57th International Film Festival of India 2026
20 – 28 Nov 2026

57ನೇ ಐಎಫ್‌ಎಫ್‌ಐನಲ್ಲಿ 'ಬ್ರಿಕ್ಸ್ ಚಲನಚಿತ್ರಗಳು' ವಿಭಾಗಕ್ಕೆ ಚಾಲನೆ ನೀಡಿದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್ (ಭಾಗ 1)'


ರಾಯಭಾರಿಗಳು ಇರಾನ್ ಮತ್ತು ರಷ್ಯಾ, ಇಂಡೋನೇಷ್ಯಾ, ನೈಜೀರಿಯಾ ಕೈಜೋಡಿಸಿದ ನಾಯಕತ್ವದೊಂದಿಗೆ ಉತ್ಸವದ ಪಣಜಿಯಲ್ಲಿ, ಕೇಂದ್ರಬಿಂದುವಾಗುತ್ತಿದ್ದಂತೆ ಸಿನಿಮಾ ಗಡಿಯಾಚೆಗಿನ

57ನೇ ಐಎಫ್‌ಎಫ್‌ಐನ 3 ನೇ ದಿನದಂದು, ರಾಜತಾಂತ್ರಿಕ ಸನ್ಮಾನ ಮತ್ತು ರೆಡ್-ಕಾರ್ಪೆಟ್ ಪ್ರೀಮಿಯರ್‌ನೊಂದಿಗೆ ಸದಸ್ಯ ಮತ್ತು ಪಾಲುದಾರ ರಾಷ್ಟ್ರಗಳನ್ನು ಒಳಗೊಂಡ 21 ಚಲನಚಿತ್ರಗಳ ಪ್ರದರ್ಶನ ಆರಂಭ

ಪ್ರಕಟಣಾ ದಿನಾಂಕ: 22 NOV 2026 7:55PMby PIB Bengaluruಪ್ರಕಟಣೆ ಐ.ಡಿ.: 2340144Views: 12

57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 3ನೇ ದಿನದಂದು, ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಮಹಾಕಾವ್ಯ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್ (ಭಾಗ 1)' 'ಬ್ರಿಕ್ಸ್ ಚಲನಚಿತ್ರಗಳು' ವಿಭಾಗದ ಅಧಿಕೃತ ಉದ್ಘಾಟನಾ ಚಿತ್ರವಾಗಿ ಪ್ರೀಮಿಯರ್ ಪ್ರದರ್ಶನ ಕಾಣುವ ಮೂಲಕ ಭಾರತೀಯ ಪುರಾಣದ ಕಾಲಾತೀತ ಆಕರ್ಷಣೆಗೆ ಜಾಗತಿಕ ವೇದಿಕೆ ದೊರೆಯಿತು.

ಭಾರತದ ಅತ್ಯಂತ ಪುರಾತನ ಮಹಾಕಾವ್ಯ ಒಂದರ ಕಥಾಹಂದರವನ್ನು ಹೊಂದಿರುವ ಈ ಚಲನಚಿತ್ರವು, ತಲೆಮಾರುಗಳು ಮತ್ತು ಸಂಸ್ಕೃತಿಗಳಾದ್ಯಂತ ಪಯಣಿಸಿರುವ ಕಥೆಯನ್ನು ಅಂತಾರಾಷ್ಟ್ರೀಯ ಚಲನಚಿತ್ರ ವೇದಿಕೆಗೆಕರೆತಂದಿದೆ. ಉದ್ಘಾಟನಾ ಚಿತ್ರವಾಗಿ ಇದರ ಆಯ್ಕೆಯು ಭೌಗೋಳಿಕ ಮತ್ತು ಭಾಷಾ ಗಡಿಗಳನ್ನು ಮೀರಿ ಜನರನ್ನು ಬೆಸೆಯುವ ಸಿನಿಮಾದ ಶಕ್ತಿಯನ್ನು ಸಂಭ್ರಮಿಸುವ ಪ್ರದರ್ಶನಕ್ಕೆ ಮುನ್ನುಡಿ ಬರೆದಿದೆ.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವ ರಾಷ್ಟ್ರಗಳ ರಾಜತಾಂತ್ರಿಕ ಪ್ರತಿನಿಧಿಗಳ ಸನ್ಮಾನವೂ ನಡೆಯಿತು. ಫೆಡರಲ್ ರಿಪಬ್ಲಿಕ್ ಆಫ್ ನೈಜೀರಿಯಾದ ಹೈಕಮಿಷನ್ ರಾಯಭಾರಿ ಶ್ರೀ ಸೈದು ದಹಿರು ಮುಹಮ್ಮದ್ ಅವರನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್ ಅವರು ಸನ್ಮಾನಿಸಿದರು. ಇಂಡೋನೇಷ್ಯಾ ಗಣರಾಜ್ಯದ ರಾಯಭಾರ ಕಚೇರಿಯ ಚಾರ್ಜ್ ಡಿ'ಅಫೇರ್ಸ್ ಅವರನ್ನು ಪ್ರತಿನಿಧಿಸಿದ ಶ್ರೀಮತಿ ಎರ್ನಿ ವಾಹ್ಯುನಿ ಮತ್ತು ಮುಂಬೈನಲ್ಲಿರುವ ರಷ್ಯನ್ ಒಕ್ಕೂಟದ ಕಾನ್ಸುಲೇಟ್ ಜನರಲ್‌ನ ಹಂಗಾಮಿ ಕಾನ್ಸುಲ್ ಜನರಲ್ ಶ್ರೀ ಅಲೆಕ್ಸಾಂಡರ್ ಫುರ್ಸೊವ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಶಂಭು ಲಿಂಗಪ್ಪ ಹಕ್ಕಿ ಅವರು ಸನ್ಮಾನಿಸಿದರು.

ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಉಪ ಮುಖ್ಯಸ್ಥ ಡಾ. ಮುಸ್ತಫಾ ಗೋಹರಿಫರ್ ಮತ್ತು ಭಾರತದಲ್ಲಿನ ಐಪಿಐಎಸ್ ಪ್ರತಿನಿಧಿ ಡಾ. ಒಮಿದ್ ಬಾಬೆಲಿಯನ್ ಅವರನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀ ಜಿ. ಕೃಷ್ಣಕುಮಾರ್ ಅವರು ಸನ್ಮಾನಿಸಿದರು.

ಇಂಡೋನೇಷ್ಯಾ ಗಣರಾಜ್ಯದ ರಾಯಭಾರ ಕಚೇರಿಯ ಖಜಾನೆ ಅಧಿಕಾರಿ ಶ್ರೀಮತಿ ಮೆಯಿಲಿಜಾ ಕರುಣಿಯಾ ಹರಹಾಪ್ ಅವರನ್ನೂ ಶ್ರೀ ಜಿ. ಕೃಷ್ಣಕುಮಾರ್ ಸನ್ಮಾನಿಸಿದರು. 'ಬ್ರಿಕ್ಸ್ ಚಲನಚಿತ್ರಗಳು' ವಿಭಾಗವನ್ನು ಉದ್ಘಾಟಿಸಿದ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್ (ಭಾಗ 1)' ಚಿತ್ರವನ್ನು ಗುರುತಿಸಿ ಉತ್ಸವದ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್ ಅವರು ನಿರ್ದೇಶಕ ನಿತೇಶ್ ತಿವಾರಿ ಅವರನ್ನು ಸನ್ಮಾನಿಸಿದರು.

'ಬ್ರಿಕ್ಸ್ ಚಲನಚಿತ್ರಗಳು' ಪ್ರದರ್ಶನವು ಮನರಂಜನೆಯಾಚೆಗಿನ ಸಿನಿಮಾದ ಮಹತ್ವವನ್ನು ಗುರುತಿಸುತ್ತದೆ. ಚಲನಚಿತ್ರಗಳು ವಿವಿಧ ಸಮಾಜಗಳ ಜೀವನ, ಮೌಲ್ಯಗಳು, ಸಂಪ್ರದಾಯಗಳು ಮತ್ತು ಆಕಾಂಕ್ಷೆಗಳ ಕಿಟಕಿಯನ್ನು ತೆರೆಯುತ್ತವೆ. ಪ್ರೇಕ್ಷಕರಿಗೆ ತಮ್ಮ ಗಡಿಗಳಾಚೆಗಿನ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವ ಜೊತೆಗೆ ರಾಷ್ಟ್ರಗಳು ತಮ್ಮದೇ ಆದ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಲು ಇವು ಅನುವು ಮಾಡಿಕೊಡುತ್ತವೆ. ಈ ಸಂದರ್ಭದಲ್ಲಿ, ಬ್ರಿಕ್ಸ್ ವೇದಿಕೆಯು ಜನರ-ನಡುವಿನ ಸಂಪರ್ಕವನ್ನು ಬಲಪಡಿಸಲು, ಸೃಜನಶೀಲ ಸಹಯೋಗವನ್ನು ಉತ್ತೇಜಿಸಲು ಮತ್ತು ಗ್ಲೋಬಲ್ ಸೌತ್‌ನ ಸಿನಿಮೀಯ ಧ್ವನಿಗಳಿಗೆ ಹೆಚ್ಚಿನ ಮನ್ನಣೆ ಮತ್ತು ಜನಪ್ರಿಯತೆಯನ್ನು ಪಡೆಯಲು ಅವಕಾಶವನ್ನು ಒದಗಿಸುತ್ತದೆ.

