• Sitemap
  • Advance Search
Economy

ಈ ಸಾರಸ್‌ : ಮಾರುಕಟ್ಟೆಯ ವಿಸ್ತರಣೆ, ಗ್ರಾಮೀಣ ಮಹಿಳೆಯರ ಸಬಲೀಕರಣ

प्रविष्टि तिथि: 01 JUL 2026 12:07 AM

ನೇಯ್ಗೆಗಾರರು ಮತ್ತು ಕುಂಬಾರರಿಂದ ಹಿಡಿದು ಮಹಿಳೆಯರ ನೇತೃತ್ವದ ಸಹಕಾರ ಸಂಘಗಳವರೆಗೆ, ಗ್ರಾಮೀಣ ಕುಶಲಕರ್ಮಿಗಳು ಭಾರತದ ಸಮಗ್ರ ಬೆಳವಣಿಗೆಯ ಕಥೆಗೆ ಶಕ್ತಿಯನ್ನು ತುಂಬುತ್ತಿದ್ದಾರೆ. ಈ ಸಾರಸ್‌  ಪ್ಲಾಟ್‌ಫಾರ್ಮ್ ಮೂಲಕ, ಸಾವಿರಾರು ಸ್ವಸಹಾಯ ಗುಂಪುಗಳು ರಾಷ್ಟ್ರೀಯ ಮಾರುಕಟ್ಟೆಗಳು, ಡಿಜಿಟಲ್ ಮೂಲಸೌಕರ್ಯ ಮತ್ತು ಸಾಂಸ್ಥಿಕ ಬೆಂಬಲಕ್ಕೆ ನೇರ ಪ್ರವೇಶವನ್ನು ಪಡೆಯುತ್ತಿವೆ. ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುವ ಮೂಲಕ ಮತ್ತು ಪ್ರಮುಖ ವಾಣಿಜ್ಯ ವೇದಿಕೆಗಳೊಂದಿಗೆ ಸಂಯೋಜನೆಗೊಳ್ಳುವ ಮೂಲಕ, ಈ ಸಾರಸ್‌ ಗ್ರಾಮೀಣ ಕರಕುಶಲ ವಸ್ತುಗಳು ಗ್ರಾಹಕರನ್ನು ತಲುಪುವ ರೀತಿಯನ್ನೇ ಬದಲಾಯಿಸುತ್ತಿದೆ. ರಾಷ್ಟ್ರವ್ಯಾಪಿ ಬ್ಲಾಕ್‌ಗಳು ಮತ್ತು ಜಿಲ್ಲೆಗಳಲ್ಲಿ ವಿಸ್ತರಿಸುತ್ತಿರುವ ಈ ಪ್ಲಾಟ್‌ಫಾರ್ಮ್‌ನ ವ್ಯಾಪ್ತಿಯು, ಗ್ರಾಮೀಣ ಜೀವನೋಪಾಯದಲ್ಲಿ ಅದರ ಬೆಳೆಯುತ್ತಿರುವ ಮಹತ್ವವನ್ನು ಉಲ್ಲೇಖಿಸುತ್ತದೆ. ಈ ಸಾರಸ್‌ ನಂತಹ ಉಪಕ್ರಮಗಳು ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಮತ್ತು ಡಿಜಿಟಲ್ ಮೂಲಕ ಸಬಲವಾದ, ಸ್ವಾವಲಂಬಿ ಗ್ರಾಮೀಣ ಆರ್ಥಿಕತೆಯನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.

