https://aicte.gov.in/sites/default/files/nep2020.pdf
https://www.pib.gov.in/PressReleaseIframePage.aspx?PRID=1805881®=48&lang=2
https://www.pib.gov.in/Pressreleaseshare.aspx?PRID=1911807®=48&lang=2
https://udiseplus.gov.in/#/en/page/publications
https://cdnbbsr.s3waas.gov.in/s392049debbe566ca5782a3045cf300a3c/uploads/2025/06/202506041473712372.pdf
https://cdnbbsr.s3waas.gov.in/s392049debbe566ca5782a3045cf300a3c/uploads/2026/07/202607131602421770.pdf
https://www.pib.gov.in/PressReleasePage.aspx?PRID=2291330®=48&lang=2
https://www.dsel-education.gov.in/offerings/initiative/details/pm-e-vidya-IDOyMTMtQWa
https://www.pib.gov.in/PressReleasePage.aspx?PRID=2120666®=48&lang=2
MOSPI
https://www.mospi.gov.in/sites/default/files/reports_and_publication/cso_social_statices_division/Chapter_3_2014.pdfhttps://www.mospi.gov.in/uploads/publications_reports/publications_reports1780040415321_0624fb13-fb47-40bc-b470-7c7e9635c3ef_PLFS_2025_F_REV_29052026.pdf
NITI Aayog
https://www.niti.gov.in/sites/default/files/2026-05/School-Education-System-in-India.pdf
PIB Backgrounder
https://www.pib.gov.in/FactsheetDetails.aspx?Id=150983®=48&lang=1
https://www.pib.gov.in/PressNoteDetails.aspx?id=159901&NoteId=159901&ModuleId=3®=3&lang=1
UNESCO
https://www.unesco.org/en/days/literacy
https://unesdoc.unesco.org/ark:/48223/pf0000399013
Literacy for All
*****
(तथ्य सामग्री आईडी: 151054)
आगंतुक पटल : 7
Provide suggestions / comments