57th International Film Festival of India 2026
20 – 28 Nov 2026

ಐಎಫ್‌ಎಫ್‌ಐ 2026ರಲ್ಲಿ ವಿಜ್ಞಾನದ ದೃಷ್ಟಿಕೋನದ ಮೂಲಕ ಪ್ರಾಚೀನ ನದಿಯ ನಿಗೂಢತೆಯನ್ನು ಅನಾವರಣಗೊಳಿಸುವ ‘ಸರಸ್ವತಿ ನದಿ’ ಸಾಕ್ಷ್ಯಚಿತ್ರ


“ವ್ಯಾಪಕ ಸಂಶೋಧನಾ ಮಾಹಿತಿಯನ್ನು ಸಂಕ್ಷಿಪ್ತ, ಆಕರ್ಷಕ ಮತ್ತು ಮನರಂಜನಾತ್ಮಕ ರೂಪದಲ್ಲಿ ಪ್ರಸ್ತುತಪಡಿಸುವುದು ಒಂದು ಪ್ರಮುಖ ಸವಾಲಾಗಿತ್ತು”: ನಿರ್ದೇಶಕ ವಿಶ್ವನಾಥನ್

ಪ್ರಕಟಣಾ ದಿನಾಂಕ: 26 NOV 2026 3:09PMby PIB Bengaluruಪ್ರಕಟಣೆ ಐ.ಡಿ.: 2342094Views: 6

ಭೂಮಿಯ ಒಡಲಲ್ಲಿ ಅಡಗಿರುವ, ಪ್ರಾಚೀನ ಗ್ರಂಥಗಳ ಪುಟಗಳಲ್ಲಿ ಹರಿಯುವ ಮತ್ತು ಭಾರತದ ನಾಗರಿಕತೆಯ ಸ್ಮೃತಿಗಳಲ್ಲಿ ಹಾಸುಹೊಕ್ಕಾಗಿರುವ ಸರಸ್ವತಿ ನದಿಯು ದೇಶದ ಅತ್ಯಂತ ನಿಗೂಢಗಳಲ್ಲಿ ಒಂದಾಗಿದೆ. ಪ್ರಾಚೀನ ಸಂಪ್ರದಾಯಗಳು ಮತ್ತು ಆಧುನಿಕ ವೈಜ್ಞಾನಿಕ ಸಂಶೋಧನೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ, ಹಿಂದಿ ಸಾಕ್ಷ್ಯಚಿತ್ರ ‘ದಿ ಅನ್ಸೀನ್ ಹೋಲಿ ರಿವರ್ – ಸರಸ್ವತಿ’ ಇಂದು 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ 2026) ‘ಇಂಡಿಯನ್ ಪನೋರಮಾ’ ವಿಭಾಗದಲ್ಲಿ ಪ್ರದರ್ಶನಗೊಂಡಿತು. ಈ ಸಾಕ್ಷ್ಯಚಿತ್ರವು ನದಿಯ ಬಗ್ಗೆ ರೋಚಕ ಕಥೆಯನ್ನು ಹಾಗೂ ನದಿಯ ಅಸ್ತಿತ್ವದ ಕುರಿತು ಡಾ. ಸುಭಾಷ್ ಸಿ. ಸಿಂಗ್ ಅವರು ನಡೆಸಿದ ವೈಜ್ಞಾನಿಕ ತನಿಖೆಗಳನ್ನು ಅನ್ವೇಷಿಸುತ್ತದೆ. ಭಾರತದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಕುತೂಹಲಕಾರಿ ಅನ್ವೇಷಣೆಯನ್ನು ಪ್ರಸ್ತುತಪಡಿಸಲು ಈ ಚಿತ್ರವು ಪ್ರಾಚೀನ ಭೌಗೋಳಿಕ ಉಲ್ಲೇಖಗಳು, ಭೂವೈಜ್ಞಾನಿಕ ಅವಲೋಕನಗಳು ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಒಟ್ಟುಗೂಡಿಸುತ್ತದೆ.

