Infrastructure
ಪೈಮಾನಾ: ದತ್ತಾಂಶ-ಚಾಲಿತ ಮೂಲಸೌಕರ್ಯ ಆಡಳಿತವನ್ನು ಬಲಪಡಿಸುವುದು
प्रविष्टि तिथि:
10 AUG 2026 11:52 AM
ಪೈಮಾನಾ (ಪೈಮಾನಾ) – ಒಂದು ಅವಲೋಕನ
ಸಮಯೋಚಿತ ಅನುಷ್ಠಾನ, ಪಾರದರ್ಶಕತೆ ಮತ್ತು ಆಡಳಿತಕ್ಕಾಗಿ ಮೂಲಸೌಕರ್ಯ ಯೋಜನೆಗಳ ಸಮರ್ಥ ಮೇಲ್ವಿಚಾರಣೆ ಅತ್ಯಶ್ಯಕವಾಗಿದೆ. ಇದನ್ನು ಬೆಂಬಲಿಸಲು, ಭಾರತದಲ್ಲಿ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ವೆಬ್ ಆಧಾರಿತ ವೇದಿಕೆಯಾಗಿ ಸೆಪ್ಟೆಂಬರ್ 25, 2025 ರಂದು ಪೈಮಾನಾ (ಪೈಮಾನಾ - ನ್ನು ಪ್ರಾರಂಭಿಸಲಾಯಿತು. ಈ ವೇದಿಕೆಯು ಹಿಂದಿನ ಒಸಿಎಂಎಸ್-2006 ಅನ್ನು ಬದಲಾಯಿಸಿದೆ. ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಿಂದ ಅಭಿವೃದ್ಧಿಪಡಿಸಲ್ಪಟ್ಟಿIರುವ ಪೈಮಾನಾವನ್ನು, ರೂ. 150 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವೆಚ್ಚದ ನಡೆಯುತ್ತಿರುವ ಕೇಂದ್ರ ವಲಯದ ಮೂಲಸೌಕರ್ಯ ಯೋಜನೆಗಳನ್ನು ಮೇಲ್ವಿಚಾರಣೆ ಮಾಡಲು ಬಳಸಲಾಗುತ್ತದೆ.
ಡಿಪಿಐಐಟಿಯ ಸಂಯೋಜಿತ ಯೋಜನೆ ಮೇಲ್ವಿಚಾರಣಾ ಪೋರ್ಟಲ್ಅನ್ನು ಬದಲಾಯಿಸಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಜುಲೈ 8, 2026 ರಂದು ಪೈಮಾನಾ-ಸಿಆರ್‌ಐಪಿ ಎಂಬ ಮಾಡ್ಯೂಲ್ ಅನ್ನು ಪ್ರಾರಂಭಿಸಿದೆ. ಇದು ಮೂಲಸೌಕರ್ಯ ಯೋಜನೆಗಳ ಕೇಂದ್ರ ಭಂಡಾರವಾಗಿ ವಿಕಸಗೊಳ್ಳುವ ನಿರೀಕ್ಷೆಯಿದೆ. ಪ್ರಗತಿ, ಪಿಎಂಪಿ ಮತ್ತು ಇತರ ವಿಮರ್ಶಾ ಯಾಂತ್ರಿಕ ವ್ಯವಸ್ಥೆಗಳಿಗೆ ಸಂಬಂಧಿಸಿದ ಯೋಜನೆಯ ಡೇಟಾವನ್ನು ತರುವಾಯ ಇದರ ಮೂಲಕವೇ ಪಡೆಯಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ.
20ಕ್ಕೂ ಹೆಚ್ಚು ಸಚಿವಾಲಯಗಳು/ಇಲಾಖೆಗಳು/ ಅನುಷ್ಠಾನಗೊಳಿಸುವ ಸಂಸ್ಥೆಗಳು ಡೇಟಾ ಎಂಟ್ರಿ ಅಥವಾ ಎಪಿಐವಿಧಾನಗಳ ಮೂಲಕ ಪೈಮಾನಾ-ಸಿಆರ್‌ಐಪಿ ನಲ್ಲಿ ಯೋಜನೆಗಳ ಮಾಹಿತಿಯನ್ನು ನಿಯಮಿತವಾಗಿ ನವೀಕರಿಸುತ್ತಿವೆ.