ಒಟ್ಟಾರೆಯಾಗಿ, ಈ ಚಲನಚಿತ್ರಗಳು 'ಬ್ರಿಕ್ಸ್ ಚಲನಚಿತ್ರಗಳು' ವಿಭಾಗವನ್ನು ಸಾಂಸ್ಕೃತಿಕ ವೈವಿಧ್ಯತೆ ಮತ್ತು ಹಂಚಿಕೆಯ ಮಾನವ ಅನುಭವಗಳ ಸಂಭ್ರಮಾಚರಣೆಯನ್ನಾಗಿ ಮಾಡುತ್ತವೆ. ಪ್ರಪಂಚದ ವಿವಿಧ ಭಾಗಗಳ ಕಥೆಗಳನ್ನು ಒಂದೇ ಪರದೆಯ ಮೇಲೆ ತರುವ ಮೂಲಕ, ಐಎಫ್‌ಎಫ್‌ಐ ಪರಸ್ಪರ ಗೌರವವನ್ನು ಬೆಳೆಸುವಲ್ಲಿ, ಸಾಂಸ್ಕೃತಿಕ ಬಾಂಧವ್ಯಗಳನ್ನು ಬಲಪಡಿಸುವಲ್ಲಿ ಮತ್ತು ರಾಷ್ಟ್ರಗಳ ನಡುವೆ ಆಳವಾದ ತಿಳುವಳಿಕೆಯನ್ನು ನಿರ್ಮಿಸುವಲ್ಲಿ ಸಿನಿಮಾದ ಪಾತ್ರವನ್ನು ಪುನರುಚ್ಚರಿಸುತ್ತದೆ. ಈ ಪ್ರದರ್ಶನವು 'ವಸುದೈವ  ಕುಟುಂಬಕಂ' ಅಥವಾ 'ಜಗತ್ತೇ ಒಂದು ಕುಟುಂಬ' ಎಂಬ ಸ್ಪೂರ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಭಾಷೆಗಳು, ಇತಿಹಾಸಗಳು ಹಾಗೂ ಸಂಪ್ರದಾಯಗಳು ಭಿನ್ನವಾಗಿದ್ದರೂ ಕಥೆ ಹೇಳುವಿಕೆಯು ಜನರನ್ನು ಹೇಗೆ ಹತ್ತಿರಕ್ಕೆ ತರಬಲ್ಲದು ಎಂಬುದನ್ನು ಒತ್ತಿಹೇಳುತ್ತದೆ.

ಗಡಿಗಳಿಲ್ಲದ ಕಥೆಗಳು: 'ಬ್ರಿಕ್ಸ್ ಚಲನಚಿತ್ರಗಳು' ಪಟ್ಟಿಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯ ಸಂಭ್ರಮಾಚರಣೆ

11 ಸದಸ್ಯ ರಾಷ್ಟ್ರಗಳು ಮತ್ತು 10 ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 'ಬ್ರಿಕ್ಸ್ ಚಲನಚಿತ್ರಗಳು' ಪ್ರದರ್ಶನವು, ವಿವಿಧ ಪ್ರಕಾರಗಳು, ಭಾಷೆಗಳು ಮತ್ತು ಜೀವನ ವಾಸ್ತವಗಳಾದ್ಯಂತ ಸಮಕಾಲೀನ ಕಥೆ ಹೇಳುವಿಕೆಯ ವೈವಿಧ್ಯಮಯ ಶ್ರೇಣಿಯನ್ನು ಒಂದೆಡೆ ಸೇರಿಸುತ್ತದೆ. ನಿತೇಶ್ ತಿವಾರಿ ಅವರ 'ರಾಮಾಯಣ: ರೈಸ್ ಆಫ್ ಎ ಲೆಜೆಂಡ್ (ಭಾಗ 1)' ಮತ್ತು ಬ್ರೆಂಡಾ ಲಿಗಿಯಾ ಹಾಗೂ ಎಡು ಫೆಲಿಸ್ಟೋಕ್ ಅವರ 'ಅಮಾಡಿಯೊ ಅಂಡ್ ದಿ ಹೈಪೋಥೆಟಿಕಲ್ ನ್ಯೂ ವರ್ಲ್ಡ್' ನಂತಹ ಭವ್ಯ ಪೌರಾಣಿಕ ದೃಶ್ಯವೈಭವ ಮತ್ತು ಅನಿಮೇಟೆಡ್ ಐತಿಹಾಸಿಕ ಮರುಕಲ್ಪನೆಗಳಿಂದ ಹಿಡಿದು, ನ್ಗುಯೆನ್ ಹೋಂಗ್ ಡೀಪ್ ಅವರ '1982', ಸೊಂಪೋಟ್ ಚಿಡ್ಗಸೋರ್ನ್‌ಪೊಂಗ್ಸೆ ಅವರ '9 ಟೆಂಪಲ್ಸ್ ಟು ಹೆವನ್', ಆಂಡ್ರೆ ಎಗೊರೊವ್ ಅವರ 'ಅಂಡ್ ದಿ ಸ್ನೋ ವಾಸ್ ಫಾಲಿಂಗ್', ನೈಲಾ ಅಲ್ ಖಾಜಾ ಅವರ 'ಬಾಬ್', ಆರಿಫ್ ಜುಲ್ಕರ್ನೈನ್ ಅವರ 'ಬಾಗಾ: ಟುಮಾರೊ ಬಿಲಾಂಗ್ಸ್ ಟು ನೋ ಒನ್', ಲೂಯಿಸ್ ಎರ್ನೆಸ್ಟೊ ಡೊನಾಸ್ ಅವರ 'ಬರಾಕೋವಾ', ಅನಸ್ತಾಸಿಯಾ ಕುಜಿನಾ ಅವರ 'ಬೋ ಬೋ', ರಶೀದ್ ಮಾಲಿಕೋವ್ ಅವರ 'ಕಾಟನ್' ಮತ್ತು ಕ್ಯಾಟ್ರಿನ್ ವೆಬರ್ ಅವರ 'ಡ್ರೀಮಿಂಗ್ ಆಫ್ ಸೆರೆನಾಡಾ' ನಂತಹ ಆತ್ಮೀಯ ನಾಟಕಗಳು ಮತ್ತು ವಿಭಿನ್ನ ಶೈಲಿಗಳ ಸಂಗಮದ ನಿರೂಪಣೆಗಳವರೆಗೆ, ಈ ಚಲನಚಿತ್ರಗಳು ಕೌಟುಂಬಿಕ ಸ್ಮರಣೆ, ಸಾಮಾಜಿಕ ಒತ್ತಡಗಳು, ಸ್ಥಿತಿಸ್ಥಾಪಕತ್ವ ಮತ್ತು ಪರಿಸರದೊಂದಿಗಿನ ಬಾಂಧವ್ಯದ ವಿಷಯಗಳನ್ನು ಅನ್ವೇಷಿಸುತ್ತವೆ.

ಈ ವರ್ಷದ ಧ್ಯೇಯವಾಕ್ಯವಾದ 'ಗಡಿಗಳಿಲ್ಲದ ಕಥೆಗಳು' ಅಡಿಯಲ್ಲಿ ಒಂದಾಗಿರುವ ಈ ಪಟ್ಟಿಯು, ಸಾರ್ವತ್ರಿಕ ಮಾನವ ಭಾವನೆಗಳೊಂದಿಗೆ ಮಾತನಾಡುತ್ತಲೇ ಬ್ರಿಕ್ಸ್ ವಲಯದಾದ್ಯಂತದ ಸಿನಿಮಾಗಳು ವಿಭಿನ್ನ ಸಾಂಸ್ಕೃತಿಕ ಅಸ್ಮಿತೆಗಳನ್ನು ಹೇಗೆ ಸೆರೆಹಿಡಿಯುತ್ತವೆ ಎಂಬುದನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತದೆ.

ಐಎಫ್‌ಎಫ್‌ಐಲಾಯ್ಡ್ (IFFILOID) ಅನ್ನು ಇಲ್ಲಿ ಓದಿ: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2340144
•
Media Centre: Goa
•
Festival Dates: Nov 20 – 28, 2026