ತಳಮಟ್ಟದಿಂದ ಬದಲಾವಣೆಯ ನಿರ್ಮಾಣ

ಕಳೆದ ಹನ್ನೊಂದು ವರ್ಷಗಳಲ್ಲಿ, 'ಡಿಜಿಟಲ್ ಇಂಡಿಯಾ' ಕಾರ್ಯಕ್ರಮವು ಆಡಳಿತ ಮತ್ತು ಸಾರ್ವಜನಿಕ ಸೇವಾ ವಿತರಣೆಯನ್ನು ಪರಿವರ್ತಿಸಿದೆ - ಅವುಗಳನ್ನು ಹೆಚ್ಚು ಪಾರದರ್ಶಕ, ಸುಲಭವಾಗಿ ಲಭ್ಯವಾಗುವಂತೆ ಮತ್ತು ಪರಿಣಾಮಕಾರಿಯನ್ನಾಗಿ ಮಾಡಿದೆ. ಈ ಪರಿವರ್ತನೆಯು ನಗರಗಳನ್ನು ಮೀರಿ ಗ್ರಾಮೀಣ ಭಾರತವನ್ನೂ ತಲುಪಿದೆ. ಅಲ್ಲಿ ತಂತ್ರಜ್ಞಾನವು ಈಗ ಆರ್ಥಿಕ ಸಬಲೀಕರಣ, ಜೀವನೋಪಾಯದ ಬಲವರ್ಧನೆ ಮತ್ತು ಸಮುದಾಯ-ನೇತೃತ್ವದ ಉದ್ಯಮಕ್ಕೆ ಒಂದು ಸಾಧನವಾಗಿದೆ.

ಈ ಹಿನ್ನೆಲೆಯಲ್ಲಿ, ಈ ಸಾರಸ್‌  (ಸಾರಸ್‌ ಆಜೀವಿಕಾ) ಅತ್ಯಂತ ಮಹತ್ವದ ಫಲಿತಾಂಶಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಇದನ್ನು ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಅಭಿವೃದ್ಧಿಪಡಿಸಿದೆ. ಡಿಜಿಟಲ್ ಮೂಲಸೌಕರ್ಯವನ್ನು ತಳಮಟ್ಟದ ಆರ್ಥಿಕ ಬದಲಾವಣೆಯತ್ತ ಹೇಗೆ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ಒಂದು ಪ್ರಮುಖ ಉದಾಹರಣೆಯಾಗಿದೆ.

ಸಾರಸ್ ಎಂದರೇನು? ಈ ಸಾರಸ್‌  ಎನ್ನುವುದು ಡಿಎವೈ-ಎನ್‌ಆರ್‌ಎಲ್‌ಎಂ ನ ಅಧಿಕೃತ ಆನ್‌ಲೈನ್ ಮಾರುಕಟ್ಟೆಯಾಗಿದೆ. ಇದನ್ನು ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಅವರ ಒಕ್ಕೂಟಗಳು ತಯಾರಿಸುವ ಉತ್ಪನ್ನಗಳಿಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಮಧ್ಯಪ್ರದೇಶದ ಚಂದೇರಿ ಸೀರೆಗಳನ್ನು ನೇಯುವ ನೇಕಾರರಿಂದ ಹಿಡಿದು ರಾಜಸ್ಥಾನದ ಅಮೃತಶಿಲೆಯ ಕುಶಲಕರ್ಮಿಗಳವರೆಗೆ, ದೇಶದ ಹೃದಯಭಾಗದಿಂದ ಅತ್ಯುತ್ತಮವಾಗಿ ರೂಪಿಸಲಾದ ಕರಕುಶಲ ವಸ್ತುಗಳು ಇಲ್ಲಿ ದೊರೆಯುತ್ತವೆ. ಇದರಲ್ಲಿ ಜಮ್ಮು ಮತ್ತು ಕಾಶ್ಮೀರದ ಬೆಟ್ಟಗಳಲ್ಲಿರುವ ಪಶ್ಮಿನಾ ಉತ್ಪಾದಕರೂ ಸೇರಿದ್ದಾರೆ. ಈ ಸಾರಸ್‌  ನಲ್ಲಿರುವ ಪ್ರತಿಯೊಂದು ಉತ್ಪನ್ನವು ಒಂದು ಕಥೆಯನ್ನು ಹೊಂದಿದೆ ಮತ್ತು ಪ್ರತಿಯೊಂದು ಖರೀದಿಯು ಅದರ ಹಿಂದಿರುವ ಕುಶಲಕರ್ಮಿಯೊಂದಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ.

