Technology
ಮುಂದಿನ ಪೀಳಿಗೆಯ ತಂತ್ರಜ್ಞಾನಕ್ಕೆ ಶಕ್ತಿ ತುಂಬುವುದು
Posted On:
22 OCT 2025 17:08 PM
ಕಳೆದ ದಶಕದಲ್ಲಿ ಭಾರತವು ತನ್ನ ದೇಶೀಯ ಸೆಮಿಕಂಡಕ್ಟರ್ ಸಾಮರ್ಥ್ಯಗಳನ್ನು ಸ್ಥಿರವಾಗಿ ಮುಂದುವರೆಸಿದೆ. ಇದು ಸ್ವದೇಶಿ ಪ್ರೊಸೆಸರ್ ವಾಸ್ತುಶಿಲ್ಪಗಳನ್ನು ಅಭಿವೃದ್ಧಿಪಡಿಸುತ್ತಿದೆ, ವಿನ್ಯಾಸ ಪ್ರತಿಭೆಗಳನ್ನು ಪೋಷಿಸುತ್ತಿದೆ ಮತ್ತು ಸಂಶೋಧನಾ ಮೂಲಸೌಕರ್ಯವನ್ನು ಬಲಪಡಿಸುತ್ತಿದೆ. ಈ ಪ್ರಯತ್ನಗಳು, ಜಾಗತಿಕ ಚಿಪ್ ವಿನ್ಯಾಸ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಾಗಿ ಭಾರತದ ಹೊರಹೊಮ್ಮುವಿಕೆಗೆ ಬಲವಾದ ಅಡಿಪಾಯವನ್ನು ನಿರ್ಮಿಸಿವೆ.
ಈ ಪ್ರಗತಿಯ ಆಧಾರದ ಮೇಲೆ, ಭಾರತವು ಈಗ 7 ನ್ಯಾನೊಮೀಟರ್ ಪ್ರೊಸೆಸರ್ನ ಅಭಿವೃದ್ಧಿಯೊಂದಿಗೆ ಒಂದು ಪ್ರಮುಖ ಹೆಜ್ಜೆಯನ್ನು ಮುಂದಿಡುತ್ತಿದೆ. ಇದು ಸುಧಾರಿತ ನೋಡ್ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ಭಾರತದ ಪ್ರವೇಶವನ್ನು ಗುರುತಿಸುತ್ತದೆ. ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಅಕ್ಟೋಬರ್ 18, 2025 ರಂದು ಘೋಷಿಸಿದ ಈ ಉಪಕ್ರಮವು ಭಾರತದ ಸೆಮಿಕಂಡಕ್ಟರ್ ಪಯಣದಲ್ಲಿ ಒಂದು ನಿರ್ಣಾಯಕ ಕ್ಷಣವನ್ನು ಸೂಚಿಸುತ್ತದೆ ಮತ್ತು ಸ್ವಾವಲಂಬಿ, ಮುಂದಿನ ಪೀಳಿಗೆಯ ತಂತ್ರಜ್ಞಾನ ನಾವೀನ್ಯತೆಗೆ ರಾಷ್ಟ್ರದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಅನುಷ್ಠಾನದ ವಿನ್ಯಾಸ
- 7 ಎನ್‌ಎಂ ಪ್ರೊಸೆಸರ್ ಅನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ (ಐಐಟಿ ಮದ್ರಾಸ್) ಅಭಿವೃದ್ಧಿಪಡಿಸುತ್ತಿದೆ. ಇದು ತನ್ನ ಶಕ್ತಿ (ಎಸ್‌ಎಚ್‌ಎಕರಟಿಐ) ಉಪಕ್ರಮದ ಮೂಲಕ ಭಾರತದ ಪ್ರೊಸೆಸರ್ ವಿನ್ಯಾಸ ಪರಿಸರ ವ್ಯವಸ್ಥೆಯಲ್ಲಿನ ಪ್ರಮುಖ ಸಂಸ್ಥೆಯಾಗಿದೆ. 2013 ರಲ್ಲಿ ಪ್ರಾರಂಭವಾದ ಶಕ್ತಿ ಉಪಕ್ರಮವು ತೆರೆದ ಮೂಲ ಸೂಚನಾ ಸೆಟ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ, ಇದು ಯಾರಿಗಾದರೂ ಯಾವುದೇ ನಿರ್ಬಂಧಗಳಿಲ್ಲದೆ ಅದನ್ನು ಮುಕ್ತವಾಗಿ ಅಳವಡಿಸಲು ಮತ್ತು ಬಳಸಲು ಅನುಮತಿಸುತ್ತದೆ.