ಪ್ರಸ್ತುತ, ಪೈಮಾನಾ ಪೋರ್ಟಲ್‌ನ ಯೋಜನೆ ಮೇಲ್ವಿಚಾರಣಾ ವಿಭಾಗವು API ಆಧಾರಿತ ಡೇಟಾ ವಿನಿಮಯದ ಮೂಲಕ ಡಿಪಿಐಐಟಿನ ಐಪಿಎಂಪಿ/ ಐಐಹಿ ಯೊಂದಿಗೆ ಸಂಯೋಜಿಸಲ್ಪಟ್ಟಿದೆ. ಪೈಮಾನಾದಲ್ಲಿರುವ ಶೇಕಡಾ 60 ಕ್ಕಿಂತ ಹೆಚ್ಚು ಯೋಜನೆಗಳನ್ನುಯ ಆಯಾ ಸಚಿವಾಲಯಗಳು/ಇಲಾಖೆಗಳ MIS ಅಥವಾ ವೆಬ್ ಪ್ಲಾಟ್‌ಫಾರ್ಮ್‌ಗಳಿಂದ ಎಪಿಐ ಗಳ ಮೂಲಕ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತಿದೆ.
ಯೋಜನೆಗಳ ಮೇಲ್ವಿಚಾರಣೆಯನ್ನು ಬಲಪಡಿಸುವುದರ ಜೊತೆಗೆ, ಮೀಸಲಾದ ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ ಮೂಲಕ ಮೂಲಸೌಕರ್ಯ ಕಾರ್ಯಕ್ಷಮತೆಯ ಮೇಲ್ವಿಚಾರಣೆಯನ್ನು ಬೆಂಬಲಿಸಲು ಪೈಮಾನಾ ತನ್ನ ಪಾತ್ರವನ್ನು ವಿಸ್ತರಿಸಿದೆ. ಏಪ್ರಿಲ್ 16, 2026 ರಂದು ಪ್ರಾರಂಭಿಸಲಾದ ಈ ಡ್ಯಾಶ್‌ಬೋರ್ಡ್, ಸಮಗ್ರ ಸೂಚಕಗಳ ಮೂಲಕ ಪ್ರಮುಖ ಉಪ-ವಲಯಗಳಲ್ಲಿ ಮೂಲಸೌಕರ್ಯ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡುತ್ತದೆ. ಇದು ದತ್ತಾಂಶ-ಚಾಲಿತ ಆಡಳಿತ ಮತ್ತು ಸಾಕ್ಷ್ಯ-ಆಧಾರಿತ ನೀತಿ ನಿರೂಪಣೆಯತ್ತ ಒಂದು ಮಹತ್ವದ ಪ್ರಗತಿಯನ್ನು ಗುರುತಿಸುತ್ತದೆ.
ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ - ಒಂದು ನೋಟದಲ್ಲಿ
ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ ಪ್ರಮುಖ ಮೂಲಸೌಕರ್ಯ ವಲಯಗಳಾದ್ಯಂತದ ಕಾರ್ಯಕ್ಷಮತೆ ಸೂಚಕಗಳನ್ನು ಏಕೀಕೃತ ಡಿಜಿಟಲ್ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ. ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳು ಒದಗಿಸಿದ/ಪ್ರಕಟಿಸಿದ ಅಧಿಕೃತ ಡೇಟಾದಿಂದ ಸೂಚಕಗಳನ್ನು ಸಂಕಲಿಸಲಾಗುತ್ತದೆ ಮತ್ತು ಲಭ್ಯವಿರುವ ಇತ್ತೀಚಿನ ಮಾಹಿತಿಯ ಆಧಾರದ ಮೇಲೆ ಕಾಲಕಾಲಕ್ಕೆ ನವೀಕರಿಸಲಾಗುತ್ತದೆ. ಡ್ಯಾಶ್‌ಬೋರ್ಡ್ ಈ ಡೇಟಾವನ್ನು ಸಂವಾದಾತ್ಮಕ ದೃಶ್ಯೀಕರಣಗಳು ಮತ್ತು ವಿಶ್ಲೇಷಣಾತ್ಮಕ ಸಾಧನಗಳ ಮೂಲಕ ಪ್ರಸ್ತುತಪಡಿಸುತ್ತದೆ, ಬಳಕೆದಾರರಿಗೆ ಪ್ರವೃತ್ತಿಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಾಲಾನಂತರದಲ್ಲಿ ವಲಯದ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಅನುವು ಮಾಡಿಕೊಡುತ್ತದೆ.
