ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ನವೆಂಬರ್ 29 ರ ಭಾನುವಾರದ ಸೈಕಲ್ ಸವಾರಿಯ 100ನೇ ಆವೃತ್ತಿ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್'ಗೆ ಭಾರತ ಸಜ್ಜು


ಪುಣೆಯಲ್ಲಿ ಈ ಮಹತ್ವದ ಸಂಭ್ರಮಾಚರಣೆಗೆ ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರ ನೇತೃತ್ವ; ಇವರೊಂದಿಗೆ 50,000 ಸೈಕ್ಲಿಂಗ್ ಉತ್ಸಾಹಿಗಳು ಭಾಗಿ

#IndiaReadyForOlympics: ಒಲಿಂಪಿಕ್ ಆಂದೋಲನದ ಸಂಭ್ರಮ ಮತ್ತು ಭಾರತದ ಕ್ರೀಡಾ ಸಂಸ್ಕೃತಿಯ ಬಲವರ್ಧನೆ

ಮೈ ಭಾರತ್ ಸಹಯೋಗದೊಂದಿಗೆ ನಡೆಯಲಿರುವ 100ನೇ ಭಾನುವಾರದ ಸೈಕಲ್ ಸವಾರಿ ಸಂಭ್ರಮಾಚರಣೆಯಲ್ಲಿ ಎಲ್ಲಾ ಜಿಲ್ಲೆಗಳ ಯುವಜನರ ಪಾಲ್ಗೊಳ್ಳುವಿಕೆ

ಮೈ ಭಾರತ್ ಸಹಯೋಗದೊಂದಿಗೆ, ದೇಶಾದ್ಯಂತದ 100 ಪ್ರಮುಖ ಸ್ಥಳಗಳಲ್ಲಿ ನಡೆಯಲಿರುವ ಸಂಭ್ರಮಾಚರಣೆಗಳಲ್ಲಿ 100 ಭಾರತೀಯ ಒಲಿಂಪಿಕ್ ಕ್ರೀಡಾಪಟುಗಳು ಭಾಗಿ

ಪ್ರಕಟಣಾ ದಿನಾಂಕ: 27 NOV 2026 2:24PM by PIB Bengaluru

ಭಾರತವನ್ನು ಹೆಚ್ಚು ಸದೃಢ ಮತ್ತು ಆರೋಗ್ಯಯುತ ರಾಷ್ಟ್ರವನ್ನಾಗಿ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಓಗೊಟ್ಟು, 2024ರ ಡಿಸೆಂಬರ್‌ ನಲ್ಲಿ ಪ್ರಾರಂಭವಾದ ಭಾನುವಾರದ ಸೈಕಲ್ ಸವಾರಿ 'ಫಿಟ್ ಇಂಡಿಯಾ ಸಂಡೇಸ್ ಆನ್ ಸೈಕಲ್' ಇದೀಗ ರಾಷ್ಟ್ರವ್ಯಾಪಿ ಆಂದೋಲನವಾಗಿ ರೂಪುಗೊಂಡಿದೆ. ಇದು ಸೈಕ್ಲಿಂಗ್ ಮೂಲಕ ಫಿಟ್ ನೆಸ್ (ದೈಹಿಕ ಕ್ಷಮತೆ) ಉತ್ತೇಜಿಸಲು ಸಮಾಜದ ಸಕಲ ಸ್ತರಗಳ ಜನರನ್ನು ಒಗ್ಗೂಡಿಸುತ್ತಿದೆ.

ಈ ಉಪಕ್ರಮವು ನವದೆಹಲಿಯಲ್ಲಿ ಕೇವಲ 250 ಸ್ಥಳಗಳು ಮತ್ತು 500 ಜನರ ಪಾಲ್ಗೊಳ್ಳುವಿಕೆಯೊಂದಿಗೆ ಪ್ರಾರಂಭವಾಯಿತು. ಎರಡು ವರ್ಷಗಳ ಅವಧಿಯಲ್ಲಿ, 'ಸಂಡೇಸ್ ಆನ್ ಸೈಕಲ್' ಜನಾಂದೋಲನವಾಗಿ ಹೊರಹೊಮ್ಮಿದೆ. 'ಸಂವಿಧಾನ ದಿನ'ದ ವಿಷಯಾಧಾರಿತವಾಗಿ ಆಯೋಜಿಸಲಾದ ಇದರ 99ನೇ ಆವೃತ್ತಿಯಲ್ಲಿ, ದೇಶಾದ್ಯಂತ 26,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಲಕ್ಷಾಂತರ ನಾಗರಿಕರು ಪಾಲ್ಗೊಂಡಿದ್ದರು.

