ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ದಕ್ಷಿಣ್ 2026ರಲ್ಲಿ ಭಾಷಿಣಿ ವಾಯ್ಸ್ ಫಸ್ಟ್ ಎಐ ಮತ್ತು ಬಹುಭಾಷಾ ಸಾಮರ್ಥ್ಯಗಳ ಪ್ರದರ್ಶನ


ಪ್ರದರ್ಶನ ಮಳಿಗೆಯಲ್ಲಿ ಡಿಜಿಟಲ್ ಆಡಳಿತ, ಸಾರ್ವಜನಿಕ ಸೇವಾ ವಿತರಣೆ ಮತ್ತು ನಾಗರಿಕರ ಒಳಗೊಳ್ಳುವಿಕೆಯಲ್ಲಿ ಬಹುಭಾಷಾ ಎಐನ ವಾಸ್ತವಿಕ ಬಳಕೆಯ ಪ್ರದರ್ಶನ

ಪ್ರಕಟಣಾ ದಿನಾಂಕ: 19 NOV 2026 11:38AM by PIB Bengaluru

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (ಎಂಇಐಟಿವೈ) ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (ಡಿಐಸಿ) ಅಡಿಯಲ್ಲಿ ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ (ಡಿಐಬಿಡಿ), ನವದೆಹಲಿಯ ಇಂಡಿಯಾ ಹ್ಯಾಬಿಟ್ಯಾಟ್ ಕೇಂದ್ರದಲ್ಲಿ 2026ರ ನವೆಂಬರ್ 17-18 ರಂದು ಆಯೋಜಿಸಿದ್ದ ಎರಡು ದಿನಗಳ ಉನ್ನತ ಮಟ್ಟದ ನೀತಿ ಸಂವಾದ ದಕ್ಷಿಣ್ ಡೇ 2026 ರಲ್ಲಿ ಭಾಗವಹಿಸಿತು. ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಹಯೋಗದೊಂದಿಗೆ ಅಭಿವೃದ್ಧಿಶೀಲ ರಾಷ್ಟ್ರಗಳಿಗಾಗಿ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ (RIS) ಆಯೋಜಿಸಿರುವ ಈ ಕಾರ್ಯಕ್ರಮವು ಭಾರತ, ಆಫ್ರಿಕಾ ಮತ್ತು ಇತರ ಪಾಲುದಾರ ರಾಷ್ಟ್ರಗಳಿಂದ ನೀತಿ ನಿರೂಪಕರು, ರಾಜತಾಂತ್ರಿಕರು, ತಜ್ಞರು ಮತ್ತು ಸಾಂಸ್ಥಿಕ ಪ್ರತಿನಿಧಿಗಳನ್ನು ಒಗ್ಗೂಡಿಸಿ ದಕ್ಷಿಣ-ದಕ್ಷಿಣ ಸಹಕಾರದ ಉದಯೋನ್ಮುಖ ಕ್ಷೇತ್ರಗಳ ಕುರಿತು ಚರ್ಚೆ ನಡೆಸಿತು.

ಉದ್ಘಾಟನಾ ಕಾರ್ಯಕಲಾಪಗಳ ಭಾಗವಾಗಿ ಮತ್ತು ಕಾರ್ಯಕ್ರಮದ ಮೊದಲ ದಿನವಾದ ಪ್ರದರ್ಶನ ಮಳಿಗೆಯ ಮೂಲಕ ಭಾಷಿಣಿಈ ಕಾರ್ಯಕ್ರಮದಲ್ಲಿ ತನ್ನ ಉಪಸ್ಥಿತಿಯನ್ನು ಗುರುತಿಸಿತು. ಈ ಮಳಿಗೆಯು ಭಾ‍ಷಿಣಿಯ ಬಹುಭಾಷಾ ಭಾಷಾ AI ಪೂರಕ ವ್ಯವಸ್ಥೆಯನ್ನು ಪ್ರದರ್ಶಿಸಿತು ಮತ್ತು ಕೃತಕ ಬುದ್ಧಿಮತ್ತೆ (AI)-ಆಧರಿತ ಭಾಷಾ ತಂತ್ರಜ್ಞಾನಗಳು ಸಮಗ್ರ ಡಿಜಿಟಲ್ ಲಭ್ಯತೆಯನ್ನು ಹೇಗೆ ಸಕ್ರಿಯಗೊಳಿಸಬಹುದು, ಸಾರ್ವಜನಿಕ ಸೇವಾ ವಿತರಣೆ ಬಲಪಡಿಸಬಹುದು ಮತ್ತು ಭಾಷಾ ಗಡಿಗಳಲ್ಲಿ ಸಂವಹನವನ್ನು ಹೇಗೆ ಸುಗಮಗೊಳಿಸಬಹುದು ಎಂಬುದನ್ನು ಪ್ರದರ್ಶಿಸಿತು.