https://static.pib.gov.in/WriteReadData/userfiles/image/image003YDZG.png
ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್‌ನ ಪ್ರಮುಖ ಲಕ್ಷಣಗಳು
- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಅಂಡ್ ಪಾಲಿಸಿಯೊಂದಿಗೆ ಸಮಾಲೋಚಿಸಿ ಅಭಿವೃದ್ಧಿಪಡಿಸಲಾದ ಸಮಗ್ರ ಸೂಚಕ ಚೌಕಟ್ಟಿನ ಮೇಲೆ ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ ಅನ್ನು ನಿರ್ಮಿಸಲಾಗಿದೆ. ಈ ಚೌಕಟ್ಟು ಆರ್ಥಿಕ ವ್ಯವಹಾರಗಳ ಇಲಾಖೆ (DEA) ಹೊರಡಿಸಿದ ಮೂಲಸೌಕರ್ಯದ ಹಾರ್ಮೋನೈಸ್ಡ್ ಮಾಸ್ಟರ್ ಲಿಸ್ಟ್ 2022 ರೊಂದಿಗೆ ಹೊಂದಿಕೆಯಾಗುತ್ತದೆ. ಇದು ನೀತಿ ಬೆಂಬಲ, ಹೂಡಿಕೆ ಯೋಜನೆ ಮತ್ತು ಹಣಕಾಸು ಸಂಬಂಧಿತ ಪ್ರಯೋಜನಗಳಿಗೆ ಅರ್ಹವಾದ ಮೂಲಸೌಕರ್ಯ ವಲಯಗಳಿಗೆ ರಾಷ್ಟ್ರೀಯ ವರ್ಗೀಕರಣ ಚೌಕಟ್ಟಾಗಿ ಕಾರ್ಯನಿರ್ವಹಿಸುತ್ತದೆ.
- ಸ್ಥಾಪಿತ ಸೂಚಕಗಳೊಂದಿಗೆ అతి ವ್ಯಾಪ್ತಿಯನ್ನು ತಡೆಯಲು ಸೂಚಕಗಳನ್ನು ಸುಗಮಗೊಳಿಸಲಾಗಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕ ಮತ್ತು ಎಂಟು ಕೋರ್ ಕೈಗಾರಿಕೆಗಳು ಇದಕ್ಕೆ ಉದಾಹರಣೆಗಳಾಗಿವೆ.
- ವಿವರವಾದ ಸೂಚಕ ಚೌಕಟ್ಟು ಆರು ಮೂಲಸೌಕರ್ಯ ಉಪ-ವಲಯಗಳನ್ನು ಒಳಗೊಂಡಿದೆ. ಅವೆಂದರೆ ವಿದ್ಯುತ್, ನಾಗರಿಕ ವಿಮಾನಯಾನ, ದೂರಸಂಪರ್, ರೈಲ್ವೆ, ರಸ್ತೆಗಳು (Roads), ಮತ್ತು ಬಂದರುಗಳು, ಹಡಗುಕಟ್ಟು ಹಾಗೂ ಜಲಮಾರ್ಗಗಳು.
- ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ ಅನ್ನು ಈಗ 165 ಸೂಚಕಗಳಿಗೆ ವಿಸ್ತರಿಸಲಾಗಿದೆ. ಈ ವಿಸ್ತರಣೆಯು 54 ಹೊಸ ಸೂಚಕಗಳ ಸೇರ್ಪಡೆಯನ್ನು ಒಳಗೊಂಡಿದೆ, ಇದು ಮೂಲಸೌಕರ್ಯ ಕಾರ್ಯಕ್ಷಮತೆಯ ಮೇಲ್ವಿಚಾರಣೆಯ ಸಮಗ್ರತೆಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
- ಒಂದೇ ಡಿಜಿಟಲ್ ಇಂಟರ್‌ಫೇಸ್ ವಲಯವಾರು ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲು ಅನುಮತಿಸುತ್ತದೆ. ಇದು ನೀತಿ ನಿರೂಪಕರು, ಸಂಶೋಧಕರು ಮತ್ತು ಭಾಗಿದಾರರಿಗೆ ಸಂವಾದಾತ್ಮಕ ದೃಶ್ಯೀಕರಣ ಮತ್ತು ಸಮಯ-ಸರಣಿ ವಿಶ್ಲೇಷಣೆಯನ್ನು ಒದಗಿಸುತ್ತದೆ.