ಈ ಪ್ಲಾಟ್‌ಫಾರ್ಮ್ ಪ್ರಮುಖ ವಿಭಾಗಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಪಟ್ಟಿ ಮಾಡುತ್ತದೆ:

  • ಮನೆ ಮತ್ತು ಜೀವನಶೈಲಿ
  • ಮಹಿಳೆಯರ ಉಡುಪು ಮತ್ತು ಪರಿಕರಗಳು
  • ಪುರುಷರ ಉಡುಪು ಮತ್ತು ಪರಿಕರಗಳು
  • ವೈಯಕ್ತಿಕ ಆರೈಕೆ
  • ಆಹಾರ ಪದಾರ್ಥಗಳು
  • ಮಕ್ಕಳ ಆಟಿಕೆಗಳು ಮತ್ತು ಪರಿಕರಗಳು

ಫೆಬ್ರವರಿ 2024 ರ ಮಾಹಿತಿಯಂತೆ, 8.62 ಕೋಟಿಗೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರು ಈ ಸಾರಸ್‌ ಮೂಲಕ ಡಿಜಿಟಲ್ ಸ್ಟೋರ್‌ಫ್ರಂಟ್ ಅನ್ನು ಹೊಂದಿದ್ದಾರೆ. ಇವರಲ್ಲಿ 85% ರಷ್ಟು ಮಂದಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಾಲದೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದಾರೆ. ಇದು ಅವರಿಗೆ ಕೇವಲ ಮಾರುಕಟ್ಟೆಯನ್ನು ಒದಗಿಸುವುದಲ್ಲದೆ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಲಾಜಿಸ್ಟಿಕ್ಸ್ (ಸರಕು ಸಾಗಣೆ) ಗಾಗಿ ಸಾಂಸ್ಥಿಕ ಬೆಂಬಲವನ್ನೂ ನೀಡುತ್ತದೆ.

ಡಿಎವೈ-ಎನ್‌ಆರ್‌ಎಲ್‌ಎಂ ದೇಶಾದ್ಯಂತ 7,627 ಬ್ಲಾಕ್‌ಗಳನ್ನು ಒಳಗೊಂಡಿದೆ ಮತ್ತು ತಳಮಟ್ಟದಲ್ಲಿ ಈ ಉದ್ಯಮಗಳನ್ನು ಬೆಂಬಲಿಸಲು 1.51 ಕೋಟಿ ಸಮುದಾಯ ಸದಸ್ಯರ ಕಾರ್ಯಪಡೆಯನ್ನು ನಿರ್ಮಿಸಿದೆ.

ಪೋರ್ಟಲ್ನಿಂದ -ಕಾಮರ್ಸ್ ಪರಿಸರ ವ್ಯವಸ್ಥೆಯವರೆಗೆ: ಪ್ರಮುಖ ಮೈಲಿಗಲ್ಲುಗಳು

ಕೇವಲ ಒಂದು ಸರಳ ವೆಬ್ ಪೋರ್ಟಲ್ ಆಗಿ ಪ್ರಾರಂಭವಾದದ್ದು, ಕೆಲವೇ ವರ್ಷಗಳಲ್ಲಿ ಸಂಪೂರ್ಣ ಇ-ಕಾಮರ್ಸ್ ಪರಿಸರ ವ್ಯವಸ್ಥೆಯಾಗಿ ಬೆಳೆದಿದೆ. ಇದು ಈಗ ಮೊಬೈಲ್ ಅಪ್ಲಿಕೇಶನ್, ಭೌತಿಕ ಗ್ಯಾಲರಿ, ರಾಷ್ಟ್ರೀಯ ಮೇಳಗಳು, ಲಾಜಿಸ್ಟಿಕ್ಸ್ ಫುಲ್‌ಫಿಲ್‌ಮೆಂಟ್ ಸೆಂಟರ್ (ಸರಕು ಸಾಗಣೆ ಕೇಂದ್ರ) ಮತ್ತು ಭಾರತದ ಅತಿದೊಡ್ಡ ಆನ್‌ಲೈನ್ ಮಾರುಕಟ್ಟೆ ವೇದಿಕೆಗಳೊಂದಿಗೆ ಏಕೀಕರಣವನ್ನು ಒಳಗೊಂಡಿದೆ.