ಈ ಪಯಣದಲ್ಲಿ ಈ ಚಳುವಳಿಯು ಒಂದು ಮಹತ್ವದ ಮೈಲಿಗಲ್ಲನ್ನು ತಲುಪಿದ್ದು, ಇದೀಗ ತನ್ನ 'ಸಂಡೇಸ್ ಆನ್ ಸೈಕಲ್' ಕಾರ್ಯಕ್ರಮದ 100ನೇ ಆವೃತ್ತಿಯನ್ನು ಆಚರಿಸಲು ದೇಶ ಸಜ್ಜಾಗುತ್ತಿದೆ. ಭಾನುವಾರದ ಸೈಕಲ್ ಸವಾರಿಯ ಈ ವಿಶೇಷ ಆವೃತ್ತಿಯು, #IndiaReadyForOlympics ಎಂಬ ಧ್ಯೇಯವಾಕ್ಯದಡಿ ಭಾರತದಲ್ಲಿ ಒಲಿಂಪಿಕ್ ಚಳುವಳಿಯನ್ನು ಸಂಭ್ರಮಿಸಲು ಬದ್ಧವಾಗಿದೆ.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ಪುಣೆಯ ಪಿಂಪ್ರಿ-ಚಿಂಚವಾಡದಲ್ಲಿ ನಡೆಯಲಿರುವ 'ಸಂಡೇಸ್ ಆನ್ ಸೈಕಲ್' – ಭಾನುವಾರದ ಸೈಕಲ್ ಸವಾರಿ ಕಾರ್ಯಕ್ರಮದ 100ನೇ ಆವೃತ್ತಿಯ ಸಂಭ್ರಮಾಚರಣೆಯ ನೇತೃತ್ವ ವಹಿಸಲಿದ್ದಾರೆ; ಈ ಅಭಿಯಾನದಲ್ಲಿ ಸುಮಾರು 50,000 ಸೈಕಲ್ ಸವಾರರು ಪಾಲ್ಗೊಳ್ಳಲಿದ್ದಾರೆ.

ಮೈಭಾರತ್ ಸಹಯೋಗದೊಂದಿಗೆ, ದೇಶದಾದ್ಯಂತ ಪ್ರತಿ ಜಿಲ್ಲೆಯಲ್ಲಿಯೂ ಯುವಜನರು 'ಸಂಡೇಸ್ ಆನ್ ಸೈಕಲ್' ಕಾರ್ಯಕ್ರಮದ 100ನೇ ಆವೃತ್ತಿಯನ್ನು ಆಚರಿಸಲಿದ್ದಾರೆ.

ಇದರ ಜೊತೆಗೆ, ದೇಶಾದ್ಯಂತ 100 ಪ್ರಮುಖ ಸ್ಥಳಗಳಲ್ಲಿ ಈ ಸಂಭ್ರಮಾಚರಣೆಗಳನ್ನು ಆಯೋಜಿಸಲಾಗುವುದು. ಭಾರತವನ್ನು ಹೆಚ್ಚು ಸದೃಢ ರಾಷ್ಟ್ರವನ್ನಾಗಿ ಮಾಡುವ ಗುರಿಯತ್ತ ಸಾಗಲು, 100 ಭಾರತೀಯ ಒಲಿಂಪಿಕ್ ಕ್ರೀಡಾಪಟುಗಳು ಈ ಮಹತ್ವದ ಆಚರಣೆಯಲ್ಲಿ ಪಾಲ್ಗೊಂಡು ಸೈಕಲ್ ತುಳಿಯಲಿದ್ದಾರೆ.

ಮುಂಬರುವ ಆವೃತ್ತಿಯು ಒಲಿಂಪಿಕ್ ಚಳುವಳಿಯ ಮೂಲ ಮೌಲ್ಯಗಳಾದ—ಉತ್ತಮ ಆಡಳಿತ ಮತ್ತು ಪ್ರಾಮಾಣಿಕತೆ, ನ್ಯಾಯಯುತ ಸ್ಪರ್ಧೆ ಮತ್ತು ಎಲ್ಲರ ಒಳಗೊಳ್ಳುವಿಕೆ, ಕ್ರೀಡಾಪಟುಗಳ ಆರೋಗ್ಯ ಮತ್ತು ಕಲ್ಯಾಣ ಹಾಗೂ ಸುಸ್ಥಿರತೆ ಮತ್ತು ಸುರಕ್ಷಿತ ಕ್ರೀಡೆಯ ಶಾಶ್ವತ ಪರಂಪರೆ—ಇವುಗಳನ್ನು ಸಂಭ್ರಮಿಸಲಿದೆ.