- ಭಾರತವು ಪ್ರಸ್ತುತ ರಿಸ್ಕ್-ವಿ ವಾಸ್ತುಶಿಲ್ಪವನ್ನು ಅಂದರೆ ಒಂದು ತೆರೆದ ಮೂಲ ವಾಸ್ತುಶಿಲ್ಪವನ್ನು ಅಳವಡಿಸಿಕೊಳ್ಳುತ್ತಿದೆ. ವಿವಿಧ ರೀತಿಯ ಸಾಧನಗಳ ಆಧಾರದ ಮೇಲೆ ಮೈಕ್ರೊಪ್ರೊಸೆಸರ್‌ಗಳ ಕುಟುಂಬವೊಂದನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಕ್ತಿ ಯೋಜನೆಯ ಭಾಗವಾಗಿ, ಒಂದು ಮಧ್ಯಮ ಶ್ರೇಣಿಯ ತೆರೆದ ಮೂಲ ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಯಾವುದೇ ಸ್ಟಾರ್ಟ್-ಅಪ್ (ನವೋದ್ಯಮ) ಅದನ್ನು ತೆಗೆದುಕೊಂಡು, ತಮ್ಮ ಕೆಲಸವನ್ನು ಮುಂದುವರಿಸಿಕೊಂಡು ಹೋಗಬಹುದು.
- ಈ ಯೋಜನೆಯು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಸಚಿವಾಲಯವು ಸೆಮಿಕಂಡಕ್ಟರ್ ಸಂಶೋಧನೆ ಮತ್ತು ಅಭಿವೃದ್ಧಿ, ಚಿಪ್ ವಿನ್ಯಾಸ ಮತ್ತು ನಾವೀನ್ಯತೆ ಮೂಲಸೌಕರ್ಯದಲ್ಲಿ ರಾಷ್ಟ್ರೀಯ ಪ್ರಯತ್ನಗಳನ್ನು ಮುನ್ನಡೆಸುತ್ತದೆ.
- ಈ ಉಪಕ್ರಮವು, ಎಂಡ್-ಟು-ಎಂಡ್ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ತಯಾರಿಕಾ ಸಾಮರ್ಥ್ಯಗಳನ್ನು ಸ್ಥಾಪಿಸಲು ಹಾಗೂ ರಾಷ್ಟ್ರೀಯ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯನ್ನು ಬಲಪಡಿಸಲು ಮೀಸಲಾಗಿರುವ ಕಾರ್ಯಕ್ರಮವಾದ ಭಾರತ ಸೆಮಿಕಂಡಕ್ಟರ್ ಮಿಷನ್‌ಗೆ ಅನುಗುಣವಾಗಿದೆ.
- ಈ ಚೌಕಟ್ಟು, ಸಂಶೋಧನೆ ಮತ್ತು ಅಭಿವೃದ್ಧಿ ಮೂಲಸೌಕರ್ಯವನ್ನು ಹೆಚ್ಚಿಸಲು ಮತ್ತು ಪ್ರತಿಭಾ ಸಾಮರ್ಥ್ಯವನ್ನು ವಿಸ್ತರಿಸಲು ಶಿಕ್ಷಣ ಸಂಸ್ಥೆಗಳು, ಕೈಗಾರಿಕೆ ಮತ್ತು ಸ್ಟಾರ್ಟ್-ಅಪ್‌ಗಳ ನಡುವಿನ ಸಹಯೋಗವನ್ನು ಪೋಷಿಸುತ್ತದೆ.
ಭಾರತದ 7 ನ್ಯಾನೊಮೀಟರ್ ಪ್ರೊಸೆಸರ್ನ ಮಹತ್ವ
- ಉನ್ನತ ಕಾರ್ಯಕ್ಷಮತೆ ಮತ್ತು ಶಕ್ತಿಯ ದಕ್ಷತೆಗಾಗಿ ವಿನ್ಯಾಸಗೊಳಿಸಲಾದ ಈ 7 ಎನ್‌ಎಂ ಪ್ರೊಸೆಸರ್ ಹಣಕಾಸು ಸೇವೆಗಳು, ಸಂವಹನ, ರಕ್ಷಣೆ ಮತ್ತು ಕಾರ್ಯತಂತ್ರದ ವಲಯಗಳಾದ್ಯಂತ ಸರ್ವರ್ ಅನ್ವಯಿಕೆಗಳನ್ನು ಗುರಿಯಾಗಿಸುತ್ತದೆ.