ಭಾಷಿಣಿ ತಂಡವು ತಂತ್ರಜ್ಞಾನ ಬಳಕೆಯ ಪ್ರಕರಣಗಳು ಮತ್ತು ನೇರ ಪ್ರಾತ್ಯಕ್ಷಿಕೆಗಳ ಮೂಲಕ ವಿವಿಧ ಶ್ರೇಣಿಯನ್ನು ಪ್ರಸ್ತುತಪಡಿಸಿತು, ಇದು ಬಹುಭಾಷಾ ಅನುವಾದ, ಭಾಷಣ ಗುರುತಿಸುವಿಕೆ, ಭಾಷಣ ವಿಶ್ಲೇಷಣೆ, ಪ್ರತಿಲೇಖನ, ಲಿಪ್ಯಂತರ ಮತ್ತು ಧ್ವನಿ-ಸಕ್ರಿಯಗೊಳಿಸಿದ ಸಂವಹನಗಳಲ್ಲಿ ವೇದಿಕೆಯ ಸಾಮರ್ಥ್ಯಗಳ ಅವಲೋಕನವನ್ನು ಸಂದರ್ಶಕರಿಗೆ ಒದಗಿಸಿತು. ಆಡಳಿತ, ಶಿಕ್ಷಣ, ಆರೋಗ್ಯ ರಕ್ಷಣೆ, ಬ್ಯಾಂಕಿಂಗ್, ಕಾನೂನು ಸೇವೆಗಳು ಮತ್ತು ಇತರ ನಾಗರಿಕ ಸ್ನೇಹಿ ವಲಯಗಳಲ್ಲಿ ಈ ತಂತ್ರಜ್ಞಾನಗಳ ಪ್ರಾಯೋಗಿಕ ಅನ್ವಯಿಕೆಗಳನ್ನು ಪ್ರದರ್ಶನವು ಪ್ರಮುಖವಾಗಿ ಗುರುತಿಸಲ್ಪಟ್ಟಿತು, ಭಾಷಾ ಎಐ ಜನರ ಆದ್ಯತೆಯ ಭಾಷೆಗಳಲ್ಲಿ ಮಾಹಿತಿ ಮತ್ತು ಡಿಜಿಟಲ್ ಸೇವೆಗಳನ್ನು ಹೇಗೆ ಹೆಚ್ಚು ಪ್ರವೇಶಿಸಬಹುದು ಎಂಬುದನ್ನು ಇದು ಪ್ರದರ್ಶಿಸಿತು.

ಡಿಜಿಟಲ್ ಸೇರ್ಪಡೆಯನ್ನು ಮುನ್ನಡೆಸುವಲ್ಲಿ ಮತ್ತು ಸಾಂಸ್ಥಿಕ ಸಹಯೋಗವನ್ನು ಬಲಪಡಿಸುವಲ್ಲಿ ಬಹುಭಾಷಾ ಎಐನ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರದರ್ಶಿಸುವ ಮೂಲಕ, ಗಣ್ಯರು, ಅಂತಾರಾಷ್ಟ್ರೀಯ ಪ್ರತಿನಿಧಿಗಳು, ನೀತಿ ನಿರೂಪಕರು ಮತ್ತು ಇತರ ಪಾಲುದಾರರೊಂದಿಗೆ ತೊಡಗಿಸಿಕೊಳ್ಳಲು ಈ ಪ್ರದರ್ಶನವು ಅವಕಾಶವನ್ನು ಒದಗಿಸಿತು. ಭಾಷಿಣಿ ತನ್ನ ಪ್ರದರ್ಶನದ ಮೂಲಕ, ರಾಷ್ಟ್ರೀಯ ಗಡಿಗಳನ್ನು ಮೀರಿ ಮತ್ತು ವೈವಿಧ್ಯಮಯ ಭಾಷಾ ಸಂದರ್ಭಗಳಲ್ಲಿ ವಿಸ್ತರಿಸುವ ಅನ್ವಯಿಕೆಗಳೊಂದಿಗೆ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI) ಯ ಪ್ರಮುಖ ಅಂಶವಾಗಿ ಭಾಷಾ AI ಪಾತ್ರವನ್ನು ಪ್ರಮುಖವಾಗಿ ಪ್ರದರ್ಶಿಸಿತು.

ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾದ ಗೌರವಾನ್ವಿತ ಶ್ರೀ ಕೀರ್ತಿ ವರ್ಧನ್ ಸಿಂಗ್ ಅವರು ಭಾಷಿಣಿ ಮಳಿಗೆಗೆ ಭೇಟಿ ನೀಡಿದ್ದು ಇದರ ಪ್ರಮುಖ ಅಂಶವಾಗಿತ್ತು. ಸಚಿವರು ತಂಡದೊಂದಿಗೆ ಸಂವಾದ ನಡೆಸಿದರು, ಭಾಷಿಣಿಯ ಬಹುಭಾಷಾ AI ಸಾಮರ್ಥ್ಯಗಳ ಪ್ರದರ್ಶನಗಳನ್ನು ವೀಕ್ಷಿಸಿದರು ಮತ್ತು ಭಾಷಿಣಿ ಬಳಸಿದ ಉತ್ತಮ ಮತ್ತು ಉಪಯುಕ್ತ ವೇದಿಕೆಯಾಗಿದೆ ಎಂದು ಹೇಳಿದರು.

ಡಿಜಿಟಲ್ ಇಂಡಿಯಾ ಭಾಷಿಣಿ ವಿಭಾಗ (ಡಿಐಬಿಡಿ)ದ ಬಗ್ಗೆ

ಡಿಜಿಟಲ್ ಇಂಡಿಯಾ ಕಾರ್ಪೊರೇಷನ್ (DIC), ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಅಡಿಯಲ್ಲಿ ಡಿಜಿಟಲ್ ಇಂಡಿಯಾ ಭಾ‍ಷಿಣಿ ವಿಭಾಗ (DIBD), AI-ಆಧರಿತ ಬಹುಭಾಷಾ ಡಿಜಿಟಲ್ ಸೇರ್ಪಡೆಗಾಗಿ ರಾಷ್ಟ್ರೀಯ ಪೂರಕ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಭಾಷಿಣಿ ಭಾಷೆ-ಮೊದಲ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ, ಇದು ಸರ್ಕಾರಿ ಇಲಾಖೆಗಳು, ಡೆವಲ್ಲಪರ್ಸ್ , ಸಂಶೋಧಕರು ಮತ್ತು ಇತರ ಪಾಲುದಾರರಿಗೆ ಬಹುಭಾಷಾ ಎಐ ಅಪ್ಲಿಕೇಷನ್‌ಗಳು ಮತ್ತು ಸೇವೆಗಳನ್ನು ನಿರ್ಮಿಸಲು ಮತ್ತು ನಿಯೋಜಿಸಲು ಅನುವು ಮಾಡಿಕೊಡುತ್ತದೆ. ಭಾಷಿಣಿ 36 ಭಾರತೀಯ ಪಠ್ಯ ಭಾಷೆಗಳು, 23 ಭಾರತೀಯ ಧ್ವನಿ ಭಾಷೆಗಳು ಮತ್ತು 35 ಅಂತಾರಾಷ್ಟ್ರೀಯ ಭಾಷೆಗಳನ್ನು ಬೆಂಬಲಿಸುತ್ತದೆ, ಇದು ಸರ್ಕಾರ ಮತ್ತು ಸಾರ್ವಜನಿಕ-ಸ್ನೇಹಿ ಡಿಜಿಟಲ್ ಸೇವೆಗಳಲ್ಲಿ ಭಾಷಾ ತಂತ್ರಜ್ಞಾನಗಳ ಸಂಯೋಜನೆಯನ್ನು ಸಕ್ರಿಯಗೊಳಿಸುತ್ತದೆ. ಇದರ ಪೂರಕ ವ್ಯವಸ್ಥೆಯು ಅನುವಾದ, ಭಾಷಣ ಗುರುತಿಸುವಿಕೆ, ಭಾಷಣ ವಿಶ್ಲೇಷಣೆ, ಲಿಪ್ಯಂತರ ಮತ್ತು ಇತರ ಭಾಷಾ ಸೇವೆಗಳಿಗೆ ತಂತ್ರಜ್ಞಾನಗಳನ್ನು ಒಳಗೊಂಡಿದೆ, ಇದು ಭಾರತದ ಭಾಷಾ ವೈವಿಧ್ಯತೆಯಾದ್ಯಂತ ಡಿಜಿಟಲ್ ಮಾಹಿತಿ ಮತ್ತು ಸೇವೆಗಳನ್ನು ಹೆಚ್ಚು ತಲುಪಿಸುವಲ್ಲಿ ಸಹಾಯ ಮಾಡುತ್ತದೆ.

 

*****


(ಪ್ರಕಟಣೆ ಐ.ಡಿ.: 2338392) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Nepali , हिन्दी , Marathi , Malayalam