ಇದು ನೈತಿಕತೆ, ಕ್ರೀಡಾಪಟುಗಳ ಅಭಿಪ್ರಾಯಗಳಿಗೆ ಮನ್ನಣೆ ಹಾಗೂ ಮಹಿಳೆಯರು ಮತ್ತು ಪ್ಯಾರಾ-ಕ್ರೀಡಾಪಟುಗಳು ಸೇರಿದಂತೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುವ ಮೂಲಕ ಭಾರತದ ಕ್ರೀಡಾ ಭವಿಷ್ಯವನ್ನು ರೂಪಿಸುವ ಬದ್ಧತೆಯನ್ನು ಪ್ರತಿಬಿಂಬಿಸುವ ಜೊತೆಗೆ, ಯುವಜನರು ಕ್ರೀಡೆ ಮತ್ತು ಫಿಟ್ ನೆಸ್ ಅನ್ನು ತಮ್ಮ ಜೀವನಶೈಲಿಯ ಭಾಗವಾಗಿಸಿಕೊಳ್ಳುವಂತೆ ಪ್ರೇರೇಪಿಸುವ ಗುರಿಯನ್ನು ಹೊಂದಿದೆ. 

ಈ ಚಳುವಳಿಯು ಪ್ರಧಾನಮಂತ್ರಿಯವರ "ಫಿಟ್‌ ನೆಸ್ ಕಾ ಡೋಸ್, ಆಧಾ ಘಂಟಾ ರೋಜ್" (ಫಿಟ್‌ ನೆಸ್‌ ಗಾಗಿ ದಿನಕ್ಕೆ ಅರ್ಧ ಗಂಟೆ) ಎಂಬ ಕರೆಗೆ ಪ್ರೇರಿತವಾಗಿದ್ದು, ಪ್ರತಿದಿನ ಕನಿಷ್ಠ ಅರ್ಧ ಗಂಟೆಯನ್ನು ದೈಹಿಕ ವ್ಯಾಯಾಮಕ್ಕಾಗಿ ಮೀಸಲಿಡಿಸುವ ಗುರಿಯನ್ನು ಹೊಂದಿದೆ.

ಈ ಉಪಕ್ರಮವು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಪ್ರಮುಖ ರಾಷ್ಟ್ರೀಯ ಕರೆಗಳು ಮತ್ತು ಸಾಮಾಜಿಕ ಸಂದೇಶಗಳನ್ನು ಮುಂದಕ್ಕೆ ಕೊಂಡೊಯ್ಯುವ ಹಾಗೂ ವ್ಯಾಪಕ ಸಾರ್ವಜನಿಕ ಸಹಭಾಗಿತ್ವದ ಮೂಲಕ ಅವುಗಳನ್ನು ಕಾರ್ಯರೂಪಕ್ಕೆ ತರುವ ವೇದಿಕೆಯಾಗಿ ವಿಕಸನಗೊಂಡಿದೆ.

'ಬೊಜ್ಜಿನ ವಿರುದ್ಧ ಹೋರಾಟ', ಮಾದಕವಸ್ತು ಮುಕ್ತ ಭಾರತ ಮತ್ತು 'ಮಾಲಿನ್ಯಕ್ಕೆ ಪರಿಹಾರ'ದಂತಹ ವಿಷಯಗಳನ್ನು ಕೇಂದ್ರೀಕರಿಸಿದ ವಿಶೇಷ ಆವೃತ್ತಿಗಳ ಮೂಲಕ, 'ಸಂಡೇಸ್ ಆನ್ ಸೈಕಲ್' ಕಾರ್ಯಕ್ರಮವು ನಡವಳಿಕಾತ್ಮಕ ಬದಲಾವಣೆ ಪ್ರೋತ್ಸಾಹಿಸುವ ಹಾಗೂ 'ಫಿಟ್ ಇಂಡಿಯಾ' ಮತ್ತು 'ವಿಕಸಿತ ಭಾರತ' ಕುರಿತ ಪ್ರಧಾನಮಂತ್ರಿಯವರ ದೂರದೃಷ್ಟಿಗೆ ಕೊಡುಗೆ ನೀಡಲು ನಾಗರಿಕರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2342679) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , Gujarati , Assamese , English , Urdu , हिन्दी