- ಇದು ಹೆಚ್ಚಿನ ಟ್ರಾನ್ಸಿಸ್ಟರ್ ಸಾಂದ್ರತೆ ಮತ್ತು ವೃದ್ಧಿಸಿದ ಗಣಕದ ದಕ್ಷತೆ ಯೊಂದಿಗೆ ಸೆಮಿಕಂಡಕ್ಟರ್ ವಿನ್ಯಾಸದಲ್ಲಿ ಒಂದು ಪ್ರಮುಖ ನೆಗೆತವನ್ನು ಪ್ರತಿನಿಧಿಸುತ್ತದೆ.
- ಭಾರತ ಸೆಮಿಕಂಡಕ್ಟರ್ ಮಿಷನ್ನ ಅಡಿಯಲ್ಲಿ ದೇಶೀಯ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯಗಳನ್ನು ಸ್ಥಾಪಿಸುವ ರಾಷ್ಟ್ರೀಯ ಪ್ರಯತ್ನಗಳೊಂದಿಗೆ ಹೊಂದಿಕೊಂಡು, ಭವಿಷ್ಯದ ಫ್ಯಾಬ್ರಿಕೇಷನ್) ಏಕೀಕರಣಕ್ಕಾಗಿ ಭಾರತದ ಸನ್ನದ್ಧತೆಯನ್ನು ಬಲಪಡಿಸುತ್ತದೆ.
- ಡಿಜಿಟಲ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಪ್ರಮುಖ ಗಮನ ನೀಡುವ ಕ್ಷೇತ್ರಗಳಾದ 5G, ಕೃತಕ ಬುದ್ಧಿಮತ್ತೆ ಮತ್ತು ಸೂಪರ್‌ಕಂಪ್ಯೂಟಿಂಗ್‌ನಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ಬೆನ್ನೆಲುಬಾಗಿ ರೂಪುಗೊಳ್ಳುತ್ತದೆ.
- ಆತ್ಮನಿರ್ಭರ ಭಾರತ ದೃಷ್ಟಿಕೋನದ ಅಡಿಯಲ್ಲಿ ನಿರ್ಣಾಯಕ ಅನ್ವಯಿಕೆಗಳಿಗಾಗಿ ಆಮದು ಮಾಡಿಕೊಂಡ ಚಿಪ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ, ತಾಂತ್ರಿಕ ಸ್ವಾವಲಂಬನೆಯ ಭಾರತದ ಕಾರ್ಯತಂತ್ರದ ಗುರಿಯನ್ನು ಬಲಪಡಿಸುತ್ತದೆ.
ಜಾಗತಿಕ ಸೆಮಿಕಂಡಕ್ಟರ್ ಭೂದೃಶ್ಯದಲ್ಲಿ ಭಾರತ
- ₹76,000 ಕೋಟಿ ವೆಚ್ಚದ ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ, ₹1.6 ಲಕ್ಷ ಕೋಟಿಗೂ ಅಧಿಕ ಹೂಡಿಕೆಯೊಂದಿಗೆ 10 ಸೆಮಿಕಂಡಕ್ಟರ್ ಯೋಜನೆಗಳನ್ನು ಆರು ರಾಜ್ಯಗಳಾದ್ಯಂತ ಅನುಮೋದಿಸಲಾಗಿದೆ.
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಡಿಸೈನ್ ಲಿಂಕ್ಡ್ ಇನ್ಸೆಂಟಿವ್ ಯೋಜನೆಯ ಅಡಿಯಲ್ಲಿ 288 ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳಿಗೆ ಬೆಂಬಲ ನೀಡಲಾಗಿದೆ.
- ದೇಶೀಯ 7 ಎನ್ಎಂ ಪ್ರೊಸೆಸರ್ ವಿನ್ಯಾಸ ಉಪಕ್ರಮವು ಭಾರತವನ್ನು ಸುಧಾರಿತ ನೋಡ್ ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಕ್ಕೆ ಪ್ರವೇಶಿಸುವಂತೆ ಮಾಡಿದೆ. ಇದು ಯುನೈಟೆಡ್ ಸ್ಟೇಟ್ಸ್, ತೈವಾನ್ ಮತ್ತು ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳು ಪ್ರಾರಂಭಿಸಿದ ಅತ್ಯಾಧುನಿಕ ತಂತ್ರಜ್ಞಾನ ನೋಡ್‌ಗಳಲ್ಲಿ ಸಂಶೋಧನೆ ಮತ್ತು ವಿನ್ಯಾಸವನ್ನು ಮುನ್ನಡೆಸುತ್ತಿರುವ ಉದಯೋನ್ಮುಖ ರಾಷ್ಟ್ರಗಳ ನಡುವೆ ಭಾರತವನ್ನು ಇರಿಸಿದೆ.