- ಕೇಂದ್ರೀಕೃತ ಡ್ಯಾಶ್‌ಬೋರ್ಡ್ ಮೂಲಸೌಕರ್ಯ ವಲಯಗಳ ಒಂದು ಕ್ರಾಸ್-ಸೆಕ್ಟರ್ ನೋಟವನ್ನು ನೀಡುತ್ತದೆ. ಈ ಸಾಮರ್ಥ್ಯವು ವಲಯಗಳ ನಡುವಿನ ವಿಶ್ಲೇಷಣೆಯನ್ನು ಆಳಗೊಳಿಸುತ್ತದೆ.
- ಪ್ರಸ್ತುತ ಚೌಕಟ್ಟು ಬೆಳವಣಿಗೆಯ ದರಗಳ ಮೂಲಕ ವಲಯದ ಕಾರ್ಯಕ್ಷಮತೆಯನ್ನು ಅಳೆಯುತ್ತದೆ. ಇದು ಆಯ್ಕೆಮಾಡಿದ ವಲಯಗಳಲ್ಲಿ ವರ್ಷದಿಂದ ವರ್ಷಕ್ಕೆ, ತಿಂಗಳಿಂದ ತಿಂಗಳಿಗೆ ಮತ್ತು ಸಂಚಿತ ಬೆಳವಣಿಗೆ, ಗುರಿಗಳು ಹಾಗೂ ಸಾಮರ್ಥ್ಯದ ಬಳಕೆಯನ್ನು ಪರಿಶೀಲಿಸುತ್ತದೆ.
ಉಪ-ವಲಯಗಳಾದ್ಯಂತ ಕಾರ್ಯಕ್ಷಮತೆ ಸೂಚಕಗಳ ವಿತರಣೆ (ಜೂನ್ 16, 2026 ರಂತೆ / 16ನೇ ಜುಲೈ, 2026 ರಂತೆ)
|
ಸ. ನಂ
|
ಮೂಲಸೌಕರ್ಯ ಉಪ-ವಲಯ
|
ಒಟ್ಟು ಸೂಚಕಗಳ ಸಂಖ್ಯೆ
|
|
1
|
ನಾಗರಿಕ ವಿಮಾನಯಾನ
|
31
|
|
2
|
ರಸ್ತೆಗಳು
|
8
|
|
3
|
ವಿದ್ಯುತ್
|
14
|
|
4
|
ಬಂದರುಗಳು, ಹಡಗುಕಟ್ಟು ಮತ್ತು ಜಲಮಾರ್ಗಗಳು
|
62
|
|
5
|
ದೂರಸಂಪರ್ಕ
|
13
|
|
6
|
ರೈಲ್ವೆ
|
37
|
|
ಒಟ್ಟು
|
|
165
|
ಪರಿಷ್ಕೃತ ಮೇಲ್ವಿಚಾರಣಾ ವಿಧಾನ
ಪರಿಷ್ಕೃತ ವಿಧಾನವು ವಲಯದ ಉತ್ಪಾದನೆಗಳನ್ನು ಅಳೆಯುವುದರಿಂದ ಹಿಡಿದು, ಪ್ರವೇಶಸಾಧ್ಯತೆ ಅಂದರೆ ಮೂಲಸೌಕರ್ಯವು ಎಷ್ಟು ವ್ಯಾಪಕವಾಗಿ ಲಭ್ಯವಿದೆ ಎಂಬುದನ್ನು ಅಳೆಯುವುದು; ಗುಣಮಟ್ಟ ಅಂದರೆ ಅದರ ಉಪಯುಕ್ತತೆ ಮತ್ತು ವಿಶ್ವಾಸಾರ್ಹತೆಯನ್ನು ಮೌಲ್ಯಮಾಪನ ಮಾಡುವುದು; ವಿತ್ತೀಯ ವೆಚ್ಚ ಮತ್ತು ರಾಜಸ್ವ ಅಂದರೆ ಮೂಲಸೌಕರ್ಯಕ್ಕಾಗಿ ಹಣಕಾಸಿನ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆಯನ್ನು ಮೌಲ್ಯಮಾಪನ ಮಾಡುವುದು; ಬಳಕೆ ಅಂದರೆ ಮೂಲಸೌಕರ್ಯವನ್ನು ಅದರ ನಿರ್ದಿಷ್ಟ ಉದ್ದೇಶಕ್ಕಾಗಿ ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡುವುದು; ಮತ್ತು ಕೈಗೆಟುಕುವ ವೆಚ್ಚ ಅಂದರೆ ಇದು ಜನರಿಗೆ ಆರ್ಥಿಕವಾಗಿ ಪ್ರವೇಶಿಸಬಹುದೇ ಎಂಬುದನ್ನು ನಿರ್ಧರಿಸುವುದು ಮುಂತಾದ ಬಹುಆಯಾಮದ ಮೂಲಸೌಕರ್ಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಕಡೆಗೆ ಬದಲಾವಣೆಯನ್ನು ಗುರುತಿಸುತ್ತದೆ. ಮೇಲಿನ ಸೂಚಕಗಳ ವರ್ಗೀಕರಣವು ಕೇವಲ ಸರಳ ಉತ್ಪಾದನಾ ಟ್ರ್ಯಾಕಿಂಗ್ ಅನ್ನು ಮೀರಿ, ಬಹು ಆಯಾಮಗಳಲ್ಲಿ ಮೂಲಸೌಕರ್ಯ ಕಾರ್ಯಕ್ಷಮತೆಯ ಹೆಚ್ಚು ಸಮಗ್ರ ಮೌಲ್ಯಮಾಪನಕ್ಕೆ ಚಲಿಸುವ ಮೂಲಕ ವಿಶ್ಲೇಷಣೆಯನ್ನು ಸುಧಾರಿಸುತ್ತದೆ, ಇದು ತಿಳುವಳಿಕೆಯುಳ್ಳ ನೀತಿ ನಿರ್ಧಾರಗಳು ಮತ್ತು ಗುರಿ ಆಧಾರಿತ ಮಧ್ಯಸ್ಥಿಕೆಗಳನ್ನು ಸಕ್ರಿಯಗೊಳಿಸುತ್ತದೆ.
ಭಾಗಿದಾರರನ್ನು ತೊಡಗಿಸಿಕೊಳ್ಳುವುದು
ಸಂಬಂಧಿತ ಸಚಿವಾಲಯಗಳು ಮತ್ತು ಇಲಾಖೆಗಳು ಸೇರಿದಂತೆ ಭಾಗಿದಾರರು, ತಮ್ಮ ಯೋಜನೆಗಳ ಕಾರ್ಯಗತಗೊಳಿಸುವಿಕೆಯ ಕುರಿತು ನಿಯಮಿತ ನವೀಕರಣಗಳನ್ನು ಸ್ವೀಕರಿಸುತ್ತಾರೆ. ಈ ನವೀಕರಣಗಳು ಪೈಮಾನ ಒಳಗೆ ಉತ್ಪತ್ತಿಯಾಗುವ ಡೇಟಾ ವಿಶ್ಲೇಷಣೆಯನ್ನು ಆಧರಿಸಿವೆ. ಯೋಜನೆಗಳ ಕಾರ್ಯಗತಗೊಳಿಸುವಿಕೆಗೆ ಎಲ್ಲಿ ಗಮನ ಬೇಕೋ ಅಲ್ಲಿ ಕ್ರಮ ಕೈಗೊಳ್ಳಲು ಇಂತಹ ವಿಶ್ಲೇಷಣೆಗಳು ಅವರಿಗೆ ಸಹಾಯ ಮಾಡುತ್ತವೆ.
- ಮಾಸಿಕ ವಿಮರ್ಶಾ ಸಭೆಗಳು ಮತ್ತು ಇತರ ವಿನಿಮಯಗಳ ಮೂಲಕ ನಡೆಯುತ್ತಿರುವ ಸಮನ್ವಯವು ಮುಂದುವರಿಯುತ್ತದೆ. ಈ ಅಭ್ಯಾಸವು ಕಾರ್ಯಕ್ಷಮತೆ ಸೂಚಕಗಳ ಕುರಿತು ಸಮಯೋಚಿತ ನವೀಕರಣಗಳನ್ನು ಒದಗಿಸುವ ಮೂಲಕ ಸಾಕ್ಷ್ಯ-ಆಧಾರಿತ ಮೇಲ್ವಿಚಾರಣೆಯನ್ನು ಬಲಪಡಿಸುತ್ತದೆ.