ಪಿಐಬಿ ಇಂದು ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಿರ್ದೇಶಕ ಭಾಸ್ಕರ್ ವಿಶ್ವನಾಥನ್ ಅವರು, ತಮ್ಮ ಮೊದಲ ಸಾಕ್ಷ್ಯಚಿತ್ರವನ್ನು ನಿರ್ಮಿಸಿದ ಅನುಭವವನ್ನು ಹಂಚಿಕೊಂಡರು. ಸರಸ್ವತಿ ನದಿಯ ಸುತ್ತಲಿನ ನಿಗೂಢತೆಯು ತಮಗೂ ಅತ್ಯಂತ ಆಸಕ್ತಿದಾಯಕವಾಗಿತ್ತು ಮತ್ತು ಈ ವಿಷಯದ ಕುರಿತು ಕೈಗೊಂಡ ಸಂಶೋಧನೆಯು ತಮಗೆ ದೊಡ್ಡ ಸ್ಫೂರ್ತಿಯಾಯಿತು ಎಂದು ಅವರು ಹೇಳಿದರು. ಸರಸ್ವತಿ ನದಿಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು, ವಿಶೇಷವಾಗಿ ಸರಸ್ವತ ನಾಗರಿಕತೆ ಮತ್ತು ಪ್ರಾಚೀನ ವೈದಿಕ ಸಂಪ್ರದಾಯದೊಂದಿಗೆ ಅದಕ್ಕಿರುವ ಸಂಬಂಧವನ್ನು ಅವರು ಒತ್ತಿಹೇಳಿದರು; ವೇದಗಳನ್ನು ಈ ನದಿಯ ದಡದಲ್ಲಿಯೇ ರಚಿಸಲಾಗಿದೆ ಎಂದು ನಂಬಲಾಗಿದೆ. ವ್ಯಾಪಕವಾದ ಸಂಶೋಧನಾ ಮಾಹಿತಿಯನ್ನು ಸಂಕ್ಷಿಪ್ತ, ಆಕರ್ಷಕ ಮತ್ತು ಮನರಂಜನಾತ್ಮಕ ರೂಪದಲ್ಲಿ ಪ್ರಸ್ತುತಪಡಿಸುವುದು ಒಂದು ಪ್ರಮುಖ ಸವಾಲಾಗಿತ್ತು ಎಂದ ವಿಶ್ವನಾಥನ್, ಸಾಕ್ಷ್ಯಚಿತ್ರದ ಸಂಶೋಧನಾತ್ಮಕ ತಳಹದಿಯನ್ನು ಉಳಿಸಿಕೊಂಡು ಜೊತೆಗೆ ಅದನ್ನು ಹೆಚ್ಚಿನ ಪ್ರೇಕ್ಷಕರಿಗೆ ತಲುಪಿಸುವುದು ತಮ್ಮ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಭಾರತದ ನದಿಗಳು ಮತ್ತು ಅವುಗಳ ಐತಿಹಾಸಿಕ ಮಹತ್ವದ ಬಗ್ಗೆ ತಮಗಿದ್ದ ಕುತೂಹಲವೇ ಈ ಚಿತ್ರವನ್ನು ನಿರ್ಮಿಸಲು ಪ್ರೇರಣೆಯಾಯಿತು ಎಂದು ನಿರ್ಮಾಪಕ ಅಭಿನವ್ ಎಂ. ಜೈನ್ ಹಂಚಿಕೊಂಡರು. ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ ತಾವು ಭೇಟಿ ನೀಡಿದ್ದನ್ನು ಸ್ಮರಿಸಿದ ಅವರು, ತ್ರಿವೇಣಿ ಸಂಗಮದಲ್ಲಿ ತಾವು ಕೇವಲ ಗಂಗಾ ಮತ್ತು ಯಮುನಾ ನದಿಗಳನ್ನು ಮಾತ್ರ ಕಂಡೆನು; ಇದು ವೇದಗಳು ಮತ್ತು ಇತರ ಹಿಂದೂ ಧರ್ಮಗ್ರಂಥಗಳಲ್ಲಿ ಪದೇ ಪದೇ ಉಲ್ಲೇಖಿಸಲ್ಪಟ್ಟಿರುವ ಮೂರನೇ ನದಿಯಾದ ಸರಸ್ವತಿಯ ಬಗ್ಗೆ ಅನ್ವೇಷಿಸಲು ತಮಗೆ ಪ್ರೇರಣೆ ನೀಡಿತು ಎಂದರು. ಸಂಶೋಧನೆಯ ವೈಜ್ಞಾನಿಕ ಆಯಾಮವನ್ನು ಉಲ್ಲೇಖಿಸಿದ ಜೈನ್, ರೂರ್ಕಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈಡ್ರಾಲಜಿ ನಡೆಸಿದ ಐಸೊಟೋಪಿಕ್ ಅಧ್ಯಯನಗಳನ್ನು ಉಲ್ಲೇಖಿಸಿದರು; ಈ ಸಂಸ್ಥೆಯು ನೀರಿನ ಮಾದರಿಗಳನ್ನು ಪರೀಕ್ಷಿಸಿ ಭೂಗತ ನೀರಿನ ಜಾಲದ ಕುರಿತಾದ ಸಂಶೋಧನೆಗೆ ಕೊಡುಗೆ ನೀಡಿದೆ.

ಭೂವೈಜ್ಞಾನಿಕ ಸಂಶೋಧನೆ, ಪ್ರಾಚೀನ ಸಂಪ್ರದಾಯಗಳು ಮತ್ತು ಸಮಕಾಲೀನ ಚಲನಚಿತ್ರ ನಿರ್ಮಾಣವನ್ನು ಒಟ್ಟುಗೂಡಿಸುವ ಮೂಲಕ, ‘ದಿ ಅನ್ಸೀನ್ ಹೋಲಿ ರಿವರ್ – ಸರಸ್ವತಿ’ ಸಾಕ್ಷ್ಯಚಿತ್ರವು ಭಾರತದ ನಾಗರಿಕತೆಯ ಪರಂಪರೆಯ ಒಂದು ಮಹತ್ವದ ಭಾಗವನ್ನು ವೈಜ್ಞಾನಿಕ ದೃಷ್ಟಿಕೋನದ ಮೂಲಕ ಮರುಪರಿಶೀಲಿಸುವ ಅವಕಾಶವನ್ನು ಪ್ರೇಕ್ಷಕರಿಗೆ ಒದಗಿಸುತ್ತದೆ.

ಈ ಪತ್ರಿಕಾ ಸಂವಾದವನ್ನು ಶ್ರೀ ಸ್ವಾಧೀನ್ ಶಕ್ತಿ ಪ್ರಸಾದ್ ಅವರು ನಿರ್ವಹಿಸಿದರು.

ಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2342094
•
Media Centre: Goa
•
Festival Dates: Nov 20 – 28, 2026