- ಈ ಉಪಕ್ರಮಗಳು ಒಟ್ಟಾಗಿ, ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಗಳಲ್ಲಿ ವಿಶ್ವಾಸಾರ್ಹ ಪಾಲುದಾರನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತವೆ ಮತ್ತು ಎಂಡ್-ಟು-ಎಂಡ್ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಅದರ ದೃಷ್ಟಿಕೋನವನ್ನು ಮುನ್ನಡೆಸುತ್ತವೆ.
ಭವಿಷ್ಯದ ಕಾರ್ಯಯೋಜನೆ
- ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಮೂಲಕ ಸಬ್-7 ಎನ್ಎಂ ನೋಡ್ಗಳ ಕಡೆಗೆ ನಿರಂತರ ಪ್ರಗತಿಯನ್ನು ಸಾಧಿಸುವುದು.
- ಭಾರತದೊಳಗೆ ಸುಧಾರಿತ ಚಿಪ್ ವಿನ್ಯಾಸ, ಪರೀಕ್ಷೆ ಮತ್ತು ಪ್ಯಾಕೇಜಿಂಗ್ ಸೌಲಭ್ಯಗಳನ್ನು ಸ್ಥಾಪಿಸುವುದು.
- ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಭಾರತ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿನ ಸೆಮಿಕಂಡಕ್ಟರ್ ಉಪಕ್ರಮಗಳು ದೊಡ್ಡ ಮಟ್ಟದ ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆಯಿದ್ದು, ಸಾವಿರಾರು ಹೆಚ್ಚು ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸಲಿವೆ.
- 24 ಚಿಪ್ ವಿನ್ಯಾಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಮತ್ತು ಪ್ರಸ್ತುತ 87 ಕಂಪನಿಗಳು ಸುಧಾರಿತ ವಿನ್ಯಾಸ ಸಾಧನಗಳನ್ನು ಬಳಸುತ್ತಿವೆ.
- ಈ ಉಪಕ್ರಮವು ಜಗತ್ತಿಗಾಗಿ ಭಾರತದಲ್ಲಿ ಚಿಪ್ಗಳನ್ನು ನಿರ್ಮಿಸುವ ಗುರಿ ಹೊಂದಿದೆ.
ಈ ದೇಶೀಯ 7 ಎನ್ಎಂ ಪ್ರೊಸೆಸರ್ ಉಪಕ್ರಮವು ಕೇವಲ ಒಂದು ತಾಂತ್ರಿಕ ಸಾಧನೆಗಿಂತಲೂ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ – ಇದು ನಮ್ಮ ನಿರ್ಧಾರದ ಹೇಳಿಕೆ ಆಗಿದೆ. ನಾವೀನ್ಯತೆ, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳನ್ನು ಒಗ್ಗೂಡಿಸುವುದರ ಮೂಲಕ, ಭಾರತವು ಸ್ವಾವಲಂಬಿ, ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಗೆ ಅಡಿಪಾಯ ಹಾಕುತ್ತಿದೆ. ನಿರಂತರವಾದ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ಕಾರ್ಯತಂತ್ರದ ಹೂಡಿಕೆಯ ಮೂಲಕ, ರಾಷ್ಟ್ರವು ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಒಂದು ಅತ್ಯಗತ್ಯ ಕೇಂದ್ರವಾಗಿ ಹೊರಹೊಮ್ಮಲು ಸಿದ್ಧವಾಗಿದೆ.
References:
https://www.pib.gov.in/FactsheetDetails.aspx?Id=150300
https://www.pib.gov.in/PressReleasePage.aspx?PRID=2155456
https://cdn.digitalindiacorporation.in/wp-content/uploads/2025/09/PIB2163622.pdf
https://www.pib.gov.in/PressReleseDetailm.aspx?PRID=2150464
https://x.com/AshwiniVaishnaw/status/1979531474950095199
Click here to see PDF
*****
(Factsheet ID: 150413)
Visitor Counter : 4
Provide suggestions / comments