ಪ್ಲಾಟ್ಫಾರ್ಮ್ ವಿಕಸನ

ವಿವರ (Detail)

ವಿವರಣೆ

ಸರಸ್ಪೋರ್ಟಲ್ ಪ್ರಾರಂಭ

ಸಾರಸ್ ಉತ್ಪನ್ನಗಳ ಉತ್ತಮ ಮತ್ತು ಪರಿಣಾಮಕಾರಿ ಮಾರುಕಟ್ಟೆಗಾಗಿ https://www.ಈ ಸಾರಸ್‌ .in/ ಇ-ಕಾಮರ್ಸ್ ಪೋರ್ಟಲ್ ಅನ್ನು ಪ್ರಾರಂಭಿಸಲಾಯಿತು.

ಸರಸ್ಮೊಬೈಲ್ ಆ್ಯಪ್ ಪ್ರಾರಂಭ

ಈ ಸಾರಸ್‌  ಫುಲ್‌ಫಿಲ್‌ಮೆಂಟ್ ಸೆಂಟರ್ (ಪೂರೈಕೆ ಕೇಂದ್ರ) ಜೊತೆಗೆ ಮೊಬೈಲ್ ಆ್ಯಪ್ ಅನ್ನು ಪ್ರಾರಂಭಿಸಲಾಯಿತು. ಇದನ್ನು ಉತ್ಪನ್ನಗಳ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಶಿಪ್ಪಿಂಗ್‌ಗಾಗಿ ಬಳಸಲಾಗುತ್ತದೆ.

ಒಎನ್ಡಿಸಿ

ಒಎನ್ಡಿಸಿ ಪ್ಲಾಟ್‌ಫಾರ್ಮ್‌ನಲ್ಲಿ 20 ಕೋಟಿಗೂ ಹೆಚ್ಚು ಖರೀದಿದಾರರಿದ್ದು, ಅದರ 11ಕ್ಕೂ ಹೆಚ್ಚು ಬೈಯರ್ ಆ್ಯಪ್‌ಗಳಲ್ಲಿ (ಖರೀದಿದಾರರ ಆ್ಯಪ್‌ಗಳು) 800ಕ್ಕೂ ಹೆಚ್ಚು ಕರಕುಶಲ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ.

ಉಮಂಗ್‌

ಸಾರಸ್ ಅನ್ನು ಉಮಂಗ್‌ ನಲ್ಲಿ ಪಟ್ಟಿ ಮಾಡಲಾಗಿದೆ; ಈ ಪ್ಲಾಟ್‌ಫಾರ್ಮ್ ಈಗ 2,572 ಸೇವೆಗಳನ್ನು ಒದಗಿಸುತ್ತಿದ್ದು, 796.69 ಕೋಟಿ ವಹಿವಾಟುಗಳನ್ನು ದಾಖಲಿಸಿದೆ (ಜೂನ್ 2026 ರಂತೆ).

ಸಾರಸ್ ಶಕ್ತಿ ಕಲೆಕ್ಷನ್

ಸಾಂಸ್ಥಿಕ ಮತ್ತು ಕಾರ್ಪೊರೇಟ್ ಮಾರುಕಟ್ಟೆಗಳಿಗಾಗಿ 'ರಾಷ್ಟ್ರೀಯ ಗ್ರಾಮೀಣ ವಿಕಾಸ ಸಮ್ಮೇಳನ 2026' ರಲ್ಲಿ ಪ್ರೀಮಿಯಂ ಕ್ಯುರೇಟೆಡ್ ಗಿಫ್ಟ್ ಕಲೆಕ್ಷನ್ ಅನ್ನು ಬಿಡುಗಡೆ ಮಾಡಲಾಯಿತು.

ಸಾರಸ್ ಆಜೀವಿಕಾ ಗ್ಯಾಲರಿ

ನವದೆಹಲಿಯ ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿ ಶಾಶ್ವತ ಚಿಲ್ಲರೆ ಮಾರಾಟ ಗ್ಯಾಲರಿಯನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ಕ್ಯುರೇಟೆಡ್ ಎಸ್‌ಎಚ್‌ಜಿ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.

