ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಪ್ರಧಾನಮಂತ್ರಿ ಅವರಿಂದ ವೇಲ್ಸ್‌ ಯುವರಾಜ ಮತ್ತು ಯುವರಾಣಿ ಭೇಟಿ


ಜಾಗತಿಕ ಪರಿಸರ ಸವಾಲುಗಳಿಗೆ ನವೀನ ಪರಿಹಾರಗಳನ್ನು ಉತ್ತೇಜಿಸುವ 'ಅರ್ಥ್‌ ಶಾಟ್ ಪ್ರಶಸ್ತಿʼಯ ಪ್ರಯತ್ನಗಳಿಗೆ ಪ್ರಧಾನಮಂತ್ರಿ ಶ್ಲಾಘನೆ

ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಅಭಿಪ್ರಾಯ ವಿನಿಮಯ

ಪ್ರಕಟಣಾ ದಿನಾಂಕ: 18 NOV 2026 9:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ನವೆಂಬರ್ 18ರಂದು ನವದೆಹಲಿಯಲ್ಲಿ ವೇಲ್ಸ್‌ ಯುವರಾಜ ಮತ್ತು ಯುವರಾಣಿಯನ್ನು ಭೇಟಿ ಮಾಡಿದರು.

'ಭಾರತ-ಯುಕೆ ಮುನ್ನೋಟ 2035' ರಿಂದ ಮಾರ್ಗದರ್ಶಿಸಲ್ಪಟ್ಟ ಮತ್ತು ಜುಲೈ 2026 ರಲ್ಲಿ ಜಾರಿಗೆ ಬಂದ 'ಭಾರತ-ಯುಕೆ ಸಮಗ್ರ ಆರ್ಥಿಕ ಮತ್ತು ವ್ಯಾಪಾರ ಒಪ್ಪಂದ' (ಸಿಇಟಿಎ) ದೊಂದಿಗೆ ಮತ್ತಷ್ಟು ಬಲಗೊಂಡಿರುವ, ಭಾರತ ಮತ್ತು ಯುಕೆ ನಡುವಿನ ದ್ವಿಪಕ್ಷೀಯ ಬಾಂಧವ್ಯದಲ್ಲಿನ ಹೆಚ್ಚುತ್ತಿರುವ ವೇಗವನ್ನು ಪ್ರಧಾನಮಂತ್ರಿಯವರು ಸ್ವಾಗತಿಸಿದರು.

ಪರಿಸರಾತ್ಮಕ ತುರ್ತು ಸವಾಲುಗಳಿಗೆ ನವೀನ ಪರಿಹಾರಗಳನ್ನು ಪ್ರೋತ್ಸಾಹಿಸುವಲ್ಲಿ 'ಅರ್ಥ್‌ಶಾಟ್ ಪ್ರಶಸ್ತಿ' ಯ ಕಾರ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಮುಂಬೈನಲ್ಲಿ 2026ರ ನವೆಂಬರ್ 17 ರಂದು ನಡೆದ 'ಅರ್ಥ್‌ಶಾಟ್ ಪ್ರಶಸ್ತಿ ಪ್ರದಾನ ಸಮಾರಂಭʼ ಸೇರಿದಂತೆ, ವಿವಿಧ ಸಂದರ್ಭಗಳಲ್ಲಿ ಭಾರತೀಯ ನಾವೀನ್ಯಕಾರರನ್ನು ಗುರುತಿಸಿರುವುದಕ್ಕೆ ಹಾಗೂ ಜಾಗತಿಕ ಪರಿಸರ ಸವಾಲುಗಳನ್ನು ಎದುರಿಸಲು ಅವರು ನೀಡಿರುವ ಕೊಡುಗೆಗಳಿಗೆ ಪ್ರಧಾನಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ಷಣೆ, ಆರೋಗ್ಯ, ಶಿಕ್ಷಣ, ಹಣಕಾಸು ತಂತ್ರಜ್ಞಾನ (ಫಿನ್-ಟೆಕ್), ಜನರ ನಡುವಿನ ಬಾಂಧವ್ಯ ಮೊದಲಾದ ಕ್ಷೇತ್ರಗಳಲ್ಲಿ ಸಹಕಾರ ಸೇರಿದಂತೆ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಅಭಿಪ್ರಾಯ ವಿನಿಮಯಕ್ಕೆ ಈ ಸಭೆ ಅವಕಾಶ ಒದಗಿಸಿತು.

ಇದೇ ವೇಳೆ, ದೊರೆ ಮೂರನೇ ಚಾರ್ಲ್ಸ್ ಮತ್ತು ಪ್ರಧಾನಿ ಆಂಡಿ ಬರ್ನ್‌ ಹ್ಯಾಮ್ ಅವರಿಗೆ ಪ್ರಧಾನಮಂತ್ರಿಯವರು ಆತ್ಮೀಯ ಶುಭಾಶಯ ಕೋರಿದರು.

 

*****


(ಪ್ರಕಟಣೆ ಐ.ಡಿ.: 2338292) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Marathi , Bengali , Manipuri , Punjabi , Gujarati , Tamil , Malayalam