- ಪ್ರತಿ ಲೈನ್ ಸಚಿವಾಲಯ ಮತ್ತು ಇಲಾಖೆಯ ಬಳಿ ಕಸ್ಟಮೈಸ್ ಮಾಡಿದ ಡ್ಯಾಶ್‌ಬೋರ್ಡ್‌ಗಳಿಗಾಗಿ ಲಾಗಿನ್ ರುಜುವಾತುಗಳು ಲಭ್ಯವಿವೆ. ಪರಿಣಾಮವಾಗಿ, ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು ಅವರು ನೇರವಾಗಿ ಪೋರ್ಟಲ್ ಅನ್ನು ಪ್ರವೇಶಿಸಬಹುದು.
ಮೇಲ್ವಿಚಾರಣೆ ಮಾಡಲಾದ ಮೂಲಸೌಕರ್ಯ ಯೋಜನೆಗಳು (ಜೂನ್ 2026 ರ ಡೇಟಾ)
- ಜೂನ್ 2026 ರ ಅಸ್ತಿತ್ವದಲ್ಲಿದ್ದಂತೆ, 17 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ ವ್ಯಾಪ್ತಿಯಲ್ಲಿ 1,847 ನಡೆಯುತ್ತಿರುವ ಯೋಜನೆಗಳು ಪರಿಶೀಲನೆಯಲ್ಲಿದ್ದವು. ಇವು ಒಟ್ಟಾಗಿ ರೂ. 40.54 ಲಕ್ಷ ಕೋಟಿಗಳ ಪರಿಷ್ಕೃತ ವೆಚ್ಚವನ್ನು ಹೊಂದಿವೆ.
- ಈ ಯೋಜನೆಗಳ ಮೇಲಿನ ವೆಚ್ಚವು ಇದುವರೆಗೆ ರೂ. 21.97 ಲಕ್ಷ ಕೋಟಿಗಳನ್ನು ತಲುಪಿದೆ. ಇದು ಪರಿಷ್ಕೃತ ವೆಚ್ಚದ ಶೇಕಡಾ 54.18 ರಷ್ಟಕ್ಕೆ ಸಮನಾಗಿದ್ದು, ಸ್ಥಿರ ಪ್ರಗತಿಯನ್ನು ಪ್ರತಿಬಿಂಬಿಸುತ್ತದೆ.
- ಅನೇಕ ಯೋಜನೆಗಳು ಪೂರ್ಣಗೊಳ್ಳುವ ಹಂತವನ್ನು ತಲುಪಿವೆ. ಸುಮಾರು 709 ಯೋಜನೆಗಳು (~39%) ಶೇಕಡಾ 80 ಕ್ಕಿಂತ ಹೆಚ್ಚು ಭೌತಿಕ ಪ್ರಗತಿಯನ್ನು ಮೀರಿವೆ. ಸುಮಾರು 337 ಯೋಜನೆಗಳು (~39% ರ ಬದಲು ~19%) ಶೇಕಡಾ 80 ರಷ್ಟು ಹಣಕಾಸಿನ ಪೂರ್ಣಗೊಳಿಸುವಿಕೆಯನ್ನು ದಾಟಿವೆ.
- ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯವು ನಡೆಯುತ್ತಿರುವ ಯೋಜನೆಗಳ ಸಂಖ್ಯೆಯಲ್ಲಿ ಮುಂಚೂಣಿಯಲ್ಲಿದೆ. ಇದು ರೂ. 22.32 ಲಕ್ಷ ಕೋಟಿ ಮೌಲ್ಯದ 1,341 ಯೋಜನೆಗಳನ್ನು ಹೊಂದಿದ್ದು, ಸಂಪರ್ಕದ ಮೇಲಿನ ಗಮನವನ್ನು ಪ್ರತಿಬಿಂಬಿಸುತ್ತದೆ.
- ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳು ತಲಾ ರೂ. 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚು ವೆಚ್ಚದ, ರೂ. 30.51 ಲಕ್ಷ ಕೋಟಿ ಮೌಲ್ಯದ 769 ಮೆಗಾ ಯೋಜನೆಗಳನ್ನು ಒಳಗೊಂಡಿವೆ.
- ಇವುಗಳು ತಲಾ ರೂ. 150-1,000 ಕೋಟಿ ವೆಚ್ಚದ, ರೂ. 5.10 ಲಕ್ಷ ಕೋಟಿ ಮೌಲ್ಯದ 1,078 ಪ್ರಮುಖ ಯೋಜನೆಗಳನ್ನು ಸಹ ಒಳಗೊಂಡಿವೆ.
ಮೂಲಸೌಕರ್ಯ ಯೋಜನೆಗಳ ಸಚಿವಾಲಯ / ಇಲಾಖೆವಾರು ಪ್ರಗತಿ
- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅತಿ ಹೆಚ್ಚು ಯೋಜನೆಗಳ ಸಂಖ್ಯೆಯನ್ನು ಹೊಂದಿದೆ. ಇದು ರೂ. 9.89 ಲಕ್ಷ ಕೋಟಿ (24%) ಪರಿಷ್ಕೃತ ವೆಚ್ಚದೊಂದಿಗೆ 1,022 ಯೋಜನೆಗಳನ್ನು (55%) ನಿರ್ವಹಿಸುತ್ತದೆ.
- ರೈಲ್ವೆ ಸಚಿವಾಲಯವು 255 ಯೋಜನೆಗಳನ್ನು (14%) ನಿರ್ವಹಿಸುತ್ತಿದೆ. ಇವು ಒಟ್ಟು ರೂ. 8.69 ಲಕ್ಷ ಕೋಟಿ (21%) ಪರಿಷ್ಕೃತ ವೆಚ್ಚವನ್ನು ಹೊಂದಿವೆ.
- ಕಲ್ಲಿದ್ದಲು ಸಚಿವಾಲಯವು 121 ಯೋಜನೆಗಳನ್ನು (7%) ನಡೆಸುತ್ತಿದೆ. ಇವುಗಳ ಒಟ್ಟು ಪರಿಷ್ಕೃತ ವೆಚ್ಚವು ರೂ. 2.22 ಲಕ್ಷ ಕೋಟಿ (6%) ಆಗಿದೆ.
- ಇತರ ನಾಲ್ಕು ಸಚಿವಾಲಯಗಳು/ಇಲಾಖೆಗಳು ಸಹ ಗಣನೀಯ ಸಂಖ್ಯೆಯ ಯೋಜನೆಗಳನ್ನು ಜಾರಿಗೆ ತರುತ್ತಿವೆ.
- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ರೂ. 4.33 ಲಕ್ಷ ಕೋಟಿ ಪರಿಷ್ಕೃತ ವೆಚ್ಚದೊಂದಿಗೆ 105 ಯೋಜನೆಗಳನ್ನು ನಿರ್ವಹಿಸುತ್ತಿದೆ.
- ವಿದ್ಯುತ್ ಸಚಿವಾಲಯವು ರೂ. 5.71 ಲಕ್ಷ ಕೋಟಿ ಪರಿಷ್ಕೃತ ವೆಚ್ಚದೊಂದಿಗೆ 98 ಯೋಜನೆಗಳನ್ನು ನಿರ್ವಹಿಸುತ್ತಿದೆ.
- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರೂ. 3.65 ಲಕ್ಷ ಕೋಟಿ ಪರಿಷ್ಕೃತ ವೆಚ್ಚದೊಂದಿಗೆ 50 ಯೋಜನೆಗಳನ್ನು ಜಾರಿಗೆ ತರುತ್ತಿದೆ.
- ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯು ರೂ. 2.04 ಲಕ್ಷ ಕೋಟಿ ಪರಿಷ್ಕೃತ ವೆಚ್ಚದೊಂದಿಗೆ 40 ಯೋಜನೆಗಳನ್ನು ನಿರ್ವಹಿಸುತ್ತಿದೆ.