ಮುಂದಿನ ದಾರಿ: ಕಲೆ, ವಾಣಿಜ್ಯ ಮತ್ತು ಸಮುದಾಯ

ಒನ್‌ಡಿಸಿ, ಉಮಂಗ್‌ ಮತ್ತು ಇತರ ಡಿಜಿಟಲ್ ವೇದಿಕೆಗಳೊಂದಿಗೆ ವಿಸ್ತರಿಸುತ್ತಿರುವ ಏಕೀಕರಣದೊಂದಿಗೆ, ಈ ಸಾರಸ್‌ ಗ್ರಾಮೀಣ ಉತ್ಪಾದಕರು ಭಾರತದ ಕಲಾ ಪರಂಪರೆಯನ್ನು ಸಂರಕ್ಷಿಸುವ ಜೊತೆಗೆ ದೊಡ್ಡ ಮಾರುಕಟ್ಟೆಗಳಲ್ಲಿ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಈ ಪರಿಸರ ವ್ಯವಸ್ಥೆಯು ಬೆಳೆದಂತೆ, ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವಲ್ಲಿ ಮತ್ತು ಅಂತರ್ಗತ ಗ್ರಾಮೀಣ ಅಭಿವೃದ್ಧಿಯನ್ನು ಮುನ್ನಡೆಸುವಲ್ಲಿ ಇದು ಹೆಚ್ಚು ಪ್ರಮುಖ ಪಾತ್ರ ವಹಿಸಲಿದೆ ಎಂದು ನಿರೀಕ್ಷಿಸಲಾಗಿದೆ.

ಹೀಗೆ ಮಾಡುವುದರ ಮೂಲಕ, 'ಡಿಜಿಟಲ್ ಇಂಡಿಯಾ' ಹೇಗೆ ಮಹಿಳೆಯರನ್ನು ಸಬಲೀಕರಣಗೊಳಿಸುತ್ತಿದೆ, ಭಾರತದ ಶ್ರೀಮಂತ ಕಲಾ ಪರಂಪರೆಯನ್ನು ಹೇಗೆ ಉಳಿಸುತ್ತಿದೆ ಮತ್ತು ಸಮಗ್ರ, ಮಹಿಳಾ ನೇತೃತ್ವದ ಗ್ರಾಮೀಣ ಅಭಿವೃದ್ಧಿಯನ್ನು ಹೇಗೆ ಮುನ್ನಡೆಸುತ್ತಿದೆ ಎಂಬುದಕ್ಕೆ ಈ ಸಾರಸ್‌ ಒಂದು ಉತ್ತಮ ನಿದರ್ಶನವಾಗಿದೆ.

References

Ministry of Rural Development

https://cdnbbsr.s3waas.gov.in/s3d69116f8b0140cdeb1f99a4d5096ffe4/uploads/2026/04/202604211510022943.pdf

https://sansad.in/getFile/loksabhaquestions/annex/184/AU2884_xtODlC.pdf?source=pqals

https://www.pib.gov.in/PressReleasePage.aspx?PRID=2278288&reg=48&lang=1

https://www.pib.gov.in/PressReleaseIframePage.aspx?PRID=1871641&reg=48&lang=2

https://www.pib.gov.in/PressReleasePage.aspx?PRID=1937055&reg=48&lang=2

https://www.pib.gov.in/PressReleasePage.aspx?PRID=2278288&reg=3&lang=1

Ministry of Electronics and Information Technology (MEITy)

https://en.vikaspedia.in/viewcontent/social-welfare/entrepreneurship/important-days/esaras-portal-for-handicrafts?lgn=en

https://negd.gov.in/

https://www.facebook.com/OfficialUmangApp/posts/to-promote-local-artisans-and-self-help-groups-esaras-on-umang-facilitates-citiz/1313461524124692/

Ministry of Commerce & Industry

https://www.pib.gov.in/PressReleaseIframePage.aspx?PRID=2146920&ref=official-press.com&reg=48&lang=2

PIB Archives

https://www.pib.gov.in/PressReleasePage.aspx?PRID=2267960&reg=48&lang=2

https://www.pib.gov.in/PressNoteDetails.aspx?NoteId=159055&ModuleId=3&reg=48&lang=2

Click here for pdf file.

 

*****

(तथ्य सामग्री आईडी: 150661) आगंतुक पटल : 13


Provide suggestions / comments
इस विश्लेषक को इन भाषाओं में पढ़ें : English , हिन्दी , Bengali , Urdu , Malayalam , Manipuri , Assamese