- ಉಳಿದ 156 ಯೋಜನೆಗಳು (8%) ರೂ. 4.02 ಲಕ್ಷ ಕೋಟಿ (10%) ಸಂಯೋಜಿತ ಪರಿಷ್ಕೃತ ವೆಚ್ಚವನ್ನು ಹೊಂದಿವೆ. ಇವು ಉನ್ನತ ಶಿಕ್ಷಣ, ನಾಗರಿಕ ವಿಮಾನಯಾನ, ಉಕ್ಕು, ದೂರಸಂಪರ್ಕ, ಕಾರ್ಮಿಕ ಮತ್ತು ಉದ್ಯೋಗ, ಬಂದರುಗಳು, ಹಡಗುಕಟ್ಟು ಮತ್ತು ಜಲಮಾರ್ಗಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗಣಿಗಾರಿಕೆ, ಡಿಪಿಐಐಟಿ, ಮತ್ತು ಕ್ರೀಡೆ ಮುಂತಾದ ಹಲವಾರು ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಹರಡಿವೆ.
ದತ್ತಾಂಶ-ಚಾಲಿತ ಆಡಳಿತದ ಕಡೆಗೆ
ರೂ. 150 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ವೆಚ್ಚದ ಕೇಂದ್ರ ವಲಯದ ಯೋಜನೆಗಳ ಅವಲೋಕನದ ಕುರಿತು ವರದಿಗಳು/ಡ್ಯಾಶ್‌ಬೋರ್ಡ್ ರೂಪದಲ್ಲಿ ಫಲಿತಾಂಶಗಳೊಂದಿಗೆ ಕೇಂದ್ರ ಮೂಲಸೌಕರ್ಯ ಯೋಜನೆಗಳ ಭಂಡಾರದ ಮಾಡ್ಯೂಲ್‌ಗಳನ್ನು ಒಳಗೊಂಡಿರುವ ಪೈಮಾನಾ ಪೋರ್ಟಲ್ ಮತ್ತು ಕಾರ್ಯಕ್ಷಮತೆ ಮೇಲ್ವಿಚಾರಣಾ ಡ್ಯಾಶ್‌ಬೋರ್ಡ್ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಯತ್ತ ಮಹತ್ವದ ಹೆಜ್ಜೆಯನ್ನು ಇಡುತ್ತದೆ. ಇವುಗಳ ನಿಯಮಿತ ನವೀಕರಣಗಳು ಮೂಲಸೌಕರ್ಯ ಮೇಲ್ವಿಚಾರಣೆಯನ್ನು ಮತ್ತಷ್ಟು ಬಲಪಡಿಸುತ್ತವೆ. ಇವು ಸಾಕ್ಷ್ಯ ಆಧಾರಿತ ನೀತಿ ನಿರೂಪಣೆಗೆ ಸಹಾಯ ಮಾಡುತ್ತವೆ ಮತ್ತು ಉತ್ತಮವಾಗಿ ತಿಳಿಸಲ್ಪಟ್ಟ ನಿರ್ಧಾರಗಳನ್ನು ಸಕ್ರಿಯಗೊಳಿಸುತ್ತವೆ. ಒಟ್ಟಾರೆಯಾಗಿ, ಈ ಪ್ರಯತ್ನವು ದೇಶಾದ್ಯಂತ ಸುಸ್ಥಿರ ಮತ್ತು ಎಲ್ಲರನ್ನು ಒಳಗೊಂಡ ಮೂಲಸೌಕರ್ಯ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
References:
Ministry of Statistics and Programme Implementation (MoSPI):
https://paimana-proj.mospi.gov.in/ReportPage
https://www.pib.gov.in/PressReleasePage.aspx?PRID=2286550®=%203&lang=1
https://www.pib.gov.in/PressReleasePage.aspx?PRID=2285365®=48&lang=1
https://www.pib.gov.in/PressReleasePage.aspx?PRID=2226267®=3&lang=1
https://www.pib.gov.in/PressReleasePage.aspx?PRID=2252587®=3&lang=1
https://www.pib.gov.in/PressReleasePage.aspx?PRID=2244898®=3&lang=1
https://www.pib.gov.in/PressReleasePage.aspx?PRID=2277758®=48&lang=2
https://www.pib.gov.in/PressReleasePage.aspx?PRID=2290413®=48&lang=1
Click to see in pdf
******
(तथ्य सामग्री आईडी: 150823)
आगंतुक पटल : 12
Provide suggestions / comments